ಇಂದು ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ರತ್ನಖಚಿತ ವೈರಮುಡಿಯನ್ನು ಪೂರ್ತಿ ಭದ್ರತೆಯೊಂದಿಗೆ ಪರಕಾಲ ಮಠದ ವಾಹನದಲ್ಲಿ ಕೊಂಡೊಯ್ಯಲಾಯಿತು. 

ಮಂಡ್ಯ: ಇಂದು ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ ಹಿನ್ನೆಲೆ ಜಿಲ್ಲಾಡಳಿತದ ಖಜಾನೆಯಿಂದ ರತ್ನಖಚಿತ ವೈರಮುಡಿ ಮೇಲುಕೋಟೆಗೆ ರವಾನೆಯಾಯಿತು. ಬೆಳಿಗ್ಗೆ 7:30ಕ್ಕೆ ಜಿಲ್ಲಾ ಖಜಾನೆಯಿಂದ ಹೊರಬಂದ ವಜ್ರಖಚಿತ ವೈರಮುಡಿ ಆಭರಣಕ್ಕೆ, ರವಾನೆಗೂ ಮುನ್ನ ಖಜಾನೆಯಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸಿದರು. 
ಡಿಸಿ,ಎಸ್ಪಿ ,ಎಸಿ ,ತಹಶೀಲ್ದಾರ್ ನೇತೃತ್ವದಲ್ಲಿ ವೈರಮುಡಿಗೆ ಪೂಜೆ ನಡೆಯಿತು. ಬಳಿಕ ಪರಕಾಲ ಮಠದ ವಾಹನದಲ್ಲಿ ಭದ್ರತೆಯೊಂದಿಗೆ ವೈರಮುಡಿಯನ್ನು ಸ್ಥಾನಿಕ ಅರ್ಚಕರು ಕೊಂಡೊಯ್ದರು.
ಮಂಡ್ಯ ನಗರದ ಲಕ್ಷ್ಮಿ ಜನಾರ್ಧನ ದೇಗುಲದಲ್ಲಿ ವೈರಮುಡಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಮಾರ್ಗವಾಗಿ ವೈರಮುಡಿ ಮೇಲುಕೋಟೆ ತಲುಪಲಿದೆ .
ವೈರಮುಡಿ ಸಾಗುವ ಮಾರ್ಗದ ಪ್ರತಿ ಗ್ರಾಮದಲ್ಲೂ ವೈರಮುಡಿಗೆ ಗ್ರಾಮಸ್ಥರಿಂದ ಪೂಜೆ ಸಲ್ಲಲಿದೆ.

https://kannada.asianetnews.com/festivals/vairamudi-mahotsava-will-be-held-at-melukote-in-mandya-grg-rsf36f

ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಗಿಂದು ವಜ್ರಖಚಿತ ವೈರಮುಡಿ ಕಿರೀಟ ಧಾರಣೆ ಉತ್ಸವ

ಮೇಲುಕೋಟೆಯಲ್ಲಿ ಇಂದು(ಏ.1ರ) ರಾತ್ರಿ 8.30ಕ್ಕೆ ನಡೆಯುವ ಶ್ರೀಚೆಲುವನಾರಾಯಣಸ್ವಾಮಿ ಪ್ರಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ನವ ವಧುವಿನಂತೆ ಸಿಂಗಾರಗೊಂಡಿದೆ. ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ನಾಗರಾಜು ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಭಕ್ತರಿಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ವೈರಮುಡಿ ಬ್ರಹ್ಮೋತ್ಸವ ಏ.8ರವರೆಗೆ ನಡೆಯಲಿದೆ. ಶನಿವಾರದ ನಡೆಯುವ ವೈರಮುಡಿಗೆ 3 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಒಟ್ಟಾರೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನದ ನಿರೀಕ್ಷೆಯಿಟ್ಟುಕೊಂಡು ಹತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ. ಈಗಾಗಲೇ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಭಕ್ತಸಾಗರವೇ ಮೇಲುಕೋಟೆಯತ್ತ ಹರಿದು ಬರುತ್ತಿದೆ.

ವೈರಮುಡಿ ಉತ್ಸವದಲ್ಲಿ ವಿಶೇಷವಾಗಿ ದೀಪಾಲಂಕಾಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವಿದ್ಯುತ್‌ ದೀಪಗಳಿಂದ ದೇಗುಲ ಹಾಗೂ ಗ್ರಾಮವನ್ನು ಅಲಂಕಾರ ಮಾಡಲಾಗಿದೆ. ಯೋಗನರಸಿಂಹಸ್ವಾಮಿ ಬೆಟ್ಟ, ದೇವಾಲಯಗಳು, ಕಲ್ಯಾಣಿ ಸಮುಚ್ಚಯ, ಸ್ಮಾರಕಗಳಿಗೆ ಆಕರ್ಷಕ ದೀಪಾಲಂಕಾರ ಮಾಡಲಾಗಿದ್ದು ನವ ವಧುವಿನಂತೆ ಸಿಂಗಾರಗೊಂಡು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

April Horoscope: ಯಾವ ರಾಶಿಗೆ ಕಹಿ, ಯಾವ ರಾಶಿಗೆ ಸಿಹಿ ಈ ಏಪ್ರಿಲ್?

ಭಕ್ತರಿಗೆ ಕುಡಿಯುವ ನೀರು, ನಿರಂತರ ಸ್ವಚ್ಛತೆ, ವಿದ್ಯುತ್‌ ಪೂರೈಕೆಗೆ ಒತ್ತು ನೀಡಲಾಗಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್‌ ಭದ್ರತೆ ಮಾಡಲಾಗಿದೆ. ಇದರ ಜೊತೆಗೆ ಆಯಾಯ ಇಲಾಖೆಯವರಿಗೆ ವಹಿಸಿದ ಕೆಲಸವನ್ನು ಅಧಿಕಾರಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ.

ಭಕ್ತರಿಗೆ ಅಗತ್ಯ ವ್ಯವಸ್ಥೆ: ವೈರಮುಡಿ ಉತ್ಸವದ ಅಂಗವಾಗಿ ಭಕ್ತರ ಸುರಕ್ಷತೆಗಾಗಿ 1500 ಮಂದಿ ಪೊಲೀಸರಿಂದ ಭದ್ರತೆ, 6 ಆ್ಯಂಬುಲೆನ್ಸ್‌ ಜೊತೆಗೆ ವೈದ್ಯಕೀಯ ತಂಡ ನಿಯೋಜನೆ, ನಿರಂತರ ವಿದ್ಯುತ್‌, ಬೆಂಗಳೂರು, ಮಂಡ್ಯ, ನಾಗಮಂಗಲ, ಕೆ.ಆರ್‌.ಪೇಟೆ, ಮೈಸೂರು, ಹಾಸನದಿಂದ 150 ವಿಶೇಷ ಬಸ್‌ ಸೌಕರ್ಯ, ಭಕ್ತರ ವಾಹನಗಳಿಗೆ 5 ಕಡೆ ವ್ಯವಸ್ಥಿತ ಪಾರ್ಕಿಂಗ್‌, 45 ಸಿಸಿ ಟಿವಿಯೊಂದಿಗೆ ಪೊಲೀಸರ ಕಣ್ಗಾವಲು, ಉತ್ಸವ ಬೀದಿಗಳಲ್ಲಿ 8 ಕಡೆ ಬೃಹತ್‌ ಎಲ…ಇಡಿ ಪರದೆಗಳ ಅಳವಡಿಕೆ ಕಲ್ಪಿಸಲಾಗಿದೆ.

14 ದಿನಗಳ ಕಾಲ ಉತ್ಸವಗಳಿಗೆ ವಾದ್ಯತಂಡಗಳ ನಿಯೋಜನೆ, ದೇಶಾದ್ಯಂತ ಭಕ್ತರು ವೈರಮುಡಿ ಉತ್ಸವ ವೀಕ್ಷಿಸಲು ನೇರಪ್ರಸಾರ, ಭಕ್ತರಿಗೆ ಅನ್ನದಾನ ಸೇವೆ, ಉತ್ಸವದಂದು ಬಸ್‌ ನಿಲ್ದಾಣದಿಂದ ವೃದ್ಧರು ಅಸಕ್ತರು ದೇಗುಲಕ್ಕೆ ಹೋಗಲು ಬ್ಯಾಟರಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಉತ್ಸವಗಳು

ಬ್ರಹ್ಮೋತ್ಸವದ ನಂತರ ಏ.8ರವರೆಗೆ ಪ್ರಮುಖ ಉತ್ಸವಗಳು ಜರುಗಲಿವೆ. ಏ.4 ರಂದು ಬೆಳಗ್ಗೆ 10ಕ್ಕೆ ಮಹಾರಥೋತ್ಸವ, ಏ.5 ರಂದು ರಾತ್ರಿ 7 ಗಂಟೆಗೆ ತೆಪ್ಪೋತ್ಸವ, ಏ.6 ರಂದು ಬೆಳಗ್ಗೆ ಅವಭೃತ, ಸಂಜೆ 5 ಗಂಟೆಗೆ ಪಟ್ಟಾಭಿಷೇಕ, ಏ.7 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಹಾಭಿಷೇಕ ಜರುಗಲಿದೆ.