Asianet Suvarna News

ಪತ್ನಿಯ ರಾಶಿ ಇದಾಗಿದ್ದರೆ ಪತಿಗೆ ಅದೃಷ್ಟ – ಮನೆಯಲ್ಲಿ ಧನ-ಧಾನ್ಯ ವೃದ್ಧಿ..!

ರಾಶಿಚಕ್ರದಲ್ಲಿ ಹನ್ನೆರಡು ರಾಶಿಗಳಿವೆ. ಅವುಗಳು ಒಂದಲ್ಲ ಒಂದು ವಿಶೇಷತೆಯನ್ನು ಹೊಂದಿರುತ್ತವೆ. ಮೇಷ ರಾಶಿಯವರು ಛಲಗಾರರೆಂದು ಹೇಳಲಾಗುತ್ತದೆ. ಹಾಗೆಯೇ ಮೀನ ರಾಶಿಯವರು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಹಾಗೆಯೆ ಕೆಲವು ರಾಶಿಯ ಹುಡುಗಿಯರು ವಿವಾಹ ನಂತರದಲ್ಲಿ ಪತಿಗೆ ಅದೃಷ್ಟವನ್ನು ತರುತ್ತಾರೆಂದು ಹೇಳಲಾಗುತ್ತದೆ. ಹಾಗಾದರೆ ಯಾವ್ಯಾವ ರಾಶಿಯವರು ಪತಿಗೆ ಅದೃಷ್ಟವನ್ನು ತರುವವರು ಎಂಬುದನ್ನು ತಿಳಿಯೋಣ..

This zodiac signs wife will bring prosperity to husband
Author
Bangalore, First Published Jul 2, 2021, 5:45 PM IST
  • Facebook
  • Twitter
  • Whatsapp

ವಿವಾಹ ಪೂರ್ವದಲ್ಲಿ ವರ ಮತ್ತು ವಧುವಿನ ಜಾತಕಗಳನ್ನು ಹೊಂದಾಣಿಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಉಳಿದೆಲ್ಲ ಸಾಮ್ಯತೆಯ ಜೊತೆಗೆ ವರನಿಂದ ವಧುವಿಗೆ ಮತ್ತು ವಧುವಿಂದ ವರನಿಗೆ ಅದೃಷ್ಟವಿದೆಯೇ ಎಂಬುದನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಜಾತಕದಲ್ಲಿ ಹೊಂದಾಣಿಕೆಯಾಗಿರುವ ಗುಣಗಳು ವಿವಾಹಕ್ಕೆ ಯೋಗ್ಯವೆಂದಾದರೆ ಅದರ ಜೊತೆಗೆ ಪರಸ್ಪರ ಅದೃಷ್ಟವು ಒಲಿದುಬರುವ ಯೋಗವಿದ್ದರೆ ಅಂಥ ಜೋಡಿಗಳು ಉತ್ತಮ ದಾಂಪತ್ಯ ಜೀವನವನ್ನು ಸಾಗಿಸುತ್ತಾರೆ. ಕೆಲವು ರಾಶಿಯ ಮಹಿಳೆಯರು ಪತಿಗೆ ಅದೃಷ್ಟವನ್ನು ತರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ರಾಶಿ, ನಕ್ಷತ್ರ, ಗಣಕೂಟ ಇತ್ಯಾದಿ ಹಲವಾರು ಅಂಶಗಳನ್ನು ಹೊಂದಾಣಿಕೆ ಮಾಡಿ ಜಾತಕವು ವಿವಾಹಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತಾರೆ. ಎಲ್ಲವೂ ಕೂಡಿ ಬಂದು ಪತಿಗೆ ಅದೃಷ್ಟ ತರುವ ರಾಶಿಯು ಅದಾಗಿದ್ದರೆ ಫಲಿತಾಂಶ ಅತ್ಯುತ್ತಮ. ಹಾಗಾಗಿ ಯಾವ ರಾಶಿಯ ಹುಡುಗಿಯು ಸಂಗಾತಿಗೆ ಅದೃಷ್ಟವನ್ನು ತಂದುಕೊಡುತ್ತಾಳೆ ಎಂಬುದನ್ನು ತಿಳಿಯುವುದು ಅವಶ್ಯಕ.  

ಇದನ್ನು ಓದಿ: ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..! 

ರಾಶಿಚಕ್ರದಲ್ಲಿ ಪ್ರತಿಯೊಂದು ರಾಶಿಗೆ ಅದರದ್ದೇ ಆದ ವಿಶೇಷ ಗುಣವಿರುತ್ತದೆ. ಅದು ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಪ್ರತಿ ರಾಶಿಯು ವಿಶೇಷವೆಂದು ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಯವರಿಂದ ಅವರ ಸಂಗಾತಿಗೆ ಅದೃಷ್ಟ ಬರುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ....

ಕರ್ಕಾಟಕ ರಾಶಿ
ಈ ರಾಶಿಯ ಹುಡುಗಿಯರು ಉತ್ತಮ ಅದೃಷ್ಟದ ಜೊತೆಗೆ ಜನಿಸಿರುತ್ತಾರೆ. ಈ ರಾಶಿಯ ಸ್ತ್ರೀ ವಿವಾಹವಾಗಿ ಕಾಲಿಡುವ ಮನೆಯಲ್ಲಿ ಧನ-ಧಾನ್ಯ ವೃದ್ಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಕರ್ಕಾಟಕ ರಾಶಿಯ ಮಹಿಳೆಯರು ತಮ್ಮ ಪತಿಗೆ ಸದಾ ಪ್ರಾಮಾಣಿಕರಾಗಿರುತ್ತಾರೆ. ಮನೆಯ ಇತರರು ಖುಷಿಯಾಗಿರುವಂತೆ ನೋಡಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಕಷ್ಟದ ಸಮಯದಲ್ಲಿ ಪತಿಯ ಜೊತೆಗಿದ್ದು ಸಂಕಷ್ಟವನ್ನು ಎದುರಿಸುವ ಮನೋಭಾವ ಈ ರಾಶಿಯವರದ್ದಾಗಿರುತ್ತದೆ.

ಇದನ್ನು ಓದಿ: ಕಾಳ ಸರ್ಪ ಎಂಬುದು ದೋಷವೇ, ಯೋಗವೇ...? 

ಮಕರ ರಾಶಿ
ಈ ರಾಶಿಯ ಹುಡುಗಿಯರು ಹೆಚ್ಚು ಬುದ್ಧಿವಂತರು ಮತ್ತು ಜವಾಬ್ದಾರಿಯುಳ್ಳವರಾಗಿರುತ್ತಾರೆ. ಈ ರಾಶಿಯವರು ತಾವು ಖುಷಿಯಾಗಿರುವುದು ಅಷ್ಟೇ ಅಲ್ಲದೆ ಅವರ ಸುತ್ತಮುತ್ತ ಇರುವ ಇತರರು ಸಹ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಈ ರಾಶಿಯ ಮಹಿಳೆಯರು ಪತಿಗೆ ಅದೃಷ್ಟವನ್ನು ತರುತ್ತಾರೆಂದು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ಪತಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸ್ಥೈರ್ಯವನ್ನು ತುಂಬುವವರು ಇವರಾಗಿರುತ್ತಾರೆ.
 ಕುಂಭ ರಾಶಿ
ಈ ರಾಶಿಯ ಹುಡುಗಿಯರು ಅತ್ಯಂತ ಕಾಳಜಿಯುಳ್ಳವರು, ಸೂಕ್ಷ್ಮಮತಿಗಳು, ವಿಚಾರವಂತರು, ಹೆಚ್ಚಿನ ಆತ್ಮವಿಶ್ವಾಸವ ಉಳ್ಳವರಾಗಿರುತ್ತಾರೆ. ಈ ರಾಶಿಯ ಸ್ತ್ರೀಯರು ಹೋದ ಕಡೆಗೆಲ್ಲ ಖುಷಿಯನ್ನು ಬೀರುತ್ತಾರೆಂದು ಹೇಳಲಾಗುತ್ತದೆ. ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಸಹ ಪತಿಯ ಜೊತೆಯನ್ನು ಈ ರಾಶಿಯ ಮಹಿಳೆಯರು ಬಿಡುವುದಿಲ್ಲ. ಪತಿಯ ಜೊತೆಗಿದ್ದು ಎಲ್ಲವನ್ನೂ ನಿಭಾಯಿಸುವ ಶಕ್ತಿ ಇವರಿಗಿರುತ್ತದೆ. ಪತಿಯ ಸಂತೋಷದ ಜೊತೆಗೆ ಕುಟುಂಬದ ಇತರರು ಖುಷಿಯಾಗಿರುವಂತೆ ನೋಡಿಕೊಳ್ಳುವ ಗುಣ ಇವರಲ್ಲಿರುತ್ತದೆ. ಹಾಗಾಗಿ ಕುಟುಂಬದವರ ಕಾಳಜಿಯ ಬಗ್ಗೆ ಯೋಚಿಸುತ್ತಿರುತ್ತಾರೆ. ಪತಿ ಮತ್ತು ಕುಟುಂಬಕ್ಕೆ ಈ ರಾಶಿಯ ಹುಡುಗಿಯರು ಅತ್ಯಂತ ಶುಭವನ್ನು ತರುತ್ತಾರೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೆಚ್ಚು ಸೂಕ್ಷ್ಮಮತಿಗಳು, ಯಾರಿವರು..? 

ಮೀನ ರಾಶಿ
ಈ ರಾಶಿಯ ಹುಡುಗಿಯರು ಅತ್ಯಂತ ಸೂಕ್ಷ್ಮ ಸ್ವಭಾವದವರು ಮತ್ತು ಇತರರ ಕಾಳಜಿ ಮಾಡುವವರಾಗಿರುತ್ತಾರೆ. ಪತಿಯ ಬೇಡಿಕೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಈ ರಾಶಿಯ ಮಹಿಳೆಯರು ಪತಿಗೆ ಭಾಗ್ಯವನ್ನು ತರುತ್ತಾರೆಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗಿಯನ್ನು ವಿವಾಹವಾಗುವ ಹುಡುಗನು ಜೀವನದಲ್ಲಿ ಯಶಸ್ಸನ್ನು ಗಳಿಸುವುದಲ್ಲದೆ, ಉನ್ನತ ಮಟ್ಟಕ್ಕೇರುತ್ತಾನೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹೇರಳ ಧನ-ಸಂಪತ್ತುಗಳನ್ನು ಗಳಿಸುತ್ತಾನೆಂದು ಸಹ ಹೇಳಲಾಗುತ್ತದೆ.  

Follow Us:
Download App:
  • android
  • ios