Asianet Suvarna News Asianet Suvarna News

30 ವರ್ಷಗಳ ಬಳಿಕ ಶತಭಿಷಾ ನಕ್ಷತ್ರ ಪ್ರವೇಶಿಸುವ ಶನಿ, 3 ರಾಶಿಯತ್ತ ಹರಿದು ಬರುವ Money!

ಶನಿ ದೇವನು ಬರೋಬ್ಬರಿ 30 ವರ್ಷಗಳ ಬಳಿಕ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ 3 ರಾಶಿಯ ಜನರು ಲಾಭ ಪಡೆಯಬಹುದು. ಅದೃಷ್ಟದ ಬಲವಾದ ಅವಕಾಶಗಳು ಇವರಿಗೆ ಒದಗಲಿದೆ.

Shani Dev will enter Shatabhisha Nakshatra after 30 years these 3 zodiac signs have good fortune skr
Author
First Published Jan 10, 2023, 2:15 PM IST

ಗ್ರಹಗಳು ಕಾಲಕಾಲಕ್ಕೆ ರಾಶಿಚಕ್ರಗಳು ಮತ್ತು ನಕ್ಷತ್ರಪುಂಜಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಮಾನವ ಜೀವನ ಮತ್ತು ಭೂಮಿಯ ಮೇಲೆ, ಎಲ್ಲ ಚರಾಚರಗಳ ಮೇಲೆ ಗ್ರಹಚಾರದ ಪರಿಣಾಮ ಇದ್ದೇ ಇರುತ್ತದೆ.  ಕರ್ಮ ಮತ್ತು ನ್ಯಾಯವನ್ನು ಒದಗಿಸುವ ಶನಿ ಎಂದರೆ ಹಲವರಲ್ಲಿ ನಡುಕ ಹುಟ್ಟುತ್ತದೆ. ಇಂಥ ಶನಿಯು ಜನವರಿ 17ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ ಎನ್ನುವುದೇ ಒಂದು ದೊಡ್ಡ ಬದಲಾವಣೆ. ಅಷ್ಟೇ ಸಾಲದೆಂಬಂತೆ ಬರೋಬ್ಬರಿ 30 ವರ್ಷಗಳ ಬಳಿಕ ಆತ ಶತಭಿಷಾ ನಕ್ಷತ್ರಕ್ಕೆ ಕೂಡಾ ಪ್ರವೇಶಿಸುತ್ತಿದ್ದಾನೆ.

ಹೌದು, ಮಾರ್ಚ್ 15ರಂದು ಶನಿಯು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದು ಕುಂಭ ರಾಶಿಗೆ ಸಂಬಂಧಿಸಿದ ಹಾಗೂ ರಾಹು ದೇವನಿಂದ ಪ್ರಾಬಲ್ಯ ಹೊಂದಿದ ನಕ್ಷತ್ರವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ, ಶನಿ ದೇವ ಮತ್ತು ರಾಹು ನಡುವೆ ಸ್ನೇಹದ ಭಾವನೆ ಇದೆ ಎಂಬ ಕಾರಣಕ್ಕೆ ನಾವು ನೀವು ನಿಟ್ಟುಸಿರು ಬಿಡಬಹುದು. ಶನಿದೇವನ ನಕ್ಷತ್ರಪುಂಜದ ಬದಲಾವಣೆಯ ಪರಿಣಾಮಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತವೆ. ಆದರೆ 3 ರಾಶಿಚಕ್ರಗಳು 
ಈ ಅವಧಿಯಲ್ಲಿ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳನ್ನು ನೋಡುತ್ತವೆ. ಈ ರಾಶಿಚಕ್ರ ಚಿಹ್ನೆಗಳು(zodiac signs) ಯಾವುವು ಎಂದು ತಿಳಿಯೋಣ.

ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!

ಮಿಥುನ ರಾಶಿ(Gemini)
ಶನಿ ದೇವನ ನಕ್ಷತ್ರ ಬದಲಾವಣೆಯು ನಿಮಗೆ ಶುಭ ಮತ್ತು ಫಲಪ್ರದವಾಗಿರಲಿದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ಅಲ್ಲದೆ ವಿದೇಶದಲ್ಲಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳ ಆಸೆ ಈಡೇರುತ್ತದೆ. ಅದೇ ಸಮಯದಲ್ಲಿ, ನೀವು ಅದೃಷ್ಟವನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ನಂಬಿಕೆ ಹೆಚ್ಚಾಗುತ್ತದೆ. ನೀವು ವಿದೇಶಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಅದನ್ನು ಪೂರ್ಣಗೊಳಿಸಬಹುದು. ಅದೇ ಸಮಯದಲ್ಲಿ, ತಂದೆಯೊಂದಿಗಿನ ಸಂಬಂಧದಲ್ಲಿ ಬಲವನ್ನು ಕಾಣಬಹುದು.

ಸಿಂಹ ರಾಶಿ(Leo)
ಶನಿದೇವನ ನಕ್ಷತ್ರ ಬದಲಾವಣೆಯು ನಿಮಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನೀವು ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ವೈವಾಹಿಕ ಸಂಬಂಧಗಳು ಸುಧಾರಿಸುತ್ತವೆ ಮತ್ತು ನಿಮ್ಮ ಪ್ರೀತಿಯ ಜೀವನವೂ ಮೊದಲಿಗಿಂತ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಹ ಕಾಣಬಹುದು. ವ್ಯವಹಾರದಲ್ಲಿ, ಇದ್ದಕ್ಕಿದ್ದಂತೆ ದೀರ್ಘಕಾಲದಿಂದ ನಿಂತು ಹೋದ ಪಾವತಿಯಾಗಬಹುದು. ಅವಿವಾಹಿತರು ಈ ಸಮಯದಲ್ಲಿ ಸಂಗಾತಿಯನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವೈಢೂರ್ಯವನ್ನು ಧರಿಸಿದರೆ ಅದು ನಿಮಗೆ ಅದೃಷ್ಟವೆಂದು ಸಾಬೀತುಪಡಿಸಬಹುದು.

ಶಬರಿಮಲೆ ಯಾತ್ರಾರ್ಥಿಗಳು ರಾಜಕಾರಣಿಗಳು, ಸೆಲೆಬ್ರಿಟಿಗಳ ಪೋಸ್ಟರ್ ಕೊಂಡೊಯ್ಯಕೂಡದು; ಕೋರ್ಟ್ ಆದೇಶ

ಮಕರ ರಾಶಿ(Capricorn)
ಶನಿಯ ನಕ್ಷತ್ರ ಬದಲಾವಣೆಯು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಹಠಾತ್ ಹಣವನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಪೂರ್ವಜರ ಆಸ್ತಿಯ ಲಾಭವನ್ನು ಪಡೆಯಬಹುದು. ಮತ್ತೊಂದೆಡೆ, ನಿರುದ್ಯೋಗಿಗಳಿಗೆ ಉದ್ಯೋಗದ ಕೊಡುಗೆಗಳು ಸಿಗಬಹುದು. ಇದರೊಂದಿಗೆ, ನಿಮ್ಮ ರೋಗಗಳು ದೂರವಾಗುತ್ತವೆ ಮತ್ತು ಪ್ರಗತಿಯ ಹಾದಿಯು ನಿಮಗೆ ತೆರೆದುಕೊಳ್ಳುತ್ತದೆ. ಮತ್ತೊಂದೆಡೆ, ನೀವು ನ್ಯಾಯಾಲಯ-ಕೋರ್ಟ್ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ನಿಮ್ಮ ವ್ಯವಹಾರವು ತೈಲ, ಕಬ್ಬಿಣ, ಪೆಟ್ರೋಲಿಯಂ ಮತ್ತು ಮದ್ಯಕ್ಕೆ ಸಂಬಂಧಿಸಿದ್ದರೆ, ನೀವು ಉತ್ತಮ ಯಶಸ್ಸನ್ನು ಪಡೆಯಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios