ಮದ್ವೆಯಾಗ್ತಿಲ್ವಾ? ಬಯಸಿದ ಸಂಗಾತಿ ಪಡೆಯಲು ಈ ಮಂತ್ರಗಳನ್ನು ಹೇಳಿಕೊಳ್ಳಿ..
ಜಾತಕ ದೋಷ, ಆರೋಗ್ಯ, ಶಿಕ್ಷಣ ಹೀಗೆ ನಾನಾ ಕಾರಣಗಳಿಂದ ಸಾಕಷ್ಟು ಮಹಿಳೆಯರು ಮದುವೆಯಾಗದೆ ಆತಂಕಕ್ಕೊಳಗಾಗುತ್ತಿದ್ದಾರೆ. ಇಂಥವರು ವಿವಾಹವಾಗಲು ಈ ಮಂತ್ರಗಳನ್ನು ಹೇಳಿಕೊಳ್ಳಬೇಕು.
ವಿವಾಹವು ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖ ಘಟ್ಟ. ಜೀವನದುದ್ದಕ್ಕೂ ಜೊತೆಗೆ ಸಾಗುವ ಸಂಗಾತಿ ಇದ್ದಾಗ ಕಷ್ಟಗಳೂ ಸುಲಭವಾಗುತ್ತವೆ. ಆದರೆ, ಇತ್ತೀಚೆಗೆ ಶಿಕ್ಷಣ, ಉದ್ಯೋಗ ಎಂದು ಬಹಳಷ್ಟು ಹೆಣ್ಣುಮಕ್ಕಳು ಮದುವೆ ಮುಂದೂಡುತ್ತಾರೆ. ನಂತರ ತಾವು ಬಯಸಿದ ವರನೇ ಬೇಕೆಂದು ಸಾಕಷ್ಟು ಹುಡುಕಾಡಿ ಕಡೆಗೆ ಮದುವೆಯಾಗುತ್ತಿಲ್ಲ ಎಂದು ಆತಂಕಕ್ಕೊಳಗಾಗುತ್ತಾರೆ. ಮತ್ತೆ ಕೆಲವರು ಜಾತಕದ ದೋಷದಿಂದ ವಿವಾಹವಾಗದೆ ಉಳಿದರೆ ಮತ್ತೂ ಕೆಲವರಿಗೆ ವೈಯಕ್ತಿಕವಾದ ಹತ್ತು ಹಲವು ಕಾರಣಗಳಿಂದಾಗಿ ವಿವಾಹ ತಡವಾಗುತ್ತದೆ. ಹೀಗೆ ವಯಸ್ಸು 30ರ ಆಸುಪಾಸಿಗೆ ಬಂದ ನಂತರ ವಿವಾಹವಾಗದ ಚಿಂತೆ ಕಾಡತೊಡಗುತ್ತದೆ. ವಿವಾಹವಾಗಲು ಪ್ರಯತ್ನದ ಜೊತೆಗೆ, ದೈವಬಲವೂ ಬೇಕು, ಜಾತಕ ಬಲವೂ ಬೇಕು.
ಹೀಗೆ ಜಾತಕ ದೋಷ ಸೇರಿದಂತೆ ವಿವಾಹಕ್ಕೆ ಗುರುಬಲ ಬರುವಂತೆ ಮಾಡಲು ಜ್ಯೋತಿಷ್ಯದಲ್ಲಿ ಹಲವಾರು ಮಾರ್ಗಗಳಿವೆ. ಅವುಗಳಲ್ಲೊಂದು ಮಂತ್ರ ಪಠಣ. ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಈ ಮಂತ್ರಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ವಯಸ್ಸು ದಾಟಿದರೂ ಮದುವೆಯಾಗುತ್ತಿಲ್ಲ ಎಂದು ಆತಂಕಕ್ಕೊಳಗಾಗಿರುವ ಮಹಿಳೆಯರು ಈ ಮಂತ್ರಗಳನ್ನು ಪಠಿಸಬೇಕು.
ಶಿವ ಪಾರ್ವತಿ ಮಂತ್ರ
ಪಾರ್ವತಿ ದೇವಿಯು ಶಿವನನ್ನು ತನ್ನ ಸಂಗಾತಿಯನ್ನಾಗಿ ಪಡೆಯಲು ಕಟಿಬದ್ಧಳಾಗಿದ್ದಳು.. ಅವರಿಬ್ಬರದೂ ಎಲ್ಲರೂ ಬಯಸುವಂಥ ಜೋಡಿ. ಸುಂದರವಾದ, ಸೂಕ್ಷ್ಮವಾದ, ಅರ್ಥ ಮಾಡಿಕೊಳ್ಳುವ ಮತ್ತು ನಿರಂತರವಾಗಿ ಪ್ರೀತಿಸುವ ಸಂಗಾತಿಯನ್ನು ಹೊಂದುವುದು ಪ್ರತಿಯೊಬ್ಬ ಯುವತಿಯ ಫ್ಯಾಂಟಸಿ. ಇದಕ್ಕಾಗಿ ಹದಿನಾರು ಸೋಮವಾರಗಳ ಉಪವಾಸವು ಪ್ರತಿ ಮಹಿಳೆಗೆ ಬಯಸಿದ ಯುವಕನನ್ನು ಮದುವೆಯಾಗಲು ಸಹಾಯ ಮಾಡುವ ಒಂದು ಮಾರ್ಗವಾಗಿದೆ. ಹೀಗೆ ಪ್ರತಿ ಸೋಮವಾರ ಉಪವಾಸ ಆಚರಣೆ ಮಾಡುವಾಗ ಶಿವಪಾರ್ವತಿ ಮಂತ್ರವನ್ನು ಅವಿವಾಹಿತ ಮಹಿಳೆಯರು ಹೇಳಿಕೊಳ್ಳಬೇಕು. ಮಂತ್ರ ಹೀಗಿದೆ- 'ಓಂ ಹ್ರೀಂ ಯೋಗಿನೀಂ ಯೋಗಿನಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರಜಂಗಮಸ್ಯ ಮುಖ ಹೃದಯಂ ಮಮ ವಾಸಂ ಆಕರ್ಷ ಆಕರ್ಷಾಯ ನಮಃ'
Vastu tips: ಈ ಐದು ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಗೆ ಸಂಪತ್ತು ಖಚಿತ!
ಗೌರಿ ಮಂತ್ರ
ಗೌರಿಯು ಶಿವನ ಗಮನಕ್ಕೆ ಬರಲು ಮತ್ತು ತನ್ನ ಜೀವನದಲ್ಲಿ ಅವನನ್ನು ತರಲು ಸಾಕಷ್ಟು ಗೌರವಾನ್ವಿತವಾಗಿ ಮಾಡಿದ ತಪಸ್ಸಿತ್ಯಾದಿ ಉತ್ತಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾಳೆ. ಅವಳು ತನ್ನ ಕುಂಡಲಿನಿಯನ್ನು ಕಲಕಿದಾಗ ಮತ್ತು ತನ್ನ ನೈಜತೆಯ ಹಿಂದಿನ ಶಕ್ತಿ ಅರಿತಾಗ, ಅವಳು ನಿಜವಾಗಿಯೂ ತಾನು ಯಾರೆಂದು ಗ್ರಹಿಸಿದಾಗ, ತನ್ನ ಒಳ್ಳೆಯ ಉದ್ದೇಶ ಮತ್ತು ಶುದ್ಧ ಸಮರ್ಪಣೆಯೊಂದಿಗೆ ಶಿವನನ್ನು ಪಡೆದಳು. ಹಾಗಾಗಿ, ಅವಿವಾಹಿತ ಮಹಿಳೆಯರು ವಿವಾಹಕ್ಕಾಗಿ ಗೌರಿ ಮಂತ್ರ ಜಪಿಸಬೇಕು. ಪ್ರತಿ ಶುಕ್ರವಾರ ಗೌರಿ ಪೂಜೆ ಮಾಡಿ, 'ಓಂ ಶ್ರೀಂ ಗೌರಿ ದೇವ್ಯೈ ನಮಃ' ಎಂಬ ಮಂತ್ರವನ್ನು 21 ಬಾರಿ ಹೇಳಬೇಕು.
ಮಧುಕ್ ತೃತೀಯಾ ವ್ರತ
ಈ ಆಚರಣೆಯು ಫಾಲ್ಗುಣ ಶುಕ್ಲದ ಮೂರನೇ ದಿನದಂದು ನಡೆಯುತ್ತದೆ. ಈ ದಿನವು ಪಾರ್ವತಿ ದೇವಿಗೆ ಬದ್ಧವಾಗಿದೆ. ಇದನ್ನು ಆಚರಿಸಿದವರು ಪಾರ್ವತಿ ದೇವಿಯಿಂದ ಬಯಸಿದ ಸಂಗಾತಿಯನ್ನು ಪಡೆಯುತ್ತಾರೆ. ಹೆಂಗಸರು ಮಧೂಕ್ ವ್ರತ ಆಚರಿಸುವಾಗ 'ಓಂ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ತ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋ-ಸ್ತುತೇ ' ಶ್ಲೋಕವನ್ನು ಹೇಳಿಕೊಳ್ಳಬೇಕು. ಈ ಮಂತ್ರವನ್ನು ಉಳಿದಂತೆಯೂ ಮಂಗಳವಾರ, ಶುಕ್ರವಾರದ ದಿನ 21 ಬಾರಿ ಹೇಳುವುದು ಉತ್ತಮ ಫಲ ನೀಡುತ್ತದೆ.
ಕೃಷ್ಣ ಜನ್ಮಾಷ್ಟಮಿ 2022: ಮನೆಯಲ್ಲಿ ಬಾಲ ಗೋಪಾಲನಿದ್ದರೆ, ಈ 6 ಕೆಲಸ ದಿನಾ ಮಾಡಬೇಕು!
16 ಸೋಮವಾರದ ವ್ರತ
ಸೋಮವಾರಗಳು ಶಿವನಿಗೆ ಮೀಸಲಾಗಿವೆ. 16 ಸೋಮವಾರಗಳ ಕಾಲ ಉಪವಾಸವನ್ನು ಆಚರಿಸುವ ಅವಿವಾಹಿತ ಮಹಿಳೆಯರು ಬಯಸಿದ ಸಂಗಾತಿಯನ್ನು ಪಡೆಯಬಹುದು ಮತ್ತು ವಿವಾಹಿತರು ತಮ್ಮ ಕುಟುಂಬಗಳಿಗೆ ಸುರಕ್ಷತೆಯ ಆಶೀರ್ವಾದವನ್ನು ಪಡೆಯಬಹುದು. ಪಾರ್ವತಿ ದೇವಿಯು ಶಿವನನ್ನು ತನ್ನ ಉತ್ತಮ ಭಾಗವಾಗಿ ಪಡೆಯಲು ಈ ಉಪವಾಸಗಳನ್ನು ಆಚರಿಸಿದಳು ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ || ಓಂ ಗೌರೀ ಪತಿ ಮಹಾದೇವಯೇ ಮಮ ಇಶ್ಚಿತ್ ವರ ಶೀಘ್ರ ಅತಿ ಶೀಘ್ರ ಪ್ರಾಪ್ತ್ಯರ್ಥಂ ಗೌರ್ಯಯೇ ನಮಃ || ಎಂಬ ಮಂತ್ರ ಹೇಳಿಕೊಳ್ಳಬೇಕು.