ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ಆನ್‌ಲೈನ್ ಬುಕಿಂಗ್ ಮೂರು ತಿಂಗಳ ಮುಂಚಿತವಾಗಿ ಆರಂಭವಾಗುತ್ತದೆ. ಆಗಸ್ಟ್ ತಿಂಗಳ ದರ್ಶನಕ್ಕೆ ಮೇ ೨೨ರಿಂದ ಬುಕಿಂಗ್ ಆರಂಭ. ವರ್ಚುವಲ್ ಸೇವೆ, ಅಂಗಪ್ರದಕ್ಷಿಣೆ, ವಿಶೇಷ ಪ್ರವೇಶ, ಹಿರಿಯ ನಾಗರಿಕರಿಗೆ ಮತ್ತು ಆರ್ಜಿತ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್ ಲಭ್ಯ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಉಚಿತ ದರ್ಶನ. ವಸತಿ ವ್ಯವಸ್ಥೆಗೂ ಮುಂಗಡ ಬುಕಿಂಗ್ ಸೌಲಭ್ಯವಿದೆ.

ವಿಶ್ವದ ಅತ್ಯಂತ ಶ್ರೀಮಂತ ದೇವರಲ್ಲಿ ಒಂದು ಎಂದೆನಿಸಿಕೊಳ್ಳುತ್ತಿರುವ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಪ್ರತಿನಿತ್ಯವೂ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆನ್​ಲೈನ್​ ಮೂಲಕ ಮೂರು ತಿಂಗಳ ಮೊದಲೇ ಬುಕ್ಕಿಂಗ್​ ವ್ಯವಸ್ಥೆಯಿದ್ದು, ಐದೇ ನಿಮಿಷಗಳಲ್ಲಿ ಎಲ್ಲಾ ದರ್ಶನಗಳೂ ಕ್ಲೋಸ್​ ಆಗುವುದೇ ಇದಕ್ಕೆ ಸಾಕ್ಷಿಯಾಗಿದೆ. ಆನ್​ಲೈನ್​ ಬುಕ್ಕಿಂಗ್​ ಮಾಡುವವರಷ್ಟೇ ಅಲ್ಲದೇ, ಬುಕ್ಕಿಂಗ್​ ಇಲ್ಲದೆಯೂ ಬರುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಆನ್​ಲೈನ್​ನಲ್ಲಿ ಬುಕ್​ ಮಾಡಿಕೊಂಡು ಹೋದರೆ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಇದೇ ಕಾರಣಕ್ಕೆ ಪ್ರತಿ ತಿಂಗಳೂ ಆನ್​ಲೈನ್​ನಲ್ಲಿ ದರ್ಶನದ ಟಿಕೆಟ್​ ಬುಕ್​ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗುತ್ತದೆ. ಮೂರು ತಿಂಗಳಿನ ಮುಂಚೆ ಈ ಬುಕಿಂಗ್​ ಆರಂಭವಾಗುತ್ತದೆ. ಇದರ ಅರ್ಥ ಈಗ ಮೇ ತಿಂಗಳು. ನೀವು ಆಗಸ್ಟ್​ ತಿಂಗಳಿಗೆ ಹೋಗಲು ಬಯಸಿದರೆ ಮೇ ತಿಂಗಳಿನಲ್ಲಿ ಆನ್​ಲೈನ್​ ಬುಕ್​ ಮಾಡಿಕೊಳ್ಳಬಹುದು. ಟಿಟಿಡಿ ರಿಲೀಸ್​ ಮಾಡುವ ದಿನಗಳಲ್ಲಿಯೂ ನೀವು ಬುಕ್​ ಮಾಡಿಕೊಳ್ಳಬಹುದೇ ವಿನಾ ಬೇರೆ ದಿನಗಳಲ್ಲಿ ಆಗುವುದಿಲ್ಲ. ಪ್ರತಿ ಮೂರು ತಿಂಗಳಿಗಿಂತ ಮುಂಚಿತವಾಗಿ ಬುಕ್​ ಮಾಡುವ ಅವಕಾಶ ನಿಮಗೆ ಸಿಗುತ್ತದೆ. 

ಇದೀಗ ಆಗಸ್ಟ್​ ತಿಂಗಳ ಬುಕಿಂಗ್​ ನಾಳೆಯಿಂದ ಅಂದ್ರೆ ಮೇ 22ರಿಂದ ಆರಂಭವಾಗಲಿದೆ. ಆನ್​ಲೈನ್​ನಲ್ಲಿ ವಿವಿಧ ಸೇವೆಗಳಿಗೆ ಅವಕಾಶವಿದೆ. ಅವುಗಳಲ್ಲಿ ಪ್ರಮುಖವಾದದ್ದು, ವರ್ಚುವಲ್​ ಸೇವೆ, ಅಂಗಪ್ರದಕ್ಷಿಣೆ, ವಿಶೇಷ ಎಂಟ್ರಿ, ಸೀನಿಯರ್​ ಸಿಟಿಜನ್​ ಹಾಗೂ ಆರ್ಜಿತ ಸೇವೆ. ಇವುಗಳಲ್ಲಿ ವರ್ಚುವಲ್​ ಸೇವೆ ಎಂದರೆ ಆನ್​ಲೈನ್​ ಮೂಲಕ ನಿಮಗೆ ದರ್ಶನ ನೀಡಲಾಗುತ್ತದೆ. ಬಳಿಕ ನೀವು ನಿಮಗೆ ಬೇಕಾದ ದಿನಾಂಕದಂದು ಸ್ಥಳದಲ್ಲಿಯೇ ದರ್ಶನ ಮಾಡಿಕೊಂಡು ಬರಬಹುದು. ಅಂಗಪ್ರದಕ್ಷಿಣೆ 90 ದಿನಗಳಿಗೆ ಒಮ್ಮೆ ಸಿಗುತ್ತದೆ, ಸ್ಪೆಷಲ್​ ಎಂಟ್ರಿ ಪ್ರತಿ 30 ದಿನಗಳಿಗೆ ಒಮ್ಮೆ ಮಾಡುವ ಅವಕಾಶ ಇದ್ದು, ಸೀನಿಯರ್​ ಸಿಟಿಜನ್​ಗೆ 90 ದಿನಗಳಿಗೆ ಒಮ್ಮೆ ಮಾಡುವ ಅವಕಾಶವಿದೆ. ಆರ್ಜಿತ ಸೇವೆ ಮಾತ್ರ ವರ್ಷದಲ್ಲಿ ಎರಡು ಬಾರಿ ಮಾಡುವ ಅವಕಾಶ ಇದೆ. ನೀವು ಹಲವು ಬಾರಿ ಹೋಗುವುದಿದ್ದರೆ ಈ ವಿಷಯ ತಿಳಿದುಕೊಂಡರೆ ಒಳಿತು.

ತಿರುಪತಿ ದರ್ಶನ ಇನ್ನು ಸುಲಭ: ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್ ಬುಕ್​​, ವಸತಿಗೃಹ ಸೇರಿ 15 ಸೇವೆ: ಡಿಟೇಲ್ಸ್​ ಇಲ್ಲಿದೆ...

ಇನ್ನು ನಾಳೆ ಅಂದರೆ ಮೇ 22ರ ಬೆಳಿಗ್ಗೆ 10 ಗಂಟೆಗೆ ಆರ್ಜಿತ ಸೇವಾ ಟಿಕೆಟ್​ ಇರಲಿದೆ. ಮಧ್ಯಾಹ್ನ 3 ಗಂಟೆಗೆ ವರ್ಚುವಲ್​ ಸೇವೆ ಟಿಕೆಟ್​ ಲಭ್ಯ. ಮೇ 23ರ ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣೆ ಟಿಕೆಟ್​ ಲಭ್ಯವಿದ್ದರೆ, 3 ಗಂಟೆಗೆ ಸೀರಿಯರ್​ ಸಿಟಿಜನ್​/ ಅಂಗವಿಕರಿಗೆ ಟಿಕೆಟ್​ ಲಭ್ಯವಿದೆ. ಮೇ 24ರ ಬೆಳಿಗ್ಗೆ 10 ಗಂಟೆಗೆ ವಿಶೇಷ ಎಂಟ್ರಿ ಟಿಕೆಟ್​ ಲಭ್ಯವಿದೆ. ಇದನ್ನು ಹೊರತುಪಡಿಸಿದರೆ ಪದ್ಮಾವತಿ ಅಮ್ಮಾವರ್​ಗೆ ದರ್ಶನ ಟಿಕೆಟ್​ ಕೂಡ ಪಡೆಯಬಹುದಾಗಿದ್ದು, ಅದು 24ರ ಬೆಳಿಗ್ಗೆ 10 ಗಂಟೆಗೆ ಓಪನ್​ ಆಗಲಿದೆ. ಜೊತೆಗೆ, ನಿಮಗೆ ವಸತಿ ಬೇಕಿದ್ದರೆ ಅದನ್ನೂ ಮೊದಲೇ ಬುಕ್​ ಮಾಡಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದಕ್ಕೆ ನೀವು ಮೊದಲೇ ಸೈನ್​ ಇನ್​ ಮಾಡಿಟ್ಟುಕೊಂಡರೆ ಒಳಿತು. ಬಳಿಕ ನಿಮ್ಮ ಹೆಸರು, ಆಧಾರ್​ ಸಂಖ್ಯೆ, ವಯಸ್ಸು, ವಿಳಾಸ ಇವೆಲ್ಲವುಗಳನ್ನೂ ಮೊದಲೇ ರೆಡಿ ಮಾಡಿಟ್ಟುಕೊಳ್ಳಬೇಕು. ಹಿರಿಯ ನಾಗರಿಕ ಕೋಟಾಕ್ಕೆ ಆಧಾರ್​ ಕಾರ್ಡ್​ ಅಪ್​ಲೋಡ್​ ಮಾಡಬೇಕಾಗುವ ಕಾರಣ ಅದನ್ನೂ ಮೊದಲೇ ರೆಡಿ ಇಟ್ಟುಕೊಂಡರೆ ಒಳಿತು. ಸೀನಿಯರ್​ ಸಿಟಿಜನ್​ ಹಾಗೂ ಅಂಗಪ್ರದಕ್ಷಿಣೆಯು ಉಚಿತವಾಗಿದೆ. ಉಳಿದಂತೆ ವರ್ಚುವಲ್​ಗೆ 500 ರೂಪಾಯಿ, ವಿಶೇಷ ಎಂಟ್ರಿಗೆ 300 ರೂಪಾಯಿಗಳು ಇರಲಿವೆ. ಆನ್​ಲೈನ್​ ಮೂಲಕ ನೀವು ಹಣ ಕೊಟ್ಟು ಮೂರು ತಿಂಗಳ ಮುಂಚಿತವಾಗಿ ಬುಕ್​ ಮಾಡಿಕೊಳ್ಳಬೇಕು. ಟಿಕೆಟ್​ ಬುಕ್​ ಮಾಡಲು https://ttdevasthanams.ap.gov.in/home/dashboard ಇಲ್ಲಿ ಕ್ಲಿಕ್ ಮಾಡಿ.

ತಿರುಪತಿಯಲ್ಲಿ ಇನ್ನು ಕ್ಯೂ ನಿಲ್ಲೋ ಅಗತ್ಯವಿಲ್ಲ: ಒಂದೇ ಗಂಟೆಯಲ್ಲಿ ವೆಂಕಟೇಶನ ದರ್ಶನ- ಹೀಗಿದೆ ನೋಡಿ ವ್ಯವಸ್ಥೆ