Asianet Suvarna News Asianet Suvarna News

ಕಾಗೆ ಕಂಡ್ರೆ ಶುಭವೋ, ಅಶುಭವೋ ಗೊತ್ತು, ಶ್ರಾವಣ ಮಾಸದಲ್ಲಿ ನೀಲಕಂಠ ಪಕ್ಷಿ ಕಂಡ್ರೆ?

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ನಡೆಯುತ್ತದೆ. ಶಿವನಿಗೆ ಪ್ರಿಯವಾದ ವಸ್ತುಗಳನ್ನು ಭಕ್ತರು ಅರ್ಪಿಸುತ್ತಾರೆ. ನಿಮ್ಮ ಭಕ್ತಿಯ ಬಗ್ಗೆ   ನಾನಾ ಸಂಕೇತದ ಮೂಲಕ ಶಿವ ತನ್ನ ಅಭಿಪ್ರಾಯ ಹೇಳ್ತಾನೆ. ಒಂದ್ವೇಳೆ ಈ ತಿಂಗಳು ನೀಲಕಂಠ ಪಕ್ಷಿ ಕಾಣಿಸಿದ್ರೆ ಅದ್ರ ಅರ್ಥವೇನು ಅಂತಾ ನಾವು ಹೇಳ್ತೇವೆ.
 

Unveiling the Significance of Spotting an Indian Roller Bird During Sawan Maasa roo
Author
First Published Aug 12, 2023, 3:56 PM IST | Last Updated Aug 12, 2023, 3:56 PM IST

ಶ್ರಾವಣ ಬಂತೆಂದ್ರೆ ಅದೇನೋ ಖುಷಿ.. ಸಂಭ್ರಮ.. ಮನೆಯಲ್ಲಿ ಹಬ್ಬಗಳ ಸಾಲು… ದೇವಸ್ಥಾನದಲ್ಲಿ ಭಕ್ತರ ದಂಡು…ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚು ಮಹತ್ವವಿದೆ. ಭಕ್ತರು ನಾನಾ ವೃತ, ಪೂಜೆಗಳನ್ನು ಮಾಡಿ  ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.

ಹಿಂದೂ (Hindu ) ಧರ್ಮದಲ್ಲಿ ಕೆಲವು ಪ್ರಾಣಿ ಪಕ್ಷಿಗಳು ಎದುರಾದರೆ ಅದನ್ನು ಶುಭ – ಅಶುಭ ಸಂಕೇತವೆಂದು ನಂಬಲಾಗುತ್ತದೆ. ಎಲ್ಲಾದರೂ ಹೊರಟಾಗ ಬೆಕ್ಕು, ಕಾಗೆ ಮುಂತಾದವು ಕಾಣಿಸಿದರೆ ಅದರಿಂದಲೂ ಒಳ್ಳೆಯ ಹಾಗೂ ಕೆಟ್ಟ ಫಲಗಳಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಪಶು - ಪಕ್ಷಿಗಳಿಗೆ ನೇರವಾಗಿ ಈಶ್ಚರನೊಡನೆ ಸಂಬಂಧ ಇರುತ್ತೆ ಎನ್ನುವ ನಂಬಿಕೆಯಿದೆ. ಹಾಗೆಯೇ ಕೆಲವು ಪ್ರಾಣಿ (Animal) ಪಕ್ಷಿಗಳು ದೇವರ ಸಮಾನ ಎಂದು ಕೂಡ ಹೇಳಲಾಗುತ್ತೆ. ಉದಾಹರಣೆಗೆ ನಾಯಿಯನ್ನು ದತ್ತಾತ್ರೇಯ ಎಂದು, ಹಸುವನ್ನು ಕಾಮಧೇನುವೆಂದು ಪೂಜಿಸುವ ಪದ್ಧತಿ ನಮ್ಮಲ್ಲಿ ಮೊದಲಿನಿಂದಲೂ ಇದೆ.

ಸ್ಪಂದನಾಗೆ ನಕ್ಷತ್ರ ಹೋಮ: ಮಾಡೋದ್ಯಾಕೆ? ಬದುಕಿದವರಿಗೂ ಮಾಡ್ಬಹುದಾ?

ಎಲ್ಲ ಪ್ರಾಣಿ ಪಕ್ಷಿಗಳಂತೆಯೇ ನೀಲಕಂಠ (Bluethroat) ಪಕ್ಷಿ ಕೂಡ ಈಶ್ವರನ ಪ್ರತಿರೂಪವಾಗಿದೆ. ಶ್ರಾವಣ ಮಾಸದಲ್ಲಿ ಭಕ್ತಿ ಶೃದ್ಧೆಯಿಂದ ಈಶ್ವರನನ್ನು ಆರಾಧಿಸಿದರೆ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಹಾಗೆಯೇ ಶ್ರಾವಣ ಮಾಸದಲ್ಲಿ ಈಶ್ವರನ ಸ್ವರೂಪವೇ ಆಗಿರುವ ನೀಲಕಂಠ ಪಕ್ಷಿ ಕಾಣಿಸುವುದರಿಂದಲೂ ನಮಗೆ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ.

ಶ್ರಾವಣ (Shravan) ಮಾಸದಲ್ಲಿ ನೀಲಕಂಠ ಪಕ್ಷಿ ಕಾಣಿಸಿದರೆ ದೈವವೇ ಕಾಣಿಸಿದಂತೆ :  ಶ್ರಾವಣ ಮಾಸದಲ್ಲಿ ಶಿವನ ಸ್ವರೂಪವಾದ ನೀಲಕಂಠ ಪಕ್ಷಿ ಕಾಣಿಸುವುದು ಮಂಗಳಕರ. ಶಿವನ ಆಶೀರ್ವಾದ ಮತ್ತು ರಕ್ಷೆ ಸದಾ ನಮ್ಮ ಮೇಲಿರುತ್ತದೆ ಎಂದು ನಂಬಲಾಗುತ್ತದೆ. ಶ್ರಾವಣ ಮಾಸದಲ್ಲಿ ನೀಲಕಂಠ ಪಕ್ಷಿ ನಿಮ್ಮ ಕಣ್ಣಿಗೆ ಬಿದ್ರೆ ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ, ಕೆಲಸ ಕಾರ್ಯಗಳಲ್ಲಿ ಲಾಭವಾಗಲಿದೆ ಎನ್ನುವುದರ ಸಂಕೇತ. ನೀಲಕಂಠ ಪಕ್ಷಿ ಕಾಣಿಸಿದ್ರೆ ಆಗುತ್ತೆ ಸಕಾರಾತ್ಮಕ ಪರಿವರ್ತನೆ : ಸಮುದ್ರ ಮಂಥನದ ಸಮಯದಲ್ಲಿ ಶಿವನು ಜಗತ್ತಿನ ಒಳಿತಿಗಾಗಿ ಹಾಗೂ ಸಕಾರಾತ್ಮಕ ಚಿಂತನೆಯಿಂದ ವಿಷವನ್ನು ಕುಡಿದನೋ ಹಾಗೆ ನೀಲಕಂಠ ಪಕ್ಷಿಯ ದರ್ಶನವೂ ಕೂಡ ನಮ್ಮ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತೆ. ಅಂತಹ ಸಕಾರಾತ್ಮಕ ಚಿಂತನೆಯೇ ನಮ್ಮನ್ನು ಹಾಗೂ ನಮ್ಮ ಜೊತೆಗಿನ ಜಗತ್ತಿನ ಸಂಬಂಧವನ್ನು ಹೆಚ್ಚಿಸುತ್ತದೆ.

ಮದುಮಗಳು ಅಕ್ಕಿ ಸೇರು ಒದ್ದು, ಮನೆಯೊಳಗೆ ಬರೋದ್ಯಾಕೆ? ಸಂಬಂಧ, ಸಮೃದ್ಧಿ ಪ್ರತೀಕವೆಂದ ಸೀರಿಯಲ್

ರಕ್ಷಣೆ ಹಾಗೂ ಮಾರ್ಗದರ್ಶನ : ನೀಲಕಂಠ ಪಕ್ಷಿ ಶ್ರಾವಣ ಮಾಸದಲ್ಲಿ ಕಾಣಿಸಿದರೆ ಅದರಿಂದ ಈಶ್ವರನ ಕೃಪೆ ಹಾಗೂ ಆಶೀರ್ವಾದ ಸದಾ ನಮ್ಮ ಮೇಲಿರುತ್ತೆ. ಅವನು ಯಾವುದೋ ರೂಪದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಾನೆ. ಜೀವನದಲ್ಲಿ ಸೋತು ಕಂಗೆಟ್ಟವರಿಗೆ ಪ್ರೇರಣೆ ನೀಡುತ್ತಾನೆ. ಇದರಿಂದ ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ನೀಲಕಂಠ ಪಕ್ಷಿ ಕಾಣಿಸುವುದನ್ನು ಶುಭ ಎನ್ನಲಾಗುತ್ತದೆ.

ಪ್ರಾರ್ಥನೆಗೆ ಸಿಗುತ್ತೆ ಫಲ : ಶ್ರಾವಣ ಮಾಸ ಎಂದರೆ ಎಲ್ಲ ಕಡೆ ಪೂಜೆ ಪುನಸ್ಕಾರಗಳು ನಡೆದೇ ಇರುತ್ತವೆ. ಹಲವಾರು ಮಂದಿ ವೃತ, ಪೂಜೆಗಳ ಮೂಲಕ ಇಷ್ಟ ದೇವತೆಗಳನ್ನು ಆರಾಧಿಸುತ್ತಾರೆ. ದೇವರು ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ ಒಳ್ಳೆಯ ಫಲ ನೀಡಲಿ ಎಂದು ಬಯಸುತ್ತಾರೆ. ಒಂದ್ವೇಳೆ ನಿಮಗೆ ಈ ಸಮಯದಲ್ಲಿ ನೀಲಕಂಠ ಪಕ್ಷಿ ಕಾಣಿಸಿದ್ರೆ ಖುಷಿಯಾಗಿ. ನಿಮ್ಮ ಪ್ರಾರ್ಥನೆಯನ್ನು ದೇವರು ಸ್ವೀಕರಿಸಿದ್ದಾನೆ ಎನ್ನುವುದರ ಸಂಕೇತವೇ ಈ ಹಕ್ಕಿಯಾಗಿದೆ. ಈ ಹಕ್ಕಿ ಕಾಣಿಸಿದ್ರೆ ನಿಮಗೆ ಸಧ್ಯದಲ್ಲಿಯೇ ಶುಭ ಸುದ್ದಿ ಬರಲಿದೆ. ಈ ಹಕ್ಕಿ ಕಾಣಿಸಿದ ತಕ್ಷಣ ಈಶ್ವರನ ಪೂಜೆ ಮಾಡುವ ಪದ್ಧತಿಯೂ ರೂಢಿಯಲ್ಲಿದೆ.
 

Latest Videos
Follow Us:
Download App:
  • android
  • ios