ತಲಾ 3000 ರು.ಮುಖಬೆಲೆಯ ವಿಐಪಿ ದರ್ಶನದ ಟಿಕೆಟ್‌ಗಳನ್ನು ತಿರುಪತಿ ದೇಗುಲದ ಸಿಬ್ಬಂದಿಯೊಬ್ಬ ಭರ್ಜರಿ 42 ಸಾವಿರ ರು.ಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶಂಕರ್‌ ಎಂಬ ಸಿಬ್ಬಂದಿಯನ್ನು ಬಂಧಿಸಿರುವ ಟಿಟಿಡಿಯ ವಿಚಕ್ಷಣಾ ದಳ, ಈ ಕುರಿತು ತನಿಖೆ ಮುಂದುವರೆಸಿದೆ.

ತಿರುಪತಿ: ತಲಾ 3000 ರು.ಮುಖಬೆಲೆಯ ವಿಐಪಿ ದರ್ಶನದ ಟಿಕೆಟ್‌ಗಳನ್ನು ತಿರುಪತಿ ದೇಗುಲದ ಸಿಬ್ಬಂದಿಯೊಬ್ಬ ಭರ್ಜರಿ 42 ಸಾವಿರ ರು.ಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶಂಕರ್‌ ಎಂಬ ಸಿಬ್ಬಂದಿಯನ್ನು ಬಂಧಿಸಿರುವ ಟಿಟಿಡಿಯ ವಿಚಕ್ಷಣಾ ದಳ, ಈ ಕುರಿತು ತನಿಖೆ ಮುಂದುವರೆಸಿದೆ. ಕೆಲ ಸಿಬ್ಬಂದಿ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದಿದ್ದ ವಿಚಕ್ಷಣಾ ದಳದ ಸಿಬ್ಬಂದಿ, ಇತ್ತೀಚೆಗೆ ವಿಐಪಿ ಟಿಕೆಟ್‌ ಪಡೆದು ದರ್ಶನಕ್ಕೆ ಬಂದಿದ್ದ ಹೈದರಾಬಾದ್‌ನ 6 ಯಾತ್ರಿಗಳನ್ನು, ‘ಖಚಿತ ಟಿಕೆಟ್‌ ಹೇಗೆ ಸಿಕ್ಕಿತು?’ ಎಂದು ಪ್ರಶ್ನಿಸಿದ್ದರು. ಈ ವೇಳೆ ಅವರು ಶಂಕರ್‌ ಎಂಬ ಸಿಬ್ಬಂದಿ ತಮಗೆ 42 ಸಾವಿರ ರು.ಹಣ ಪಡೆದು ಟಿಕೆಟ್‌ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಶಾಸಕರೊಬ್ಬರ ಶಿಫಾರಸು ಪತ್ರವನ್ನು ನಕಲು ಮಾಡಿ ಅದರ ಮೂಲಕ 6 ಟಿಕೆಟ್‌ಗಳನ್ನು ಖರೀದಿಸಿ ಅದನ್ನು ಭಕ್ತರಿಗೆ 42 ಸಾವಿರ ರು.ಗೆ ಮಾರಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಹೀಗಾಗಿ ಆತನನ್ನು ವಶಕ್ಕೆ ಪಡೆದಿರುವ ಸಿಬ್ಬಂದಿ, ಇಂಥ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರಬಹುದಾದ ಇತರರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಆರಂಭಿಸಿದ್ದಾರೆ.

Add Asianetnews Kannada as a Preferred SourcegooglePreferred

ತಿರುಪತಿಗೆ ಮುಡಿಕೊಟ್ಟ ನಟ ಧನುಷ್ ಮತ್ತು ಮಕ್ಕಳು: ಹೊಸ ಲುಕ್ ವೈರಲ್

ಅಬ್ಬಬ್ಬಾ! ವೆಂಕಟೇಶ್ವರನ ಮೈ ಮೇಲೆ ಏನೆಲ್ಲ ಆಭರಣಗಳಿವೆ ಎಂದು ಬಲ್ಲಿರಾ?