Maha Shivratri Recipes : ಉಪವಾಸ ವ್ರತ ರೆಸಿಪಿಗಳನ್ನು ಟ್ರೈ ಮಾಡಿ

ಹಬ್ಬಗಳ ಸಂದರ್ಭದಲ್ಲಿ ಭಕ್ತರು ಉಪವಾಸ ಮಾಡ್ತಾರೆ. ಉಪವಾಸದ ಹೆಸರಿನಲ್ಲಿ ಅನೇಕರು ಆಹಾರ ಸೇವನೆ ಮಾಡುವುದಿಲ್ಲ. ಮತ್ತೆ ಕೆಲವರು ಲಘು ಆಹಾರ ಮಾತ್ರ ಸೇವನೆ ಮಾಡ್ತಾರೆ. ಫಲಾಹಾರ ಸೇವನೆಗೆ ತೊಂದರೆಯಿಲ್ಲ. ಪ್ರಸಾದವನ್ನು ಮಾತ್ರ ಸೇವಿಸುವ ಭಕ್ತರೂ ಇದ್ದಾರೆ. ಇಂದು ಶಿವರಾತ್ರಿ ಸಂದರ್ಭದಲ್ಲಿ ನೀವೂ ಕೆಲ ಆಹಾರ ತಯಾರಿಸಿ ಪ್ರಸಾದದ ರೂಪದಲ್ಲಿ ಸೇವಿಸಿ. 
 

Try These Fasting Recipes For Mahashivratri

ಅತ್ಯಂತ ಮಂಗಳಕರವಾದ ಹಿಂದೂ ಹಬ್ಬ (Festival)ಗಳಲ್ಲಿ ಮಹಾ ಶಿವರಾತ್ರಿ (Shivaratri)ಯೂ ಒಂದು. ಇಂದು ದೇಶ (Country)ದೆಲ್ಲೆಡೆ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಶಿವ ಪೂಜೆ, ಆರಾಧನೆ, ಅಭಿಷೇಕಗಳು ನಡೆಯುತ್ತಿವೆ. ಶಿವನ ಭಕ್ತರ ಬಾಯಲ್ಲಿ ಓಂ ನಮಃ ಶಿವಾಯ ಮಂತ್ರ ಕೇಳಿ ಬರ್ತಿದೆ. ಪ್ರತಿ ವರ್ಷ ಆಚರಿಸಲಾಗುವ ಶಿವರಾತ್ರಿ ಹಬ್ಬದಂದು ಉಪವಾಸ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಡೀ ದಿನ ಉಪವಾಸವಿದ್ದು,ರಾತ್ರಿ ಜಾಗರಣೆ ಮಾಡಿ, ಶಿವ ಭಕ್ತರು ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಪಂಚಾಂಗದ ಪ್ರಕಾರ ಕೃಷ್ಣ ಪಕ್ಷದ ಮಾಘ ಮಾಸದ ಚತುರ್ದಶಿ ತಿಥಿಯಂದು ಶಿವರಾತ್ರಿ ಆಚರಿಸಲಾಗುತ್ತದೆ. ಇಂದು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವ ಜನರು, ಶಿವನಿಗೆ ಹಾಲು ಮತ್ತು ಜಲದ ಅಭಿಷೇಕ ಮಾಡ್ತಾರೆ. ದೇವಸ್ಥಾನಗಳಲ್ಲಿ ಭಕ್ತರ ದಂಡೇ ನೆರೆಯುತ್ತಿದೆ. ರಾತ್ರಿಪೂರ್ತಿ ದೇವಸ್ಥಾನದಲ್ಲಿ ಶಿವನ ನಾಮಸ್ಮರಣೆ ಮಾಡುವ ಭಕ್ತರು ಇಂದು ರಾತ್ರಿ ನಿದ್ರಿಸುವುದಿಲ್ಲ. 

ಮಹಾ ಶಿವರಾತ್ರಿ ಹಬ್ಬದಲ್ಲಿ ಹಾಲಿಗೆ ವಿಶೇಷ ಮಹತ್ವವಿದೆ. ಶಿವರಾತ್ರಿಯಂದು ಹೆಚ್ಚಾಗಿ ಪ್ರಸಾದ ರೂಪದಲ್ಲಿ ಹಾಲಿನ ಖೀರ್ ಸೇರಿದಂತೆ ಹಾಲಿನಿಂದ ಮಾಡಿದ ಭಕ್ಷ್ಯವನ್ನು ಅರ್ಪಿಸಲಾಗುತ್ತದೆ. ಮೊದಲೇ ಹೇಳಿದಂತೆ ಶಿವರಾತ್ರಿಯಂದು ಸಾವಿರಾರು ಭಕ್ತರು ಉಪವಾಸವನ್ನು ಆಚರಿಸುತ್ತಾರೆ. ನೀವೂ ಉಪವಾಸದಲ್ಲಿದ್ದರೆ ಕೆಲವೊಂದು ಆಹಾರವನ್ನು ಸುಲಭವಾಗಿ ತಯಾರಿಸಿ ಸೇವನೆ ಮಾಡಬಹುದು. ಇವು ದಿನವಿಡೀ ಶಕ್ತಿ ನೀಡುತ್ತವೆ. 
ಶಿವರಾತ್ರಿ ಉಪವಾಸಕ್ಕೆ ಮಾಡಿ ಈ ಭಕ್ಷ್ಯ 

ಸಾಬುದಾನ ಖಿಚಡಿ : ಸಾಮಾನ್ಯವಾಗಿ ಸಾಬುದಾನವನ್ನು ಉಪವಾಸ ಸಂದರ್ಭದಲ್ಲಿ ಹೆಚ್ಚಾಗಿ ಸೇವನೆ ಮಾಡ್ತಾರೆ. ಇದು ವ್ರತಕ್ಕೆ ಹೇಳಿ ಮಾಡಿಸಿದ ಆಹಾರ. ಇದನ್ನು ಮಾಡುವುದು ಕೂಡ ಸುಲಭ. ಇದನ್ನು ರಾತ್ರಿಪೂರ್ತಿ ನೆನೆಹಾಕಿ ತಯಾರಿಸಿದ್ರೆ ರುಚಿ ಹೆಚ್ಚು. ಇದಕ್ಕೆ ಸಬ್ಬಕ್ಕಿ ಜೊತೆ ತರಕಾರಿಗಳನ್ನು ಹಾಕುವುದ್ರಿಂದ ಅದು ಕೇವಲ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ ರುಚಿಕರವೂ ಆಗಿರುತ್ತದೆ.

ಸಾಬುದಾನ ವಡಾ: ಉಪವಾಸದ ಸಂದರ್ಭದಲ್ಲಿ ಬಾಯಿ ರುಚಿಯಾದ ಆಹಾರವನ್ನು ಕೇಳುತ್ತದೆ. ನೀರು,ಜ್ಯೂಸ್ ನಮ್ಮ ಹೊಟ್ಟೆ ತುಂಬಿಸುವುದಿಲ್ಲ. ಹಾಗೆಯೇ ಉಪವಾಸ ಸಂದರ್ಭದಲ್ಲಿ ಈರುಳ್ಳಿ,ಬೆಳ್ಳುಳ್ಳಿ ಸೇವನೆ ಮಾಡದ ಕಾರಣ ಹಾಗೂ ಅತಿಯಾದ ಮಸಾಲೆ ಬಳಸದ ಕಾರಣ ಬಾಯಿ ಚಪಲ ಹೆಚ್ಚಾಗುವುದು ಸಾಮಾನ್ಯ. ನೀವು ಸಾಬುದಾನ ಖಿಚಡಿಯೊಂದಿಗೆ, ಗರಿಗರಿಯಾದ ಮತ್ತು ಕುರುಕುಲಾದ ವಡಾವನ್ನು ಸೇವನೆ ಮಾಡ್ಬಹುದು. ಭಾರತೀಯರಿಗೆ ಸಾಬುದಾನ ವಡಾ ಅಚ್ಚುಮೆಚ್ಚು ಎಂದ್ರೆ ತಪ್ಪಾಗಲಾರದು. ವಡಾ ಮಾಡುವಾಗ ಕಡಲೆಕಾಯಿಗಳು, ಆಲೂಗಡ್ಡೆ ಹಾಕುವುದ್ರಿಂದ ಅದ್ರ ರುಚಿ ದುಪ್ಪಟ್ಟಾಗುತ್ತದೆ. 

Mahashivratri 2022 : ಪೂಜೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಶಿವನಿಗೆ ಅರ್ಪಿಸ್ಬೇಡಿ..

ತಾವರೆ ಬೀಜದ ಖೀರ್ ( ಮಖಾನ ಪಾಯಸ) : ಶಿವರಾತ್ರಿಯ ಸಂದರ್ಭದಲ್ಲಿ ಹಾಲು ಪ್ರಮುಖ ಪದಾರ್ಥವಾಗುವುದರಿಂದ, ಖೀರ್ ಅತ್ಯಂತ ಜನಪ್ರಿಯ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಭಕ್ತರು ಅನೇಕ ರೀತಿಯ ಖೀರ್ ಮಾಡಿ, ದೇವರಿಗೆ ಅರ್ಪಿಸುತ್ತಾರೆ. ಸಾಬುದಾನ ಖೀರ್, ರವಾ ಖೀರ್ ಹೀಗೆ ಬೇರೆ ಬೇರೆ ಖೀರ್ ಪ್ರಯತ್ನಿಸಿರುತ್ತಾರೆ. ಇಂದು ಮಖಾನ ಖೀರ್ ಅಂದ್ರೆ ತಾವರೆ ಬೀಜದ ಖೀರ್ ತಯಾರಿಸಲು ಪ್ರಯತ್ನಿಸಬಹುದು. ಇದನ್ನು ಪ್ರಸಾದವಾಗಿ ಶಿವನಿಗೆ ಅರ್ಪಿಸಿ ನಂತ್ರ ಸೇವನೆ ಮಾಡಿ. ತಾವರೆ ಬೀಜ ಆರೋಗ್ಯಕ್ಕೆ ಒಳ್ಳೆಯದು. ಇದಕ್ಕೂ ಹಾಲು ಬೇಕಾಗುತ್ತದೆ.

ದಹಿ ಆಲೂ: ಈ ಖಾದ್ಯವು ಮೊಸರು ಮತ್ತು ಆಲೂಗಡ್ಡೆಗಳ ಸಂಯೋಜನೆಯಾಗಿದೆ. ದಹಿ ಆಲೂ ಅತ್ಯುತ್ತಮ ಊಟದ ರೆಸಪಿಯಾಗಿದೆ. ಭಕ್ತರು ಒಂದು ಗಂಟೆಯೊಳಗೆ ಇದನ್ನು ತಯಾರಿಸಬಹುದು. ಹೊಟ್ಟೆಗೆ ತಂಪು ನೀಡುವ ಜೊತೆಗೆ ಹೊಟ್ಟೆ ತುಂಬಿದ ಅನುಭವ ಇದ್ರಿಂದಾಗುತ್ತದೆ. 

Maha Shivarathri: ಬೆಂಗಳೂರಿನಲ್ಲಿ ಶಿವರಾತ್ರಿ ಸಂಭ್ರಮ, ಹೂವು ಹಣ್ಣು ‌ಖರೀದಿಗೆ ಮುಗಿಬಿದ್ದ ಜನ

ಸಿಹಿ ಗೆಣಸಿನ ಪಾಯಸ : ಬೇಯಿಸಿದ ಸಿಹಿ ಗೆಣಸು ಉಪವಾಸಕ್ಕೆ ಸೂಕ್ತವಾದ ಆಹಾರವಾಗಿದೆ. ಉಪವಾಸದ ದಿನಗಳಲ್ಲಿ  ಈ ಸಿಹಿ ಗೆಣಸಿನ ಖೀರ್‌ ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇದನ್ನು ಉತ್ತಮ ಪ್ರಸಾದ ಆಯ್ಕೆಯಾಗಿ ಕೂಡ ಸೇರಿಸಬಹುದು.

Latest Videos
Follow Us:
Download App:
  • android
  • ios