Udupi: ಈ ಬಾರಿ ಮೊದಲ ಬಾರಿಗೆ ಉಚ್ಚಿಲ ದಸರಾ ವೈಭವ
ಉಡುಪಿಯ ಉಚ್ಚಿಲದಲ್ಲಿ ಮೊದಲ ಬಾರಿಗೆ ದಸರಾ ವೈಭವ
ಕರ್ನಾಟಕ ಕೊಲ್ಲಾಪುರ ಖ್ಯಾತಿಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ
3 ಕೋಟಿ ರೂ. ವೆಚ್ಚದಲ್ಲಿ ಉತ್ಸವ
ಕರ್ನಾಟಕದ ಕೊಲ್ಹಾಪುರ ಎಂದು ಪ್ರಸಿದ್ದಗೊಂಡಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪ್ರಪ್ರಥಮ ಬಾರಿಗೆ ಸೆ. 26 ರಿಂದ ಅ.5ರವರೆಗೆ ಉಚ್ಚಿಲ ದಸರಾ ಉತ್ಸವ 2022 ರನ್ನು ಅತ್ಯಂತ ವೈಭವ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆದಿರುವ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುವ ದಸರಾಗೆ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದೆ.
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಪ್ರತಿ ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, 15ರಿಂದ 20 ಸಾವಿರ ಭಕ್ತರು ಸೇರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಕೊನೆಯ ದಿನ ಅ.6ರ ವಿಜಯದಶಮಿಯಂದು ಅತ್ಯಂತ ವಿಶಿಷ್ಟ ರೀತಿಯಲ್ಲಿ ವಿಸರ್ಜನಾ ಮೆರವಣಿಗೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 100ಕ್ಕೂ ಅಧಿಕ ಟ್ಯಾಬ್ಲೋಗಳು, ಹುಲಿವೇಷ, ಭಜನಾ ತಂಡಗಳು ಸೇರಿ 50,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಈ ಶೋಭಾಯಾತ್ರೆಯೂ ಉಚ್ಚಿಲ ದೇವಸ್ಥಾನದಿಂದ ಸಂಜೆ 3 ಗಂಟೆಗೆ ಹೊರಟು ಎರ್ಮಾಳು, ಪಡುಬಿದ್ರೆ, ಹೆಜಮಾಡಿ ಟೋಲ್ ಗೇಟ್, ಪಡುಬಿದ್ರೆ, ಎರ್ಮಾಳ್, ಉಚ್ಚಿಲ, ಮೂಳೂರು, ಕಾಪು ಬೀಚ್ ಗೆ ತೆರಳಿ ರಾತ್ರಿ 11 ಗಂಟೆಗೆ ಜಲಸ್ಥಂಭನ ನಡೆಸಲಾಗುತ್ತದೆ.
ಮಂಗಳೂರು ದಸರಾ 2022: ಕುದ್ರೋಳಿಯಲ್ಲಿ ಶಾರದೆ, ನವದುರ್ಗೆಯರ ಪ್ರತಿಷ್ಠಾಪನೆ
ನಾಲ್ಕು ಬೋಟ್ ಗಳಲ್ಲಿ ನವದುರ್ಗೆಯರು ಮತ್ತು ಶಾರದ ವಿಗ್ರಹಗಳನ್ನು ಕುಳ್ಳಿರಿಸಿ, ಸಮುದ್ರ ಮಧ್ಯದಲ್ಲಿ ವಿಸರ್ಜನೆ ನಡೆಸಲಾಗುತ್ತದೆ.
ಜಲಸ್ಥಂಭನಕ್ಕೂ ಮುನ್ನ ಶೋಭಾಯಾತ್ರೆ ತೆರಳುವ ಹೆಜಮಾಡಿ, ಪಡುಬಿದ್ರೆ, ಉಚ್ಚಿಲ, ಕೊಪ್ಪಲಂಗಡಿ ಕ್ರಾಸ್, ಕಾಪು ಬೀಚ್ ನಲ್ಲಿ ಸಂಗೀತ ರಸ ಮಂಜರಿ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Navratri: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ
ಮುಖ್ಯಾಂಶಗಳು
- ಸೆ.24 ರಂದು 7 ಗಂಟೆಗೆ ಹೆಜಮಾಡಿಯಿಂದ ಕಾಪು ದೀಪಸ್ತಂಭದವರೆಗೆ ಭವ್ಯವಾದ ವಿದ್ಯುತ್ ದೀಪ ಅಲಂಕಾರ ಉದ್ಘಾಟನೆ
- ಸೆ. 26 ರ ಬೆಳಿಗ್ಗೆ 9 ಗಂಟೆಗೆ ನೂತನವಾಗಿ 1.70 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಲಿನಿ.ಜಿ.ಶಂಕರ್ ತೆರೆದ ಸಭಾಂಗಣವನ್ನು ಲೋಕಾರ್ಪಣೆ ನಡೆಯಲಿದೆ. ನಂತರ ಅದೇ ಸಭಾಂಗಣದಲ್ಲಿ 9.30 ಕ್ಕೆ ನವದುರ್ಗೆ ಮತ್ತು ಶಾರಾದ ದೇವಿಯರ ಪ್ರತಿಷ್ಠಾಪನೆ
- ಪ್ರತಿ ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ರಿಂದ ಆಗಮಿಸುವ ಭಕ್ತಾದಿಗಳಿಗೆ ಇಸ್ಕಾನ್ ನಿಂದ ತಯಾರಿಸಲಾದ ವಿಶೇಷ ಪ್ರಸಾದ ವಿತರಣೆ ನಡೆಯುತ್ತದೆ.
- ಸಂಜೆ 6 ರಿಂದ 8 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.30 ರಂದು ಲಲಿತ ಪಂಚಮಿಯಂದು ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ವಿ| ಪವನ.ಬಿ.ಆಚಾರ್ ಮಣಿಪಾಲ ಬಳಗದವರಿಂದ ಶತವೀಣಾವಲ್ಲರಿ ಏಕ ಕಾಲದಲ್ಲಿ 101 ವೀಣೆಗಳ ವಾದನ ಕಾರ್ಯಕ್ರಮ ನಡೆಯಲಿದೆ.
- ಅ.05 ರಂದು ರಾತ್ರಿ 11 ಗಂಟೆಗೆ ಕಾಪುವಿನ ದೀಪಸ್ತಂಭದ ಬಳಿ ಶಾರಾದೆಗೆ ಬೃಹತ್ ಗಂಗಾರತಿ ಮತ್ತು 10,000 ಕ್ಕೂ ಅಧಿಕ ಮಹಿಳೆಯರಿಂದ ಸಾಮೂಹಿಕ ವಿಸರ್ಜನಾ ಮಂಗಳಾರತಿ ನಡೆಯಲಿದೆ.