ಸ್ಪಂದನಾಗೆ ನಕ್ಷತ್ರ ಹೋಮ: ಮಾಡೋದ್ಯಾಕೆ? ಬದುಕಿದವರಿಗೂ ಮಾಡ್ಬಹುದಾ?
ಸ್ಪಂದನಾ ( spandana vjay raghavendra) ಹೆಸರಲ್ಲಿ ನಕ್ಷತ್ರ ಶಾಂತಿ ಹೋಮ ಮಾಡಲಾಗಿದೆ. ಮೃತಪಟ್ಟವರಿಗೆ ಮಾತ್ರ ಅಲ್ಲ, ಬದುಕಿರುವವರಿಗೂ ಈ ಹೋಮ ಮಾಡುತ್ತಾರೆ. ಈ ಹೋಮವನ್ನು ಯಾಕೆ ಮಾಡ್ತಾರೆ, ಅದರಿಂದ ಯಾವ ಫಲಗಳು ಸಿಗುತ್ತವೆ ಅನ್ನುವ ಮಾಹಿತಿ ಇಲ್ಲಿದೆ.
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಇಹಲೋಕ ಯಾತ್ರೆ ಮುಗಿಸಿ ಆರು ದಿನಗಳಾಗಿವೆ. ಸ್ನೇಹಿತರು ಕುಟುಂಬದವರ ಜೊತೆಗೆ ಸ್ಪಂದನಾ ಬ್ಯಾಕಾಂಕ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ರಕ್ತದೊತ್ತಡ ಕಡಿಮೆ ಆಗಿದೆ. ಲೋ ಬಿಪಿ ಸಮಸ್ಯೆಯಿಂದ ಹೃದಯಾಘಾತವಾಗಿ ಬ್ಯಾಂಕಾಕ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 9ರಂದು ಹರಿಶ್ಚಂದ್ರಘಾಟ್ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಾಯಿತು. ಆಗಸ್ಟ್ 11ರಂದು ಹಾಲುತುಪ್ಪ ಬಿಟ್ಟು, ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗಿದೆ. ಸ್ಪಂದನಾ ಆತ್ಮಕ್ಕೆ ಶಾಂತಿ ಕೋರಿ ಅನೇಕ ಅಪರ ಕರ್ಮದ ವಿಧಿ ವಿಧಾನಗಳು ನೆರವೇರಿದವು.
ಸ್ಪಂದನಾ ಅವರದು ಅಕಾಲಿಕ ಮರಣ. ವಯಸ್ಸಾದ ಮೇಲೆ ಮರಣ ಹೊಂದಿದರೆ ಆ ಹೊತ್ತಿಗೆ ಬೇಸರವಾದರೂ ಅದನ್ನು ಸಹಜ ಎಂದು ಪರಿಗಣಿಸಲಾಗುತ್ತದೆ. ಆದರೆ ಸ್ಪಂದನಾ ತೀರಿಕೊಂಡಿದ್ದು ಇನ್ನೂ ಚಿಕ್ಕ ಪ್ರಾಯದಲ್ಲಿ. ಈ ವಯಸ್ಸಲ್ಲಿ ತೀರಿಕೊಂಡರೆ ಮೃತಪಟ್ಟವರಿಗೂ ಅವರ ಆಪ್ತರಿಗೂ ಸಮಸ್ಯೆಗಳಾಗುತ್ತವೆ ಅನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಹೀಗಾಗಿ ಅವರ ಹೆಸರಿನಲ್ಲಿ ವಿಶೇಷ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಇದರಿಂದ ಮೃತಪಟ್ಟವರಿಗೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ನಮ್ಮಲ್ಲಿ ಇರುವ ನಂಬಿಕೆ. ಅದಕ್ಕೆ ತಕ್ಕಂತೆ ಕೆಲವು ಆಚರಣೆಗಳೂ ನಡೆಯುತ್ತವೆ. ಸ್ಪಂದನಾ ಅವರಿಗೆ ಶ್ರೀರಂಗಪಟ್ಟಣದಲ್ಲಿ ನಡೆದ ಅಂತಿಮ ವಿಧಿಗಳಲ್ಲಿ ನಕ್ಷತ್ರ ಹೋಮವನ್ನೂ ಮಾಡಲಾಯ್ತು. ಉತ್ತರಾಭಾದ್ರ ನಕ್ಷತ್ರದಲ್ಲಿ ಸ್ಪಂದನ ತೀರಿಕೊಂಡಿರುವ ಕಾರಣ ಶಾಂತಿ ಹೋಮ ಮಾಡಿಸಲಾಗಿದೆ.
ಅದಕ್ಕೂ ಮುನ್ನ ವಿಜಯ್ ರಾಘವೇಂದ್ರ ಮಗ ಶೌರ್ಯ ಅವರಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿ ಹೋಮ ಮಾಡಲಾಗಿದೆ. ಒಂದು ಬೊಂಬೆಗೆ ಸ್ಪಂದನಾ ಅವರನ್ನು ಆಹ್ವಾನ ಮಾಡಿ ಅದನ್ನು ಸುಟ್ಟು ಹಾಕಲಾಗಿದೆ. ಅದನ್ನು ಮತ್ತೆ ಅಸ್ತಿ ಜೊತೆಗೆ ಸೇರಿಸಿಕೊಂಡು ಅಸ್ತಿನಾರಾಯಣ ಸ್ವಾಮಿ ಪೂಜೆಯನ್ನು ಕ್ರಮವಾಗಿ ರುದ್ರ ಮತ್ತು ಸೂಕ್ತ ಕ್ರಮದಿಂದ ಪೂಜೆ ಮಾಡಿದ್ದಾರೆ. ತುಪ್ಪ ಹಾಲು ಸಕ್ಕರೆ ಮೊಸರು ಜೇನುತುಪ್ಪ ಎಳನೀರು ಅಭಿಷೇಕ ಮಾಡಿ ಆ ಅಸ್ತಿಗೆ ಪೂಜಿಸಲಾಗಿದೆ. ಸ್ಪಂದನಾ ಅವರಿಗೆ ಸದ್ಗತಿ ಸಿಗಲಿ ಎಂದು ಅಸ್ತಿಯನ್ನು ಕಾವೇರಿ ನದಿಯಲ್ಲಿ ಅರ್ಪಿಸಿದ್ದಾರೆ.
ಇದರಲ್ಲಿ ಗಮನ ಸೆಳೆದದ್ದು ನಕ್ಷತ್ರ ಹೋಮ. ಸ್ಪಂದನಾ ಹೆಸರಲ್ಲಿ ನಕ್ಷತ್ರ ಹೋಮ ಮಾಡಲಾಗಿದೆ. ನಕ್ಷತ್ರ ಹೋಮ ಮಾಡಲು ಕಾರಣ ಸ್ಪಂದನಾ ತೀರಿಕೊಂಡದ್ದು ಧನಿಷ್ಟಾ ಪಂಚಕ ನಕ್ಷತ್ರದಲ್ಲಿ. ಈ ನಕ್ಷತ್ರದಲ್ಲಿ ವ್ಯಕ್ತಿ ಮೃತಪಟ್ಟರೆ 5 ತಿಂಗಳ ಕಾಲ ಮನೆ ಬಿಡಬೇಕು ಅಂತ ಅಪರ ಕ್ರಿಯೆ ಮಾಡಿದ ವ್ಯಕ್ತಿಗಳು ಹೇಳಿದ್ದಾರೆ. ಆದರೆ ಸ್ಪಂದನಾ ಮನೆಯಲ್ಲಿ ತೀರಿಕೊಂಡಿಲ್ಲ ಆದರೂ ದೋಷ ಪರಿಹಾರ ಆಗಬೇಕು ಎಂದು ಉತ್ತರಾಭಾದ್ರ ನಕ್ಷತ್ರದಲ್ಲಿ ಹೋಮ ಮಾಡಲಾಗಿದೆ. ವಿಜಯ್ ಅವರು ಮನೆ ಬಿಡುವ ಅಗತ್ಯವಿಲ್ಲ ಏಕೆಂದರೆ ಸ್ಪಂದನಾ ಹೊರಗಡೆ ಹೋದಾಗ ತೀರಿಕೊಂಡಿರುವುದು. ಅವರು ಕುಟುಂಬಕ್ಕೆ ಯಾವ ತೊಂದರೆಯೂ ಆಗುವುದಿಲ್ಲ ಏಕೆಂದರೆ ಸಂಸ್ಕಾರವನ್ನು ಕ್ರಮವಾಗಿ ಮಾಡಲಾಗಿದೆ ಎಂದೂ ಈ ಸಂಸ್ಕಾರ ಮಾಡಿದ ಪುರೋಹಿತರು ತಿಳಿಸಿದ್ದಾರೆ.
ಬೊಂಬೆಗೆ ಆಹ್ವಾನಿಸಿ, ಮತ್ತೆ ಸುಟ್ಟಿದ್ದಾರೆ, 5 ತಿಂಗಳು ಮನೆ ಬಿಡ ಬೇಕಿಲ್ಲ; ಸ್ಪಂದನಾ ಸಂಸ್ಕಾರದ ಬಗ್ಗೆ ಪೂಜಾರಿ
ಈ ನಕ್ಷತ್ರಾ ಶಾಂತಿ ಹೋಮವನ್ನು ಮೃತಪಟ್ಟವರಿಗೆ ಮಾತ್ರವಲ್ಲ ಬದುಕಿರುವವರಿಗೂ ಮಾಡುತ್ತಾರೆ. ಬದುಕಿರುವವರಿಗೆ ಅವರು ಜನ್ಮದಿನದಂದು ನಕ್ಷತ್ರ ಶಾಂತಿ ಪಠಣ ಮಾಡುತ್ತಾರೆ. ಇದು ಅಡಚಣೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಬದುಕಿರುವವರಾದರೆ ಕೆಲವು ಗ್ರಹಗಳ ಪರಿವರ್ತನೆಯು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ ಹಲವಾರು ಅಡಚಣೆಗಳನ್ನು ಉಂಟುಮಾಡಬಹುದು. ಈ ನಕ್ಷತ್ರ ಶಾಂತಿ ಹೋಮ ನಿರ್ದಿಷ್ಟವಾಗಿ ನಿಖರವಾದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಜೀವನದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಗ್ರಹಗಳ ಋಣಾತ್ಮಕ ಪ್ರಭಾವಗಳಿಂದ (Negative Influence) ರಕ್ಷಣೆ ಪಡೆಯಲು ನಕ್ಷತ್ರ ಶಾಂತಿ ಹೋಮವನ್ನು ಪ್ರತಿ ವರ್ಷದ ಜನ್ಮದಿನದಂದು ಮಾಡಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.
ಅದೇ ಮೃತಪಟ್ಟವರಿಗಾದರೆ ಅವರ ಸದ್ಗತಿಗೆ ಉಂಟಾಗುವ ಅಡಚಣೆ ನಿವಾರಿಸಲು ಈ ಹೋಮ ಮಾಡಲಾಗುತ್ತದೆ. ಈ ಹೋಮ ಮಾಡಿದರೆ ಮೃತರ ಆತ್ಮ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಜನ್ಮ ಕುಂಡಲಿಯಲ್ಲಿ ನಕ್ಷತ್ರದ ಕೆಟ್ಟ ಸ್ಥಾನವು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಅಪೇಕ್ಷಿತ ಫಲಿತಾಂಶಗಳನ್ನು ಅನುಭವಿಸಲು ಕೆಲವು ಹೋಮ ಅಥವಾ ಪೂಜೆ ನಡೆಸುವುದು ಅತ್ಯಗತ್ಯ. ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಆರೋಗ್ಯ (Health), ಸಂಪತ್ತು (Wealth) ಮತ್ತು ಸಮೃದ್ಧಿ (Prosperity)ಯನ್ನು ಪಡೆಯಲು ದೇವರ ಆಶೀರ್ವಾದ ಪಡೆಯಲು ನಕ್ಷತ್ರ ಶಾಂತಿ ಹೋಮ ಸೂಕ್ತವೆಂದು ಶಾಸ್ತ್ರಗಳು ಹೇಳುತ್ತವೆ.
ಈ ಎಲ್ಲ ಕಾರಣಕ್ಕೆ ಸ್ಪಂದನಾ ಅವರಿಗೆ ನಕ್ಷತ್ರ ಶಾಂತಿ ಹೋಮ ಮಾಡಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ.
ಆ ಕುಟುಂಬಕ್ಕೆ ಏನೋ ಆಗಿದೆ, ದೇವರೇ ದೃಷ್ಠಿ ಹಾಕಿದ್ದಾನೆ: ಸ್ಪಂದನಾ ಬಗ್ಗೆ ಗಿರಿಜಾ ಲೋಕೇಶ್ ಭಾವುಕ