Lucky Zodiac Till 2025: 3 ವರ್ಷಗಳ ಕಾಲ ಈ ರಾಶಿಗಳಿಗಿದೆ ಶನಿ ಆಶೀರ್ವಾದ!

2025ವರೆಗೆ ಅಂದರೆ ಇನ್ನು 3 ವರ್ಷಗಳ ಕಾಲ ಶನಿದೇವನ ಆಶೀರ್ವಾದ 3 ರಾಶಿಗಳ ಮೇಲಿರಲಿದೆ. ಅವರ ಕಾರ್ಯಗಳಲ್ಲಿ ಶನಿಯು ಉತ್ತಮ ಫಲ ನೀಡುತ್ತಾನೆ. ಶನಿಯ ಸಾಥ್ ಪಡೆವ ಆ ಅದೃಷ್ಟವಂತ ರಾಶಿಗಳು ಯಾವೆಲ್ಲ ನೋಡೋಣ. 

Till 2025 these zodiacs have blessings of Shani dev skr

ಶನಿಯು ನ್ಯಾಯ ಮತ್ತು ಕರ್ಮದ ಗ್ರಹವಾಗಿದೆ. ಜನರು ಮಾಡುವ ಕ್ರಿಯೆಗಳ ಆಧಾರದ ಮೇಲೆ ಅದು ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ನಿಧಾನಗತಿಯ ಚಲನೆಯ ಶನಿಯು ಯಾವುದೇ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಉಳಿಯುವ ಏಕೈಕ ಗ್ರಹವಾಗಿದೆ. ಇದರಿಂದಾಗಿ ವ್ಯಕ್ತಿಗೆ ಶನಿಯ ಪ್ರಯೋಜನಕಾರಿ ಅಂಶಗಳು ಮತ್ತು ದುಷ್ಪರಿಣಾಮಗಳು ದೀರ್ಘ ಕಾಲದವರೆಗೆ ಇರುತ್ತದೆ.
ಈ ವರ್ಷ, ಜನವರಿ 17, 2023 ರಂದು, ಶನಿಯು ತನ್ನ ಮೂಲ ತ್ರಿಕೋನ ಚಿಹ್ನೆ ಕುಂಭ ರಾಶಿಯನ್ನು ಸಂಕ್ರಮಿಸಿದೆ. ಶನಿಯು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಈಗ ಶನಿಯು ಮಾರ್ಚ್ 29, 2025 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ. ಅಂದರೆ ಸುಮಾರು 3 ವರ್ಷಗಳ ಕಾಲ ಅಲ್ಲಿಯೇ ಇರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಶನಿದೇವನು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದ್ದಾನೆ. ಅವುಗಳ ಮೇಲೆ ಶನಿಯ ಕೃಪಾಕಟಾಕ್ಷ ಈ ಮೂರೂ ವರ್ಷಗಳ ಕಾಲ ಇರಲಿದೆ. ಶನಿಯ ಕಾಟವಿಲ್ಲದೆ, ಕೇವಲ ಕೃಪಾಶೀರ್ವಾದ ಹೊಂದುವ ಈ ಮೂರು ರಾಶಿಗಳು ನಿಜಕ್ಕೂ ಅದೃಷ್ಟವಂತರೇ ಸೈ. ಆ ಲಕ್ಕಿ ರಾಶಿಗಳು ಯಾವೆಲ್ಲ ನೋಡೋಣ. ಅದಕ್ಕೂ ಮುನ್ನ ಈ ಮೂರು ವರ್ಷಗಳಲ್ಲಿ ಶನಿಯ ಚಲನೆಯ ಟೈಮ್‌ಲೈನ್ ತಿಳಿಯೋಣ. 

17 ಜನವರಿ 2023 - 29 ಮಾರ್ಚ್ 2025ರ ಅವಧಿಯಲ್ಲಿ ಶನಿಯ ಚಲನೆ

ಧನಿಷ್ಟ ನಕ್ಷತ್ರದ ಮೂಲಕ ಶನಿಯ ಪ್ರಯಾಣವು 29 ವರ್ಷಗಳ ನಂತರ ಮಕರ ರಾಶಿಯಿಂದ ಕುಂಭ ರಾಶಿಗೆ ಸ್ಥಳಾಂತರಗೊಂಡಿದೆ.
ಶನಿಯು ಧನಿಷ್ಠ ನಕ್ಷತ್ರವನ್ನು ಎರಡು ಬಾರಿ (ಜನವರಿ 2023 ರಿಂದ 15 ಮಾರ್ಚ್ 2023 ಮತ್ತು 15 ಮಾರ್ಚ್ 2023ರಿಂದ 24 ನವೆಂಬರ್ 2023ರವರೆಗೆ) ಸಂಕ್ರಮಿಸುತ್ತದೆ.
ಶನಿಯು ಶತಭಿಷಾ ನಕ್ಷತ್ರವನ್ನು ಎರಡು ಬಾರಿ ಸಂಕ್ರಮಿಸುತ್ತದೆ (15 ಮಾರ್ಚ್ 2023ರಿಂದ 15 ಅಕ್ಟೋಬರ್ 2023 ಮತ್ತು 3 ಅಕ್ಟೋಬರ್ 2024ರಿಂದ 27 ಡಿಸೆಂಬರ್ 2024ರವರೆಗೆ).
ಶನಿಯು ದಹನದ ಹಂತಗಳ ಮೂಲಕ ಹೋಗುತ್ತದೆ (5 ಫೆಬ್ರವರಿ 2023 - 12 ಮಾರ್ಚ್ 2023 ಮತ್ತು 17 ಫೆಬ್ರವರಿ 2024 - 24 ಮಾರ್ಚ್ 2024).
ಶನಿಯು ಹಿಮ್ಮುಖ ಚಲನೆಯ ಹಂತಗಳ ಮೂಲಕ ಹೋಗುತ್ತದೆ (17 ಜೂನ್ 2023 - 4 ನವೆಂಬರ್ 2023 ಮತ್ತು ನಂತರ ಮತ್ತೆ 30 ಜೂನ್ 2024 - 15 ನವೆಂಬರ್ 2024 ಅವಧಿಯಲ್ಲಿ).

Surya Gochar 2023: ಏಳು ರಾಶಿಗಳ ಅದೃಷ್ಟ ಎಚ್ಚರಿಸಲಿರುವ ಮೇಷ ಸಂಕ್ರಾಂತಿ

ಶನಿ ದೇವನಿಂದ 3 ವರ್ಷಗಳ ಕಾಲ ಶುಭಫಲವನ್ನು ಪಡೆವ ರಾಶಿಗಳು ಇವೇ..

ಮಕರ ರಾಶಿ(Capricorn)
ಶನಿಯ ಸಂಚಾರವು ಈ ರಾಶಿಯವರಿಗೆ ಲಾಭದಾಯಕವಾಗಲಿದೆ. ಹಣದ ಆಗಮನ ಉತ್ತಮವಾಗಿರುತ್ತದೆ. ಶನಿಯ ಸಂಚಾರವು ನಿಮ್ಮ ಮಾತಿನ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ಈ ಸಮಯದಲ್ಲಿ ನೀವು ವಾಹನಗಳು ಮತ್ತು ಆಸ್ತಿಯನ್ನು ಸಹ ಖರೀದಿಸಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ.

ಧನು ರಾಶಿ(Sagittarius)
ಶನಿದೇವನು ಈ ರಾಶಿಯವರಿಗೆ ಧನಲಾಭವನ್ನು ಮಾಡುತ್ತಿದ್ದಾನೆ. ಜನವರಿಯಿಂದ ಈ ರಾಶಿಯವರಿಗೆ ಶನಿ ಸಾಡೇಸಾತಿ ದೂರವಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ನೀವು ಸಹೋದರರ ಬೆಂಬಲವನ್ನು ಪಡೆಯುತ್ತೀರಿ.

Grahan Yog 2023: ಮೇಷದಲ್ಲಿ ಸೂರ್ಯ ರಾಹು ಯುತಿಯಿಂದ 3 ರಾಶಿಗಳಿಗೆ ಗ್ರಹಣ ದೋಷ

ಮಿಥುನ ರಾಶಿ(Gemini)
ಶನಿದೇವನ ಸಂಚಾರವು ಈ ರಾಶಿಚಕ್ರದ ಸ್ಥಳೀಯರಿಗೆ ಮಂಗಳಕರವಾಗಿರುತ್ತದೆ. ಶನಿಯ ಧೈಯ್ಯಾದಿಂದ ಮುಕ್ತಿ ಸಿಗಲಿದೆ. ಬಹು ಕಾಲದಿಂದ ಬಾಕಿ ಉಳಿದಿದ್ದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ವ್ಯಾಪಾರ ಸಂಬಂಧಿತ ಪ್ರಯಾಣವನ್ನೂ ಮಾಡಬಹುದು.

Latest Videos
Follow Us:
Download App:
  • android
  • ios