Asianet Suvarna News Asianet Suvarna News

varalakshmi vratham 2023 : ನಾಳೆ ವರಮಹಾಲಕ್ಷ್ಮಿ ಹಬ್ಬ; ವ್ರತದ ಪೂಜೆಯನ್ನು ಹೇಗೆ ಮಾಡಬೇಕು?

varalakshmi  2023  ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ. ಅದರಂತೆ ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ.

varalakshmi vratham 2023 date and time shubh muhurat puja vidhi vrat suh
Author
First Published Aug 24, 2023, 9:51 AM IST | Last Updated Aug 24, 2023, 9:51 AM IST

ಶ್ರಾವಣದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಕೂಡ ಒಂದು. ಪ್ರಮುಖವಾದದ್ದು. ಲಕ್ಷ್ಮಿದೇವಿಯ ಕೃಪೆಗೆ ಪಾತ್ರವಾಗಲು ನಾಳೆ ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ. ಅದರಂತೆ ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ.

ಮುತೈದೆಯರು ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ನಾಳೆ (ಶುಕ್ರವಾರ) ವರಮಹಾಲಕ್ಷ್ಮಿ ಹಬ್ಬವಿದ್ದು, ಇದರ ಪೂಜಾ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೂಜೆಯ ವಿಧಾನ

ವರಮಹಾಲಕ್ಷ್ಮಿ ಪೂಜೆಯನ್ನು ಬೆಳಗ್ಗೆ 7.15 ರಿಂದ ಆರಂಭಿಸಿ. 9.15ರಷ್ಟುಹೊತ್ತಿಗೆ ಮುಗಿಸಿ. ಇದನ್ನು ಮಧ್ಯಾಹ್ನ, ಸಂಜೆ, ಮಧ್ಯರಾತ್ರಿ ಮಾಡುವವರೂ ಇದ್ದಾರೆ. ಅದರ ಸಮಯ ಭಿನ್ನವಾಗಿರುತ್ತದೆ. ಮಧ್ಯಾಹ್ನ 1. 30ರ ಸುಮಾರಿಗೆ ಆರಂಭಿಸಿ 3.30ಕ್ಕೆ ಮೂಡಿಸಬಹುದು.

1. ಮೊದಲಿಗೆ ಗಣೇಶನನ್ನು ಪೂಜಿಸಿ. ಮನೆಯಲ್ಲಿರುವ ಗಣೇಶನಿಗೆ ಎರಡು ವೀಳ್ಯದೆಲೆ, ಅಡಿಕೆ, ನಾಣ್ಯ ಇಟ್ಟು ಮೊದಲ ಪೂಜೆ ಸಲ್ಲಿಸಿ. ನಿರ್ವಿಘ್ನವಾಗಿ ಪೂಜೆ ನಡೆಯಲಿ ಎಂದು ಪ್ರಾರ್ಥಿಸಿ.

2. ಪಂಚಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಒಂದು ಹೂವನ್ನು ಹಾಕಿ ದೇವಿಗೆ ಪ್ರೋಕ್ಷಣೆ ಮಾಡಿ.

3. ಒಂದು ಪ್ಲೇಟ್‌ನಲ್ಲಿ ಚಿಕ್ಕ ಲಕ್ಷ್ಮಿಯ ಮೂರ್ತಿ ಇಟ್ಟು, ಅದರಲ್ಲಿ ವೀಳ್ಯದೆಲೆ ಇಟ್ಟು ಅಭಿಷೇಕಕ್ಕೆ ರೆಡಿಯಾದ ಪಂಚಾಮೃತವನ್ನು ಇಡಿ. ಒಂದು ಹೂವನ್ನು ಈ ಪಂಚಾಮೃತದಲ್ಲಿ ಅದ್ದಿ ದೇವಿಗೆ ಸಮರ್ಪಿಸಿ. ಬಳಿಕ ದೇವಿಗೆ ಅರಿಶಿನ ಕುಂಕುಮ, ಕಾಡಿಗೆ ಹಚ್ಚಿ ಗಂಧಾಕ್ಷತೆ ಹಾಕಬೇಕು.

4. ದೇವಿಗೆ ಹೂಗಳಿಂದ ಸಹಸ್ರಾಚನೆ ಶುರು ಮಾಡಿ. ನಂತರ ಕುಂಕುಮಾರ್ಚನೆ ಮಾಡಬೇಕು. ದೇವಿಯ ಮೂರ್ತಿಯನ್ನಿಟ್ಟು ಅದಕ್ಕೂ ಮಾಡಬಹುದು. ಅಥವಾ ಒಂದು ನಾಣ್ಯಕ್ಕೂ ಅಷ್ಟೋತ್ತರ ಹೇಳುತ್ತಾ ಕುಂಕುಮಾರ್ಚನೆ ಮಾಡಬಹುದು. ಬಳಿಕ ಧೂಪ, ದೀಪದಿಂದ ದೇವಿಗೆ ಆರತಿ ಮಾಡಿ. ನಂತರ ಜೋಡು ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಿ. ಬಾಳೆ ಹಣ್ಣು, ಹಾಲನ್ನು ನೈವೇದ್ಯ ಮಾಡಿ. ಪ್ರಸಾದವನ್ನೂ ನೈವೇದ್ಯ ಮಾಡಿ. ಕೊನೆಯಲ್ಲಿ ಮಂಗಳಾರತಿ ಮಾಡಿ.

ಶನಿಯಿಂದ ಈ ಏಳು ರಾಶಿಯವರ ಸಂಕಷ್ಟ ದೂರ; 2025ರವರೆಗೆ ನಿಮ್ಮ ಬೆಳವಣಿಗೆ ಪ್ರಗತಿ..!

 

5. ವರಮಹಾಲಕ್ಷ್ಮಿ ವ್ರತದ ಕತೆ ಪುಸ್ತಕಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ನಮಸ್ಕಾರ ಮಾಡಿ. ವ್ರತದ ಕತೆಯನ್ನು ಓದಲು ಆರಂಭಿಸಿ.

6. ಆ ಬಳಿಕ ಪಾಯಸ, ಹೋಳಿಗೆ, ಸಜ್ಜಕ ಸೇರಿದಂತೆ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ. ಬಳಿಕ ಮಂಗಳಾರತಿ ಮಾಡಬೇಕು. ಆರತಿಗೆ ನಮಸ್ಕರಿಸಿ ಅಕ್ಷತೆ ಹಿಡಿದು ದೇವಿಯಲ್ಲಿ ನಿಮಗೇನು ಬೇಕೋ ಕೇಳಿಕೊಳ್ಳಿ. ಬಳಿಕ ಆ ಅಕ್ಷತೆಯನ್ನು ದೇವಿಗೆ ಹಾಕಿ, ಸುತ್ತು ಬಂದು ನಮಸ್ಕಾರ ಮಾಡಿ.

ಹೀಗೆ ಪೂಜೆ ಆದಮೇಲೆ ಒಂಭತ್ತೆಳೆ ದಾರವನ್ನು ಹೂವಿನೊಂದಿಗೆ ಕಟ್ಟಿಅದನ್ನು ಮನೆ ಹಿರಿಯರಿಂದ ಕೈಗೆ ಕಟ್ಟಿಸಿಕೊಳ್ಳಿ. ಸಂಜೆ ವಿವಾಹಿತ ಮಹಿಳೆಯರಿಗೆ ಅರಿಶಿನ ಕುಂಕುಮ ವೀಳ್ಯದೆಲೆ ಅಡಿಕೆ, ಎರಡು ಬಾಳೆಹಣ್ಣು, ಹೂವು, ಇದರ ಜೊತೆಗೆ ಯಥಾನುಶಕ್ತಿ ಕಾಣಿಕೆ ಇಟ್ಟು ಕೊಡಿ.

ಕೊನೆಯಲ್ಲಿ ಮಂಗಳಾರತಿ ಮಾಡಿ ಕಳಸದ ಬಲಭಾಗ ಸ್ವಲ್ಪ ಅಲುಗಿಸಿ ವಿಸರ್ಜನೆ ಮಾಡಬಹುದು.

Latest Videos
Follow Us:
Download App:
  • android
  • ios