ವೃಷಭ ರಾಶಿ
ಬದುಕಿನಲ್ಲಿ ಹಿಂದೆಂದಿಗಿಂತಲೂ ಅಧಿಕ ಲಾಭ, ಹೆಚ್ಚುತ್ತಲೇ ಹೋಗುವ ಸಂತೋಷ. ಇದೆಲ್ಲವನ್ನೂ ಕಂಡು ಇದು ಕನಸೋ ನನಸೋ ಎಂದು ಅಚ್ಚರಿ ಪಡುವ ಸ್ಥಿತಿ ಈ ರಾಶಿಯವರದು. ಹಿಂದಿನ ಕಷ್ಟಗಳೆಲ್ಲ ಪರಿಹಾರವಾಗಲಿವೆ. ಯಾವುದಕ್ಕಾಗಿ ನೀವು ಹಗಲಿರುಳೂ ಹಂಬಲಿಸುತ್ತಿದ್ದೀರೋ ಅದೀಗ ಸಾಫಲ್ಯ ಕಾಣಲಿದೆ. ಯಶಸ್ಸಿನ‌ ಮಹಾಪೂರವೇ ಹರಿದು ಬರಲಿದೆ. ನಡು ನಡುವೆ ತುಸು ಅಸಂತೋಷದ ಕ್ಷಣಗಳು ಬಂದರೂ ಅವೆಲ್ಲ ಕ್ಷಣದಲ್ಲಿ ಸರಿ ಹೋಗುವುದು. ಈ ಸಮಯವನ್ನು  ಒಳ್ಳೆಯ ಕೆಲಸಗಳಿಗೆ ಬಳಸಿ. ಬದುಕಲ್ಲಿ ಮುಂದೆ ಬನ್ನಿ. 

ಮಿಥುನ ರಾಶಿ
ನಿಮ್ಮ ಕಷ್ಟಗಳು ಶೀಘ್ರವಾಗಿ ಪರಿಹಾರವನ್ನು ಕಾಣುತ್ತವೆ. ವೈವಾಹಿಕ ಕಾರ್ಯಗಳ ವಿಘ್ನ ನಿವಾರಣೆಯಾಗುವುದು. ಮನದನ್ನೆ ಮನಸ್ಸಿಡೀ ಆವರಿಸುವಳು. ನೀವು ಅವಳ ಅಥವಾ ಅವನ ಸಂಪೂರ್ಣ ಪ್ರೀತಿಗೆ ಕಾರಣವಾಗುವಿರಿ. ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮ್ಮ ಹುಮ್ಮಸ್ಸು ಹೆಚ್ಚಲಿದೆ. ಆರ್ಥಿಕ ಚೇತರಿಕೆ ಇದೆ. ಹೊಸ ಪ್ರಯತ್ನಗಳಿಗೆ ಶುಭ ಫಲವಿದೆ. ಸ್ನೇಹಿತರು ನಿಮ್ಮ ಬೆಂಬಲಕ್ಕಿರುತ್ತಾರೆ. 

ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಭಂಡ ಎನ್ನುವ ರಾಕ್ಷಸನನ್ನು ಸಂಹಾರ ಮಾಡಿದ್ಹೇಗೆ? 

ಕನ್ಯಾ ರಾಶಿ
ಈ ಹಿಂದಿನ ಕಿರಿಕಿರಿ, ಮಾನಸಿಕ ಕ್ಷೋಭೆಯ ಸನ್ನಿವೇಶಗಳು ಸಂಪೂರ್ಣ ಮರೆಯಾಗುವವು. ನೀವು ರಾಣಿ ಅಥವಾ ರಾಜರಾಗಿ ಮೆರೆಯುವಂಥಾ ಸನ್ನಿವೇಶಗಳು ಮುಂದಿವೆ. ನಿಮ್ಮನ್ನು ದ್ವೇಷಿಗಳೂ ನಿಮ್ಮನ್ನೀಗ ಪ್ರೀತಿಸುವರು. ನಿಮ್ಮ ಬಾಳು ಬಂಗಾರವಾಗವುದು. ಹೊಸ ಹೊಸ ಪ್ರಯೋಗಗಳನ್ನು ಮಾಡುವಿರಿ. ಮಾಡುವ ಕೆಲಸಗಳಲ್ಲೆಲ್ಲ ಸಫಲತೆ ಪಡೆಯುವಿರಿ. ಕಲೆಯಲ್ಲಿ ಮುಂದೆ ಹೋಗುವಿರಿ. 

ಸಂತೋಷ, ನೆಮ್ಮದಿ ತುಂಬಲು ಮನೆಯ ಬಣ್ಣ ವಾಸ್ತು ಪ್ರಕಾರವಿರಲಿ..! 

ಸಿಂಹರಾಶಿ
ನಿಮ್ಮ ಆರ್ಥಿಕತೆಯಲ್ಲಿ ಚೇತರಿಕೆ ಕಾಣುವಿರಿ. ಧನಲಾಭವಾಗಲಿದೆ. ಇತ್ತೀಚೆಗೆ ನೀವು ಕೆಲವೊಂದು ಆಘಾತಗಳಿಂದ ಜರ್ಝರಿತರಾಗಿರುತ್ತೀರಿ. ಅವುಗಳಿಗೆಲ್ಲ ಪರಿಹಾರವಾಗಲಿದೆ. ಹೊಸ ಶಕೆ ಆರಂಭವಾಗಲಿದೆ. ಮನೆಯ ಸಮಸ್ಯೆಗಳು ಬಗೆಹರಿಯಲಿವೆ. ಪತಿ ಪತ್ನಿ ನಡುವಿನ ವಿರಸ ಸರಸವಾಗಿ ಬದಲಾಗಲಿದೆ. ಖುಷಿಯಾಗಿರಿ. 

ದ್ರೌಪದಿ ಕರ್ಣನನ್ನು ಗಂಡನಾಗಿ ಬಯಸಿದ್ದಳಾ? ಇಲ್ಲಿದೆ ಆ ಕತೆ 

ಮೀನ
ಸ್ವಭಾವತಃ ಉತ್ತಮ ಗುಣ ಸಂಪನ್ನರಾದ ನೀವು ಈವರೆಗೆ ಒಂದಲ್ಲ ಒಂದು ಬಗೆಯಲ್ಲಿ ಸಂಕಷ್ಟ ಎದುರಾಗಿವೆ. ಸಾಂಸಾರಿಕ ಸಮಸ್ಯೆ ಗಳೂ ಅಧಿಕವಿದ್ದವು. ಈಗ ಅದಕ್ಕೆಲ್ಲ ಪೂರ್ಣವಿರಾಮ ಬೀಳಲಿದೆ. ಬದುಕು ಹಳಿಯ ಮೇಲೇರಲಿದೆ. ನೆಮ್ಮದಿಯಿಂದಿರಿ. ನಿಮ್ಮ ಬದುಕಿನ ನೋವೆಲ್ಲ ಕಳೆದು ಹೊಸದೊಂದು ಶಕೆ ಆರಂಭವಾಗಲಿದೆ.