Asianet Suvarna News Asianet Suvarna News

Vastu Tips for Depression: ಖಿನ್ನತೆಯಿಂದ ಬಳಲುತ್ತಿದ್ದೀರಾ? ವಾಸ್ತುವಿನಲ್ಲಿದೆ ಪರಿಹಾರ

ಖಿನ್ನತೆಯಲ್ಲಿರುವವರಿಗೆ ಯಾವಾಗ ಯಾವುದು ಹೇಗೆ ನೆರವಾಗುವುದೋ ಹೇಳುವುದು ಕಷ್ಟ. ಏಕೆಂದರೆ, ಮುಳುಗುವವನಿಗೆ ಹುಲುಕಡ್ಡಿಯೂ ಆಸರೆಯಾಗಬಹುದು. ಹಾಗಾಗಿ, ಖಿನ್ನತೆಗೆ ವಾಸ್ತುವಿನಲ್ಲಿ ಸರಳ ಪರಿಹಾರಗಳಿವೆ. ಈ ವಾಸ್ತು ಟಿಪ್ಸ್ ಅನುಸರಿಸಿ, ನೆಮ್ಮದಿಯ ಜೀವನ ಕಾಣಬಹುದು.

Vaastu experts suggest tips  to overcome depression
Author
Bangalore, First Published Dec 14, 2021, 10:24 AM IST

ಜೀವನ (Life) ಎಂದ ಮೇಲೆ ಒತ್ತಡಗಳು (Stress) ಸಹಜ. ಅದನ್ನು ಮೀರಿ ಬದುಕುವುದನ್ನು ಕಲಿಯಬೇಕು. ಆದರೆ, ಕೆಲವರು ಇಂದಿನ ಜೀವನದ ಓಟದಲ್ಲಿ ಜಯಿಸಲಾಗದೆ, ಸೋಲೊಪ್ಪಲೂ ಆಗದೆ, ಖಿನ್ನತೆಗೆ (Depression) ಒಳಗಾಗುತ್ತಿದ್ದಾರೆ. ಅದರಲ್ಲೂ ಯುವಕ, ಯುವತಿಯರಿಗೆ ಇನ್ನೂ ಕಷ್ಟವಾಗುತ್ತಿದೆ. ಇದು ಮಾನಸಿಕ ಕಾಯಿಲೆಯಾಗಿಯೂ ಕಾಡುತ್ತಿದೆ. ಹೀಗಾಗಿ ಇಂಥ ಖಿನ್ನತೆಯ ಲಕ್ಷಣಗಳು (Feature) ಕಂಡರೆ ಅದನ್ನು ಮೊದಲೇ ಪರಿಹರಿಸಿಕೊಳ್ಳುವುದು ಉತ್ತಮ. 

ಹೀಗಾಗಿ ಖಿನ್ನತೆಯನ್ನು ದೂರ ಮಾಡಿಕೊಳ್ಳಲು ವಾಸ್ತು (Vastu) ಶಾಸ್ತ್ರದ ಮೊರೆ ಹೋದರೆ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಬಣ್ಣಗಳ (Colour) ಮೂಲಕ ಖಿನ್ನತೆಯನ್ನು ದೂರ ಮಾಡಿಕೊಳ್ಳಬಹುದಾಗಿದೆ. ನಾವು ಧರಿಸುವ (Wearing) ಬಣ್ಣಗಳು ಮತ್ತು ನಾವು ಬಳಸುವ ಬಣ್ಣಗಳು, ನಮ್ಮ ಸುತ್ತಲೂ ಇರುವ ಬಣ್ಣಗಳು ಒತ್ತಡವನ್ನು ಹೆಚ್ಚಿಸಲೂಬಹುದು (High) ಅಥವಾ ಕಡಿಮೆ (Low) ಮಾಡಲೂಬಹುದು. ಹೀಗಾಗಿ ಒತ್ತಡದಿಂದ ಹೊರಬರಲು ಯಾವ ಯಾವ ಬಣ್ಣಗಳು ಸಹಾಯ ಮಾಡುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..

ತಿಳಿ ಬೂದು (Light Grey)
ತಿಳಿ ಬೂದು ಬಣ್ಣವನ್ನು ಸೌಮ್ಯವೆಂದು (Mild) ಪರಿಗಣಿಸಲಾಗಿದೆ. ಇದು ವ್ಯಕ್ತಿಯ ಮೆದುಳಿನ (Brain) ಮೇಲೆ ನೇರ ಪರಿಣಾಮವನ್ನು ಬೀರಬಹುದು. ಇದು ಅತ್ಯಂತ ಹಿತವೆನಿಸುವ ಜೊತೆಗೆ ಪರಿಣಾಮಕಾರಿಯಾಗಿದೆ. ಜೊತೆಗೆ ಎಂಥವರನ್ನೂ ಆಕರ್ಷಿಸುವ ಶಕ್ತಿಯನ್ನು ಹೊಂದಿದೆ. ಒತ್ತಡಕ್ಕೆ ಒಳಗಾದಾಗ ಬೂದು ಬಣ್ಣದ ಬಟ್ಟೆಗಳನ್ನು (Dress) ಧರಿಸಿದಲ್ಲಿ ಒತ್ತಡ ನಿವಾರಣೆ ಸಾಧ್ಯವಾಗಲಿದೆ. ವಾಸ್ತು ಪ್ರಕಾರ ಇಂತಹ ಬಣ್ಣದ ಬಟ್ಟೆಗಳು ಮಾನಸಿಕ ಒತ್ತಡವನ್ನು (Mental Stress) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಲಿವಿಂಗ್ ರೂಮ್ (Living Room) ಗೋಡೆಗಳು ತಿಳಿ ಬೂದು ಬಣ್ಣದಲ್ಲಿದ್ದರೆ, ಅದು ಸಹ ನಿಮಗೆ ನೆಮ್ಮದಿಯನ್ನು ತರುತ್ತದೆ. 

ತಿಳಿ ಗುಲಾಬಿ (Light pink)
ತಿಳಿ ಗುಲಾಬಿ ಅಥವಾ ಲೈಟ್ ಪಿಂಕ್ ಅನ್ನು ಸಹ ತುಂಬಾ ಶಾಂತ ಮತ್ತು ಸೌಮ್ಯ ಬಣ್ಣವೆನ್ನಲಾಗಿದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು (Control), ಶಾಂತಿ (peace ) ನೆಲೆಸಲು ಪರಿಣಾಮಕಾರಿ ಬಣ್ಣಗಳಲ್ಲಿ ಇದೂ ಸಹ ಒಂದಾಗಿದೆ. ಈ ಬಣ್ಣವು ಒತ್ತಡದ ನಡುವೆಯೇ ತಮ್ಮನ್ನು ತಾವು ಪ್ರೀತಿಸುವಂತೆ ಮಾಡುತ್ತದೆ. ಜೊತೆಗೆ ಸಂತೋಷದ ಜೀವನ ನಡೆಸಲು ಸಹಕಾರಿಯಾಗಿದೆ. 

ಇದನ್ನು ಓದಿ: Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!

ಲ್ಯಾವೆಂಡರ್ (Lavender)
ಈ ಬಣ್ಣ ಸಹ ಶಾಂತ ಸ್ವಭಾವಕ್ಕೆ ಸರಿಹೊಂದಲಿದೆ. ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಮನೆಯ ಗೋಡೆಗಳು (Wall) ಈ ಬಣ್ಣದಲ್ಲಿದ್ದರೆ ನೆಮ್ಮದಿಯನ್ನು ತಂದುಕೊಡಲಿದೆ. ನಿರಾಳ ಭಾವವನ್ನುಂಟು ಮಾಡುವ ಈ ಬಣ್ಣವನ್ನು ಅತ್ಯುತ್ತಮ ಎಂದು ಹೇಳಬಹುದಾಗಿದೆ. 

ಬಿಳಿ (White)
ಬಿಳಿ ಬಣ್ಣವು ಶಾಂತಿ ಮತ್ತು ಪ್ರೀತಿಯ (Love) ಸಂಕೇತವಾಗಿದೆ. ಈ ಬಣ್ಣವು ಮೆದುಳಿನ ಜೀವಕೋಶಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಬಣ್ಣವು ಮಾನಸಿಕ ನೆಮ್ಮದಿಯನ್ನು (Comfort) ನೀಡುವುದಲ್ಲದೆ, ಖಿನ್ನತೆಯನ್ನು ಕಡಿಮೆ ಮಾಡುತ್ತದೆ. 

ನೀಲಿ (Blue)
ನೀಲಿ ಎಲ್ಲ ಬಣ್ಣಗಳಿಗಿಂತ ಅತ್ಯಂತ ಸುಂದರ (Pretty) ಮತ್ತು ಆಕರ್ಷಕ (Attractive) ಬಣ್ಣವಾಗಿದೆ. ಹಾಗೆಯೇ ಒತ್ತಡ ನಿವಾರಕ ಬಣ್ಣವೂ ಹೌದು. ಇಷ್ಟು ಮಾತ್ರವಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಒತ್ತಡಕ್ಕೆ ಒಳಗಾಗುವಾಗ ನೀವು ಈ ಬಣ್ಣವನ್ನು ನೋಡಿದರೆ ತಕ್ಷಣವೇ ವಿಶ್ರಾಂತಿಯ (Rest) ಫೀಲ್ ಕೊಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. 

ಇದನ್ನು ಓದಿ: Color and Personality: ನೀವಿಷ್ಟ ಪಡೋ ಬಣ್ಣಗಳು ನಿಮ್ಮ ಗುಣ ಹೇಳುತ್ತವೆ..

ಹಸಿರು (Green)
ಹಸಿರು ಬಣ್ಣವು ಪ್ರಕೃತಿ ಮತ್ತು ಶಾಂತಿಯ ಸಂಕೇತವಾಗಿದೆ. ವಾಸ್ತು ಶಾಸ್ತ್ರದ (Vastu) ಪ್ರಕಾರ ಈ ಬಣ್ಣವು ಸಂತೋಷವನ್ನು ಕೊಡುವುದಲ್ಲದೆ, ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಒತ್ತಡವಿದ್ದಾಗ ಹಸಿರು ಬಟ್ಟೆಗಳನ್ನು ಧರಿಸಿದರೆ ತುಸು ನೆಮ್ಮದಿ ಸಾಧ್ಯವಾಗುತ್ತದೆ. ಪ್ರಮುಖ ಅಥವಾ ಶುಭ ಕೆಲಸಕ್ಕಾಗಿ ಹೊರಟಾಗ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಉತ್ತಮ. 

Follow Us:
Download App:
  • android
  • ios