ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳುವ ಭಕ್ತರೇ ಗಮನಿಸಿ. ತಿರುಪತಿಯಲ್ಲಿ ಕೆಲ ನಿಯಮ ಬದಲಾಗಿದೆ. ಹೀಗಾಗಿ ನಿಯಮ ಗೊತ್ತಿಲ್ಲದೆ ದರ್ಶನಕ್ಕೆ ತೆರಳಿ ಅಂತಿಮ ಕ್ಷಣದಲ್ಲಿ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಬದಲಾವಣೆ ಏನು?

ತಿರುಪತಿ(ಮಾ.05) ತಿರುಪತಿ ವೆಂಕಂಟೇಶ್ವರ ದೇವಸ್ಥಾನ ಭಾರತದಲ್ಲೇ ಅತ್ಯಂತ ಪ್ರಸಿದ್ಧ. ಪ್ರತಿ ದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀಮಂತ ದೇವಸ್ಥಾನಗಳ ಪೈಕಿ ತಿರುಪತಿ ಮುಂಚೂಣಿಯಲ್ಲಿದೆ. ಹಲವು ರಾಜ್ಯಗಳಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ತೆರಳುತ್ತಾರೆ. ಪ್ರತಿ ದಿನ ಆಗಮಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಇದರ ನಡುವೆ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿ ಕೆಲ ನಿಮಯದಲ್ಲಿ ಬದಲಾವಣೆ ಮಾಡಿದೆ. 

Add Asianetnews Kannada as a Preferred SourcegooglePreferred

ಟಿಟಿಡಿ ಇದೀಗ ಹೊಸ ರೂಂ ನಿಯಮದಲ್ಲಿ ಬದಲಾವಣೆ ಮಾಡಿದೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮ ಜಾರಿಗೆ ತರಲಾಗಿದೆ. ಇದೀಗ ಜನಸಾಮಾನ್ಯರಿಗೆ ಕೊಠಡಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಆದರೆ ರಾಜಕಾರಣಿಗಳು, ಸಚಿವರು, ಪೊಲೀಸರು ಸೇರಿದಂತೆ ಇತರ ಉನ್ನತ ಹುದ್ದೆಗಳಲ್ಲಿರುವವರ ಶಿಫಾರಸು ಪತ್ರವನ್ನು ಹಿಡಿದುಕೊಂಡು ಬರುವ ಭಕ್ತರಿಗೆ ರೂಂ ನೀಡುವ ಪದ್ಧತಿಯಲ್ಲಿ ಬದಲಾವಣೆ ಮಾಡಾಗಿದೆ. ಇಷ್ಟು ದಿನ ತಿರುಪತಿ ದರ್ಶನ ಟಿಕೆಟ್ ಇಲ್ಲದಿದ್ದರೂ ಈ ರೀತಿಯ ಶಿಫಾರಸು ಪತ್ರ ತರುವ ಭಕ್ತರಿಗೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿತ್ತು. ಇನ್ಮುಂದೆ ಕೊಠಡಿ ಪಡೆಯಲು ತಿರುಪತಿ ದರ್ಶನ ಟಿಕೆಟ್ ಕಡ್ಡಾಯವಾಗಿದೆ. ಟಿಕೆಟ್ ಇಲ್ಲದಿದ್ದರೆ ಕೊಠಡಿ ವ್ಯವಸ್ಥೆ ಇರುವುದಿಲ್ಲ. ಶಿಫಾರಸಿನ ಪತ್ರದ ಕಾರಣಕ್ಕೆ ಕೊಠಡಿ ನೀಡಲಾಗುವುದಿಲ್ಲ. ಜನಸಾಮಾನ್ಯರಿಗೆ ಈ ಕೊಠಡಿಗಳನ್ನು ಮೀಸಲಿಡಲಾಗಿದೆ. ಹೀಗಾಗಿ ತಿರುಪತಿ ದರ್ಶನ ಟಿಕೆಟ್ ಇರುವ ಭಕ್ತರು ಯಾವುದೇ ಸಮಸ್ಯೆ ಇಲ್ಲದೆ ಕೊಠಡಿ ಪಡೆಯಬಹುದು ಎಂದು ತಿರುಪತಿ ತಿರುಮಲ ದೇವಸ್ಥಾನಂ ಹೇಳಿದೆ.

ತಿಪುಪತಿ ತಿರುಮಲಂ ದೇವಸ್ಥಾನ ಪ್ರತಿ ದಿನ 7,500 ಕೊಠಡಿಗಳನ್ನು ಭಕ್ತರಿಗೆ ನೀಡುತ್ತದೆ. ಈ ಪೈಕಿ 3500 ಕೊಠಡಿಗಳು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ಇನ್ನು ಆನ್‌ಲೈನ್ ಬುಕಿಂಗ್ ಮೂಲಕ 1580 ಕೊಠಡಿ ಮೀಸಲಿಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ದಾನಿಗಳಿಗಾಗಿ 400 ಕೊಠಡಿ ಮೀಸಲಿಡಲಾಗಿದೆ. ಇನ್ನುಳಿದ ಕೊಠಡಿಗಳನ್ನು ವಿಐಪಿ, ವಿವಿಐಪಿಗಳಿಗೆ ಮೀಸಲಿಡಲಾಗಿದೆ. 

ತಿರುಪತಿ ನೋ ಫ್ಲೈ ಜೋನ್ ಕೂಗು
ತಿರುಮಲ ಪ್ರದೇಶವನ್ನು ನೋ ಫ್ಲೈ ಜೋನ್ ಮಾಡ್ಬೇಕು ಅನ್ನೋ ಕೂಗು ಜೋರಾಗುತ್ತಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (Tirupati Temple Administration) ಸಿವಿಲ್ ಏವಿಯೇಷನ್ ಸಚಿವಾಲಯಕ್ಕೆ ಈ ಕುರುತಿ ಮನವಿ ಮಾಡಿದೆ.ಸೆಂಟ್ರಲ್ ಸಿವಿಲ್ ಏವಿಯೇಷನ್ ಮಿನಿಸ್ಟರ್ ರಾಮ್ ಮೋಹನ್ ನಾಯ್ಡು ಕಿಂಜರಾಪು (Ram Mohan Naidu Kinjarapu) ಭಾನುವಾರ ಈ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆ ಮಾತುಕತೆ ನಡೆಸಿದ್ದಾರೆ.

ದೇವಸ್ಥಾನ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (TTD) ಭಾನುವಾರ ಸಿವಿಲ್ ಏವಿಯೇಷನ್ ಮಿನಿಸ್ಟರ್​ಗೆ ಪತ್ರ ಬರೆದಿದೆ. ತಿರುಮಲವನ್ನ 'ನೋ-ಫ್ಲೈ ಜೋನ್' (No-Fly Zone) ಡಿಕ್ಲೇರ್ ಮಾಡಲು ಮನವಿ ಮಾಡಿದೆ. ದೇವಸ್ಥಾನದ ಪಾವಿತ್ರ್ಯತೆ ಹಾಗೂ ಧಾರ್ಮಿಕ ಪರಂಪರೆ ಕಾಪಾಡಿಕೊಳ್ಳಲು ಇದು ಅವಶ್ಯಕ ಎಂದು ಆಡಳಿತ ಮಂಡಳಿ ಹೇಳಿದೆ. 

ಸಚಿವ ರಾಮಮೋಹನ್ ನಾಯ್ಡು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ನಾವು ನ್ಯಾವಿಗೇಷನ್ ಮತ್ತೆ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆ ಮಾತುಕತೆ ನಡೆಸಿದ್ದೇನೆ. ಬೇರೆ ಪರ್ಯಾ ಮಾರ್ಗ ಹುಡುಕಲು ಸೂಚಿಸಲಾಗಿದೆ. ಯಾವುದೇ ಸ್ಥಳವನ್ನು ನೋ ಫ್ಲೈ ಝೋನ್ ಎಂದು ಘೋಷಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ಬೇರೆ ಯಾವ ರೀತಿ ಪರಿಹಾರ ಸೂಚಿಸಲಾಗುತ್ತದೆ ಅನ್ನೋ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಸದ್ಯಕ್ಕೆ ಚರ್ಚೆ ನಡೆದಿದೆ. ಪರ್ಯಾಯ ಮಾರ್ಗದ ಹುಡುಕಾಟ ನೆಯುತ್ತಿದೆ ಎಂದಿದ್ದಾರೆ.