Asianet Suvarna News Asianet Suvarna News

ಫೆಬ್ರವರಿಯಲ್ಲಿ ಏರ್ಪಡಲಿದೆ 'ತ್ರಿಗ್ರಾಹಿ ಯೋಗ'; ನಿಮ್ಮ ರಾಶಿಯನ್ನಿದು ಶ್ರೀಮಂತವಾಗಿಸುತ್ತದೆಯೇ?

ಜ್ಯೋತಿಷ್ಯದ ಪ್ರಕಾರ ಫೆಬ್ರವರಿಯಲ್ಲಿ ತ್ರಿಗ್ರಾಹಿ ಯೋಗವು ಕುಂಭ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಈ ಯೋಗವು 3 ರಾಶಿಯವರಿಗೆ ಲಾಭದಾಯಕವಾಗಿರುತ್ತದೆ.

Trigrahi Yoga will be formed in aquarius these zodiac signs get the benefit skr
Author
First Published Jan 31, 2023, 2:35 PM IST

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಮಂಗಳಕರ ಯೋಗಗಳನ್ನು ರೂಪಿಸುತ್ತವೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಫೆಬ್ರವರಿಯಲ್ಲಿ ಸೂರ್ಯ ಮತ್ತು ಬುಧ ಕೂಡಾ ಕುಂಭ ಸಂಕ್ರಮಣ ಮಾಡಲಿದ್ದಾರೆ. ಇದು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತದೆ. ಇದರ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಕಂಡುಬರುತ್ತದೆ. ಆದರೆ ತ್ರಿಗ್ರಾಹಿ ಯೋಗಗಳ ರಚನೆಯಿಂದ ಸಂಪತ್ತು ಮತ್ತು ಪ್ರಗತಿಯ ಯೋಗಗಳು ಮೂರು ರಾಶಿಗಳಿಗೆ ಅಪಾರವಾಗಿ ಲಭ್ಯವಾಗಲಿದೆ. ಈ ರಾಶಿಚಕ್ರದ ಚಿಹ್ನೆಗಳು(Zodiac signs) ಯಾವುವು ಎಂದು ತಿಳಿಯೋಣ.

ಶನಿಯು ಜನವರಿ 17ಕ್ಕೆ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಆತ ಈ ವರ್ಷ ಪೂರ್ತಿ ಅಲ್ಲಿಯೇ ಇರಲಿದ್ದಾನೆ. ಫೆಬ್ರವರಿ 14ರಂದು, ಸೂರ್ಯನು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯಲ್ಲಿ ಸಾಗುತ್ತಾನೆ. ಫೆಬ್ರವರಿ 27ರಂದು ಬುಧ ಗ್ರಹ ಕೂಡಾ ಕುಂಭ ಗೋಚಾರ(Budh Gochar) ಮಾಡಲಿದೆ. ಈ ಕಾರಣದಿಂದ ಫೆಬ್ರವರಿ ಕೊನೆಯಲ್ಲಿ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ(Trigrahi Yog)ದ ರಚನೆಯಾಗುತ್ತಿದೆ. ಈ ಯೋಗವು ಮೂರು ರಾಶಿಗಳಿಗೆ ನಿರ್ದಿಷ್ಟವಾಗಿ ಬಹಳಷ್ಟು ಪ್ರಯೋಜನಗಳನ್ನು ತರಲಿದೆ. ಅವರನ್ನು ಏಕಾಏಕಿ ಶ್ರೀಮಂತರಾಗಿಸುವ ಶಕ್ತಿ ಈ ಯೋಗಕ್ಕಿದೆ. 

ಗೆರೆ ಎಳೆದು ನಿರ್ಮಿಸಿದರೇ ಈ ಶಿವ ದೇವಾಲಯಗಳ? ಒಂದೇ ರೇಖಾಂಶದಲ್ಲಿ ನಿರ್ಮಿಸಿದ್ದಾದರೂ ಹೇಗೆ?

ಮಕರ ರಾಶಿ(Capricorn)
ತ್ರಿಗ್ರಾಹಿ ಯೋಗವು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಅವಧಿಯಲ್ಲಿ ನೀವು ಹಠಾತ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಇದರೊಂದಿಗೆ ನೀವು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಅವಧಿಯಲ್ಲಿ ನೀವು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಅಲ್ಲದೆ, ಕೆಲಸ ಮತ್ತು ವ್ಯಾಪಾರಕ್ಕಾಗಿ ಎಲ್ಲಿಯಾದರೂ ಹೋಗಬಹುದು.

ಸಿಂಹ ರಾಶಿ(Leo)
ತ್ರಿಗ್ರಾಹಿ ಯೋಗದ ರಚನೆಯು ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳಿಗೆ ಕಾರಣವಾಗಬಹುದು. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದನ್ನು ಪಾಲುದಾರಿಕೆ ಮತ್ತು ವೈವಾಹಿಕ ಜೀವನದ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಬಾರಿ ನೀವು ಪಾಲುದಾರಿಕೆ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ, ಈ ಅವಧಿಯು ದುಡಿಯುವ ಜನರಿಗೆ ಉತ್ತಮವಾಗಿರುತ್ತದೆ. ನೀವು ಎಲ್ಲಿಂದಲಾದರೂ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಮತ್ತೊಂದೆಡೆ, ಒಂಟಿಯಾಗಿರುವವರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು.

Bhishma Ekadashi 2023: ವಿಷ್ಣು ಸಹಸ್ರನಾಮಕ್ಕೆ ಓನಾಮ ಬರೆದ ಭೀಷ್ಮಾಚಾರ್ಯರು!

ವೃಷಭ ರಾಶಿ(Taurus)
ತ್ರಿಗ್ರಾಹಿ ಯೋಗವು ವೃಷಭ ರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ನೀವು ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ, ನೀವು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು (New oppurtunities) ಪಡೆಯುತ್ತೀರಿ ಮತ್ತು ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಮತ್ತೊಂದೆಡೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಇದರೊಂದಿಗೆ ನೌಕರರು ವೇತನ ಹೆಚ್ಚಳ ಮತ್ತು ಬಡ್ತಿ ಪಡೆಯಬಹುದು. ಕೆಲಸದ ಸ್ಥಳದಲ್ಲಿ ಕಿರಿಯರು ಮತ್ತು ಹಿರಿಯರಿಂದ ಬೆಂಬಲವನ್ನು ಪಡೆಯಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios