ಕರ್ನಾಟಕದ ಈ ಊರಲ್ಲಿ ನಡೆಯುತ್ತೆ ಅತ್ತಿಗೆ ನಾದಿನಿಯರು ಡಿಚ್ಚಿ ಹೊಡೆದುಕೊಳ್ಳುವ ವಿಶಿಷ್ಟ ಆಚರಣೆ..!

ದೇವಸ್ಥಾನದ ಒಂದು ಬದಿ ಅತ್ತಿಗೆಯರು ಮತ್ತು ಇನ್ನೊಂದು ಬದಿ ನಾದಿನಿಯರು ನಿಂತು ಓಡಿ ಬಂದು ಡಿಚ್ಚಿ ಹೊಡೆದುಕೊಳ್ಳುವ ಸಂಪ್ರದಾಯ ಪ್ರತಿ ವರ್ಷದಂತೆ ನಡೆಯಿತು. ಬುಡಕಟ್ಟು ಮೂಲ ನೆಲೆಯಿಂದಲೇ ಬಂದಿರುವ ದೈವಭಕ್ತಿ ನಂಬಿಕೆಯಲ್ಲಿ ಅತ್ತಿಗೆ ನಾದಿನಿಯ ಭಾಂದವ್ಯದ ಪ್ರತೀಕವಾಗಿ ಈ ಆಚರಣೆ ರೂಢಿಗತವಾಗಿ ಬಂದಿದೆ.

Unique Ritual Held Every Year  at Hiriyur in Chitradurga grg

ಹಿರಿಯೂರು(ಡಿ.26): ತಾಲೂಕಿನ ಐಮಂಗಲ ಹೋಬಳಿಯ ಸಿಎನ್ ಮಾಳಿಗೆಯ ಅಹೋಬಲ ನರಸಿಂಹ ಸ್ವಾಮಿಯ ಕಾರ್ತಿಕ ಮಹೋತ್ಸವದ ಜಾತ್ರೆಯಲ್ಲಿ ವರ್ಷಕ್ಕೊಮ್ಮೆ ವಿನೂತನ ಮತ್ತು ಆಶ್ಚರ್ಯಕರ ಆಚರಣೆಯೊಂದು ಪ್ರತಿ ವರ್ಷವೊ ನಡೆಯುತ್ತದೆ. ದೇವಸ್ಥಾನದ ಒಂದು ಬದಿ ಅತ್ತಿಗೆಯರು ಮತ್ತು ಇನ್ನೊಂದು ಬದಿ ನಾದಿನಿಯರು ನಿಂತು ಓಡಿ ಬಂದು ಡಿಚ್ಚಿ ಹೊಡೆದುಕೊಳ್ಳುವ ಸಂಪ್ರದಾಯ ಪ್ರತಿ ವರ್ಷದಂತೆ ಭಾನುವಾರವು ನಡೆಯಿತು. ಬುಡಕಟ್ಟು ಮೂಲ ನೆಲೆಯಿಂದಲೇ ಬಂದಿರುವ ದೈವಭಕ್ತಿ ನಂಬಿಕೆಯಲ್ಲಿ ಅತ್ತಿಗೆ ನಾದಿನಿಯ ಭಾಂದವ್ಯದ ಪ್ರತೀಕವಾಗಿ ಈ ಆಚರಣೆ ರೂಢಿಗತವಾಗಿ ಬಂದಿದೆ.

ವಿವಾಹವಾಗಿ ಬೇರೆ ಊರಿಗೆ ಹೋಗಿರುವ ನಾದಿನಿಯರನ್ನು ಊರಿನ ಹೆಬ್ಬಾಗಿಲ ಬಳಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಪರಸ್ಪರ ಎದುರುಗೊಂಡ ಅತ್ತಿಗೆ ನಾದಿನಿಯರು ದೇವರ ಸಮ್ಮುಖದಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಮೂರು ಬಾರಿ ತಲೆಯಲ್ಲಿ ಪರಸ್ಪರ ಡಿಚ್ಚಿ ಹೊಡೆದುಕೊಳ್ಳುವ ಮೂಲಕ ತವರು ಮನೆ ಪ್ರೀತಿ ಗಟ್ಟಿಗೊಳಿಸಿಕೊಳ್ಳುತ್ತಾರೆ. ಮಹಿಳೆಯರ ಮಧ್ಯೆ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವ ರೂಪಕವಾಗಿ ಈ ಆಚರಣೆ ನಡೆದು ಬಂದಿದೆ.

ಪದೇ ಪದೆ ಯಾರಾದ್ರೂ ಕನಸಲ್ಲಿ ಬರ್ತಾ ಇದ್ರೆ ಅದೆಂಥ ಸಂದೇಶ? ಮನಸ್ಸಿಗೆ ಇಷ್ಟೊಂದು ಶಕ್ತಿಯಾ?

ವರ್ಷಕ್ಕೊಮ್ಮೆ ನಡೆಯುವ ಈ ಸಂಪ್ರದಾಯದಲ್ಲಿ ಭಾಗವಹಿಸದೆ ಇರುವವರಿಗೆ ತಲೆನೋವಿಂತಹ ಕಾಯಿಲೆಗಳು ಬರುತ್ತವೆ ಎಂಬ ನಂಬಿಕೆಯು ಜನರಲ್ಲಿದೆ. ಜೊತೆಗೆ ಪಶುಪಾಲನ ಸಂಸ್ಕೃತಿಯ ಪ್ರತೀಕವಾಗಿ ಟಗರಿನ ಡಿಚ್ಚಿ ನಡೆಯುತ್ತದೆ. ಮೂರು ದಿನಗಳ ಕಾರ್ತಿಕ ಮಹೋತ್ಸವ ಈ ರೀತಿಯ ವಿಶಿಷ್ಟ ಆಚರಣೆಗಳ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊನೆಗೊಳ್ಳುತ್ತದೆ.

Latest Videos
Follow Us:
Download App:
  • android
  • ios