ಇದು ವೈಶಾಖ ಮಾಸ, ಪುಣ್ಯ ಪ್ರಾಪ್ತಿಗೆ ಮಾಡಿ ಈ ಕೆಲಸ!
Astrology Tips in Kannada: ವೈಶಾಖ ಮಾಸವು ವಿಷ್ಣುವಿಗೆ ಪ್ರಿಯವಾದ ತಿಂಗಳಾಗಿದೆ. ಏಪ್ರಿಲ್ 17ರಿಂದಲೇ ವೈಶಾಖ ಮಾಸ ಪ್ರಾರಂಭವಾಗಿದ್ದು, ಮೇ 15ರ ವರೆಗೆ ಇರಲಿದೆ. ಈ ತಿಂಗಳಿನಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಈ ವೈಶಾಖ ಮಾಸದಂದು ಏನೇನು ಮಾಡಬೇಕು ಎಂಬುದನ್ನು ನೋಡೋಣ.
ನಾವೀಗ ವೈಶಾಖ (Vaisakha) ಮಾಸದಲ್ಲಿದ್ದೇವೆ. ಹಿಂದೂ ಧಾರ್ಮಿಕ ಪಂಚಾಂಗದ (Panchangam) ಅನುಸಾರ ಎರಡನೇ ತಿಂಗಳು ವೈಶಾಖ ಮಾಸವಾಗಿದೆ. ಈ ಮಾಸವು ವಿಷ್ಣುವಿಗೆ (Lord Vishnu) ಪ್ರಿಯವಾಗಿದ್ದು, ವಿಷ್ಣುವಿನ ಪೂಜೆ ಮತ್ತು ಆರಾಧನೆಯನ್ನು ಮಾಡಿದರೆ ದೇವರ ಕೃಪಾಶಿರ್ವಾದಕ್ಕೆ (Blessing) ಪಾತ್ರರಾಗಬಹುದಾಗಿದೆ.
ಈ ತಿಂಗಳೂ ಬಹಳ ಪವಿತ್ರವಾಗಿದ್ದರಿಂದ ತ್ರಿಮೂರ್ತಿಗಳಾದ ವಿಷ್ಣು, ಬ್ರಹ್ಮ, ಮಹೇಶ್ವರ ಆರಾಧನೆ ಮಾಡಿದರೆ ಬಹಳ ಒಳ್ಳೆಯದು. ತ್ರಿಮೂರ್ತಿಗಳ ಕೃಪೆಗೆ ಪಾತ್ರರಾದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹೀಗಾಗಿ ಈ ತಿಂಗಳು ಬೇಕಾಗಿದ್ದನ್ನು ಕೇಳಿ ಒಲಿಸಿಕೊಳ್ಳಲು ಪ್ರಶಸ್ತವಾಗಿವೆ. ಇದಕ್ಕಾಗಿ ಹೆಚ್ಚಿಗೆ ಏನೂ ಮಾಡಬೇಕಿಲ್ಲ. ಭಕ್ತಿಯಿಂದ ತ್ರಿಮೂರ್ತಿಗಳಿಗೆ ಜಲವನ್ನು (Water) ಅರ್ಪಿಸಿ ಪೂಜೆ ಮಾಡಿದರೂ ಸಾಕು. ಇವರು ಪ್ರಸನ್ನರಾಗಿ ಆಶೀರ್ವದಿಸುತ್ತಾರೆ.
ಈ ಮಾಸದಲ್ಲಿ ಏನೆಲ್ಲಾ ಮಾಡಬೇಕು?
ತೀರ್ಥಕ್ಷೇತ್ರಗಳಿಗೆ ಹೋಗಬೇಕೆಂದು ಕೊಂಡಿದ್ದರೆ ಇದು ಸಕಾಲ. ದೇವಸ್ಥಾನಗಳಿಗೆ (Temple), ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು. ಮನಸ್ಸಿನ ಇಚ್ಛೆ ಪೂರ್ಣಗೊಳ್ಳಬೇಕೆಂದರೆ ನೀರನ್ನು ದಾನ ಮಾಡಬೇಕು. ಹೀಗಾಗಿ ಬಹಳಷ್ಟು ಕಡೆ ಈ ತಿಂಗಳಿನಲ್ಲಿ ಮನೆಗಳ ಮುಂದೆ ಕುಡಿಯುವ ನೀರನ್ನು ಇಡಲಾಗುತ್ತದೆ. ದಾರಿಯಲ್ಲಿ ಪ್ರಯಾಣಿಸುವವರು ಬಾಯಾರಿಕೆಯಾದಾಗ ಈ ನೀರನ್ನು ಸೇವಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದರ ಜೊತೆಗೆ ನಿರ್ಗತಿಕರಿಗೆ, ದುರ್ಬಲರಿಗೆ ನೆರವಾಗಬೇಕು. ಅಂದರೆ, ಅವಶ್ಯಕ ವಸ್ತುಗಳು, ಅನ್ನದಾನ ಸೇರಿದಂತೆ ಇನ್ನಿತರ ವಸ್ತುಗಳನ್ನು ದಾನ (Donate) ಮಾಡಬೇಕು. ಈ ರೀತಿ ಮಾಡುವುದರಿಂದ ಮನಸ್ಸಿನ ಇಷ್ಟಗಳು ಕೈಗೂಡಲಿವೆ. ಹಿಂದೆ ಮಾಡಿದಂತಹ ಪಾಪಕರ್ಮಗಳನ್ನು ಕಳೆದುಕೊಳ್ಳುವ ತಿಂಗಳು ಇದಾಗಿದೆ. ಧಾರ್ಮಿಕ ಕಾರ್ಯಗಳು, ಯಜ್ಞಗಳು, ಹೋಮ – ಹವನಗಳನ್ನು ಮಾಡಲು ಹಾಗೂ ಅನುಷ್ಠಾನಗಳನ್ನು ಮಾಡಲು ಇದು ಸಕಾಲ. ಹೀಗೆ ಮಾಡುವುದರಿಂದ ಹೆಚ್ಚಿನ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ವೈಶಾಖ ಮಾಸದ ಪ್ರತಿ ದಿನವೂ ಪವಿತ್ರವಾಗಿದ್ದು, ಏಕಾದಶಿ ದಿನವು ಅತ್ಯಂತ ಮಹತ್ವದ್ದಾಗಿದೆ. ಈ ದಿನ ಮಾಡುವ ವ್ರತ (Vrath), ಸ್ತೋತ್ರ, ದಾನ, ಧರ್ಮಗಳಿಗೆ ವಿಶೇಷ ಪುಣ್ಯ ಪ್ರಾಪ್ತಿಯಾಗಲಿದೆ. ಆದ್ದರಿಂದ ಏಕಾದಶಿಯಂದು ಹೆಚ್ಚಿನ ದೈವೀಕ ಕಾರ್ಯಗಳನ್ನು ಮಾಡಿ ಪುಣ್ಯ ಫಲವನ್ನು ಪಡೆಯಿರಿ.
ಪೂಜಾ ಪ್ರಕ್ರಿಯೆ ತಿಳಿಯಿರಿ...!
ವೈಶಾಖ ಮಾಸದ ಸೋಮವಾರ (Monday) ಮಾಡುವ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಮುಂಜಾನೆ ಎದ್ದು ಸ್ನಾನ ಮಾಡಿ, ಶುಚಿ ಇಲ್ಲವೇ ಮಡಿ ವಸ್ತ್ರವನ್ನು ಧರಿಸಿ ಪರಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ಬಳಿಕ ಶಿವಲಿಂಗಕ್ಕೆ ಚಂದನದ ತಿಲಕವನ್ನಿಟ್ಟು, ಪುಷ್ಪವನ್ನು ಅರ್ಪಿಸಬೇಕು. ನಂತರ ದೀಪವನ್ನು ಬೆಳಗಿಸಿ ಪೂಜೆ ಮಾಡಬೇಕು.
ಇದನ್ನೂ ಓದಿ: ಗುಲಾಬಿ ಹೀಗೆ ಬಳಸಿದ್ರೆ ನಿಮ್ಮೆಡೆ ಹರಿಯುವುದು ದುಡ್ಡೋ ದುಡ್ಡು!
ಬೇಡಿದ್ದು ಸಿಗಲಿದೆ
ಮಹಾವಿಷ್ಣುವಿನ ಪೂಜೆ, ಆರಾಧನೆ ಮಾಡಿದರೆ ದೇವರು ಪ್ರಸನ್ನವಾಗುತ್ತಾನೆ. ಇದರಿಂದ ನಾವು ಬೇಡಿದ್ದನ್ನೆಲ್ಲ ದೇವರು ಕೊಡಲಿದ್ದಾನೆ. ನಂಬಿದವರನ್ನು ವಿಷ್ಣು ಕೈಬಿಡಲಾರ ಎಂಬ ನಂಬಿಕೆ ಇದೆ. ಈ ವೈಶಾಖ ಮಾಸದಲ್ಲಿಯೇ ಅಕ್ಷಯ ತೃತೀಯ (Akshay Trutiya), ನರಸಿಂಹ ಜಯಂತಿ (Narasihma Jayanti) ಹಬ್ಬಗಳೂ ಇವೆ.
ಇದನ್ನೂ ಓದಿ: ಮನಸ್ತಾಪಗಳ ಬೇಗ ಮರೆಯುವ ಮುದ್ದು ಮನಸಿನ ರಾಶಿಗಳಿವು
ಮಹಾ ವಿಷ್ಣವಿನ ಪೂಜೆ ಮಾಡಿ
ವೈಶಾಖ ಮಾಸದ ಗುರುವಾರದಂದು ಮಹಾವಿಷ್ಣವಿನ ಪೂಜೆಯನ್ನು ಮಾಡಬೇಕು. ಈ ದಿನದಂದು ವಿಷ್ಣುವಿಗೆ ಪ್ರಿಯವಾದ ಹಳದಿ ವಸ್ತ್ರವನ್ನು (Yellow Cloth) ಧರಿಸಿ, ಪುಷ್ಪವನ್ನು (Flower) ಅರ್ಪಿಸಬೇಕು. ಅಲ್ಲದೆ, ವಿಷ್ಣುವಿಗೆ ಮಹಾಮಂಗಳಾರತಿ ಮಾಡುವುದರಿಂದ ಸುಖ – ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಅಲ್ಲದೆ, ಬ್ರಹ್ಮ ದೇವರನ್ನು ಪೂಜಿಸಬೇಕು. ಬ್ರಹ್ಮ ದೇವರಿಗೆ ಕಮಲದ ಹೂವನ್ನು ಅರ್ಪಿಸಬೇಕು. ಹೀಗೆ ಮಾಡುವದರಿಂದ ಬ್ರಹ್ಮ ದೇವರು ಪ್ರಸನ್ನಗೊಳ್ಳುತ್ತಾನೆ. ಇಷ್ಟಾರ್ಥಗಳು ಸಿದ್ಧಿಸುತ್ತವೆ.