ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಕನ್ಯಾ, ಧನು ಸೇರಿ ಈ ರಾಶಿಗಳಿಗೆ ಭಾಗ್ಯೋದಯದ ಕಾಲ

2023ರಲ್ಲಿ ಮೊದಲ ಬಾರಿಗೆ ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಂಡಿದೆ. ಗ್ರಹಗಳ ರಾಶಿ ಬದಲಾವಣೆಯಿಂದ, ಮಕರ ರಾಶಿಯಲ್ಲಿ 3 ಪ್ರಮುಖ ಗ್ರಹಗಳ ಉಪಸ್ಥಿತಿಯಿಂದ, ಈ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಕೆಲ ರಾಶಿಗಳ ಬಾಳಿನಲ್ಲಿ ನಡೆಯುತ್ತಿದೆ ಭಾಗ್ಯೋದಯದ ಕಾಲ..

Trigrahi yoga in Capricorn 3 zodiac signs are the luckiest skr

ಯಾವುದೇ ಒಂದು ರಾಶಿಚಕ್ರದಲ್ಲಿ ಎರಡು ಅಥವಾ ಹೆಚ್ಚಿನ ಗ್ರಹಗಳು ಇದ್ದಾಗ, ಅದನ್ನು ಸಂಯೋಗ ಎಂದು ಕರೆಯಲಾಗುತ್ತದೆ. 2023ರ ಮೊದಲ ತಿಂಗಳಲ್ಲಿ ಮಕರ ರಾಶಿಯಲ್ಲಿ ಶನಿ, ಶುಕ್ರ ಮತ್ತು ಸೂರ್ಯನ ಸಂಯೋಗ ಆಗಲಿದ್ದು, ಇದರಿಂದ ತ್ರಿಗ್ರಾಹಿ ಯೋಗ ಉಂಟಾಗಲಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಗವು ಇದ್ದಾಗ, ಈ ವಿಶೇಷ ಪರಿಣಾಮವು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಮೇಲೆ ಖಂಡಿತವಾಗಿ ಬೀಳುತ್ತದೆ. ಸೂರ್ಯ-ಶನಿ-ಶುಕ್ರ ಗ್ರಹಗಳ ಸಂಯೋಜನೆಯಿಂದಾಗಿ, 3 ರಾಶಿಚಕ್ರಗಳ ಸ್ಥಳೀಯರು ತಮ್ಮ ಕೆಲಸಗಳಲ್ಲಿ ಸಂಪತ್ತು, ಅದೃಷ್ಟ ಮತ್ತು ಉತ್ತಮ ಯಶಸ್ಸನ್ನು ಪಡೆಯುವ ಬಲವಾದ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 29ರಂದು ಸಂಜೆ 04.13ಕ್ಕೆ ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಾಯಿಸುವಾಗ ಶನಿಯ ರಾಶಿಯಾದ ಮಕರ ರಾಶಿಯನ್ನು ಪ್ರವೇಶಿಸಿದೆ. ಶುಕ್ರನು 22 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಇದರ ನಂತರ, ಡಿಸೆಂಬರ್ 31, 2022ರಂದು, ಬುಧ ಕೂಡ ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಮತ್ತು ಶುಕ್ರರ ಪ್ರವೇಶಕ್ಕೂ ಮುಂಚೆಯೇ ಶನಿಯು ಇಲ್ಲಿ ಕುಳಿತಿದ್ದಾನೆ. ಈ ರೀತಿಯಾಗಿ, ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿ ಸಂಯೋಜನೆಯಿಂದ ಕೆಲ ರಾಶಿಗಳು ಬಂಪರ್ ಪ್ರಯೋಜನಗಳನ್ನು ಪಡೆಯುತ್ತವೆ. ಆದರೆ, ಜ.17ರಂದು ಶನಿ ಕುಂಭಕ್ಕೆ ಪ್ರವೇಶಿಸುತ್ತಿದ್ದಂತೆಯೇ ತ್ರಿಗ್ರಾಹಿ ಯೋಗ ಮುಗಿಯಲಿದೆ. ಅಂದರೆ ಜ.17ರವರೆಗೆ ಈ ರಾಶಿಚಕ್ರಗಳಿಗೆ ತ್ರಿಗ್ರಾಹಿ ಯೋಗದ ಫಲವಿರಲಿದೆ. ಆ ಅದೃಷ್ಟಶಾಲಿ ರಾಶಿಗಳು ಯಾವೆಲ್ಲ ನೋಡೋಣ.

30 ವರ್ಷಗಳ ಬಳಿಕ ಶತಭಿಷಾ ನಕ್ಷತ್ರ ಪ್ರವೇಶಿಸುವ ಶನಿ, 3 ರಾಶಿಯತ್ತ ಹರಿದು ಬರುವ Money!

ಕನ್ಯಾ ರಾಶಿ(Virgo)
ಜನವರಿ ತಿಂಗಳಲ್ಲಿ ಮಕರ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳು ಬರುವುದರಿಂದ ಕನ್ಯಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಕನ್ಯಾರಾಶಿಯಲ್ಲಿ ತ್ರಿಗ್ರಾಹಿ ಯೋಗವು ಜಾತಕದ ಐದನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಐದನೇ ಮನೆಯು ಉನ್ನತ ಶಿಕ್ಷಣ, ಪ್ರೇಮ ವಿವಾಹ ಮತ್ತು ಮಕ್ಕಳ ಸ್ಥಳವಾಗಿದೆ. ಈ ಸಮಯದಲ್ಲಿ ಪ್ರೀತಿಸುವ ವ್ಯಕ್ತಿಯನ್ನೇ ಮದುವೆಯಾಗಬಹುದು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಮತ್ತು ನೀವು ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

ತುಲಾ ರಾಶಿ(Libra)
ತುಲಾ ರಾಶಿಯ ಜನರು ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗದ ರಚನೆಯಿಂದಾಗಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಮನೆ ಮತ್ತು ಜಮೀನಿನ ವಿಷಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಹೊಸ ಆಸ್ತಿ ಖರೀದಿ ಸಾಧ್ಯತೆ ಇದೆ. ವಾಹನದ ಆನಂದವನ್ನೂ ಪಡೆಯಬಹುದು. ನಿಮ್ಮ ಜಾತಕದ ನಾಲ್ಕನೇ ಮನೆಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಸ್ಥಳೀಯರ ದೈಹಿಕ ಸಂತೋಷವನ್ನು ನಾಲ್ಕನೇ ಮನೆಯಿಂದ ಲೆಕ್ಕ ಹಾಕಲಾಗುತ್ತದೆ. ಈ ಸಮಯದಲ್ಲಿ, ಉದ್ಯೋಗದಲ್ಲಿರುವವರು ಏಕಕಾಲದಲ್ಲಿ ಹೊಸ ಉದ್ಯೋಗಕ್ಕಾಗಿ ಅನೇಕ ಅವಕಾಶಗಳನ್ನು ಪಡೆಯಬಹುದು. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಕಾಣಬಹುದು.

ವಿರುಷ್ಕಾ, ಝುಕರ್‌ಬರ್ಗ್, ಸ್ಟೀವ್ ಜಾಬ್ಸ್.. ವಿಶ್ವದ ದಿಗ್ಗಜರೆಲ್ಲ ಗುರು ಎನ್ನುವ ಬಾಬಾ ನೀಮ್ ಕರೋಲಿ ಯಾರು?

ಧನು ರಾಶಿ(Sagittarius)
ಧನು ರಾಶಿಯವರಿಗೆ ಮಕರ ರಾಶಿಯಲ್ಲಿ ಸೂರ್ಯ-ಶನಿ ಮತ್ತು ಶುಕ್ರರ ಸಂಯೋಜನೆಯು ವರದಾನಕ್ಕಿಂತ ಕಡಿಮೆಯಿಲ್ಲ. ಈ ತ್ರಿಗ್ರಾಹಿ ಯೋಗದಿಂದ ಅದೃಷ್ಟದಲ್ಲಿ ಉತ್ತಮ ಉತ್ಕರ್ಷ ಉಂಟಾಗುತ್ತದೆ. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ಹಣವು ಇದ್ದಕ್ಕಿದ್ದಂತೆ ಬರುತ್ತದೆ ಮತ್ತು ಹಣಕಾಸಿನ ವಿಷಯಗಳಲ್ಲಿ ನಿಮ್ಮ ಸ್ಥಾನವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಪಡೆಯಬಹುದು. ಕಾನೂನು ಚರ್ಚೆಯ ವಿಷಯಗಳಲ್ಲಿ ನೀವು ಗೆಲ್ಲುತ್ತೀರಿ. ವಿದೇಶ ಪ್ರವಾಸಕ್ಕೂ ಉತ್ತಮ ಅವಕಾಶಗಳಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios