Asianet Suvarna News Asianet Suvarna News

ತವರಲ್ಲಿ ಯಾರಾದ್ರೂ ಸತ್ತರೆ, ಮನೆ ಮಗಳು ಎಷ್ಟು ದಿನ ಸೂತಕ ಆಚರಿಸಬೇಕು?

ಮನೆಯಲ್ಲಿ ಸಾವಾದ್ರೆ ಕುಟುಂಬಸ್ಥರು ಸೂತಕ ಆಚರಣೆ ಮಾಡ್ತಾರೆ. ದೇವರ ಮನೆಗೆ ಹೋಗದೆ, ಪೂಜೆ, ಮಂತ್ರ ಜಪಿಸದೆ ಒಂದಿಷ್ಟು ನಿಯಮ ಪಾಲನೆ ಮಾಡ್ತಾರೆ. ಸೂತಕದ ಬಗ್ಗೆ ಮಾಹಿತಿ ಇಲ್ಲಿದೆ.
 

Understanding Sutak Importance of Adhering to Ritual Rules After  Demise in Household roo
Author
First Published Apr 23, 2024, 6:06 PM IST

ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳು ಜಾರಿಯಲ್ಲಿವೆ. ಹುಟ್ಟು – ಸಾವಿನ ಸಮಯದಲ್ಲೂ ಕೆಲವೊಂದು ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಯಾವುದೇ ಮನೆಯಲ್ಲಿ ಮಗು ಜನಿಸಿದ್ರೆ ಅಥವಾ ಸತ್ತರೆ ಆಮೆ ಮತ್ತು ಸೂತಕವನ್ನು ಪಾಲಿಸಲಾಗುತ್ತದೆ. ಮೃತನ ಕುಟುಂಬಸ್ಥರೆಲ್ಲ ಈ ಸೂತಕಕ್ಕೆ ಒಳಪಡ್ತಾರೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಏಳು ತಲೆಮಾರಿನ ಜನರು ಸೂತಕ ಪಾಲಿಸಬೇಕು. ಸೂತಕ ಎಂದ್ರೇನು? ಅದರಲ್ಲಿ ಏನೆಲ್ಲ ನಿಯಮವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಸೂತಕ (Sutak) – ಆಮೆ (ವೃದ್ಧಿ) ಎಂದರೇನು? : ಜನನ (Birth) ಅಥವಾ ಮರಣ (Death) ದ ನಂತರ ಆಚರಣೆ ಮಾಡುವ ಒಂದು ಪದ್ಧತಿ. ಸತ್ತಾಗ ನೋವಿನ ಸೂತಕ ಆಚರಿಸಿದ್ರೆ ಹುಟ್ಟಿದಾಗ ಖುಷಿಯ ವೃದ್ಧಿ ಆಚರಣೆ ಮಾಡಲಾಗುತ್ತದೆ. ಪ್ರತಿಯೊಂದು ಜನಾಂಗ, ಜಾತಿ, ಧರ್ಮದಲ್ಲೂ ಇದು ಭಿನ್ನವಾಗಿದೆ.  ಸಾವು ಸಂಭವಿಸಿದ ಮನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸದಿದ್ದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ಈ ಸೂತಕವನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಮನೆಯ ದಕ್ಷಿಣ ದಿಕ್ಕಿನದಲ್ಲಿ ಈ ವಸ್ತು ಇಟ್ರೆ ಹಣ, ನೆಮ್ಮದಿಗೆ ಕೊರತೆ ಇರೋದಿಲ್ಲ

ಎಷ್ಟು ದಿನವಿರುತ್ತೆ ಸೂತಕ ? : ಹುಟ್ಟು, ಸಾವು, ಗ್ರಹಣ ಹಾಗೂ ಮಹಿಳೆಯ ಪಿರಿಯಡ್ಸ್ ಸಮಯದಲ್ಲಿ ಸೂತಕವನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ಸೂತಕದ ಅವಧಿ ಭಿನ್ನವಾಗಿರುತ್ತದೆ. ಸತ್ತ ಮನೆಯಲ್ಲಿ 10 ದಿನ ಸೂತಕವಿರುತ್ತದೆ. ಅಂತ್ಯಕ್ರಿಯೆ ಮಾಡಿದ ವ್ಯಕ್ತಿಗೆ 12 -13 ದಿನ ಸೂತಕವಿರುತ್ತದೆ. ಮನೆಯಲ್ಲಿಯೇ ಸಾವಾದ್ರೆ ಅಲ್ಲಿನ ಜನರು 40 ದಿನಗಳ ಕಾಲ ಬೇರೆಯವರ ಮನೆಗೆ ಹೋಗಬಾರದು ಎನ್ನುವ ನಿಯಮ ಕೂಡ ಇದೆ.

ಸೂತಕ ಏಳು ತಲೆಮಾರಿನವರೆಗೆ ಬರುತ್ತದೆ. ಏಳನೇ ತಲೆಮಾರಿನ ಜನರು ಮೂರು ದಿನ ಸೂತಕ ಆಚರಿಸಬೇಕಾಗುತ್ತದೆ. ಮನೆಯ ಮಗಳು ಮದುವೆಯಾಗಿ ಬೇರೆ ಮನೆಗೆ ಹೋದ ನಂತ್ರ ಆಕೆ ಮೂರು ದಿನ ಮಾತ್ರ ತವರಿನ ಸೂತಕ ಪಾಲಿಸಬೇಕು. ಸಂಬಂಧ ಬದಲಾದಂತೆ ಸೂತಕದ ಅವಧಿ ಕೂಡ ಬದಲಾಗುತ್ತದೆ. 

ಮನೆಯಲ್ಲಿ ಮಗು ಜನಿಸಿದಾಗ ಜನರು ಹತ್ತು ದಿನ ಆಮೆ ಪಾಲಿಸುತ್ತಾರೆ. ಇದು ಕೂಡ ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತದೆ. ಮೂರು ತಲೆಮಾರಿನವರೆಗೆ ಹತ್ತು ದಿನವಾದ್ರೆ ಐದು ತಲೆಮಾರಿನ ಜನರು 6 ದಿನ ಆಮೆ ಪಾಲಿಸಬೇಕು. ಆ ಕುಟುಂಬದಿಂದ ಸನ್ಯಾಸತ್ವ ಸ್ವೀಕರಿಸಿದ ಯಾವುದೇ ವ್ಯಕ್ತಿಗೆ ಈ ಯಾವುದೇ ಸೂತಕ, ವೃದ್ಧಿ ಅನ್ವಯಿಸುವುದಿಲ್ಲ. 

ಸೂತಕದ ನಿಯಮಗಳು : ಸೂತಕದ ವೇಳೆ ಕೆಲವೊಂದು ನಿಯಮ ರೂಪಿಸಲಾಗಿದೆ. ಅದರಂತೆ ಸೂತಕವಿರುವ ವ್ಯಕ್ತಿಗಳು ಬೇರೆಯವರನ್ನು ಸ್ಪರ್ಶಿಸಬಾರದು. ಯಾವುದೇ ಶುಭ – ಮಂಗಳ ಕಾರ್ಯಗಳನ್ನು ಈ ಸಮಯದಲ್ಲಿ ಮಾಡಬಾರದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು. ಮನೆಯಲ್ಲಿ ದೇವರ ಪೂಜೆ ಮಾಡಲು ಅವಕಾಶವಿಲ್ಲ. ಕುಟುಂಬದ ಸದಸ್ಯರು ಯಾವುದೇ ಧಾರ್ಮಿಕ ಸ್ಥಳಕ್ಕೆ ಭೇಟಿ ಮಾಡುವಂತಿಲ್ಲ. 

ಮೃತನ ಮನೆಯ ಸದಸ್ಯರು ಬೇರೆ ಮನೆಗೆ ಹೋಗಬಾರದು. ಬೇರೆ ಮನೆಯ ಊಟವನ್ನು ಸೇವಿಸಬಾರದು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡಬೇಕು. ಹಾಗೆ ಗರುಡ ಪುರಾಣವನ್ನು ಓದಬೇಕು. ಬೇರೆಯವರು ಕೂಡ ಸೂತಕದ ಮನೆಗೆ ಬರಬಾರದು ಎನ್ನುವ ನಿಯಮವಿದೆ. ಒಂದ್ವೇಳೆ ಸತ್ತವರ ಮನೆಗೆ ಬಂದಲ್ಲಿ ವಾಪಸ್ ಮನೆಗೆ ಹೋದ ತಕ್ಷಣ ಸ್ನಾನ ಮಾಡಿ ಶುದ್ಧರಾಗಬೇಕು ಎಂಬ ನಿಯಮವಿದೆ. 

ಹೆಣ್ಮಕ್ಕಳು ಕುಂಬಳ ಕಾಯಿ ಕಟ್ ಮಾಡಬಾರದು ಅಂತಾರಲ್ಲ, ಏಕೀರಬಹುದು?

ಸಾವನ್ನಪ್ಪಿದ ಮನೆಯಲ್ಲಿ ಸೂತಕ ಮುಗಿದ ನಂತ್ರ ಸ್ನಾನ ಮಾಡಿ, ಪಂಜಗವ್ಯ ಸೇವನೆ ಮಾಡಿ ಶುದ್ಧರಾಗಬೇಕು. ಇಡೀ ಮನೆಯನ್ನು ಶುದ್ಧಗೊಳಿಸಬೇಕು. ಬೇರೆ ಸ್ಥಳದಲ್ಲಿರುವ ಕುಟುಂಬಸ್ಥರು ಕೂಡ ಪಂಜಗವ್ಯ ಸೇವನೆ ಮಾಡಿ ಶುದ್ಧರಾಗಬೇಕು. ಈ ಸಮಯದಲ್ಲಿ ಯಾವುದೇ ಹೊಸ ಬಟ್ಟೆ, ಹೊಸ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ. 

Follow Us:
Download App:
  • android
  • ios