ಕೊಡಮಣಿತ್ತಾಯ ಕಂಬಳದಲ್ಲಿ ತುಳುನಾಡ ದೈವಾರಾಧನೆ
ತುಳುನಾಡಿನ ಸಂಸ್ಕೃತಿ ಪರಂಪರೆ ನಂಬಿಕೆಯಲ್ಲಿ ದೈವಗಳಿಗೆ ವಿಶಿಷ್ಠವಾದ ಸ್ಥಾನವಿದೆ. ಈ ದೈವಗಳಿಗೆ ನಂಬಿದವರಿಗೆ ಇಂಬು ನೀಡಿ ಕಾಪಾಡುವ ಕಾರಣಿಕ ಶಕ್ತಿ ಇದೆ. ದೈವಗಳಿಗೆ ಈ ನೆಲದ ಕೃಷಿಗೂ ಅವಿನಾಭಾವ ಸಂಬಂಧವಿದೆ , ಜನಪದ ಕಂಬಳ ಕ್ರೀಡೆಯಲ್ಲೂ ದೈವಿಕ ಶಕ್ತಿಯ ಅನಾವರಣವಾಗುತ್ತಿದೆ.
ಉಡುಪಿ (ನ.22): ತುಳುನಾಡಿನ ಸಂಸ್ಕೃತಿ ಪರಂಪರೆ ನಂಬಿಕೆಯಲ್ಲಿ ದೈವಗಳಿಗೆ ವಿಶಿಷ್ಠವಾದ ಸ್ಥಾನವಿದೆ. ಈ ದೈವಗಳಿಗೆ ನಂಬಿದವರಿಗೆ ಇಂಬು ನೀಡಿ ಕಾಪಾಡುವ ಕಾರಣಿಕ ಶಕ್ತಿ ಇದೆ. ದೈವಗಳಿಗೆ ಈ ನೆಲದ ಕೃಷಿಗೂ ಅವಿನಾಭಾವ ಸಂಬಂಧವಿದೆ , ಜನಪದ ಕಂಬಳ ಕ್ರೀಡೆಯಲ್ಲೂ ದೈವಿಕ ಶಕ್ತಿಯ ಅನಾವರಣವಾಗುತ್ತಿದೆ.
ಇಂತಹ ಅಪೂರ್ವ ದೈವಸಾನಿದ್ಯದ ಕ್ಷೇತ್ರ ಅಂಡಾರಿನ ಕೊಡಮಣಿತ್ತಾಯ (Andaru Kodamanittaya) ಕ್ಷೇತ್ರವು ಒಂದು. ತುಳುವಿನಲ್ಲಿ ಜಾರ್ದೆಕೊಡಿ ತಿಂಗಳ (ನವೆಂಬರ್) ನಲ್ಲಿ ಕಂಬಳ (Kambala) ಕೊಡಮಣಿತ್ತಾಯ ನೇಮೋತ್ಸವ ನಡೆಯುತ್ತದೆ. ಈ ನೇಮೋತ್ಸವ ಸಂದರ್ಭದಲ್ಲಿ ದೈವಗಳಿಗೆ ಬಿಟ್ಟ ಕಂಬಳ ಗದ್ದೆಗಳಿವೆ. ಮೊದಲು ದೈವದ (God) ಹೆಸರಿನಲ್ಲಿ ಕಂಬಳದ ಜಾತ್ರೆ ನಡೆಯುತಿತ್ತು. ಆದರೆ ಈಗ ಕಂಬಳ ಪರಂಪರೆ ಕೇವಲ ಸಾಂಕೇತಿಕವಾಗಿ ನಡೆಯುತ್ತಿದೆ. ದೈವ ಸ್ಥಾನದಿಂದ ಕಂಬಳದ ಗದ್ದೆಯ ಮಂಜೊಟ್ಟಿ (Manjotti)ವರೆಗೆ ಕೊಡಮಣಿತ್ತಾಯ ದೈವ ಹಾಗೂ ಗಣಗಳಾದ ಎರುಬಂಟ, ಜೋಗಿ- ಪುರುಷ ಕಂಬಳ ಗದ್ದೆಯವರೆಗೆ ಕೊಂಬು ಕಹಳೆ (Kombu kahale), ದೋಲು ತಾಸೆ ವಾದ್ಯ ಘೋಷಗಳೊಂದಿಗೆ ಸಾಗಿ ಬರುವಾಗ ಭಕ್ತಾದಿಗಳು ಕಣ್ತುಂಬಿ ಕೊಳ್ಳುತ್ತಾರೆ.
ಕಾಂತಾರದಲ್ಲಿ 'ಕಂಬಳ' ಕೋಣಗಳ ಕ್ರೇಜ್: ರಿಷಬ್ ಓಟ ಕಲಿತದ್ದು ಹೇಗೆ?
ಕಂಬಳ ಗದ್ದೆಯ ಮಂಜೊಟ್ಟಿಯಲ್ಲಿ ದೈವ ಕೊಡಮಣಿತ್ತಾಯ ಅಭಯ ನೀಡುತಿದ್ದರೆ, ಗಣಗಳಾದ ಎರುಬಂಟ, ಜೋಗಿ- ಪುರುಷ ಕೊಡಮಣಿತ್ತಾಯ ದೈವದ ಹಾಗೂ ಬ್ರಹ್ಮಬೈದರ್ಕಳ (Brahma Baidarkala) ಕಂಬಳ ಗದ್ದೆಗೆ ಸುತ್ತು ಹಾಕುತ್ತವೆ. ಇದೆ ಸಂದರ್ಭದಲ್ಲಿ ಕಂಬಳ ಕೋಣವನ್ನು ಗದ್ದೆಗೆ (Field) ಇಳಿಸಿ ಓಡಿಸುತ್ತಾರೆ. ಅದೆ ಹೊತ್ತಿಗೆ ಕೆಸರಿನಲ್ಲೆ ರಥದಲ್ಲಿ ಪೂಕರೆಯನ್ನು ಇಟ್ಟು ಸಾಗುವ ಪರಿ ಅನನ್ಯವಾದುದು. ಎರಡು ಗದ್ದೆಗಳಲ್ಲಿ ಪೂಕರೆಯನ್ನಿಟ್ಟು ಭಕ್ತಿ ಭಾವದಿಂದ ಪರಂಪರೆಯ ವಿಧಿ ವಿಧಾನಗಳ ಮೂಲಕ ನೆಡುತ್ತಾರೆ. ಗೋಧುಳಿ ಸಮಯದಲ್ಲಿ ಈ ಎಲ್ಲಾ ವಿಧಿ ವಿಧಾನಗಳು ನಡೆಯುವುದರಿಂದ ಸಂಜೆಯ ರಂಗಿನೊಂದಿಗೆ ವಿಶಿಷ್ಠವಾದ ವಾತಾವರಣ ಸೃಷ್ಟಿಸುತ್ತದೆ.
ಕಂಬಳ ಗದ್ದೆಯಲ್ಲಿ ನುಡಿಗಟ್ಟು (Phrases)ಗಳು ನಡೆದ ನಂತರ ನಾಲ್ಕು ಗುತ್ತಿನ ಮನೆಯವರು ಹಾಗೂ ಊರ ಪರವೂರ ಭಕ್ತರೊಂದಿಗೆ ಕೊಡಮಣಿತ್ತಾಯ ದೈವವು ದೈವಸ್ತಾನದತ್ತ ಸಾಗಿ ಮತ್ತೆ ನುಡಿಕಟ್ಟುಗಳೊಂದಿಗೆ ನೇಮೋತ್ಸವದ ವಿಧಿವಿಧಾನಗಳು ಕೊನೆಗೊಳ್ಳುತ್ತವೆ.