ಪೂಜಿಸುವಾಗ ಈ ರೀತಿಯ ಸೂಚನೆ ಸಿಕ್ಕರೆ ನಿಮ್ಮ ಬೇಡಿಕೆ ನೆರವೇರೋದು ಗ್ಯಾರಂಟಿ!
ಮನೆ ಇಲ್ಲವೇ ದೇವಸ್ಥಾನದಲ್ಲಿ ಪೂಜಿಸುವಾಗ, ಪ್ರಾರ್ಥಿಸುವಾಗ ದೇವರು ಪ್ರಸನ್ನನಾಗಿರುವ ಕೆಲ ಸೂಚನೆಗಳು ಸಿಗಬಹುದು. ದೇವರು ಯಾವ ರೀತಿಯ ಸೂಚನೆ ನೀಡುತ್ತಾನೆ ತಿಳಿಯೋಣ.
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರವು ಬಹಳ ಮಹತ್ವದ್ದಾಗಿದೆ, ದೇವರು ಕಾಣಿಸಿಕೊಳ್ಳದಿದ್ದರೂ, ಅವನು ಕೆಲವು ರೂಪದಲ್ಲಿ ಅಥವಾ ಇನ್ನೊಂದು ರೂಪದಲ್ಲಿ ನಮ್ಮೊಂದಿಗೆ ಇರುತ್ತಾನೆ ಮತ್ತು ಕೆಲವು ವಿಶೇಷ ಚಿಹ್ನೆಗಳ ಸಹಾಯದಿಂದ ಅವನು ತನ್ನ ಸಂತೋಷ ಮತ್ತು ಅಸಹನೆ ಬಗ್ಗೆ ಹೇಳುತ್ತಾನೆ. ಜೀವನದಲ್ಲಿ ನಮಗೆ ದೊರೆಯುವ ಪ್ರತಿಯೊಂದೂ ದೇವರ ಕೃಪೆಯಾಗಿರುತ್ತದೆ. ಕೆಲವೊಮ್ಮೆ ದೇವರು ಏನಾದರೂ ಕೊಡುವ ಮುನ್ನ, ಬಯಕೆ ಈಡೇರಿಸುವ ಮುನ್ನ ಅದರ ಬಗ್ಗೆ ಸೂಚನೆ ಕೊಡುತ್ತಾನೆ. ಹೀಗೆ ದೇವರು ತೋರುವ ಕೆಲ ಸೂಚನೆಗಳನ್ನು ನೋಡೋಣ.
ದೀಪ ಜ್ವಾಲಾಯಮಾನವಾದರೆ
ಅದು ದೇವಸ್ಥಾನವಾಗಲಿ ಅಥವಾ ಮನೆ ಪೂಜೆಯಾಗಲಿ, ನಾವು ಜ್ಯೋತಿ ಬೆಳಗಿಸಬೇಕು. ನೀವು ಹಚ್ಚಿದ ದೀಪದ ಜ್ವಾಲೆಯು ತುಂಬಾ ಹೆಚ್ಚಾದರೆ, ನಿಮ್ಮ ಭಕ್ತಿ ಮತ್ತು ಗೌರವದಿಂದ ನೀವು ದೇವರನ್ನು ಮೆಚ್ಚಿಸಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ.
ಅಗರಬತ್ತಿ ಪರಿಮಳ
ಧೂಪ ಅಥವಾ ಅಗಬರತ್ತಿ ಸುಡುವ ಮುಂಚೆಯೇ ನಾವು ಸುಗಂಧವನ್ನು ಅನುಭವಿಸಲು ಪ್ರಾರಂಭಿಸಿದಾಗ ದೇವರ ಕೃಪೆ ನಿಮ್ಮ ಮೇಲೆ ಉಳಿದಿದೆ ಎಂದು ಅರ್ಥ ಮಾಡಿಕೊಳ್ಳಿ. ನಿಮ್ಮ ಬಯಕೆಗಳು ಈಡೇರುವ ಸಮಯ ಬಂದಿದೆ ಎಂದರ್ಥ.
ಏಲಕ್ಕಿಯಲ್ಲಿ ಕೀಟನಾಶಕ, ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ತಡೆ
ಪ್ರಸಾದವಾದರೆ
ನೀವು ಪ್ರಾರ್ಥನೆ ಮಾಡುವಾಗ ಹೂವು ಬೀಳುವುದು ಒಳ್ಳೆಯ ಸೂಚನೆ! ಹೂವುಗಳನ್ನು ಯಾವಾಗಲೂ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ದೇವರ ವಿಗ್ರಹದಿಂದ ಹೂವು ಅಥವಾ ಮಾಲೆ ಬಿದ್ದರೆ, ಅದು ತುಂಬಾ ಶುಭ ಸಂಕೇತವಾಗಿದೆ. ಇದು ದೇವರ ಕೃಪೆ ನಿಮ್ಮ ಮೇಲಿದೆ ಮತ್ತು ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ ಎಂದು ತೋರಿಸುತ್ತದೆ. ಕೂಡಲೇ ಆ ಹೂವನ್ನು ಪ್ರಸಾದವಾಗಿ ಕಣ್ಣಿಗೊತ್ತಿಕೊಂಡು ತಲೆಯ ಮೇಲಿರಿಸಿಕೊಳ್ಳಬೇಕು. ಕೆಲವೊಂದು ದೇವಾಲಯಗಳಲ್ಲಿ ಪ್ರಸಾದ ಕೇಳಿಸುವ ಕಾರಣಿಕವಿದೆ. ಅದರಂತೆ ಯಾವುದೋ ಇಚ್ಛೆಯೊಂದನ್ನು ದೇವರ ಮುಂದೆ ಕೇಳಿಕೊಂಡಾಗ ದೇವರ ಬಲದಲ್ಲಿ ಪ್ರಸಾದವಾದರೆ ಆ ಇಚ್ಛೆ ನೆರವೇರುತ್ತದೆ ಎಂದೂ, ಎಡದಲ್ಲಿ ಪ್ರಸಾದವಾದರೆ ಇಚ್ಛೆ ನೆರವೇರುವುದಿಲ್ಲವೆಂದೂ ಅರ್ಥ ಮಾಡಿಕೊಳ್ಳಬೇಕು.
ಮತ್ತೆ ಕೆಲವು ದೇವಾಲಯಗಳಲ್ಲಿ ಪ್ರಸಾದ ನೋಡುವ ರೀತಿಯೇ ಬೇರೆ. ಅಲ್ಲಿ ಬೇಡಿಕೆ ಕೋರಿಕೊಂಡ ಬಳಿಕ ಆದ ಪ್ರಸಾದದಲ್ಲಿನ ಹೂವುಗಳ ಸಂಖ್ಯೆ ಬೆಸವಾಗಿದ್ದರೆ ಬೇಡಿಕೆ ಈಡೇರುತ್ತದೆ ಎಂದೂ, ಸಮ ಸಂಖ್ಯೆಯ ಹೂವು ಬಿದ್ದರೆ ಬೇಡಿಕೆ ಈಡೇರದು ಎಂದೂ ಅರ್ಥ.
ಕನಸಲ್ಲಿ ದೇವರು ಕಂಡರೆ
ಯಾವುದೇ ದೇವರು ಕನಸಿನಲ್ಲಿ ಬಂದು ನಿಮ್ಮೊಂದಿಗೆ ಮಾತಾಡಿದರೆ, ಅಥವಾ ಕಾಣಿಸಿಕೊಂಡರೆ ಅದು ಅತ್ಯಂತ ಶುಭ ಸೂಚನೆಯಾಗಿದ್ದು, ಮುಂದಿನ ದಿನಗಳು ಬಹಳ ಚೆನ್ನಾಗಿರಲಿವೆ ಎಂಬ ಸೂಚನೆಯಾಗಿದೆ.
ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚರವಾದರೆ
ಬೆಳಗ್ಗೆ ಬ್ರಾಹ್ಮೀ ಮುಹೂರ್ತವೆಂದರೆ ದೇವರು ಏಳುವ ಸಮಯ. ಅದೇ ಸಮಯಕ್ಕೆ ಗಂಟೆ ಬಾರಿಸಿದಂತೆ ಎಚ್ಚರವಾದರೆ ನಿಮ್ಮ ಬಯಕೆಗಳು ಈಡೇರಲಿವೆ, ದೇವರ ಕೃಪೆ ನಿಮ್ಮ ಮೇಲಿರಲಿದೆ ಎಂದರ್ಥ.
Naga Sadhu Facts: ನಾಗಾಸಾಧುಗಳು ಬೂದಿ ಬಳಿದುಕೊಂಡು ಬೆತ್ತಲೆ ತಿರುಗಲು ಕಾರಣವೇನು?
ಸಾಧು ಬಂದರೆ
ಮನೆಯಲ್ಲಿ ಪೂಜೆ ನಡೆಯುತ್ತಿರುವಾಗ ಮನೆಯ ಹೊರಗಿನಿಂದ ಸಾಧುವೋ, ಭಿಕ್ಷುಕನೋ ಬಂದು ಕರೆದರೆ ಅದು ದೇವರ ಕೃಪೆ ಎಂದು ಅರ್ಥ ಮಾಡಿಕೊಂಡು ಧಾನ ಧರ್ಮ ಮಾಡಬೇಕು. ಇದರಿಂದ ಇಷ್ಟಾರ್ಥ ನೆರವೇರುತ್ತದೆ. ದೇವರ ಆಶೀರ್ವಾದ ನಿಮ್ಮ ಮೇಲಿದೆ ಎಂದರ್ಥ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.