MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • varalakshmi vratham 2023: ವರಮಹಾಲಕ್ಷ್ಮಿ ವ್ರತಾಚರಣೆ ವಿಧಾನ ಹೇಗಿರುತ್ತೆ?; ಸಿದ್ಧತೆ ಹೇಗೆ ಮಾಡಬೇಕು?

varalakshmi vratham 2023: ವರಮಹಾಲಕ್ಷ್ಮಿ ವ್ರತಾಚರಣೆ ವಿಧಾನ ಹೇಗಿರುತ್ತೆ?; ಸಿದ್ಧತೆ ಹೇಗೆ ಮಾಡಬೇಕು?

ಶ್ರಾವಣ ಮಾಸದ ಮುಖ್ಯವಾದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತವು  ಒಂದು. ವರಮಹಾಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ವಿಶೇಷ ವ್ರತ ಕೈಗೊಳ್ಳುತ್ತಾರೆ. ಈ ಕುರಿತು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದೇ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಕುರಿತು ಇಲ್ಲಿದೆ ಡೀಟೇಲ್ಸ್.

1 Min read
Author : Sushma Hegde
Published : Aug 24 2023, 11:01 AM IST
Share this Photo Gallery
  • FB
  • TW
  • Linkdin
  • Whatsapp
16

ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರಬಟ್ಟೆತೊಟ್ಟು ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲೆ ಹಾಕಿ. ನೈವೇದ್ಯಕ್ಕೆ ರೆಡಿ ಮಾಡಿಡಿ.

26

ಪೂಜೆ ಮಾಡುವ ಜಾಗದಲ್ಲಿ ಪೂರ್ವಾಭಿಮುಖವಾಗಿ ಎಂಟು ದಳದ ಕಮಲದ ರಂಗವಲ್ಲಿ ಹಾಕಿ. ಮಂಟಪದ ಎರಡೂ ಕಡೆ ದೀಪ ಹಚ್ಚಿಡಿ. ದೀಪಕ್ಕೆ ಅರಿಶಿನ ಕುಂಕುಮ, ಹೂವು ಇಡಿ. ಈಗ ಒಂದು ಬಟ್ಟಲಿಗೆ 5 ಮುಷ್ಠಿ ಅಕ್ಕಿ ಹರಡಿ ರಂಗೋಲಿಯ ಮಧ್ಯಭಾಗಕ್ಕೆ ಬರುವಂತೆ ಇಡಿ. ಇದರ ಮೇಲೆ ಸ್ವಸ್ತಿಕವನ್ನು ಬರೆದು ಕಳಶ ಇಡಬೇಕು.

36

ಕಳಶಕ್ಕೆ ನೀರು ತುಂಬಿಸಿ. ಅದರೊಳಗೆ ಅಕ್ಕಿ, ನಾಣ್ಯಗಳನ್ನು ಹಾಕಿ. ಇದಕ್ಕೆ ಅಡಿಕೆ ಹಾಕುವ ಕ್ರಮವೂ ಇದೆ. ನಂತರ ಈ ಕಳಶಕ್ಕೆ ಶ್ರೀಗಂಧ ಹಚ್ಚಿ, ಅಕ್ಷತೆ ಇಡಿ. ಹೂವು ಹಾಕಿ. ಅದರ ಮೇಲೆ 5 ವೀಳ್ಯದೆಲೆ ಅಥವಾ ಮಾವಿನೆಲೆ ಇಡಿ. ಈಗ ತೆಂಗಿನ ಕಾಯಿಯ ಎರಡು ಕಣ್ಣುಗಳು ಮುಂಭಾಗ ಬರುವ ಹಾಗೆ ಕಳಶದ ಮೇಲೆ ಇಡಿ. ಇದಕ್ಕೆ ಮೊದಲೇ ಅರಶಿನ ಹಚ್ಚಿ ಅಲಂಕಾರ ಮಾಡಿದ್ದರೆ ಚೆನ್ನ.

46

ಇದರ ಮೇಲೆ ದೇವಿಯ ಮುಖವಾಡ ಇಡಬೇಕು. ಕೆಲವರು ದೇವಿಯ ವಿಗ್ರಹ ಇಡುತ್ತಾರೆ. ಈ ಮುಖವಾಡಕ್ಕೂ ಅರಿಶಿನ ಕುಂಕುಮ ಹಚ್ಚಿ ಕಾಡಿಗೆ ತೀಡಿ ಅಲಂಕಾರ ಮಾಡುತ್ತಾರೆ. ಅರಿಶಿನ, ಕುಂಕುಮ, ಬಳೆ ಇತ್ಯಾದಿಗಳನ್ನು ದೇವಿಯ ಪಕ್ಕ ಇಡಬಹುದು. ದೇವಿಯ ಎದುರು ಮೂವತ್ತೆರಡು ನಾಣ್ಯಗಳನ್ನು ಇಡಬಹುದು. ದೇವಿಗೆ ಅಂತ ಎತ್ತಿಟ್ಟಮಾಂಗಲ್ಯ ಅಥವಾ ಅರಿಶಿನ ತುಂಡನ್ನು ದಾರದಲ್ಲಿ ಕಟ್ಟಿದೇವಿಗೆ ಹಾಕಬೇಕು.

56

 ಒಡವೆಗಳಿದ್ದರೆ ಹಾಕಿ, ಗೆಜ್ಜೆ ವಸ್ತ್ರಗಳನ್ನು ಹಾಕಿ. ತಾವರೆ ಹೂವನ್ನು ಮುಡಿಸಿ. ಎಲ್ಲ ಬಗೆಯ ಹೂಗಳನ್ನು ಹಾಕಿ. ಕಳಶದ ಹಿಂದೆ ದೇವಿಯ ಫೋಟೋ ಇಟ್ಟರೆ ಉತ್ತಮ. ಐದು ಅಥವಾ ಒಂಭತ್ತು ಬಗೆಯ ಹಣ್ಣುಗಳನ್ನು ಇಡಿ.

66

ಮಡಿಲಕ್ಕಿ ತಯಾರಿ ಮಾಡಿಡಬೇಕು. ಎರಡು ವೀಳ್ಯದೆಲೆ, ಅಡಿಕೆ, ಬಳೆ, ಬ್ಲೌಸ್‌ ಪೀಸ್‌, ಕಾಯಿ, ಅಕ್ಕಿ, ಹೂವು, ಹಣ್ಣುಗಳನ್ನು ಇಡಬಹುದು. ಕೊಬ್ಬರಿ ಬೆಲ್ಲವನ್ನೂ ಇಡಬಹುದು. ನಂತರ ಪೂಜೆ ಶುರುಮಾಡಿ.
 

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
Latest Videos
Recommended Stories
Recommended image1
ರಾಮ ನವಮಿಗೂ ಮುನ್ನ ಬುಧ ಗ್ರಹ ನೇರಪ್ರವೇಶ, ಈ 3 ರಾಶಿಗೆ ಶುಭ, ಡಬಲ್ ಧಮಾಕಾ
Recommended image2
ಏಪ್ರಿಲ್ 17 ರಂದು ಶನಿ ನಕ್ಷತ್ರ ಬದಲು, ಈ 4 ರಾಶಿಗೆ ಹಣದ ಸುರಿಮಳೆ, ಕೆಲಸದಲ್ಲಿ ಬಡ್ತಿ
Recommended image3
ಶುಕ್ರನು ತನ್ನ ಮನೆಯನ್ನು 11 ದಿನಗಳ ಕಾಲ ಆಳುತ್ತಾನೆ, 4 ರಾಶಿಗೆ ಶ್ರೀಮಂತಿಕೆ ಭಾಗ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved