ಸಂಖ್ಯಾಶಾಸ್ತ್ರದ ಈ ನಂಬರ್‌ಗೆ ಇವರು ಸೂಪರ್ ಜೋಡಿ..!

ಸಂಖ್ಯಾಶಾಸ್ತ್ರದಲ್ಲಿ ಜನಿಸಿದ ದಿನಾಂಕವನ್ನು ಆಧರಿಸಿ ವ್ಯಕ್ತಿಯ ಗುಣ-ಸ್ವಭಾವ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಜನಿಸಿದ ದಿನಾಂಕದಿಂದ ಬರುವ ಪಾದಾಂಕದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಮತ್ತು ಹೊಂದಿಕೆಯಾಗಬಲ್ಲ ಸಂಗಾತಿಯ ಬಗ್ಗೆ ಸಹ ತಿಳಿಯಬಹುದಾಗಿದೆ. ಹಾಗಾದರೆ ಯಾವ ಪಾದಾಂಕದ ವ್ಯಕ್ತಿಗಳು ಪರಸ್ಪರ ಉತ್ತಮ ಜೋಡಿಯಾಗುತ್ತಾರೆ ಮತ್ತು ಆಗುವುದಿಲ್ಲವೆಂಬುದನ್ನು ತಿಳಿಯೋಣ.
 

In Numerology these number pair are very good

ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು ಆಧರಿಸಿ ವ್ಯಕ್ತಿಯ ಸ್ವಭಾವ ಮತ್ತು ಗುಣ ಲಕ್ಷಣಗಳನ್ನು ತಿಳಿದುಕೊಳ್ಳಬಹುದಾಗಿದೆ. ಜನ್ಮ ದಿನಾಂಕವನ್ನು ಕೂಡಿದಾಗ ಬರುವ ಸಂಖ್ಯೆಯನ್ನು ಪಾದಾಂಕವೆಂದು ಕರೆಯಲಾಗುತ್ತದೆ. ಪಾದಾಂಕವನ್ನು ಆಧರಿಸಿ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯುವುದಲ್ಲದೆ, ಯಾವ ಪಾದಾಂಕದವರು ಉತ್ತಮ ಸಂಗಾಂತಿಯಾಗುತ್ತಾರೆ ಎಂಬುದನ್ನು ಸಹ ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಜನ್ಮ ದಿನಾಂಕವು ಯಾವುದೇ ತಿಂಗಳ 4ನೇ ತಾರೀಖು ಆಗಿದ್ದರೆ, ಪಾದಾಂಕವು 4 ಆಗಿರುತ್ತದೆ. ಹಾಗೆಯೇ ಹುಟ್ಟಿದ ದಿನ ತಿಂಗಳ 10ನೇ ತಾರೀಖಿನಿಂದ 31ನೇ ತಾರೀಖಿನಲ್ಲಾಗಿದ್ದರೆ ಆಗ ವ್ಯಕ್ತಿಯ ಪಾದಾಂಕವನ್ನು ತಿಳಿಯಬೇಕೆಂದರೆ ಹುಟ್ಟಿದ ದಿನಾಂಕವನ್ನು ಕೂಡಿಸಬೇಕು. ಅಂದರೆ ಹುಟ್ಟಿದ ದಿನ 25 ಆಗಿದ್ದಲ್ಲಿ (2+5=7) ಪಾದಾಂಕವು 7 ಆಗುತ್ತದೆ. ಹೀಗೆ ಬರುವ ಸಂಖ್ಯೆಯನ್ನು ಪಾದಾಂಕವೆಂದು ಹೇಳಲಾಗುತ್ತದೆ. ಪರಸ್ಪರ ಯಾವ ಪಾದಾಂಕವನ್ನು ಹೊಂದಿದ್ದರೆ ಉತ್ತಮ ಸಂಗಾತಿಯಾಗ ಬಲ್ಲರು ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಕಾಳ ಸರ್ಪ ಎಂಬುದು ದೋಷವೇ, ಯೋಗವೇ...? 

ಪಾದಾಂಕ 1 – 

ಪಾದಾಂಕ 1ರ ವ್ಯಕ್ತಿಗಳಿಗೆ ಪಾದಾಂಕ 2,3,7 ಮತ್ತು 9ರ ವ್ಯಕ್ತಿಗಳು ಉತ್ತಮ ಸಂಗಾತಿಯಾಗಬಲ್ಲರು ಎಂದು ಸಂಖ್ಯಾಶಾಸ್ತ್ರ ಸೂಚಿಸುತ್ತದೆ. ಹಾಗೆಯೇ ಪಾದಾಂಕ 5 ಮತ್ತು 6 ವ್ಯಕ್ತಿಗಳ ಜೊತೆ ಸಂಬಂಧ ಅಷ್ಟಾಗಿ ಸರಿಯಿರುವುದಿಲ್ಲ. ಹಾಗಾಗಿ 5 ಮತ್ತು 6ರ ಪಾದಾಂಕದವರು 1 ಪಾದಾಂಕದವರ ಜೋಡಿ ಸರಿಹೊಂದುವುದಿಲ್ಲವೆಂದು ಹೇಳಲಾಗುತ್ತದೆ.

ಪಾದಾಂಕ 2 –

ಪಾದಾಂಕ 2 ರ ವ್ಯಕ್ತಿಗಳಿಗೆ 1, 3, 4 ಮತ್ತು 6 ಪಾದಾಂಕ ಹೊಂದಿರುವ ವ್ಯಕ್ತಿಗಳು ಸಂಗಾತಿಯಾದರೆ ಜೀವನ ಉತ್ತಮವಾಗಿರುತ್ತದೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಅದೇ ಪಾದಾಂಕ 5 ಮತ್ತು 8ರ ವ್ಯಕ್ತಿಗಳ ಜೊತೆ ಪರಸ್ಪರ ಹೊಂದಿಕೆಯಾಗುವುದಿಲ್ಲ. ಈ ಪಾದಾಂಕದವರ ಜೋಡಿ ಸುಖವಾಗಿ ಬಾಳಿ-ಬದುಕುವುದು ಕಷ್ಟವಾಗುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ.

ಪಾದಾಂಕ 3 –

ಪಾದಾಂಕ 3ರ ವ್ಯಕ್ತಿಗಳ ಜೊತೆ 1, 2, 5, ಮತ್ತು 7ರ ಪಾದಾಂಕದವರು ಉತ್ತಮ ಜೊತೆಗಾರರಾಗಬಲ್ಲರು. ಈ ಪಾದಾಂಕದವರು ಜೀವನದುದ್ದಕ್ಕೂ ಸುಖದಿಂದ ಬಾಳಬಲ್ಲರೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಪಾದಾಂಕ 4 ಮತ್ತು 8ರ ವ್ಯಕ್ತಿಗಳ ಜೊತೆ ಪರಸ್ಪರ ಹೊಂದಾಣಿಕೆಯಾಗುವುದಿಲ್ಲವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೆಚ್ಚು ಸೂಕ್ಷ್ಮಮತಿಗಳು, ಯಾರಿವರು..? 

ಪಾದಾಂಕ 4 –

ಪಾದಾಂಕ  4ರ ವ್ಯಕ್ತಿಗಳು ಪಾದಾಂಕ 1, 2, 7 ಮತ್ತು 9ರ ವ್ಯಕ್ತಿಗಳ ಜೊತೆ ಹೊಂದಾಣಿಕೆ ಚೆನ್ನಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಈ ಪಾದಾಂಕದ ವ್ಯಕ್ತಿಗಳು ಪರಸ್ಪರ ಸಾಮರಸ್ಯದಿಂದ ಇರಬಲ್ಲರೆಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಅದೇ ಪಾದಾಂಕ 3 ಮತ್ತು 5ರ ವ್ಯಕ್ತಿಗಳ ಜೊತೆ ಸಾಮರಸ್ಯವಿರುವುದಿಲ್ಲ, ಹಾಗಾಗಿ ಇದು ಉತ್ತಮ ಜೋಡಿಯಾಗುವುದಿಲ್ಲವೆಂದು ಹೇಳಲಾಗುತ್ತದೆ.

ಪಾದಾಂಕ 5 –

ಪಾದಾಂಕ 5ರ ವ್ಯಕ್ತಿಗಳಿಗೆ ಪಾದಾಂಕ 3,  9, 1, 6, 7 ಮತ್ತು 8ರ ವ್ಯಕ್ತಿಗಳು ಉತ್ತಮ ಸಂಗಾತಿಯಾಗಬಲ್ಲರೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ವ್ಯಕ್ತಿಗಳಲ್ಲಿ ಪರಸ್ಪರ ಹೊಂದಾಣಿಕೆ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಪಾದಾಂಕ 2 ಮತ್ತು 4ರ ವ್ಯಕ್ತಿಗಳ ಜೊತೆ ಪರಸ್ಪರ ಹೊಂದಾಣಿಕೆಯಾಗುವುದಿಲ್ಲವೆಂದು ಹೇಳಲಾಗುತ್ತದೆ.

ಪಾದಾಂಕ 6 –

ಪಾದಾಂಕ 6ರ ವ್ಯಕ್ತಿಗಳಿಗೆ ಪಾದಾಂಕ 3, 2, 4, 5 ಮತ್ತು 6ರ ವ್ಯಕ್ತಿಗಳ ಜೊತೆಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳ ಜೋಡಿ ಪರಸ್ಪರ ಹೊಂದಿಕೊಂಡು ಹೋಗುವ ಸ್ವಭಾವವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಪಾದಾಂಕ 1 ಮತ್ತು 8ರ ವ್ಯಕ್ತಿಗಳೊಂದಿಗೆ ಹೊಂದಿಕೆಯಾಗುವುದಿಲ್ಲವೆಂದು ಹೇಳಲಾಗುತ್ತದೆ.

ಪಾದಾಂಕ 7 –

ಪಾದಾಂಕ 7ರ ವ್ಯಕ್ತಿಗಳಿಗೆ ಪಾದಾಂಕ 2, 6, 3, 5 ಮತ್ತು 8ರ ವ್ಯಕ್ತಿಗಳ ಜೊತೆ ಜೀವನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದೇ ಪಾದಾಂಕ 1 ಮತ್ತು 9ರ ವ್ಯಕ್ತಿಗಳ ಜೊತೆ ಹೊಂದಾಣಿಕೆ ಆಗಿಬರುವುದಿಲ್ಲವೆಂದು ಹೇಳಲಾಗುತ್ತದೆ.

ಪಾದಾಂಕ 8 –

ಪಾದಾಂಕ 8ರ ವ್ಯಕ್ತಿಗಳಿಗೆ 4,2, 5, 7 ಮತ್ತು 9ರ ವ್ಯಕ್ತಿಗಳು ಉತ್ತಮ ಜೋಡಿಯಾಗುತ್ತಾರೆಂದು ಹೇಳಲಾಗುತ್ತದೆ. ಪಾದಾಂಕ 3 ಮತ್ತು 6ರ ವ್ಯಕ್ತಿಗಳು ಪಾದಾಂಕ 8ರ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಉತ್ತವಾಗಿರುವುದಿಲ್ಲವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಪಾದಾಂಕ 9 –

ಪಾದಾಂಕ 9ರ ವ್ಯಕ್ತಿಗಳಿಗೆ 3, 6, 2, 4, 5 ಮತ್ತು 8ರ ವ್ಯಕ್ತಿಗಳ ಜೊತೆ ಜೋಡಿ ಉತ್ತಮವಾಗಿರುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಅದೇ ಪಾದಾಂಕ 9ರ ವ್ಯಕ್ತಿಗಳಿಗೆ ಪಾದಾಂಕ 1 ಮತ್ತು 7ರ ವ್ಯಕ್ತಿಗಳ ಜೊತೆ ಹೊಂದಾಣಿಕೆ ಉತ್ತಮವಾಗಿರುವುದಿಲ್ಲವೆಂದು ಹೇಳಲಾಗುತ್ತದೆ.

Latest Videos
Follow Us:
Download App:
  • android
  • ios