Asianet Suvarna News Asianet Suvarna News

Zodiac Sign: ಡ್ರೆಸ್ ಸೆನ್ಸ್ ವಿಚಾರದಲ್ಲಿ ಈ ರಾಶಿಯವ್ರನ್ನ ಮೀರಿಸೋಕಾಗಲ್ಲ

ಗುಂಪಿನಲ್ಲಿದ್ದರೂ ಕೆಲವರು ತಮ್ಮ ಡ್ರೆಸ್ ಸೆನ್ಸ್ ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಅವರ ವ್ಯಕ್ತಿತ್ವ ಅವರು ಧರಿಸುವ ಬಟ್ಟೆಯಲ್ಲೂ ಗೋಚರವಾಗುತ್ತದೆ. ಅಂತಹ ಜನ ಈ ಕೆಲವು ರಾಶಿಗಳಲ್ಲಿ ಸುಲಭವಾಗಿ  ಕಂಡುಬರುತ್ತಾರೆ. 
 

These zodiac signs have good sense of clothing
Author
First Published Jan 3, 2023, 5:14 PM IST

ಸಮಾರಂಭ, ವಿವಾಹ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಸಿಂಪಲ್ಲಾಗಿ ಇದ್ದುಕೊಂಡೇ ಸರ್ವಾಂಗ ಭೂಷಿತೆಯರಂತೆ ಮಿಂಚುವವರನ್ನು ನೋಡುತ್ತೇವೆ. ಅದ್ದೂರಿ ಸಿಂಗಾರ ಮಾಡಿಕೊಂಡರೂ ಸುಂದರಾಂಗಿ ಎನಿಸಲು ವಿಫಲವಾಗುವವರನ್ನೂ ಕಾಣುತ್ತೇವೆ. ಹಾಗಿದ್ದರೆ ಮಿಂಚುವವರಲ್ಲಿ ಅದೇನಿದೆ? “ಚಂದ’ ಎನಿಸಲು ಸೋಲುವವರಲ್ಲಿ ಏನಿಲ್ಲ? ಕೆಲವರನ್ನು ನೀವು ನೋಡಿರಬಹುದು, ತಮಗೆ ಒಪ್ಪುವ ದಿರಿಸುಗಳನ್ನು ಮಾತ್ರವೇ ಧರಿಸುತ್ತಾರೆ. ಅದು ಬಣ್ಣದ ಆಯ್ಕೆಯಲ್ಲಾಗಲೀ ಅಥವಾ ಬಟ್ಟೆಯ ಗುಣಮಟ್ಟ ಹಾಗೂ ವಿವಿಧ ವಿನ್ಯಾಸಗಳ ಆಯ್ಕೆಯ ವಿಚಾರದಲ್ಲಿ ಆಗಿರಲಿ. ಅವರು ಎಂದೆಂದೂ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ. ಹಾಗೆಯೇ, ಇನ್ನು ಕೆಲವರು ಏನೇನೋ ಫ್ಯಾಷನ್ ಅನುಸರಿಸಲು ಹೋದರೂ, ದುಬಾರಿ ಬಟ್ಟೆ ತೊಟ್ಟರೂ ಅವರ ಒಟ್ಟಾರೆ ಇಮೇಜ್ ಹಿತವೆಂದು ಭಾಸವಾಗುವುದಿಲ್ಲ. ಇದ್ಯಾವ ರೀತಿಯ ಗುಟ್ಟು ಎನಿಸಬಹುದು. ಅಸಲಿಗೆ, ಇದು ಕೆಲವರಲ್ಲಿರುವ ಜನ್ಮದತ್ತವಾಗಿರುವ ಗುಣ. ಅವರು ತಮ್ಮಷ್ಟಕ್ಕೇ ತಾವು ಫ್ಯಾಷನ್ ಐಕಾನ್ ಗಳು ಎನಿಸಿಕೊಳ್ಳಬಲ್ಲರು. ಅತಿಯಾಗಿ ಫ್ಯಾಷನ್ ಮಾಡದೆಯೂ ಉತ್ತಮ ಪ್ರಭಾವ ಬೀರಬಲ್ಲರು, ಸುಂದರರಾಗಿ ಕಾಣಬಲ್ಲರು. ಕೆಲವು ರಾಶಿಗಳ ಮಹಿಮೆಯೇ ಹಾಗಿರುತ್ತದೆ. ಹೌದು, ಈ ನಾಲ್ಕು ರಾಶಿಗಳ ಜನರು ಸಾಕಷ್ಟು ಫ್ಯಾಷನ್ ಸೆನ್ಸ್ ಹೊಂದಿರುತ್ತಾರೆ ಹಾಗೂ ಅದನ್ನು ತೋರ್ಪಡಿಸಿಕೊಳ್ಳುತ್ತಾರೆ. 

•    ಮೇಷ (Aries)
ಪ್ರತಿಯೊಬ್ಬರೂ ನಮ್ಮದೇ ಆದ ಫ್ಯಾಷನ್ ಸೆನ್ಸ್ (Fashion Sense) ಹೊಂದಿರುತ್ತೇವೆ. ಸಾಮಾನ್ಯವಾಗಿ ಬಹಳಷ್ಟು ಜನ ಈಗ ಹಾಲಿ ಯಾವ ಫ್ಯಾಷನ್ ಮಾದರಿ ಇದೆಯೋ ಅದನ್ನು ಅನುಸರಿಸುತ್ತಾರೆ. ಸ್ಟೈಲಿ (Styli) ಎನಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಗುಂಪಿನಲ್ಲಿ ಗೋವಿಂದ ಎನಿಸಿಕೊಳ್ಳದೆ ವಿಭಿನ್ನವಾದ (Different) ಲುಕ್ ನಲ್ಲಿ ಗಮನ ಸೆಳೆಯುವಲ್ಲಿ ಮೇಷ ರಾಶಿಯವರು ಎತ್ತಿದ ಕೈ. ಮೇಷ ರಾಶಿಯವರು ಫ್ಯಾಷನ್ ಟ್ರೆಂಡ್ ಸೆಟರ್ (Trendsetter) ಎನಿಸಿಕೊಳ್ಳುವವರು. ತಮ್ಮ ಫ್ಯಾಷನ್ ಸ್ಟೈಲ್ ಅನ್ನು ಮುಕ್ತವಾಗಿ ವ್ಯಕ್ತಪಡಿಸುವಲ್ಲಿ ಹಿಂದೇಟು ಹಾಕುವುದಿಲ್ಲ. ತಮ್ಮ ವಿಭಿನ್ನ ವ್ಯಕ್ತಿತ್ವಕ್ಕೆ ಬೆಲೆ ನೀಡುತ್ತಾರೆ. 

•    ವೃಷಭ
ಈ ರಾಶಿಯ ಜನ ಫ್ಯಾಷನ್ ವಿಚಾರದಲ್ಲೂ ದುಬಾರಿ (Lavish), ಅದ್ದೂರಿತನವನ್ನು ಇಷ್ಟಪಡುತ್ತಾರೆ. ಸಮಯದ ಹಂಗಿಲ್ಲದ (Timeless) ಫ್ಯಾಷನ್ ಡಿಸೈನ್ ಟ್ರೆಂಡ್ ಅನುಸರಿಸುತ್ತಾರೆ. ತಮ್ಮ ಫ್ಯಾಷನ್ ಮಾನದಂಡವನ್ನು ಅನುಸರಿಸುತ್ತಾರೆ, ಬೇರೆಯವರು ಹೇಳಿದ್ದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಧರಿಸುವ ಡ್ರೆಸ್ (Dress) ಗಳೆಲ್ಲವೂ ವಿಭಿನ್ನವಾಗಿಯೇ ಇರಬೇಕೆಂದು ಬಯಸುತ್ತಾರೆ ಹಾಗೂ ಈ ವಿಚಾರದಲ್ಲಿ ಪದೇ ಪದೆ ಪ್ರಯೋಗ (Experiment) ಮಾಡುತ್ತಲೇ ಇರುತ್ತಾರೆ. ತಮಗೆ ಖುಷಿಯಾಗುವ, ಆತ್ಮವಿಶ್ವಾಸ (Confident) ಮೂಡಿಸುವ ಬಟ್ಟೆ ಹಾಗೂ ಅಲಂಕಾರಿಕ ಸಾಮಗ್ರಿಗಳನ್ನಷ್ಟೇ ಬಳಸುತ್ತಾರೆ ಹಾಗೂ ಅವುಗಳನ್ನು ಅತ್ಯಂತ ಹೆಮ್ಮೆಯಿಂದ ಧರಿಸುತ್ತಾರೆ. 

Shani Gochar 2023: ಕುಂಭಕ್ಕೆ ಶನಿ, 5 ರಾಶಿಗಳಿಗೆ ಕಷ್ಟಕೋಟಲೆ ಹೆಚ್ಚಳ! ಇರಲಿ ಎಚ್ಚರ!

•    ಸಿಂಹ (Leo)
ಸಿಂಹ ರಾಶಿಯವರು ಬಟ್ಟೆಗಳ ಆಯ್ಕೆ ವಿಚಾರದಲ್ಲಿ ಪ್ರಬುದ್ಧರು. ತಮ್ಮತನವನ್ನು ಬಿಂಬಿಸುವ ಉಡುಪು ಧರಿಸುವುದು ಇವರಿಗೆ ಇಷ್ಟ. ಅತಿರಂಜಿತ ಎನಿಸುವ, ಅದ್ದೂರಿತನ ಬಿಂಬಿಸುವ ಬಟ್ಟೆಗಳನ್ನೂ ಧರಿಸಬಲ್ಲರು. ಹೋದೆಡೆಯಲ್ಲೆಲ್ಲ ತಮ್ಮ ಛಾಪು ಮೂಡಿಸುವ ಇವರ ಡ್ರೆಸ್ ಸೆನ್ಸ್ ಅತ್ಯುತ್ತಮ. ತಮ್ಮತನವನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವುದು (Expressive) ಇವರ ಬಯಕೆಯೂ ಹೌದು, ಇದರಲ್ಲಿ ಯಶಸ್ವಿಯೂ ಆಗುತ್ತಾರೆ. 

ಈ ಲಕ್ಷಣಗಳು ನಿಮ್ಮ ಮೇಷ ರಾಶಿಯ ಗೆಳೆಯನಲ್ಲಿದ್ದರೆ, ಆತ ನಿಮ್ಮ ಪ್ರೀತಿಯಲ್ಲಿದಾನೆ ಅಂತಲೇ ಅರ್ಥ!

•    ಧನು (Sagittarius)
ಡೇರಿಂಗ್ (Daring) ರಾಶಿಗಳಲ್ಲಿ ಒಂದಾದ ಧನು ರಾಶಿಯ ಜನ ತಾವು ಧರಿಸುವ ಉಡುಪಿನ ವಿಚಾರದಲ್ಲಿ ಸೂಕ್ಷ್ಮತನ ಹೊಂದಿರುತ್ತಾರೆ. ನಿರಾತಂಕವೆನಿಸುವ, ಕ್ಯಾಷುವಲ್ ಬಟ್ಟೆ ಇವರ ಆಯ್ಕೆ. ಕಂಫರ್ಟ್ (Comfort)ಗೆ ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದಲೇ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಬಟ್ಟೆಯ ವಿಚಾರದಲ್ಲಿ ಇವರ ಧೋರಣೆ ತಮ್ಮ ಅಸ್ತಿತ್ವವನ್ನು ಸೆಲೆಬ್ರೇಟ್ (Celebrate) ಮಾಡುದ ಮಾದರಿಯಲ್ಲಿರುತ್ತದೆ. ತಮಗೆ ಯಾವುದು ಚೆನ್ನಾಗಿ ಕಾಣಿಸುತ್ತದೆ, ಯಾವ ಬಣ್ಣ ಹೊಂದುತ್ತದೆ, ಯಾವ ಬಟ್ಟೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಅರಿತುಕೊಂಡಿರುತ್ತಾರೆ. ಹೀಗಾಗಿ, ಸ್ಮಾರ್ಟ್ (Smart) ಆಯ್ಕೆ ಮಾಡುತ್ತಾರೆ. 

Follow Us:
Download App:
  • android
  • ios