ಭಟ್ಕಳದ ಮಾರಿಜಾತ್ರೆ ಸಂಪನ್ನ
ಭಟ್ಕಳದ ಸುಪ್ರಸಿದ್ಧ ಮಾರಿ ಜಾತ್ರೆ ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಜನರು ಹೊತ್ತೊಯ್ದುಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ಮಾರಿ ಜಾತ್ರೆ ಸಂಪನ್ನಗೊಳಿಸಲಾಯಿತು.
ಭಟ್ಕಳ (ಜು.29) : ಇಲ್ಲಿನ ಸುಪ್ರಸಿದ್ಧ ಮಾರಿಜಾತ್ರೆಯು ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರ ಬೃಹತ್ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿ ಜಾತ್ರೆಯನ್ನು ಮಾರಿ ಉತ್ಸವ ಮೂರ್ತಿಯನ್ನು ಬುಧವಾರ ಬೆಳಗ್ಗಿನಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭಿಸಲಾಗಿತ್ತು. ನಂತರ ಎರಡು ದಿನಗಳ ಕಾಲ ಊರ-ಪರವೂರ ಭಕ್ತರು ಮಾರಿಗುಡಿಗೆ ಬಂದು ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟಾ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಮಾರಿಜಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸಿರಲಿಲ್ಲ. ಆದರೆ ಈ ಸಲ ಭಕ್ತರು ಎರಡೂ ದಿನ ತಂಡೋಪ ತಂಡವಾಗಿ ಮಾರಿಗುಡಿಗೆ ಆಗಮಿಸಿ ಮಾರಿಯಮ್ಮನಿಗೆ(Maari Jatre) ಪೂಜೆ ಪುನಸ್ಕಾರ, ಹರಕೆ ಸಲ್ಲಿಸಿದರು.
Udupi: ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ..!
ಗುರುವಾರ ಸಂಜೆ 4.30ಕ್ಕೆ ಮಾರಿಗೆ ಅಂತಿಮ ಪೂಜೆ ಸಲ್ಲಿಸಿ ಮಾರಿಮೂರ್ತಿಯನ್ನು ಬೃಹತ್ ಮೆರವಣಿಗೆಯಲ್ಲಿ ಎಂಟು ಕಿ.ಮೀ. ದೂರದ ಜಾಲಿಕೋಡಿ((Jalikodi) ಸಮುದ್ರದಲ್ಲಿ ಹಿಂದಿನ ಸಂಪ್ರದಾಯದಂತೆ ವಿಸರ್ಜಿಸಲಾಯಿತು. ಮಾರಿ ವಿಸರ್ಜನಾ ಮೆರವಣಿಗೆಯಲ್ಲಿ ಮಾರಿಗುಡಿ ಆಡಳಿತ ಸಮಿತಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಶಾಸಕ ಸುನಿಲ್ ನಾಯ್ಕ, ಪ್ರಮುಖರಾದ ಎನ್.ಡಿ. ಖಾರ್ವಿ, ವಸಂತ ಖಾರ್ವಿ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ ಮುಂಡಳ್ಳಿ, ದೀಪಕ್ ನಾಯ್ಕ, ವೆಂಕಟೇಶ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ಶಂಕರ ಶೆಟ್ಟಿ, ಶ್ರೀಪಾದ ಕಂಚುಗಾರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಮಾರಿಮೂರ್ತಿಯ ವಿಸರ್ಜನೆಗೂ ಪೂರ್ವ ಮಾರಿ ವಿಸರ್ಜನೆಯ ಜಾಲಿಕೋಡಿ ಪ್ರದೇಶದಲ್ಲಿ ಬಿಗು ಬಂದೋಬಸ್‌್ತ ಏರ್ಪಡಿಸಲಾಗಿದ್ದು ಸಾಕಷ್ಟುಮುಂಜಾಗ್ರತಾ ಕ್ರಮವನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಹಿಸಿದ್ದವು.
ಭಟ್ಕಳದಲ್ಲಿ ಇಂದು,ನಾಳೆ ಸುಪ್ರಸಿದ್ಧ ಮಾರಿ ಜಾತ್ರೆ
ಬಿಗಿಪೊಲೀಸ್ ಬಂದೋಬಸ್ತ್
ಮಾರಿಮೂರ್ತಿ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್‌್ತ ಏರ್ಪಡಿಸಿತ್ತು. ಕಾರವಾರದ ಹೆಚ್ಚುವರಿ ಎಸ್‌ಪಿ ಬದರಿನಾಥ, ಭಟ್ಕಳ ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ, ಕಾರವಾರದ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಮೀಸಲು ಪಡೆಯ ಪೊಲೀಸರು, ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ಪೊಲೀಸರು ಬಂದೋಬಸ್‌್ತನಲ್ಲಿ ಭಾಗವಹಿಸಿದ್ದರು.