Pisces ವ್ಯಕ್ತಿಯನ್ನು ಇಷ್ಟ ಪಡ್ತಿದೀರಾ? ಅವರ ಗಮನ ಸೆಳೆಯಲು ಇಲ್ಲಿವೆ ಟಿಪ್ಸ್!
ನೀವು ಮೀನ ರಾಶಿಯ ವ್ಯಕ್ತಿಯೊಂದಿಗೆ ಸ್ನೇಹ ಹೊಂದಿದ್ದೀರಾ, ಅವರು ಇತ್ತೀಚೆಗೆ ನಿಮ್ಮನ್ನು ಗಮನಿಸುವುದಿಲ್ಲವೇ? ಇದು ಬಹುಶಃ ಅವರು ನಿಮ್ಮ ಮೇಲಿನ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಂಡಿರಬಹುದು. ಅದರಿಂದಲೇ ನಿಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸಿರುತ್ತಾರೆ. ಆದರೆ, ಚಿಂತೆ ಬೇಡ! ಅವರ ಗಮನವನ್ನು ನಿಮ್ಮೆಡೆಗೆ ಸೆಳೆಯಲು ಇಲ್ಲಿವೆ ಟಿಪ್ಸ್
ಭಾವನಾತ್ಮಕ ಜೀವಿಯಾದ ಮೀನ ರಾಶಿಯವರು ಪ್ರೀತಿಯನ್ನು ನಿರ್ಲಕ್ಷಿಸಲು ನಾನಾಕಾರಣಗಳು ಇರಬಹುದು. ಆದರೆ, ಕಾರಣಗಳು ಏನೇ ಇರಲಿ, ನೀವು ಖಂಡಿತವಾಗಿಯೂ ಇಡೀ ಸನ್ನಿವೇಶವನ್ನು ತಿರುಗಿಸಬಹುದು ಮತ್ತು ಮೀನ ಮನುಷ್ಯನ ಗಮನವನ್ನು ನಿಮ್ಮ ಕಡೆಗೆ ಸೆಳೆಯಬಹುದು. ಅದಕ್ಕಾಗಿ ಇಲ್ಲಿವೆ ಸರಳ ಮಾರ್ಗಗಳು
ಅವನಿಗೆ ಜಾಗವನ್ನು (Space) ನೀಡಿ
ಮೀನ ರಾಶಿಯ ವ್ಯಕ್ತಿಗೆ ಅವನ ಭಾವನೆಗಳನ್ನು ಅಥವಾ ಮನಸ್ಥಿತಿಯನ್ನು ವಿಶ್ಲೇಷಿಸಲು ಆತ ತನ್ನ ವಲಯದಲ್ಲಿರಬೇಕು. ನೀವು ಅವನನ್ನು ಅವನ ವಲಯದಿಂದ ಹೊರಗೆ ತಳ್ಳಲು ಒತ್ತಾಯಿಸಿದರೆ, ಅವನು ಕಿರಿಕಿರಿಗೊಳ್ಳಬಹುದು ಮತ್ತು ನಿಮ್ಮಿಂದ ದೂರ ಹೋಗಬಹುದು. ಅವನು ತನ್ನ ಸಮಸ್ಯೆಗಳನ್ನು ನೇರವಾಗಿ ನಿಮ್ಮೊಂದಿಗೆ ಹೇಳುವುದಿಲ್ಲ. ಅವರು ಏಕಾಂತ ಸ್ಥಿತಿಯಲ್ಲಿದ್ದಾಗ ಅವರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರಿಗೆ ಬೇಕಾಗುವ ಸಮಯ ನೀಡಿ.
ಇದನ್ನೂ ಓದಿ: ಸಂಗಾತಿ ತಮ್ಮನ್ನು ಹೊಗಳಲಿ ಎಂದು ಬಯಸುವ Zodiac Signs!
ಗಮನ (Attention) ಕೊಡಿ
ತನ್ನ ಭಾವನೆಗಳನ್ನು ಎದುರಿಸಲು ಸಾಧ್ಯವಾಗದ ಕಾರಣ, ಮೀನ ರಾಶಿಯ ವ್ಯಕ್ತಿ ಕೆಲವೊಮ್ಮೆ ಗಮನದ ಸಲುವಾಗಿ ನಿಮ್ಮನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾನೆ. ಅವನು ತನ್ನ ಅಗತ್ಯಗಳ ಬಗ್ಗೆ ನೇರವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಮತ್ತು ಅವನು ಸಾಮಾನ್ಯಕ್ಕಿಂತ ಸ್ವಲ್ಪ ನಿಶ್ಯಬ್ದವಾದಾಗ (Silence), ಅವನನ್ನು ಪರೀಕ್ಷಿಸಿ. ನೀವು ಅವರ ಪ್ರೀತಿಯನ್ನು ಬಯಸಿದರೆ, ನಿಮ್ಮ ವೇಳಾಪಟ್ಟಿಯನ್ನು ತೆರವುಗೊಳಿಸಿ ಮತ್ತು ನಿಮ್ಮ ಹೆಚ್ಚಿನ ಗಮನ ಮತ್ತು ಪ್ರೀತಿಯನ್ನು ಅವರಿಗೆ ನೀಡಿ.
ಕ್ಷಮೆ ಯಾಚಿಸಿ (Say Sorry)
ಮೀನ ರಾಶಿಯ ಮನುಷ್ಯನು ತನ್ನ ಮನಸ್ಸಿನಲ್ಲಿ ಹೇರಳವಾದ ಪ್ರಣಯ ಕಲ್ಪನೆಗಳನ್ನು ಸೃಷ್ಟಿಸುತ್ತಾನೆ ಮತ್ತು ಒಮ್ಮೆ ನೀವು ಅವನಿಗೆ ಏನಾದರೂ ತಪ್ಪು ಮಾಡಿದರೆ, ಅದು ಅವನ ಮನಸ್ಸಿನಲ್ಲಿ ಘರ್ಷಣೆಗಳಿಗೆ ಕಾರಣವಾಗುತ್ತದೆ, ಅದು ಅವನನ್ನು ನಿಮ್ಮಿಂದ ದೂರ (Distance) ಎಳೆಯಲು ಪ್ರಾರಂಭಿಸುತ್ತದೆ. ಅವನು ಬುಧನಿಂದ ಆಳಲ್ಪಡುತ್ತಾನೆ ಅಂದರೆ ಅವನು ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಸಂವಹನ ಮಾಡುವಲ್ಲಿ ಉತ್ತಮವಾಗಿಲ್ಲ. ಆದ್ದರಿಂದ, ನೀವಿಬ್ಬರು ಜಗಳವಾಡುತ್ತಿದ್ದರೆ, ಅವರ ಮಾತುಗಳಿಗೆ ಗಮನ ಕೊಡುವುದು ಬಹಳ ಮುಖ್ಯ ಮತ್ತು ಜಗಳ ವಿಕೋಪಕ್ಕೆ ಹೋಗದಂತೆ ತಡೆಯಲು ನೀವೇ ಕ್ಷಮೆಯಾಚಿಸುವುದು ಒಳಿತು.
ಸ್ನೇಹಪರ ರೀತಿಯಲ್ಲಿ ಮಾತನಾಡಿ (Friendly Talk)
ಮೀನ ರಾಶಿಯ ಮನುಷ್ಯನು ಮಬ್ಬು ಮತ್ತು ಮಂಜಿನಿಂದ ಕೂಡಿರುವ ವ್ಯಕ್ತಿತ್ವ ಹೊಂದಿರುತ್ತಾನೆ. ತನ್ನ ಭಾವನೆಗಳನ್ನು ಆತ ಹೋರಹಾಕದೆ ತನ್ನಲ್ಲಿಯೇ ಇಟ್ಟುಕೊಂಡಿರುತ್ತಾನೆ. ಇದರಿಂದ ಅವನ ಭಾವನೆಗಳು ಅವನನ್ನು ಒಳಗೆ ಕೊಲ್ಲಬಹುದು. ಅವನೊಂದಿಗೆ ಸ್ನೇಹದಿಂದಿರಿ ಮತ್ತು ಅವನ ಹೃದಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಮುಕ್ತ ಸಂವಹನದಲ್ಲಿ ತೊಡಗಿಸಿಕೊಳ್ಳಿ. ಅವನ ಭಾವನೆಗಳನ್ನು ನಿಭಾಯಿಸಲು ತರ್ಕ ಮತ್ತು ಕಾರಣವನ್ನು ಬಳಸಬೇಡಿ.
ಇದನ್ನೂ ಓದಿ: ಸಂಗಾತಿಯೊಂದಿಗೆ ಆಳವಾದ ಸಂಬಂಧ ಬಯಸುವ ರಾಶಿಚಕ್ರಗಳಿವು..
ಅವನ ಮೇಲೆ ಒತ್ತಡ (Stress) ಹೇರಬೇಡಿ
ಮೀನ ರಾಶಿಯ ಮನುಷ್ಯನು ನೀವು ಅವನಂತೆಯೇ ಭಾವಿಸುತ್ತಿದ್ದೀರಿ ಎಂದು ಖಚಿತವಾದಾಗ ಮಾತ್ರ ನಿಮ್ಮೊಂದಿಗೆ ಮನಸ್ಸನ್ನು ತೆರೆದಿಡುತ್ತಾರೆ. ಮಾತನಾಡುವಂತೆ ಒತ್ತಡ ಹೇರುವುದು ಮೀನ ರಾಶಿಗೆ ಎಂದಿಗೂ ಪರಿಹಾರವಲ್ಲ. ಬದಲಾಗಿ, ಅವನಿಗೆ ಆರಾಮದಾಯಕವಾಗುವಂತೆ ಮಾಡಿ ಮತ್ತು ಫಲಪ್ರದ ಸಂಭಾಷಣೆಗಾಗಿ ನಿಮ್ಮ ಹೃದಯವನ್ನು ಹಂಚಿಕೊಳ್ಳಿ.
ಅವನನ್ನು ಅರ್ಥಮಾಡಿಕೊಂಡು ಅವನ ಭಾವನೆಗಳಿಗೆ ಪ್ರಾಮುಖ್ಯತೆ (Importance) ನೀಡಿ.
ನೀವು ಸಣ್ಣ-ಸಣ್ಣ ವಿಷಯಗಳನ್ನೂ ದೊಡ್ಡ ನಾಟಕದಂತೆ ರಚಿಸಲು ಪ್ರಾರಂಭಿಸಿದರೆ ಮೀನ ರಾಶಿಯವರು ನಿಮ್ಮಿಂದ ವಿಚಲಿತರಾಗುತ್ತಾರೆ. ಸಣ್ಣಪುಟ್ಟ ವಿಷಯಗಳಲ್ಲಿ ಜಗಳವಾಡಬೇಡಿ, ವಾದ ಮಾಡಬೇಡಿ ಅಥವಾ ವಿವಾದಗಳನ್ನು ಸೃಷ್ಟಿಸಬೇಡಿ. ಅವನ ಮಾತನ್ನು ಕೇಳಲು ಪ್ರಯತ್ನಿಸಿ ಮತ್ತು ಉತ್ತಮ ಫಲಿತಾಂಶಗಳಿಗಾಗಿ ಅವನ ಭಾವನಾತ್ಮಕ ಸ್ಥಿತಿಗೆ ಆದ್ಯತೆ (Preference) ನೀಡಿ.