Zodiac Signs: ಆಫೀಸ್ ಅಫೇರ್ಸ್‌ನಿಂದ ಈ ರಾಶಿಯ ಜನ ದೂರವೇ ಇರ್ತಾರೆ
ಆಫೀಸಿನಲ್ಲಿ ಅಫೇರ್ ಇಟ್ಕೊಳ್ಳುವ ಜನರ ನಡುವೆಯೇ ಇದನ್ನು ತಪ್ಪು ಎಂದು ಬಗೆಯೋ ಜನರೂ ಸಾಕಷ್ಟಿದ್ದಾರೆ. ವೃತ್ತಿ ಮೌಲ್ಯಗಳಿಗೆ ಹೆಚ್ಚು ಆದ್ಯತೆ ನೀಡುವ, ಕಚೇರಿಗಳಲ್ಲಿ ಪ್ರೀತಿ-ಪ್ರೇಮ-ಪ್ರಣಯಗಳಿಂದ ದೂರವಿರುವ ಜನರನ್ನು ಈ ರಾಶಿಗಳಲ್ಲಿ ನೋಡ್ಬೋದು.
ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧ ಇರಿಸಿಕೊಳ್ಳುವ ಉದ್ಯೋಗಿಗಳು ಇರುವಂತೆಯೇ, ಅಂತಹ ಸಂಬಂಧಗಳಿಂದ ದೂರ ಇರುವವರೂ ಇರುತ್ತಾರೆ. ಅವರಿಗೆ, ಕಚೇರಿ ಎಂದರೆ ಕಚೇರಿ ಅಷ್ಟೆ. ಅಲ್ಲಿ ಖಾಸಗಿ ಭಾವನೆ, ಸಂಬಂಧಗಳ ಹುಡುಕಾಟ ಸಲ್ಲದು. ಕೆಲವು ರಾಶಿಯ ಜನ ಈ ವಿಚಾರದಲ್ಲಿ ಭಾರೀ ಕಟ್ಟುನಿಟ್ಟಾಗಿರುತ್ತಾರೆ. ಇವರು ಉದ್ಯೋಗ ಸ್ಥಳದ ಬಗ್ಗೆ ಅತ್ಯುತ್ತಮ ನೈತಿಕ ಮೌಲ್ಯ ಹೊಂದಿರುತ್ತಾರೆ. ತಮ್ಮ ವೃತ್ತಿ ಜೀವನದ ಯಶಸ್ಸಿಗೆ ಆದ್ಯತೆ ನೀಡುತ್ತಾರೆ. ಮೌಲ್ಯಗಳಿಗೆ ಬದ್ಧರಾಗಿರುವುದು ಇವರಲ್ಲಿ ಹೆಮ್ಮೆ ಮೂಡಿಸುತ್ತದೆ. ಆಗಲೇ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಇವರಿಗೆ ಸಾಧ್ಯವಾಗುತ್ತದೆ. ಕಚೇರಿ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ಕಚೇರಿಯಲ್ಲಿ ತಮ್ಮ ಮಿತಿಯ ಬಗ್ಗೆ ಅರಿವು ಹೊಂದಿರುತ್ತಾರೆ. ಉದ್ಯೋಗ ಸ್ಥಳ ಪ್ರೀತಿ-ಪ್ರೇಮ-ರೋಮ್ಯಾನ್ಸ್ ಗೆ ಹೇಳಿಮಾಡಿಸಿದ್ದಲ್ಲ ಎನ್ನುವುದು ಇವರ ದೃಢ ನಂಬುಗೆ. ಹೀಗಾಗಿ, ಅಂತಹ ಸಂಬಂಧಗಳಿಂದ ದೂರವುಳಿದು ವೃತ್ತಿಯ ಬಗ್ಗೆ ಮಾತ್ರ ಆದ್ಯತೆ ನೀಡುತ್ತಾರೆ. ಕಚೇರಿಯಲ್ಲಿ ಸಂಬಂಧಗಳಿರುವುದು ವೃತ್ತಿ ಪರಿಸರಕ್ಕೆ ಮಾರಕ ಎನ್ನುವುದು ಇವರ ಬಲವಾದ ನಿಲುವು. ಅಂತಹ ಕೆಲವು ರಾಶಿಗಳು ಯಾವುವು ಎಂದು ನೋಡಿ.
• ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಸ್ಥಿರತೆ (Stability) ಮತ್ತು ಇತರರಿಂದ ಬೆಂಬಲ (Support) ನಿರೀಕ್ಷೆ ಮಾಡುತ್ತಿದ್ದರೂ ವೃತ್ತಿ (Profession) ವಿಚಾರಕ್ಕೆ ಬಂದಾಗ ಬೇರೆಯದೇ ನಿಲುವು ಹೊಂದಿರುತ್ತಾರೆ. ನೈತಿಕತೆಗೆ (Ethics) ಹೆಚ್ಚು ಆದ್ಯತೆ ನೀಡುತ್ತಾರೆ. ಗುರಿಯ (Target) ಬಗ್ಗೆ ಗಂಭೀರವಾದ ಭಾವನೆ ತಳೆದಿರುತ್ತಾರೆ. ಕಚೇರಿ ರೋಮ್ಯಾನ್ಸ್ (Romance) ವಿಚಾರದಲ್ಲಿ ತಮ್ಮ ಮಿತಿಯ ಬಗ್ಗೆ ಅರಿವು ಹೊಂದಿರುತ್ತಾರೆ. ಯಾರೊಂದಿಗೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸ್ಪಷ್ಟತೆ ಹೊಂದಿರುತ್ತಾರೆ. ಸಂಸ್ಥೆಯ (Company) ಘನತೆಗೆ ಧಕ್ಕೆಯಾಗಬಾರದು ಎನ್ನುವ ವಿಚಾರವೂ ಇವರಲ್ಲಿರುತ್ತದೆ.
ಈ Zodiac Sign ನವರು ಎಂಥದ್ದೇ ಪರಿಸ್ಥಿತಿಯನ್ನೂ ಸುಲಭವಾಗಿ ನಿಭಾಯಿಸುತ್ತಾರೆ!
• ಕನ್ಯಾ (Virgo)
ಕನ್ಯಾ ರಾಶಿಯ ಜನ ಪರಿಪೂರ್ಣತೆ (Perfectionist) ಬಯಸುವವರು. ಜೀವನದ ಎಲ್ಲ ಹಂತಗಳಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಪರಿಪೂರ್ಣತೆಯನ್ನೇ ಬಯಸುತ್ತಾರೆ. ಇವರು ತಮ್ಮನ್ನು ತಾವು ಆದರ್ಶ (Ideal) ವ್ಯಕ್ತಿತ್ವದವರನ್ನಾಗಿ ಪರಿಗಣಿಸುತ್ತಾರೆ. ಜೀವನದ ನಂತರದ ದಿನಗಳಲ್ಲಿ ಪಶ್ಚಾತ್ತಾಪ (Regret) ಉಂಟಾಗುವ ಯಾವುದೇ ಕೆಲಸ ಮಾಡಲು ಇಷ್ಟಪಡುವುದಿಲ್ಲ. ವೃತ್ತಿ ಮೌಲ್ಯದ ಬಗ್ಗೆ ಕಟ್ಟುನಿಟ್ಟಾದ ಮನೋಭಾವ ಇವರದ್ದು. ಹೀಗಾಗಿ, ಆಫೀಸ್ ಅಫೇರ್ (Office Affair)ನಿಂದ ಯಾವಾಗಲೂ ದೂರ ಇರುತ್ತಾರೆ. ಅದೆಲ್ಲ ಇವರಿಗೆ ಆಗಿಬರುವುದೂ ಇಲ್ಲ. ಯಾವುದೇ ಕೆಲಸ ಮಾಡುವ ಮುನ್ನ ಅದರ ಸಾಧಕಬಾಧಕಗಳ ಬಗ್ಗೆ ಯೋಚಿಸಿಯೇ ಮುಂದಡಿ ಇಡುತ್ತಾರೆ.
• ತುಲಾ (Libra)
ಅತ್ಯಂತ ಸುಲಭವಾಗಿ ಎಲ್ಲರೊಂದಿಗೆ ಬೆರೆಯುವ ಉದಾರ (Generosity) ಬುದ್ಧಿ, ವರ್ಚಸ್ಸು (Charisma) ಹೊಂದಿರುವ ತುಲಾ ರಾಶಿಯ ಜನ ವೃತ್ತಿ ಅನುಭವದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತಾರೆ. ತುಲಾ ರಾಶಿಯ ಜನ ಅತ್ಯದ್ಭುತ ಸಹೋದ್ಯೋಗಿಗಳಾಗಬಲ್ಲರು (Colleagues) ಹಾಗೂ ಉತ್ತಮ ಉದ್ಯೋಗಿ (Employee) ಎನಿಸಿಕೊಳ್ಳಬಲ್ಲರು. ಇವರು ತಮ್ಮ ವೃತ್ತಿ ಹಾಗೂ ಖಾಸಗಿ ಬದುಕನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಯತ್ನಿಸುತ್ತಾರೆ. ಹೀಗಾಗಿ, ಕಚೇರಿ ಸಂಬಂಧಿತ ರೋಮ್ಯಾನ್ಸ್ ವಿಚಾರದಲ್ಲಿ ಎಚ್ಚರಿಕೆ ಹೊಂದಿರುತ್ತಾರೆ. ಯಾವಾಗ ಸಂಬಂಧದಲ್ಲಿ ಗೆರೆ ಎಳೆಯಬೇಕು ಎನ್ನುವುದನ್ನು ಅರಿತು ವರ್ತಿಸುತ್ತಾರೆ. ವೃತ್ತಿ ಮೌಲ್ಯಗಳಿಗೆ ಅಪಾರ ಬದ್ಧತೆ (Commit) ಇವರಲ್ಲಿ ಇರುತ್ತದೆ.
ಈ ನಾಲ್ಕು ರಾಶಿಯವರು ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ!
• ಮಕರ (Capricorn)
ಮಕರ ರಾಶಿಯ ಜನ ವಾಸ್ತವವಾದಿಗಳು, ಗುರಿ ಆಧಾರಿತ, ಸ್ಪರ್ಧಾತ್ಮಕ (Competitive) ಗುಣ ಹೊಂದಿರುತ್ತಾರೆ. ಯಾರನ್ನಾದರೂ ಪೀಡಿಸುವುದಕ್ಕೂ ಇವರು ಹಿಂಜರಿಯುವುದಿಲ್ಲ. ತಮ್ಮ ಸಾಮರ್ಥ್ಯ (Ability) ಪ್ರದರ್ಶನ ಮಾಡುವ ವೃತ್ತಿ ಸ್ಥಳದಲ್ಲಿ ಅದಕ್ಕೆ ಹಿನ್ನಡೆಯಾಗುವಂತಹ ಯಾವುದೇ ಕೃತ್ಯಗಳನ್ನೂ ಮಾಡುವುದಿಲ್ಲ, ಸಹಿಸಿಕೊಳ್ಳುವುದಿಲ್ಲ. ಘನತೆಗೆ ಧಕ್ಕೆ (Disturb) ತರುವ ಯಾವುದೇ ಅಡೆತಡೆಯ ಬಗ್ಗೆ ಎಚ್ಚರಿಕೆ ಹೊಂದಿರುತ್ತಾರೆ ಹಾಗೂ ಅದರಿಂದ ದೂರವಿರುತ್ತಾರೆ. ಅನಗತ್ಯ ಆಫೀಸ್ ಡ್ರಾಮಾಗಳಲ್ಲಿ (Drama) ಆಸಕ್ತಿ ಹೊಂದಿರುವುದಿಲ್ಲ.