ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಧ್ವನಿ ಎಂದರೆ, ಅದು ಶಂಖನಾದವೆಂದು ಶ್ರೀಕೃಷ್ಣನು ಹೇಳುತ್ತಾನೆ. ಸನಾತನ ಸಂಸ್ಕೃತಿಯಲ್ಲಿ ಮತ್ತು ಪುರಾಣಗಳಲ್ಲಿ ಶಂಖ ನಾದವು ಅತ್ಯಂತ ಪವಿತ್ರವಾದದ್ದೆಂದು ಹೇಳಲಾಗುತ್ತದೆ. ಶಂಖನಾದದಿಂದ ವಾತಾವರಣದಲ್ಲಿರುವ ಋಣಾತ್ಮಕ ಅಂಶಗಳು ನಾಶವಾಗಿ, ಧನಾತ್ಮಕ ಅಂಶಗಳು ಹರಡುತ್ತದೆ ಎಂದು ಹೇಳಲಾಗುತ್ತದೆ. 

ಧಾರ್ಮಿಕ ಗ್ರಂಥಗಳ ಅನುಸಾರ ಸಮುದ್ರ ಮಂಥನದ ಸಮಯದಲ್ಲಿ ಹದಿನಾಲ್ಕು ರತ್ನಗಳು ಪ್ರಾಪ್ತವಾಗುತ್ತವೆ. ಅವುಗಳಲ್ಲಿ ಎಂಟನೇ ರತ್ನವಾಗಿ ಹೊರಹೊಮ್ಮಿದ್ದು ಶಂಖವೆಂದು ಹೇಳಲಾಗುತ್ತದೆ. ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭ ಮತ್ತು ಸಕಾರಾತ್ಮಕ ಶಕ್ತಿಯ ಹರಿವು ಶಂಖನಾದದಲ್ಲಿ ಹೆಚ್ಚಾಗಿ ಇರುತ್ತದೆ.
ಶಂಖದಲ್ಲಿ ಅನೇಕ ಪ್ರಕಾರಗಳಿವೆ. ಪ್ರತಿ ಶಂಖಕ್ಕೂ ಅದರದ್ದೆ ಆದ ಮಹತ್ವವಿದೆ. ಶಾಸ್ತ್ರಗಳಲ್ಲಿ ಶಂಖದ ಮಹತ್ವವನ್ನು ಚೆನ್ನಾಗಿ ವರ್ಣಿಸಿದ್ದಾರೆ. ಈಗ ಶಂಖದ ವಿವಿಧ ಪ್ರಕಾರಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ...

ಗಣೇಶ ಶಂಖ
ಸಮುದ್ರ ಮಂಥನದ ಸಮಯದಲ್ಲಿ ಉತ್ಪತ್ತಿಯಾದ ರತ್ನಗಳಲ್ಲಿ ಎಂಟನೇ ರತ್ನವಾಗಿ ಉತ್ಪತ್ತಿಯಾದದ್ದು ಗಣೇಶ ಶಂಖವೆಂದು ಹೇಳಲಾಗುತ್ತದೆ. ಈ ಶಂಖವು ನೋಡಲು ಗಣೇಶನ ಆಕಾರವನ್ನು ಹೋಲುತ್ತದೆ. ಹಾಗಾಗಿ ಇದಕ್ಕೆ ಗಣೇಶ ಶಂಖವೆಂದು ಕರೆಯಲಾಗುತ್ತದೆ. ಈ ಶಂಖವನ್ನು ಮನೆಯಲ್ಲಿ ಇಟ್ಟುಕೊಂಡರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಇದರಿಂದ ದರಿದ್ರ ನಾಶವಾಗಿ, ಮನೆಯಲ್ಲಿ ಸುಖ ಹೆಚ್ಚಿ ಮತ್ತು ಸಮೃದ್ಧಿಯಾಗುತ್ತದೆ.

ಇದನ್ನು ಓದಿ:  ಏನ್ ಮಾಡಿದ್ರೂ ಮದ್ವೆ ಸೆಟ್ ಆಗ್ತಿಲ್ಲ: ಕಂಕಣ ಭಾಗ್ಯ ಕೂಡಿಬರಲು ಸರಳ ಪರಿಹಾರಗಳಿವು...

ದಕ್ಷಿಣಾವರ್ತಿ ಶಂಖ
ಪುರಾಣಗಳ ಪ್ರಕಾರ ಶ್ರೀ ಮಹಾವಿಷ್ಣುವು ಸ್ವತಃ ಧರಿಸಿರುವ ಶಂಖವೇ ದಕ್ಷಿಣಾವರ್ತಿ ಶಂಖ. ಈ ಶಂಖವನ್ನು ಬಲಗೈಯಿಂದ ಊದಲಾಗುತ್ತದೆ. ಉಳಿದೆಲ್ಲ ಶಂಖಕ್ಕಿಂತ ದಕ್ಷಿಣಾವರ್ತಿ ಶಂಖವು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಈ ಶಂಖವನ್ನು ಮನೆಯಲ್ಲಿ ಊದುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಮನೆಯಲ್ಲಿ ಈ ಶಂಖವನ್ನು ಊದುವುದರಿಂದ ಲಕ್ಷ್ಮೀ ವಾಸವಾಗಿರುತ್ತಾಳೆ ಮತ್ತು ಸುಖ-ಸಮೃದ್ಧಿ ಪ್ರಾಪ್ತವಾಗುತ್ತದೆ.


ಕೌರಿ ಶಂಖ
ಕೌರಿ ಶಂಖವು ಅತ್ಯಂತ ಅಪರೂಪದ ಶಂಖವಾಗಿದ್ದು, ಈ ಶಂಖವು ದೊರಕುವುದು ಅತ್ಯಂತ ದುರ್ಲಭವಾಗಿದೆ. ಈ ಶಂಖವನ್ನು ಮನೆಯಲ್ಲಿಟ್ಟರೆ ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ  ಧನಲಾಭವು ಆಗುತ್ತದೆ ಎಂದು ಹೇಳಲಾಗುತ್ತದೆ. ದೀಪಾವಳಿಯಂದು ಈ ಶಂಖವನ್ನು ಪೂಜಿಸುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 

ಕಾಮಧೇನು ಶಂಖ
ಕಾಮಧೇನು ಶಂಖವನ್ನು ಗೋಮುಖಿ ಶಂಖವೆಂತಲೂ ಕರೆಯಲಾಗುತ್ತದೆ. ಈ ಶಂಖವು ಗೋವಿನ ಆಕೃತಿಯಲ್ಲಿರುವುದರಿಂದ ಹೀಗೆ ಕರೆಸಿಕೊಳ್ಳುತ್ತದೆ. ಈ ಶಂಖವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಎಲ್ಲ ಇಷ್ಟಾರ್ಥಗಳು ಪೂರ್ಣವಾಗಲಿದೆ. ಜೊತೆಗೆ ತರ್ಕ ಶಕ್ತಿ ಸಹ ಹೆಚ್ಚಾಗಲಿದೆ. 

ಇದನ್ನು ಓದಿ: ನೀವು-ನಿಮ್ಮವರು ಜನವರಿಯಲ್ಲಿ ಹುಟ್ಟಿದ್ದರೆ, ಅವರ ಗುಣ ಸ್ವಭಾವ ಹೀಗಿರುತ್ತೆ..! 

ವಾಮಾವರ್ತಿ ಶಂಖ
ವಾಮಾವರ್ತಿ ಶಂಖವನ್ನು ಬಲಗೈಯಿಂದ ಊದಲಾಗುತ್ತದೆ. ಸುಲಭವಾಗಿ ಸಿಗುವ ಶಂಖ ಇದಾಗಿದ್ದು, ಎಲ್ಲ ಕಡೆಗಳಲ್ಲಿ ಹೆಚ್ಚಾಗಿ ಬಳಸುವ ಶಂಖ ಇದಾಗಿದೆ. ಈ ಶಂಖವನ್ನು ಊದುವುದರಿಂದ ನಕಾರಾತ್ಮಕ  ಶಕ್ತಿಯು ನಾಶವಾಗಿ ಸಕಾರಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ.  ಮನೆಯಲ್ಲಿ ವಾಮಾವರ್ತಿ ಶಂಖವನ್ನು ಇಟ್ಟಕೊಳ್ಳುವುದರಿಂದ ಸುಖ-ಶಾಂತಿ ವೃದ್ಧಿಸುತ್ತದೆ.

ಮುತ್ತಿನ ಶಂಖ
ಈ ಶಂಖವನ್ನು ಮನೆಯಲ್ಲಿಟ್ಟು ನಿತ್ಯವೂ ಪೂಜೆ ಮಾಡುವುದರಿಂದ ಸುಖ-ಸಮೃದ್ಧಿಯಾಗುತ್ತದೆ. ಈ ಶಂಖವನ್ನು ಆರ್ಥಿಕ ಉನ್ನತಿಯನ್ನು  ನೀಡುವ ಶಂಖವೆಂದು ಸಹ ಹೇಳಲಾಗುತ್ತದೆ. ಮನೆ, ಕಚೇರಿ, ಅಂಗಡಿಯಲ್ಲಿ ಇಟ್ಟುಕೊಳ್ಳವುದರಿಂದ ಲಾಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಜ.22ರಿಂದ ಶನಿಯ ನಕ್ಷತ್ರ ಪರಿವರ್ತನೆ; ಈ ರಾಶಿಗೆ ವರ್ಷವಿಡೀ ಕೆಡುಕು. 

ಮಹಾಲಕ್ಷ್ಮೀ ಶಂಖ
ಈ ಶಂಖದ ಆಕಾರವು ಶ್ರೀ ಚಕ್ರ ಯಂತ್ರವನ್ನು ಹೋಲುವಂತಿರುತ್ತದೆ. ಇದು ಮಹಾಲಕ್ಷ್ಮೀಯ ಪ್ರತೀಕವೆಂದು ಹೇಳಲಾಗುತ್ತದೆ. ಈ ಶಂಖದ ಧ್ವನಿಯು ಅತ್ಯಂತ ಮಧುರವಾಗಿರುವುದಲ್ಲದೆ, ಇದನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ.