ಗಂಡ- ಹೆಂಡತಿ ಮಧ್ಯೆ ಜಗಳ ಆಗುತ್ತಿದ್ದರೆ, ತುಳಸಿ ಮದುವೆ ದಿನ ಮಾಡಿ ಈ ಕೆಲಸ
ಹಿಂದುಗಳ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತೆ. ತುಳಸಿಯನ್ನು ಲಕ್ಷ್ಮಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಹಾಗೆಯೇ ತುಳಸಿ ಮದುವೆ ಕೂಡ ಅದ್ಧೂರಿಯಾಗಿ ನಡೆಯುತ್ತದೆ. ಈ ತುಳಸಿ ಮದುವೆ ದಿನ ಕೆಲ ಟಿಪ್ಸ್ ಫಾಲೋ ಮಾಡಿದ್ರೆ ದಾಂಪತ್ಯ ಸುಖಕರವಾಗಿರುತ್ತದೆ.
ಹಿಂದೂ ಧರ್ಮದಲ್ಲಿ ತುಳಸಿ ವಿವಾಹವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ತುಳಸಿ ವಿವಾಹವನ್ನು ನವೆಂಬರ್ 5 ರಂದು ಆಚರಿಸಲಾಗುತ್ತಿದೆ. ತುಳಸಿ ಮದುವೆಯ ದಿನದಿಂದ ಶುಭ ಮುಹೂರ್ತ ಆರಂಭವಾಗುತ್ತದೆ. ತುಳಸಿ ಮದುವೆ ನಂತ್ರ ಮದುವೆ ಸಮಾರಂಭಗಳನ್ನು ಶುರು ಮಾಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನವನ್ನು ಲಕ್ಷ್ಮಿ ಮತ್ತು ವಿಷ್ಣು ಆಶೀರ್ವಾದ ಪಡೆಯಲು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ತುಳಸಿ ಮದುವೆಯಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದ್ರಿಂದ ವೈವಾಹಿಕ ಜೀವನದಲ್ಲಿ ಸದಾ ಸಂತೋಷ ನೆಲೆಸಿರುತ್ತದೆ. ವೈವಾಹಿಕ ಜೀವನದಲ್ಲಿ ಸುಖ ಪ್ರಾಪ್ತಿಯಾಗ್ಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ತುಳಸಿ (Tulsi) ವಿವಾಹ (Marriage) ದ ಮಹತ್ವ : ಹಿಂದೂ ಧರ್ಮ (Hinduism) ದ ಪ್ರಕಾರ, ತುಳಸಿಯನ್ನು ಲಕ್ಷ್ಮಿ (Lakshmi) ಯ ಅವತಾರವೆಂದು ಪರಿಗಣಿಸಲಾಗುತ್ತದೆ. ಸಾಲಿಗ್ರಾಮ (Saligram) ವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ತಾಯಿ ತುಳಸಿ ಮತ್ತು ಸಾಲಿಗ್ರಾಮ ದೇವರಿಗೆ ತುಳಸಿ ವಿವಾಹದಂದು ಮದುವೆಯಾಗುತ್ತಾರೆ. ತುಳಸಿಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದರೆ ದಾಂಪತ್ಯ ಜೀವನದಲ್ಲಿ ಯಾವಾಗಲೂ ಸಂತೋಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಸಂತೋಷದ ದಾಂಪತ್ಯ ಜೀವನಕ್ಕಾಗಿ ಈ ಕೆಲಸ ಮಾಡಿ : ತುಳಸಿ ಮದುವೆಯ ಮೊದಲ ದಿನ ಬೆಳಿಗ್ಗೆ ತುಳಸಿ ಎಲೆಗಳನ್ನು ಕೊಯ್ದು ನೀರಿನಲ್ಲಿ ನೆನೆಸಿಡಿ. ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು ತುಳಸಿ ಮದುವೆ ದಿನ ಕತ್ತರಿಸಬೇಡಿ. ಹಾಗೆಯೇ ತುಳಸಿ ಎಲೆಯನ್ನು ಮಧ್ಯಾಹ್ನದ ನಂತ್ರ ಕೊಯ್ಯಬಾರದು. ಅದಕ್ಕೆ ನೀರು ಕೂಡ ಹಾಕಬಾರದು. ತುಳಸಿ ಮದುವೆ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ತುಳಸಿ ಎಲೆಯ ನೀರನ್ನು ಮನೆಗೆಲ್ಲ ಹಾಕಬೇಕು. ಇದ್ರಿಂದ ಮನೆಯೆಲ್ಲ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ನೀವು ಹೀಗೆ ಮಾಡಿದ್ರೆ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಪತಿ ಮತ್ತು ಪತ್ನಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುವುದಿಲ್ಲ.
Astrology Tips : ಸದ್ಯವೇ ಕೆಡಲಿದೆ ಈ ರಾಶಿಯವರ ಗ್ರಹಚಾರ
ತುಳಸಿ ಮದುವೆ ದಿನ ತಾಯಿ ತುಳಸಿಗೆ ಕೆಂಪು ಚುನ್ರಿಯನ್ನ ಅರ್ಪಿಸಿ : ತುಳಸಿ ಮದುವೆಯನ್ನು ಪ್ರತಿಯೊಬ್ಬರ ಮನೆಯಲ್ಲಿ ಆಚರಣೆ ಮಾಡಲಾಗುತ್ತದೆ. ಅನೇಕರು ತುಳಸಿ ಗಿಡದ ಜೊತೆ ನೆಲ್ಲಿಕಾಯಿ ಇಟ್ಟು ಪೂಜೆ ಮಾಡ್ತಾರೆ. ಈ ಮದುವೆ ಸಂದರ್ಭದಲ್ಲಿ ನೀವು ತುಳಸಿ ಗಿಡಕ್ಕೆ ಕೆಂಪು ಚುನ್ರಿಯನ್ನು ಹಾಕಬೇಕು. ಕೆಂಪು ಚುನ್ರಿ ಹಾಕುವುದ್ರಿಂದ ಸಂಬಂಧದಲ್ಲಿ ಕಾಣಿಸಿಕೊಳ್ಳುವ ವೈಮನಸ್ಯ ಕಡಿಮೆಯಾಗುತ್ತದೆ. ತುಳಸಿ ವಿವಾಹದ ನಂತರ ನೀವು ವಿವಾಹಿತ ಮಹಿಳೆಗೆ ಈ ಚುನ್ರಿಯನ್ನು ನೀಡಬೇಕು. ನೀವು ವಿವಾಹಿತ ಮಹಿಳೆಗೆ ಚುನ್ರಿ ನೀಡಲು ಸಾಧ್ಯವಾಗದಿದ್ದರೆ ನೀವು ದೇವಿ ದೇವಸ್ಥಾನಕ್ಕೆ ಹೋಗಿ ಇದನ್ನು ನೀಡಬಹುದ. ದೇವಿಯ ಪಾದಕ್ಕೆ ಚುನ್ರಿ ಅರ್ಪಿಸಬೇಕು. ನಂಬಿಕೆಗಳ ಪ್ರಕಾರ, ತುಳಸಿ ವಿವಾಹದ ದಿನದಂದು ಇದನ್ನು ಮಾಡುವುದರಿಂದ ಪತಿ ಮತ್ತು ಪತ್ನಿ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಮತ್ತು ಉತ್ತಮ ದಾಂಪತ್ಯ ಜೀವನಕ್ಕೆ ಒಳ್ಳೆಯದು.
Hindu Religion : ಶವ ಯಾತ್ರೆ ವೇಳೆ ರಾಮ್ ನಾಮ್ ಸತ್ಯಹೇ ಹೇಳೋದು ಏಕೆ?
ಶೀಘ್ರ ಮದುವೆಯಾಗಬೇಕೆಂದ್ರೆ ಮಾಡಿ ಈ ಕೆಲಸ : ಒಂದಲ್ಲ ಒಂದು ಕಾರಣಕ್ಕೆ ಮದುವೆ ವಿಳಂಬವಾಗ್ತಿದ್ದರೆ ಅಥವಾ ನೆಚ್ಚಿನ ವರ ಸಿಕ್ಕಿಲ್ಲವೆಂದಾದ್ರೆ ತುಳಸಿ ವಿವಾಹದ ದಿನ ತಾಯಿ ತುಳಸಿಗೆ ಅರಿಶಿನದ ಕೊಂಬನ್ನು ಅರ್ಪಿಸಿ. ಸ್ವಲ್ಪ ಕುಂಕುಮ, ಸ್ವಲ್ಪ ಬೆಲ್ಲ ಮತ್ತು ಉದ್ದಿನಬೇಳೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ವಿಷ್ಣುವಿನ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ವಿಷ್ಣುವಿಗೆ ಅರ್ಪಿಸಿ. ವಿಷ್ಣುವಿನ ಪ್ರಾರ್ಥನೆ ಮಾಡಿ. ಇದ್ರಿಂದ ಬೇಗ ಕಂಕಣ ಭಾಗ್ಯ ಕೂಡಿಬರುತ್ತದೆ.