Parashuram Janmotsav: ಶ್ರೀರಾಮನಿಗಿಂತ ಮೊದಲೇ ಈ ರಾಮ ಅವತಾರ ತಾಳಿದ್ದ!

ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗಿಂತ ಮುಂಚೆಯೇ ಈ ರಾಮನಾಗಿ ಅವತಾರ ತಾಳಿದ್ದ ವಿಷ್ಣು. ಮೊದಲ ರಾಮ ಯಾರು ಮತ್ತು ಅವನ ಅವತಾರ ಯಾವಾಗ? ಅವನನ್ನು ಹೇಗೆ ಪೂಜಿಸಲಾಗುತ್ತದೆ ಎಂಬುದರ ವಿವರ ಇಲ್ಲಿದೆ..

This Ram was incarnated before Maryadapurushottam know when the first incarnation of Ram happened skr

ರಘುನಂದನ ಮರ್ಯಾದಾ ಪುರುಷೋತ್ತಮ ಶ್ರೀರಾಮ್ ವಿಷ್ಣುವಿನ ಏಳನೇ ಅವತಾರ. ಆದರೆ, ಇದಕ್ಕೂ ಮುನ್ನವೇ ವಿಷ್ಣುವು ರಾಮನೆಂಬ ಹೆಸರಲ್ಲಿ ಅವತಾರ ತಾಳಿದ್ದ. ಹೌದು, ಜಮದಗ್ನಿ ಋಷಿಯ ಮಗನಾಗಿ ಅವತರಿಸಿದ ವಿಷ್ಣುವಿಗೆ ರಾಮ ಎಂದು ಹೆಸರಿಡಲಾಗಿತ್ತು. ಆತ ಶಿವನಿಂದ ಕೊಡಲಿಯನ್ನು ಪಡೆದ ನಂತರ, ಅವನಿಗೆ ಪರಶುರಾಮ ಎಂದು ಹೆಸರಿಸಲಾಯಿತು. 

ಹೌದು, ಪರಶುರಾಮ ವಿಷ್ಣುವಿನ ಆರನೇ ಅವತಾರ. ಆತ ವೈಶಾಖ ಶುಕ್ಲ ತೃತೀಯ ಅಂದರೆ ಅಕ್ಷಯ ತೃತೀಯದಂದು ಜನಿಸಿದನು. ಹೀಗಾಗಿ ಪ್ರತಿ ವರ್ಷ ಅಕ್ಷಯ ತೃತೀಯದಂದು ಪರಶುರಾಮ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ.  ದಿನದ ಪೂಜೆಯ ಶುಭ ಸಮಯ ಯಾವುದು ಮತ್ತು ಪರಶುರಾಮ ಜನ್ಮೋತ್ಸವದ ಪೂಜಾ ವಿಧಾನ ಯಾವುದು ಎಂಬ ವಿವರ ಇಲ್ಲಿದೆ.

ಪರಶುರಾಮ ಜನ್ಮೋತ್ಸವ ಮುಹೂರ್ತ
ವೈಶಾಖ ಶುಕ್ಲ ತೃತೀಯವು ಏಪ್ರಿಲ್ 22 ಶನಿವಾರದಂದು ಬೆಳಿಗ್ಗೆ 7.49 ರಿಂದ ಪ್ರಾರಂಭವಾಗುತ್ತದೆ ಮತ್ತು ಈ ತಿಥಿಯು ಏಪ್ರಿಲ್ 23ರಂದು ಬೆಳಿಗ್ಗೆ 7.47 ಕ್ಕೆ ಅಂತ್ಯವಾಗುತ್ತದೆ. ಪರಶುರಾಮನು ಪ್ರದೋಷಕಾಲದಲ್ಲಿ ಜನಿಸಿದನು. ಅದಕ್ಕಾಗಿಯೇ ಪರಶುರಾಮ ಜಯಂತಿಯನ್ನು ಅದೇ ಸಮಯದಲ್ಲಿ ಆಚರಿಸಲಾಗುತ್ತದೆ ಮತ್ತು ಪರಶುರಾಮ ಜನ್ಮೋತ್ಸವವನ್ನು ಈ ಬಾರಿ ಏಪ್ರಿಲ್ 22ರಂದು ಪ್ರದೋಷಕಾಲದಲ್ಲಿ ಪೂಜಿಸಲಾಗುತ್ತದೆ. 

ಪರಶುರಾಮನು ಅಮರ ಮತ್ತು ವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿಯ ಗುರುವಾಗುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ ಆತನ ಜನ್ಮದಿನವನ್ನು ಜಯಂತಿ ಎನ್ನದೆ ಜನ್ಮೋತ್ಸವ ಎನ್ನಲಾಗುತ್ತದೆ. ಉಡುಪಿ ಬಳಿಯ ಪಾಜಕದಲ್ಲಿ ಇವನ ಪ್ರಸಿದ್ಧ ದೇವಾಲಯವಿದೆ. ಏಕಾಗ್ರ ಮನಸ್ಸಿನಿಂದ ಪರಶುರಾಮನನ್ನು ಪೂಜಿಸುವುದರಿಂದ ಅಪೇಕ್ಷಿತ ಫಲ ಸಿಗುತ್ತದೆ ಎಂದು ನಂಬಲಾಗಿದೆ.

ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..

ಪರಶುರಾಮ ಜನ್ಮೋತ್ಸವ ಪೂಜಾ ವಿಧಾನ
1. ಬ್ರಹ್ಮ ಮುಹೂರ್ತದಲ್ಲಿ ಎದ್ದು ಗಂಗಾಜಲ ಮಿಶ್ರಿತ ನೀರಿನಿಂದ ಸ್ನಾನ ಮಾಡಿ.
2. ವಿಷ್ಣುವನ್ನು ಆರಾಧಿಸಿ.
3. ಸೂರ್ಯ ದೇವರನ್ನು ಸ್ಮರಿಸಿ, ನಂತರ ಪರಶುರಾಮನನ್ನು ಧ್ಯಾನಿಸಿ.
4. ಹಳದಿ ಬಣ್ಣದ ಹೂಗಳು, ಸಿಹಿತಿಂಡಿಗಳು, ಧೂಪದ್ರವ್ಯ, ದೀಪಗಳನ್ನು ಬೆಳಗಿಸಿ.
5. ಆರತಿ ಮಾಡುವ ಮೂಲಕ ಪ್ರಾರ್ಥಿಸಿ. ನಿಮ್ಮ ಕೈಲಾದಷ್ಟು ದಾನ ಮಾಡಿ. ಪ್ರಸಾದ ವಿತರಿಸಿ.
6. ಪ್ರದೋಷಕಾಲದಲ್ಲಿ ಮತ್ತೆ ಪೂಜೆ ಮಾಡಿ.

ಪರಶುರಾಮನ ಕಥೆ ಇಲ್ಲಿದೆ..
ಧಾರ್ಮಿಕ ಗ್ರಂಥಗಳ ಪ್ರಕಾರ, ಪ್ರಾಚೀನ ಕಾಲದಲ್ಲಿ, ಸಹಸ್ತ್ರಬಾಹು ಎಂಬ ಕ್ರೂರ ರಾಜನು ಮಾಹಿಷ್ಮತಿ ನಗರದಲ್ಲಿ ಆಳ್ವಿಕೆ ಮಾಡುತ್ತಿದ್ದನು. ಇವನ ದಬ್ಬಾಳಿಕೆಯಿಂದಾಗಿ ಜನರು ಬಹಳ ಕಷ್ಟದಲ್ಲಿ ಬದುಕುತ್ತಿದ್ದರು. ಅದೇ ಸಮಯದಲ್ಲಿ ಋಷಿ ಜಮದಗ್ನಿ ಮತ್ತು ತಾಯಿ ರೇಣುಕೆ ಮಗನನ್ನು ಪಡೆಯಲು ಮಹಾ ಯಾಗವನ್ನು ಮಾಡಿದರು.
ಇದರಿಂದ ಸಂತುಷ್ಟನಾದ ಇಂದ್ರನು ಅವರಿಗೆ ಪ್ರಕಾಶಮಾನವಾದ ಮಗನನ್ನು ಹೊಂದುವ ವರವನ್ನು ನೀಡಿದನು.

Akshaya Tritiya 2023: ಚಿನ್ನ ದುಬಾರಿ ಎಂದರೆ, ಅದೃಷ್ಟಕ್ಕಾಗಿ ಈ ಮಂಗಳಕರ ವಸ್ತುಗಳನ್ನು ಖರೀದಿಸಿ

ಇಲ್ಲಿ, ಭೂಮಿ ತಾಯಿಗೆ ಸಹಸ್ತ್ರಬಾಹುವಿನಿಂದ ಮಕ್ಕಳಿಗಾಗುತ್ತಿದ್ದ ಕಷ್ಟವನ್ನು ನೋಡಲಾಗಲಿಲ್ಲ, ಆದ್ದರಿಂದ ಅವಳು ಪ್ರಪಂಚದ ರಕ್ಷಕನಾದ ವಿಷ್ಣುವನ್ನು ಸಂಪರ್ಕಿಸಿದಳು. ಅವಳು ಭೂಮಿ ಮೇಲಿನ ಪರಿಸ್ಥಿತಿಯನ್ನು ದೇವರಿಗೆ ಹೇಳಿದಳು. ವಿಷ್ಣುವು ಶೀಘ್ರದಲ್ಲೇ ಜನರ ದುಃಖವನ್ನು ತೊಡೆದುಹಾಕಲು ಭರವಸೆ ನೀಡಿದನು. 
ನಂತರ ಅಕ್ಷಯ ತೃತೀಯ ದಿನದಂದು ಭಗವಾನ್ ವಿಷ್ಣುವು  ಋಷಿ ಜಮದಗ್ನಿ ಮತ್ತು ತಾಯಿ ರೇಣುಕೆಯ ಮಗನಾಗಿ ಅವತರಿಸಿದನು. ಋಷಿ ಜಮದಗ್ನಿ ಅವನಿಗೆ ರಾಮ ಎಂದು ಹೆಸರಿಸಿದನು, ಭಗವಾನ್ ರಾಮನು ಶಿವನ ಕುರಿತಾಗಿ ತಪಸ್ಸು ಮಾಡಿ ಅವನಿಂದ ಖಡ್ಗ ಆಯುಧಗಳನ್ನು ಪಡೆದನು. ಇದರ ನಂತರ ಅವರ ಹೆಸರನ್ನು ಪರಶುರಾಮ ಎಂದು ಬದಲಾಯಿಸಲಾಯಿತು. ನಂತರ ಅವನು ಸಹಸ್ತ್ರಬಾಹುವನ್ನು ಕೊಂದು ಭೂಮಿಯನ್ನು ಪಾಪಗಳಿಂದ ಮುಕ್ತಗೊಳಿಸಿದನು. 

Latest Videos
Follow Us:
Download App:
  • android
  • ios