Zodiac Sign: ಈ ರಾಶಿಯವರಲ್ಲಿ ಹುಳುಕು ಬುದ್ಧಿಯೇ ಇರೋಲ್ಲ, ನಿಮ್ಮ ರಾಶಿಯೂ ಇದ್ಯಾ?
ಜನರ ಆಶಯ, ಆಂತರಿಕ ಉದ್ದೇಶಗಳು ಶುದ್ಧವಾಗಿರುವುದಿಲ್ಲ. ಆದರೆ, ಕೆಲವು ಜನರು ಹಾಗಲ್ಲ. ಅವರ ಧ್ಯೇಯೋದ್ದೇಶಗಳು ಸದಾಕಾಲ ಉತ್ತಮ ಆಶಯಗಳಿಂದ ಕೂಡಿರುತ್ತವೆ. ರಾಶಿಚಕ್ರದ ಪೈಕಿ 4 ರಾಶಿಗಳ ಜನರಲ್ಲಿ ಮಾತ್ರ ಈ ಗುಣ ಕಂಡುಬರುತ್ತದೆ.
ನಮ್ಮ ನಡುವೆ ವಿಭಿನ್ನ ರೀತಿಯ ಜನರಿದ್ದಾರೆ. ಅವರ ರೀತಿ-ನೀತಿ, ಜೀವನದ ಆದ್ಯತೆ, ಸಂಸ್ಕೃತಿ, ಸಂಸ್ಕಾರಗಳು ವಿಭಿನ್ನವಾಗಿವೆ. ಜನರಲ್ಲಿ ಹಲವು ರೀತಿಯ ಮನಸ್ಥಿತಿ ಕಂಡುಬರುತ್ತದೆ. ಎಷ್ಟೋ ಬಾರಿ, ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಸುಲಭವಲ್ಲ. ಅವರು ಹೇಳುವುದೇ ಒಂದು, ಮಾಡುವುದೇ ಒಂದು ಎಂಬಂತೆ ಇರುತ್ತಾರೆ. ಮೇಲ್ನೋಟಕ್ಕೆ ಚಂದವಾಗಿ ಮಾತನಾಡಿ, ಹಿಂದಿನಿಂದ ಕೇಡು ಬಗೆಯುತ್ತಾರೆ. ಅತ್ಯಂತ ಚಾಣಾಕ್ಷರೂ, ದ್ವೇಷ ಹೊಂದಿರುವವರೂ, ಅಸೂಯಾಪರರೂ ಇರುತ್ತಾರೆ. ಹೀಗಾಗಿ, ಸಮಾಜದಲ್ಲಿ ಅಪರಾಧಗಳೂ ಸಾಕಷ್ಟಿವೆ. ಆದರೆ, ಎಲ್ಲರ ಮನಸ್ಸಿನಲ್ಲೂ ಕೆಟ್ಟ ವಿಚಾರಗಳೇ ತುಂಬಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗುಣ ಕೂಡ ರಾಶಿಚಕ್ರವನ್ನು ಆಧರಿಸಿರುತ್ತದೆ. ಕೆಲವು ರಾಶಿಗಳು ಅತ್ಯಂತ ಸಕಾರಾತ್ಮಕವಾಗಿರುತ್ತವೆ. ಈ ಜನರ ಮನಸ್ಸೂ ಸಹ ಸದಾಕಾಲ ಉತ್ತಮ ಉದ್ದೇಶಗಳಿಂದ ಕೂಡಿರುತ್ತದೆ. ಅಂತರಾಳದಿಂದ ಇವರು ಉತ್ತಮ ಆಶಯ ಹೊಂದಿರುತ್ತಾರೆ. ಕೆಲವೊಮ್ಮೆ ಇವರ ಬಗ್ಗೆ ತಪ್ಪು ಅಭಿಪ್ರಾಯಗಳು ಇರಬಹುದಾದರೂ ಇವರು ಒಳ್ಳೆಯ ಉದ್ದೇಶದಿಂದಲೇ ಯಾವುದಾದರೊಂದು ಕಾರ್ಯಕ್ಕೆ ಮುಂದಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
• ಕರ್ಕಾಟಕ (Cancer)
ಆರೈಕೆ (Nurture) ಮಾಡುವ ಮನೋಧರ್ಮದ ಕರ್ಕಾಟಕ ರಾಶಿಯ ಜನರ ಆಂತರ್ಯ ತುಂಬ ಶುದ್ಧ (Pure) ವಾಗಿರುತ್ತದೆ. ಇವರು ಸಹಾನುಭೂತಿಯಿಂದ (Empathy) ಕೂಡಿರುತ್ತಾರೆ. ತಮ್ಮ ಸಮೀಪದವರ ಭಾವನೆಗಳನ್ನು ಅಂತಃಪ್ರಜ್ಞೆಯಿಂದ (Intuition) ಅರಿತುಕೊಳ್ಳುತ್ತಾರೆ. ಈ ಗುಣವೇ ಇವರನ್ನು ಆಳವಾದ ಕಂಪ್ಯಾಷನೇಟ್ (Compassionate) ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಇತರರ ಅಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ಯತ್ನಿಸುತ್ತಾರೆ. ತಮ್ಮವರು ಸುಖವಾಗಿರಲೆಂದು, ಕಂಫರ್ಟ್ ಆಗಿರಲೆಂದು ಬಯಸುತ್ತಾರೆ. ಇವರ ಪ್ರತಿಯೊಂದು ಕಾರ್ಯವೂ ಸೌಹಾರ್ದತೆ ಮತ್ತು ಆರೈಕೆ ಮಾಡುವ ಗುಣದಿಂದ ಕೂಡಿರುತ್ತದೆ.
ಜಾತಕಗಳಲ್ಲಿ ಹೊಂದಾಣಿಕೆ ಇಲ್ವೇ? ಈ ವಿಧಾನಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಬೋದು ನೋಡಿ
• ತುಲಾ (Libra)
ರಾಜತಾಂತ್ರಿಕತೆಗೆ (Diplomacy) ಹೆಸರಾಗಿರುವ ರಾಶಿ ತುಲಾ. ಇವರದ್ದು ನ್ಯಾಯಬದ್ಧವಾಗಿರುವ ಮನಸ್ಥಿತಿ. ವಿಭಿನ್ನ ದೃಷ್ಟಿಕೋನಗಳಿಂದ ಯಾವುದೇ ಪರಿಸ್ಥಿತಿಯನ್ನು ವಿಮರ್ಶಿಸುವ ವಿಶಿಷ್ಟ ಗುಣ ಇವರಲ್ಲಿದೆ. ಇವರು ಗಡಿಬಿಡಿಯಲ್ಲಿ ಅಥವಾ ಆತುರಕ್ಕೆ ಬಿದ್ದು, ಭಾವನಾತ್ಮಕವಾಗಿ ದುರ್ಬಲವಾದ ಕ್ಷಣದಲ್ಲಿ ಯಾವುದೇ ನಿರ್ಧಾರ (Decision) ಕೈಗೊಳ್ಳುವುದಿಲ್ಲ. ಹೀಗಾಗಿ, ಇವರ ನಡೆನುಡಿ ಸಮತೋಲನದಿಂದ (Balance) ಕೂಡಿರುತ್ತದೆ. ಸಂಬಂಧಗಳು (Relation) ಮತ್ತು ತಮ್ಮ ಸುತ್ತಲಿನ ಜನರೊಂದಿಗೆ ಸೌಹಾರ್ದ ಮತ್ತು ಶಾಂತಿಯುತ ಬಾಂಧವ್ಯ ಹೊಂದುವುದು ಇವರ ಉದ್ದೇಶವಾಗಿರುತ್ತದೆ. ನ್ಯಾಯ ಮತ್ತು ಸಮಾನತೆಯ ತತ್ವವನ್ನು ಎತ್ತಿಹಿಡಿಯುತ್ತಾರೆ. ಎಲ್ಲರನ್ನೂ ಗೌರವಿಸಬೇಕು ಎನ್ನುವುದು ಇವರ ಧೋರಣೆ.
• ಮೀನ (Pisces)
ಮೀನ ರಾಶಿಯ ಜನ ಸಹಾನುಭೂತಿ ಮತ್ತು ಸೂಕ್ಷ್ಮತೆ (Sensitive) ಹೊಂದಿದ್ದು, ಮತ್ತೊಬ್ಬರನ್ನು ಆಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೊಬ್ಬರ ಭಾವನೆಗಳು (Feelings), ಪರಿಸ್ಥಿತಿ, ಅನುಭವಗಳನ್ನು ಅರಿತುಕೊಳ್ಳುವ ಆಳವಾದ ಸೂಕ್ಷ್ಮ ಗುಣ ಇವರಲ್ಲಿರುತ್ತದೆ. ಇವರು ಕೇವಲ ತಮ್ಮವರ ಬಗ್ಗೆ ಮಾತ್ರವೇ ಪ್ರೀತಿ ತೋರಿಸುವುದಿಲ್ಲ. ಇವರ ಪ್ರೀತಿ ವಿಶ್ವವ್ಯಾಪಿ. ಮಾನವೀಯತೆಯ (Humanity) ತುಡಿತ ಇವರಲ್ಲಿದೆ. ಜನರನ್ನು ನೋವಿನಿಂದ ಮುಕ್ತಗೊಳಿಸಬೇಕು, ಪ್ರೀತಿ, ಕರುಣೆ ಹರಡಬೇಕು ಎನ್ನುವ ನೈಜವಾದ ಭಾವನೆ ಹೊಂದಿರುತ್ತಾರೆ.
ಪದೇ ಪದೇ ಮಾನಸಿಕ ಖಿನ್ನತೆ, ಒತ್ತಡಕ್ಕೆ ಈ ಗ್ರಹಗಳ ದೋಷವೇ ಕಾರಣ
• ಧನು (Sagittarius)
ಧನು ರಾಶಿಯ ಜನ ಆಶಾವಾದಿಗಳು (Optimism). ಸಾಹಸಿ ಧೋರಣೆಯುಳ್ಳವರು. ಇವರಲ್ಲಿ ಆಳವಾದ ಆದರ್ಶದ ಗುಣವಿರುತ್ತದೆ. ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ತುಡಿತವಿರುತ್ತದೆ. ತಮ್ಮ ಸ್ವಾತಂತ್ರ್ಯಕ್ಕೆ ಅತಿಯಾದ ಮಹತ್ವ ನೀಡಿದರೂ ಅತ್ಯಂತ ಸೌಹಾರ್ದದ (Harmony) ಮನೋಸ್ಥಿತಿ ಇವರಲ್ಲಿರುತ್ತದೆ. ಪರೋಪಕಾರಿ ಗುಣವು ಇವರಲ್ಲಿ ಧಾರಾಳವಾಗಿರುತ್ತದೆ. ಮಾನವೀಯ ಉದ್ದೇಶಗಳಿಗಾಗಿ ಕೆಲಸ ಮಾಡುತ್ತಾರೆ. ಎಲ್ಲರೂ ಈ ಜಗತ್ತಿನಲ್ಲಿ ಶಾಂತಿಯಿಂದ, ಪ್ರೀತಿಯಿಂದ (Love) ಬದುಕಬೇಕು ಎನ್ನುವುದು ಇವರ ಆಶಯ.