Asianet Suvarna News Asianet Suvarna News

Life Mantras: ಮನಸ್ಸಿನ ನೆಮ್ಮದಿಗಾಗಿ ಈ ಗುರುಗಳ ಜೀವನ ಮಂತ್ರ ಕೇಳಿ..

ಇಂದಿನ ಧಾವಂತದ ಜೀವನದಲ್ಲಿ, ಯಶಸ್ಸನ್ನಾದರೂ ಗಳಿಬಹುದು, ಶಾಂತಿ ನೆಮ್ಮದಿ ಗಳಿಸುವುದು ಅಸಾಧ್ಯ ಎಂಬಂತಾಗಿದೆ. ಹಾಗಾಗಿ, ಜನರು ಯಶಸ್ಸಿನಿಂದ ಸಂತೋಷ ಮತ್ತು ಶಾಂತಿಯ ಕಡೆಗೆ ಹೊರಳಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದನ್ನು ತಲುಪಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. 

Understand the mantras of life from these saints you will get peace of mind skr
Author
First Published May 24, 2023, 3:01 PM IST

ಇಂದಿನ ಧಾವಂತದ ಜೀವನದಲ್ಲಿ, ಯಶಸ್ಸನ್ನಾದರೂ ಗಳಿಬಹುದು, ಶಾಂತಿ ನೆಮ್ಮದಿ ಗಳಿಸುವುದು ಅಸಾಧ್ಯ ಎಂಬಂತಾಗಿದೆ. ಹಾಗಾಗಿ, ಜನರು ಯಶಸ್ಸಿನಿಂದ ಸಂತೋಷ ಮತ್ತು ಶಾಂತಿಯ ಕಡೆಗೆ ಹೊರಳಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದನ್ನು ತಲುಪಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಇದರ ಹಿಂದಿನ ಕಾರಣವೇನು ಮತ್ತು ನೀವು ಅಲ್ಲಿಗೆ ಹೇಗೆ ತಲುಪಬಹುದು, ಮಾನಸಿಕ ನೆಮ್ಮದಿ, ಆಂತರಿಕ ಶಾಂತಿ ಇಷ್ಟೊಂದು ಕಷ್ಟ ಸಾಧುವೇ? ದೇಶದ ಯೋಗಿಗಳಿಂದ ಈ ಬಗ್ಗೆ ತಿಳಿಯೋಣ.

ಸದ್ಗುರು ನುಡಿ
ನಾಯಕತ್ವದ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ: 

ಯೋಗಿ ಸದ್ಗುರು ಜೀ ಅವರು ನಾಯಕರಾಗಿ ನೀವು ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ನೀವು ಇತರ ಜನರ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಬಯಸಿದರೆ ಅದಕ್ಕೂ ಮೊದಲು ನೀವು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ನೀವು ಯಾವುದನ್ನಾದರೂ ಉತ್ತಮವಾಗಿ ಮಾಡಬಹುದು, ಆದರೆ ಭೂಮಿಯ ಮೇಲೆ ಅದೇ ಅತ್ಯುತ್ತಮವಾಗಿರಬೇಕಾಗಿಲ್ಲ. ಇದರರ್ಥ ನಿಮ್ಮ ಸ್ವಂತ ಬೆಳವಣಿಗೆಗೆ ಮತ್ತು ಸಾಧ್ಯತೆಗಳಿಗೆ ತೆರೆದುಕೊಳ್ಳಲು ಇನ್ನೂ ಸಾಕಷ್ಟು ಅವಕಾಶಗಳಿವೆ. ನಾವು ನಮ್ಮ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳದಿದ್ದರೆ, ಜಗತ್ತು ಹೇಗೆ ಶಾಂತಿಯುತವಾಗಿರುತ್ತದೆ? ಪ್ರಪಂಚದ ಸಂಘರ್ಷಗಳು ಮಾನವ ಮನಸ್ಸಿನ ಅಭಿವ್ಯಕ್ತಿ.

ಅವಧೇಶಾನಂದ ಗಿರಿ ನುಡಿ
ಗುರಿಯ ಅರಿವಿರಲಿ: 

ಗುರಿಯನ್ನು ಸಾಧಿಸಲು ವಾಸ್ತವಿಕ ಮತ್ತು ಸತ್ಯವಂತರಾಗಿರಬೇಕು ಎಂದು ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಹೇಳುತ್ತಾರೆ. ಇದಕ್ಕಾಗಿ ಪ್ರತಿ ಸಂದರ್ಭದಲ್ಲೂ ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಇದು ಮನಸ್ಸನ್ನು ಆರೋಗ್ಯಕರ ಮತ್ತು ಶುದ್ಧವಾಗಿರಿಸುತ್ತದೆ ಮತ್ತು ಇದು ಸಂತೋಷ ಮತ್ತು ಶಾಂತಿಯ ಮೂಲವಾಗಿದೆ. ನಿಜವಾದ ಪ್ರಗತಿಗಾಗಿ, ಗುರಿಯ ಬಗ್ಗೆ ತಿಳಿದಿರಲಿ ಮತ್ತು ಆಧ್ಯಾತ್ಮಿಕ ಪ್ರಯತ್ನಗಳನ್ನು ಮಾಡುತ್ತಿರಿ.

Hindu Mythology: ಭಗವಾನ್ ವಿಷ್ಣುವು ಶೇಷನಾಗನ ಮೇಲೆ ಏಕೆ ಮಲಗುತ್ತಾನೆ?

ರವಿಶಂಕರ್ ಗುರೂಜಿ ಮಾತು
ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ದಾರಿ ಮಾಡಿಕೊಳ್ಳಿ: 

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಪ್ರಪಂಚವು ವಿಭಿನ್ನತೆಗಳಿಂದ ತುಂಬಿದೆ, ಇದರಲ್ಲಿ ತರ್ಕವು ಅತ್ಯಗತ್ಯ ಎಂದು ಹೇಳುತ್ತಾರೆ. ಆದರೆ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಒಬ್ಬನು ಚಾಕಚಕ್ಯತೆಯಿಂದ ತನ್ನ ದಾರಿಯನ್ನು ಮಾಡಿಕೊಳ್ಳಬೇಕು ಎಂಬುದು ಅವರ ನುಡಿಮುತ್ತು.

ಆಂತರಿಕ ಶಾಂತಿಯನ್ನು ಅನುಭವಿಸಿ : 
ಯುರೋಪಿಯನ್ ಪಾರ್ಲಿಮೆಂಟ್ ಬ್ರಸೆಲ್ಸ್‌ನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಉಪನ್ಯಾಸದಲ್ಲಿ ಶ್ರೀ ಶ್ರೀ ರವಿಶಂಕರ್ ಜೀ, ಮನಸ್ಸು ಶಾಂತವಾಗಿ ಮತ್ತು ಸ್ಪಷ್ಟವಾಗಿದ್ದಾಗ, ಜನರು ಪರಸ್ಪರ ಸಂಬಂಧದ ಆಳವಾದ ತಿಳುವಳಿಕೆಯೊಂದಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ. ಜೀವನಕ್ಕಾಗಿ ನಮ್ಮ ಉಸಿರಿನಲ್ಲಿಯೇ ಇರುವ ಆಂತರಿಕ ಶಾಂತಿಯನ್ನು ಅನುಭವಿಸಬೇಕು. ನಮ್ಮ ಉಸಿರು ಭಾವನೆಗಳನ್ನು ಮತ್ತು ಆಲೋಚನೆಗಳನ್ನು ನಿಯಂತ್ರಿಸುವ, ಆತಂಕವನ್ನು ಕಡಿಮೆ ಮಾಡುವ ಮತ್ತು ಒತ್ತಡವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಶನಿದೃಷ್ಟಿ ಬಿದ್ರೆ ಇಷ್ಟೆಲ್ಲ ಅನುಭವಿಸ್ಬೇಕು!

ಮಾತಾ ಅಮೃತಾನಂದಮಯೀ
ಆಂತರಿಕ ಶಾಂತಿಯೇ ಯಶಸ್ಸು : 

ಆಂತರಿಕ ಶಾಂತಿಯೇ ನಿಜವಾದ ಆಸ್ತಿ. ನಮ್ಮ ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ಸ್ಪಷ್ಟತೆ ಮತ್ತು ಸೂಕ್ಷ್ಮತೆಯನ್ನು ಸಾಧಿಸಲು ಧ್ಯಾನಸ್ಥ ಮನಸ್ಸು ಮತ್ತು ಆಧ್ಯಾತ್ಮಿಕ ತಿಳುವಳಿಕೆ ಅಗತ್ಯ. ಯಾವುದೇ ಧರ್ಮವು ಧ್ಯಾನಕ್ಕೆ ಮಾತ್ರ ಹಕ್ಕು ನೀಡುವುದಿಲ್ಲ. ಧ್ಯಾನ ಮತ್ತು ಆಧ್ಯಾತ್ಮಿಕತೆಯನ್ನು ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಧ್ಯಾನವು ಚಿನ್ನದಷ್ಟೇ ಅಮೂಲ್ಯವಾದುದು. ಇದು ಕೇವಲ ಭೌತಿಕ ಸಮೃದ್ಧಿ ಮತ್ತು ಮನಸ್ಸಿನ ಶಾಂತಿಯನ್ನು ನೀಡುವುದಿಲ್ಲ, ಆಧ್ಯಾತ್ಮಿಕ ಉನ್ನತಿಯನ್ನೂ ಗಳಿಸುತ್ತದೆ. ಅಧ್ಯಾತ್ಮ ಮತ್ತು ಬದುಕನ್ನು ಪ್ರತ್ಯೇಕವಾಗಿ ನೋಡುವುದು ಅಜ್ಞಾನ. ದೇಹಕ್ಕೆ ಆಹಾರ ಮತ್ತು ನಿದ್ದೆ ಎಷ್ಟು ಅವಶ್ಯವೋ ಹಾಗೆಯೇ ಆರೋಗ್ಯಕರ ಮನಸ್ಸಿಗೆ ಆಧ್ಯಾತ್ಮಿಕ ತಿಳುವಳಿಕೆ ಬೇಕು.

Follow Us:
Download App:
  • android
  • ios