Asianet Suvarna News Asianet Suvarna News

Zodiac Sign: ಪ್ರದರ್ಶನ ಕಲೆ ಈ ರಾಶಿಗಳ ಜನರಿಗೆ ಒಲಿಯುತ್ತೆ ಅನ್ನೋಕೆ ಈ ಸ್ಟಾರ್ಸ್ ಸಾಕ್ಷಿ

ಪ್ರದರ್ಶನ ಕಲೆ ಎಲ್ಲರಿಗೂ ಒಗ್ಗುವುದಿಲ್ಲ. ಮನೋರಂಜನೆಯ ಕ್ಷೇತ್ರದಲ್ಲಿ  ಮಿಂಚುವ ವ್ಯಕ್ತಿತ್ವ ಪ್ರಮುಖವಾಗಿ ಆರು ರಾಶಿಗಳ ಜನರಲ್ಲಿ ಕಂಡುಬರುತ್ತದೆ. ಇವರಲ್ಲಿ ಜನ್ಮಜಾತವಾಗಿ ಪ್ರದರ್ಶನ ಕಲೆ, ವರ್ಚಸ್ಸು ಮತ್ತು ಎಲ್ಲರನ್ನೂ ಸೆಳೆಯುವ ಗುಣವಿರುತ್ತದೆ. ಹೀಗಾಗಿ, ಇವರು ಆನ್‌ ಸ್ಕ್ರೀನ್‌ ನಲ್ಲಿ ವೀಕ್ಷಕರನ್ನು ಮೋಡಿ ಮಾಡಬಲ್ಲರು. 
 

These zodiac signs have inborn talent in performance and acting field like Amitabh Bachchan sum
Author
First Published Aug 2, 2023, 5:27 PM IST | Last Updated Aug 2, 2023, 5:27 PM IST

ಮನೋರಂಜನೆಯ ಕ್ಷೇತ್ರದಲ್ಲಿ ಮಿಂಚುವವರು ಸಮಾಜದಲ್ಲಿ ವಿಶೇಷ ಮನ್ನಣೆ ಗಳಿಸುತ್ತಾರೆ. ಅದರಲ್ಲೂ ಚಲನಚಿತ್ರ ಕ್ಷೇತ್ರದವರು ಇಡೀ ಸಮಾಜದ ಗಮನ ಸೆಳೆಯುತ್ತಾರೆ. ಚಿತ್ರತಾರೆಯರು ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತದೆ. ಅವರ ಖಾಸಗಿ ಜೀವನವನ್ನು ಸಹ ಜನಸಾಮಾನ್ಯರು ಭಾರೀ ಗಮನವಿಟ್ಟು ನೋಡುತ್ತಾರೆ. ಚಲನಚಿತ್ರಗಳ ಮೂಲಕ ವೀಕ್ಷಕರ ಹೃದಯ ಕದಿಯುವ ಚಿತ್ರತಾರೆಯನ್ನು ನೈಜ ಜೀವನದಲ್ಲೂ ರೋಲ್‌ ಮಾಡೆಲ್‌ ಗಳಂತೆ ಪರಿಭಾವಿಸುವವರೇ ಹೆಚ್ಚು. ತಮ್ಮ ಪ್ರತಿಭೆ, ವರ್ಚಸ್ಸು ಮತ್ತು ಪರದೆಯ ಮೇಲಿನ ತಮ್ಮ ಅಸಾಧಾರಣ ನಟನಾ ಕೌಶಲದಿಂದಾಗಿ ಅವರು ಮನೆಮಾತಾಗುತ್ತಾರೆ. ಚಲನಚಿತ್ರಗಳಲ್ಲಿ ನಟಿಸಬೇಕೆಂಬುದು ಲಕ್ಷಾಂತರ ಯುವಜನರ ಆಸೆಯಾಗಿರುತ್ತದೆ. ಆದರೆ, ಆ ಸಮುದ್ರದಲ್ಲಿ ಈಜಿ ದಡ ಸೇರುವವರು ಕೆಲವೇ ಮಂದಿ. ಅಂದರೆ, ಎಲ್ಲರಿಗೂ ಮನೋರಂಜನೆ ಕ್ಷೇತ್ರದಲ್ಲಿ ಮಿಂಚುವುದು ಸಾಧ್ಯವಿಲ್ಲ. ಕೆಲವು ರಾಶಿಗಳು ಈ ಕ್ಷೇತ್ರಕ್ಕೆ ಬೇಕಾದ ವರ್ಚಸ್ಸು ಮತ್ತು ಕೌಶಲವನ್ನು ನೈಸರ್ಗಿಕವಾಗಿ ಹೊಂದಿರುತ್ತವೆ. ಈ ರಾಶಿಗಳ ಜನರು ಮನೋರಂಜನಾ ವಲಯದಲ್ಲಿ ಸಾಕಷ್ಟು ಹೆಸರು ಮಾಡುವ ಎಲ್ಲ ಪ್ರತಿಭೆ ಹೊಂದಿರುತ್ತಾರೆ. 

•    ಸಿಂಹ (Leo)
ಎಲ್ಲರ ಕೇಂದ್ರಬಿಂದುವಾಗಬೇಕು (Center) ಎನ್ನುವ ಅದಮ್ಯ ತುಡಿತ ಹೊಂದಿರುವ ಸಿಂಹ ರಾಶಿಯವರು ಸ್ಪಾಟ್‌ ಲೈಟ್‌ (Spotlight) ಗೆ ಸಾಕಷ್ಟು ಫಿಟ್‌ ಆಗುತ್ತಾರೆ. ಈ ವಲಯಕ್ಕೆ ಬೇಕಾದ ಸ್ವಂತಿಕೆ, ಆತ್ಮವಿಶ್ವಾಸ (Confidence) ಇವರಲ್ಲಿರುತ್ತದೆ. ಗಮನಾರ್ಹ ಛಾಪು ಮೂಡಿಸುವ ಮತ್ತು ವೀಕ್ಷಕರನ್ನು (Audience) ಸೆಳೆಯುವ ಕೌಶಲ ಇವರಲ್ಲಿರುತ್ತದೆ. ನಾಯಕತ್ವ, ಧೈರ್ಯ, ತಮ್ಮತನ ಬಿಂಬಿಸುವ ಪಾತ್ರಗಳಲ್ಲಿ ಇವರು ತಮ್ಮದೇ ದಾರಿ ನಿರ್ಮಿಸಬಲ್ಲರು. ಬಾಲಿವುಡ್‌ ನಟಿ ಕಾಜೋಲ್‌ ರಾಶಿ ಸಿಂಹ.

ಈ ಎರಡು Zodiac Signs ಮದ್ವಯಾದರೆ ಮುಗಿದೇ ಹೋಯಿತು ಕಥೆ, ಜೀವನವೇ ಬರ್ಬಾದ್!

•    ತುಲಾ (Libra)
ತುಲಾ ರಾಶಿ ಸೌಂದರ್ಯ, ವರ್ಚಸ್ಸು (Charisma) ಹೊಂದಿರುವುದರಿಂದ ಈ ರಾಶಿಯ ಜನ ಮನೋರಂಜನೆ (Entertainment) ವಲಯದಲ್ಲಿ ಮಿಂಚಬಲ್ಲರು. ಸಹಜವಾಗಿ ಇವರು ಸ್ಟೈಲ್‌ (Style) ಮತ್ತು ಸೊಬಗನ್ನು ಹೊಂದಿರುವುದರಿಂದ ಸ್ಕ್ರೀನ್‌ (Screen) ಮೇಲೆಯೂ ಇವರು ಹಾಗೆಯೇ ಇರಬಲ್ಲರು. ಬಹುಆಯಾಮದ ವ್ಯಕ್ತಿತ್ವ ಹೊಂದಿದ್ದು, ತಮ್ಮ ಪಾತ್ರದ ಬಗ್ಗೆ ಆಳವಾದ ತಿಳಿವಳಿಕೆ ಬೆಳೆಸಿಕೊಳ್ಳುತ್ತಾರೆ. ಮಾನವ ಸಂಬಂಧ (Human Relation) ಮತ್ತು ಭಾವನೆಗಳನ್ನು ಬಿಂಬಿಸುವ ಪಾತ್ರಗಳು ಇವರಿಗೆ ಹೊಂದಾಣಿಕೆಯಾಗುತ್ತವೆ. ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಇದೇ ರಾಶಿಗೆ ಸೇರಿದ್ದಾರೆ.

•    ಮಿಥುನ
ಚುರುಕು ಮತ್ತು ಬಹುಮುಖ ಪ್ರತಿಭೆ ಹೊಂದಿರುವ ಮಿಥುನ ರಾಶಿಯ ಜನರಲ್ಲಿ ಕಥೆ ಹೇಳುವ ಮತ್ತು ಜೀವನಕ್ಕೆ ಅವುಗಳನ್ನು ರೂಪಾಂತರಿಸುವ ಅರಿವು ಸಹಜವಾಗಿರುತ್ತದೆ. ವಿವಿಧ ವ್ಯಕ್ತಿತ್ವಗಳನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ವರ್ಚಸ್ಸು ಮತ್ತು ವಿನೋದದ ಮಿಥುನ ರಾಶಿಯವರು ವೀಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಾವಾಗಲೂ ಯಶಸ್ವಿಯಾಗುತ್ತಾರೆ. ಚುರುಕು ಯೋಚನೆ, ಅಳವಡಿಕೆ ಮತ್ತು ವಿನೋದದ ಪಾತ್ರಗಳಲ್ಲಿ ಇವರು ಮಿಂಚಬಲ್ಲರು. ಪರೇಶ್‌ ರಾವಲ್‌, ಅನುಮಪ್‌ ಖೇರ್‌ ಇದೇ ರಾಶಿಯವರು. 

•    ವೃಶ್ಚಿಕ
ದ್ವಾದಶ ರಾಶಿಗಳ ಪೈಕಿ ನಿಗೂಢ ಹಾಗೂ ತೀವ್ರತೆಯ ರಾಶಿಯಾಗಿರುವ ವೃಶ್ಚಿಕ ರಾಶಿಯ ಜನ ಆಕರ್ಷಕತೆ ಹೊಂದಿರುತ್ತಾರೆ. ಸ್ಕ್ರೀನ್‌ ಮೇಲೆಯೂ ಅಷ್ಟೇ ಆಕರ್ಷಣೆ ಮೂಡಿಸುತ್ತಾರೆ. ಜನರ ಮಾನಸಿಕತೆ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಸಂಕೀರ್ಣ ವ್ಯಕ್ತಿತ್ವ, ನಿಗೂಢ, ದೃಢವಾದ ಹಾಗೂ ಆಳವಾದ ಪಾತ್ರಗಳನ್ನು ಇವರು ಸುಲಭವಾಗಿ ನಿಭಾಯಿಸಬಲ್ಲರು. ಮಾನವನ ವ್ಯಕ್ತಿತ್ವದಲ್ಲಿರಬಹುದಾದ ನೆಗೆಟಿವ್‌ ಧೋರಣೆಗಳು, ಅಧಿಕಾರ, ಆಸೆ, ದೌರ್ಬಲ್ಯಗಳನ್ನು ಇವರು ಅತ್ಯುತ್ತಮವಾಗಿ ಬಿಂಬಿಸಬಲ್ಲರು. ಶಾರೂಖ್‌ ಖಾನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಇದೇ ರಾಶಿಗೆ ಸೇರಿದ್ದಾರೆ.

•    ಮೇಷ (Aries)
ಭಯರಹಿತ ಮತ್ತು ಬೋಲ್ಡ್‌ ಮೇಷ ರಾಶಿಯ ಜನ ಆನ್‌ ಸ್ಕೀನ್‌ ನಲ್ಲಿ ಅಷ್ಟೇ ಡೈನಮಿಕ್‌ (Dynamic) ಆಗಿರುತ್ತಾರೆ. ಜನ್ಮಜಾತವಾಗಿ ಇವರಲ್ಲಿ ಪ್ರದರ್ಶನ ಕಲೆ ಇರುತ್ತದೆ. ಧೈರ್ಯ, ಬದ್ಧತೆ, ಸಾಹಸದ ಪಾತ್ರಗಳನ್ನು ಅತ್ಯುತ್ತಮವಾಗಿ ನಟಿಸಬಲ್ಲರು. ಸ್ಟಂಟ್‌ ಗಳನ್ನು ಮಾಡುವಲ್ಲಿ ಹಿಂದೆ ಬೀಳುವುದಿಲ್ಲ. ಕಂಗನಾ ರಣಾವತ್‌ ಮತ್ತು ಅಜಯ್‌ ದೇವಗನ್‌ ಮೇಷ ರಾಶಿಯವರಾಗಿದ್ದಾರೆ. 

Rich Zodiac Signs: ಇವರು ಅಂಬಾನಿ-ಅದಾನಿಯಂತೆ ಶ್ರೀಮಂತರಾಗುತ್ತಾರೆ; ಈ ನಕ್ಷತ್ರದಲ್ಲಿ ಜನಿಸಿದವರು ಕುಬೇರರು..!

•    ಧನು (Sagittarius)
ಸ್ವತಂತ್ರ ಧೋರಣೆಯ ಧನು ರಾಶಿಯ ಜನ ಜನ್ಮಜಾತವಾಗಿ ಕಥೆ ಹೇಳುವ ಸಾಮರ್ಥ್ಯ ಮತ್ತು ಪ್ರದರ್ಶನ (Performance) ಕೌಶಲ ಹೊಂದಿರುತ್ತಾರೆ. ಆಕರ್ಷಕ ವ್ಯಕ್ತಿತ್ವ ಹೊಂದಿರುವ ಇವರು ಆನ್‌ ಸ್ಕ್ರೀನ್‌ ನಲ್ಲೂ ಮೋಡಿ ಮಾಡಬಲ್ಲರು. ಆಶಾದಾಯಕ ಮತ್ತು ಉತ್ಸಾಹದ ವ್ಯಕ್ತಿತ್ವದ ಇವರು ಸಾಹಸ, ವಿನೋದ ಮತ್ತು ಕುತೂಹಲದ ಪಾತ್ರಗಳಲ್ಲಿ ಮಿಂಚಬಲ್ಲರು. ಹಿರಿಯ ನಟರಾದ ಧರ್ಮೇಂದ್ರ, ದಿಲೀಪ್‌ ಕುಮಾರ್‌ ಅವರಿಂದ ಹಿಡಿದು ಗೋವಿಂದ, ಜಾನ್‌ ಅಬ್ರಾಹಂವರೆಗೆ ಅನೇಕರು ಧನು ರಾಶಿಯವರಾಗಿದ್ದಾರೆ.


 

Latest Videos
Follow Us:
Download App:
  • android
  • ios