ಮೇಷ ರಾಶಿ
ಈ ದೀಪಾವಳಿ ನಿಮಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಬಾಸ್‌ ನಿಮ್ಮಿಂದ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸಬಹುದು. ನಿಮ್ಮ ಟೀಮ್ ಅಥವಾ ತಂಡದ ಸಾಧನೆಗೆ ಎಲ್ಲರೂ ಫಿದಾ ಆಗುತ್ತಾರೆ. ಹೊಸಬರು ನಿಮ್ಮ ತಂಡಕ್ಕೆ ಜಾಯಿನ್ ಆಗಿ ನಿಮ್ಮ ಮಾರ್ಗದರ್ಶನ ಅಪೇಕ್ಷಿಸಬಹುದು. ಅದಕ್ಕೆ ತಕ್ಕಂತೆ ನಿಮ್ಮ ವೇತನ, ಭತ್ಯೆಗಳಲ್ಲಿ ಏರಿಕೆ ಆಗುವ ಸೂಚನೆ ಇದೆ. ಈ ದೀಪಾವಳಿಯಂದು ಲಕ್ಷ್ಮೀಪೂಜೆಯನ್ನು ತಪ್ಪದೆ ಮಾಡಿ. ಬೆಳ್ಳೀ ಅಥವಾ ಕಂಚಿನಿಂದ ಮಾಡಿದ ಲಕ್ಷ್ಮಿ ದೇವಿಯ ವಿಗ್ರಹವನ್ನು ತಂದು ಅರ್ಚಿಸಿ.

ಮಿಥುನ ರಾಶಿ
ಈ ಸಲದ ದೀಪಾವಳಿ ನಿಮ್ಮ ಬಾಳಿನಲ್ಲಿ ಹರ್ಷದ ಹೊನಲನ್ನು ಹರಿಸಲಿದೆ. ಕೌಟುಂಬಿಕವಾಗಿ ನಿಮಗೆ ಇದು ಸುಖಕರವಾದ ಅನುಭವ ಒದಗಿಸಲಿದೆ. ಸೂರ್ಯ, ಚಂದ್ರ ಮತ್ತು ಶನಿ ಮುಂತಾದ ಗ್ರಹಗಳು ನಿಮಗೆ ಅನುಕೂಲಕರವಾದ ಸ್ಥಾನಗಳಲ್ಲಿದ್ದು, ಸಂಗಾತಿಯಿಂದ ಸೌಖ್ಯವನ್ನು ದಯಪಾಲಿಸಲಿದ್ದಾರೆ. ಮಕ್ಕಳಿಂದ ಸಂತೋಷದ ನಿರೀಕ್ಷೆ ಇದೆ. ಬಂಧುಬಾಂಧವರಿಂದ ಶುಭಸುದ್ದಿಗಳು ಬರಬಹುದು. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಶುಭ ಸುದ್ದಿ ಬರುವ ಸೂಚನೆ ಇದೆ.  ಲಕ್ಷ್ಮಿಪೂಜೆ ಮಾಡುವುದಲ್ಲದೆ ಧನಧಾನ್ಯಗಳನ್ನು ಪಾತ್ರರಿಗೆ ದಾನ ಮಾಡಿ ಸಿರಿದೇವಿಯ ಕೃಪೆ ಪಡೆದುಕೊಳ್ಳಿ.

ಸಿಂಹ ರಾಶಿ
ನಿಮ್ಮ ಮಿತ್ರರು ನಿಮಗೆ ಅನುಕೂಲಕರವಾಗಿ ನಡೆದುಕೊಳ್ಳಲಿದ್ದಾರೆ. ನಿಮ್ಮ ಪ್ರೀತಿಪಾತ್ರರಿಂದ ಈ ಮಾಸದಲ್ಲಿ ಹರ್ಷದ ಸುದ್ದಿಗಳನ್ನು ಹಾಗೂ ಒಳ್ಳೆಯ ಮಾತುಗಳನ್ನು ಆಲಿಸಲಿದ್ದೀರಿ. ನೀವು ಗಳಿಸಿದ ದುಡಿಮೆಯಲ್ಲಿ ಬಹುಭಾಗ ಉಳಿತಾಯ ಆಗಲಿದೆ. ಅನಿರೀಕ್ಷಿತ ಕಡೆಗಳಿಂದ ಧನಲಾಭ ಆಗಬಹುದು. ನಿಮ್ಮ ಮಾತುಗಳಲ್ಲಿ ನಿಮಗೇ ಹೆಚ್ಚಿನ ಆತ್ಮವಿಶ್ವಾಸ ಬರಲಿದೆ ಹಾಗೂ ಇತರರು ನಿಮ್ಮ ಮಾತುಗಳನ್ನು ಗಮನವಿಟ್ಟು ಆಲಿಸಲಿದ್ದಾರೆ. ಗುರುಗ್ರಹ ನಿಮಗೆ ಅನುಕೂಲಕರವಾಗಿ ವರ್ತಿಸಲಿದೆ. ಈ ದೀಪಾವಳಿಯಂದು ಗೋಪೂಜೆಯನ್ನು ಮನಸ್ಸಿಟ್ಟು ಮಾಡಿ. ಹಾಗೇ ದಾನಗಳನ್ನು ಮಾಡಿ.

ಕನ್ಯಾ ರಾಶಿ
ನಿಮಗೆ ಗುರು ಹಾಗೂ ಶನಿ ಗ್ರಹಗಳು ಅನುಕೂಲಕರ ಸ್ಥಾನಗಳಲ್ಲಿದ್ದು ಆಶೀರ್ವಾದ ಮಾಡುತ್ತಿರುವುದರಿಂದ, ಜ್ಞಾನಸಂಬಂಧಿಯಾದ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನೆರವೇರುತ್ತವೆ. ನಿಮ್ಮ ಕಚೇರಿ ಬದುಕು ಹಾಗೂ ಕೌಟುಂಬಿಕ ಬದುಕುಗಳೆರಡೂ ಸುರಕ್ಷಿತ ಹಾಗೂ ಸುಖಕರವಾಗಿ ಮುನ್ನಡೆಯಲಿವೆ. ಮುಂದಿನ ವರ್ಷ ಹಲವಾರು ಶುಭಸುದ್ದಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವಿವಾಹಿತರಾಗಿದ್ದರೆ ಸಂತಾನಭಾಗ್ಯವೂ, ಅವಿವಾಹಿತರಾಗಿದ್ದರೆ ಕಂಕಣಭಾಗ್ಯವೂ, ನಿರುದ್ಯೋಗಿಗಳಾಗಿದ್ದರೆ ಉದ್ಯೋಗಭಾಗ್ಯವೂ ಲಭ್ಯವಾಗಬಹುದು. ಲಕ್ಷ್ಮೀಪೂಜಉ ಜೊತೆಗೆ ಶಿವಪಂಚಾಕ್ಷರಿಯನ್ನೂ ಪಠಿಸಿ.

ಗೋಪೂಜೆ ಮಾಡುವುದರ ಒಂಬತ್ತು ಪ್ರಯೋಜನಗಳಿವು..! ...

ಕುಂಭ ರಾಶಿ
ದೇವತಾನುಗ್ರಹದಿಂದ ನಿಮಗೆ ಮುಂದೆ ಆಗಲಿರುವುದೆಲ್ಲವೂ ಒಳ್ಳೆಯದೇ ಆಗಲಿವೆ. ನೀವು ಶನಿ ಹಾಗೂ ಸೂರ್ಯನ ಅನುಗ್ರಹವನ್ನು ಸಂಪೂರ್ಣವಾಗಿ ಪಡೆದಿದ್ದು, ನೀಚಗ್ರಹಗಳೆಲ್ಲವೂ ಇವುಗಳ ಸನ್ನೆಯನುಸಾರ ವರ್ತಿಸಲಿವೆ. ಹಾಗಾಗಿ ನೀವು ಉನ್ನತವಾದ ಸ್ಥಾನವನ್ನು ಈ ಸಂದರ್ಭದಲ್ಲಿ ಅಲಂಕರಿಸಿದರೂ ಆಶ್ಚರ್ಯವಿಲ್ಲ. ಹಾಗೆಯೇ ಬಂಧುಬಾಂಧವರಲ್ಲಿಯೂ ವೃತ್ತಿ ಕ್ಷೇತ್ರದಲ್ಲಿಯೂ ಕೌಟುಂಬಿಕವಾಗಿಯೂ ನೀವು ಹೇಳಿದಂತೆಯೇ ಕೆಲಸ ಕಾರ್ಯಗಳು ಆಗಲಿವೆ. ಈ ದೀಪಾವಳಿಯಲ್ಲಿ ಲಕ್ಷ್ಮಿಪೂಜೆ, ಗೋಪೂಜೆ ಮಾಡಿರಿ. ಹಾಗೆಯೇ ಮನೆಯ ವಾಸ್ತುವನ್ನು ಸ್ವಲ್ಪ ಸುಂದರವಾಗಿ ಬದಲಾಯಸಿಕೊಳ್ಳಿ. ಇದರಿಂದ ಒಳಿತಾಗುತ್ತದೆ.

ಸೆಕ್ಸ್ ವಿಚಾರದಲ್ಲಿ ಈ ರಾಶಿಯವರು ಮುದುಕರಾದರೂ ಕುಣಿಯೋ ಕುದುರೆಗಳು! ...

ಮಕರ ರಾಶಿ
ನೀವು ದೀಪಾವಳಿಯಲ್ಲಿ ಉತ್ತಮ ಭಾಗ್ಯ ಪಡೆಯುವವರಲ್ಲಿ ಉಚ್ಚ ಮಟ್ಟದವರಾಗಿರುವಿರಿ. ನಿಮ್ಮ ಮೇಲೆ ದೇವತಾನುಗ್ರಹವಿದೆ ಹಾಗೂ ಸಕಲ ಗ್ರಹಗಳ ಕರುಣೆಯಿದೆ. ಬಾಳಿನಲ್ಲಿ ಇದುವರೆಗೂ ಕಷ್ಟನಷ್ಟಗಳನ್ನು ಕಂಡಿದ್ದೀರಿ. ಈಗ ಸುಖ ಉಣ್ಣುವ ಸಮಯ. ನಿಮ್ಮ ಮುಂದೆ ಬೆಟ್ಟದಂತೆ ಕಾಣುತ್ತಿರುವ ಕಷ್ಟಗಳೆಲ್ಲವೂ ಮಂಜಿನಂತೆ ಕರಗಿ ಹೋಗಲಿವೆ. ಲಕ್ಷ್ಮೀನಾರಾಯಣನ ಪೂಜೆಯನ್ನು ಮಾಡಿ ಅನುಗ್ರಹ ಪಡೆಯಿರಿ. ಮಹಾವಿಷ್ಣು ಸಹಸ್ರನಾಮವನ್ನು ದಿನಕ್ಕೊಮ್ಮೆಯಾದರೂ ಪಠಿಸಿ. ಇದರಿಂದ ಆರೋಗ್ಯ ಹಾಗೂ ಐಶ್ವರ್ಯಗಳ ಲಾಭವಿದೆ.

ಈ ರಾಶಿಯವರಿಗೆ ಶನಿದೇವರ ಕೃಪೆ, ರಾಜಯೋಗ ...