ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!

ಕೆಲವರ ಬಾಯಿ ಅಂದ್ರೆ ಬಾಯಿ. ಅವರೊಂದಿಗೆ ಜಗಳ ಮಾಡಿ ಗೆಲ್ಲೋಕಾಗಲ್ಲ. ಹಾಗೆಯೇ ಅವರ ಜೊತೆ ಯಾವುದಾದರೂ ವಿಷಯಕ್ಕೆ ವಾದಕ್ಕೆ ನಿಂತರೆ ಎದುರಿರುವವರು ಸೋತು ಶರಣಾಗುವವರೆಗೆ ಸುಮ್ಮನಾಗುವವರೂ ಅವರಲ್ಲ. ಇಂಥ ಜಗಳಗಂಟರು ಯಾವ ರಾಶಿಗೆ ಸೇರಿರುತ್ತಾರೆ ತಿಳ್ಕೋಬೇಕಾ?

These zodiac signs argue and fight the most skr

ಸಾಕಷ್ಟು ತರ್ಕಬದ್ಧವಲ್ಲದವರೊಂದಿಗೆ ಮಾತನಾಡುವುದು ಹತಾಶೆ ಉಂಟುಮಾಡುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಮುಂಗೋಪ ಸ್ವಭಾವದವರ ಬಳಿ ಏನನ್ನಾದರೂ ಹೇಳಿಕೊಳ್ಳುವುದೇ ಕಷ್ಟವೆನಿಸುತ್ತದೆ. ಈ ಕೆಲವರು ಎಲ್ಲ ಮಾತಿಗೂ ವಾದಿಸುತ್ತಾರೆ. ಅವರೊಂದಿಗೆ ಹೇಗೆ ಮಾತಾಡಬೇಕೆಂಬುದೇ ತಿಳಿಯದೆ ಕಂಗಾಲಾಗುವಂತಾಗಬಹುದು. ಯಾವಾಗ ಸ್ಪೋಟವಾಗುತ್ತಾರೋ ತಿಳಿಯದು. ಜಗಳಕ್ಕೆ ಹೆದರದವರಿವರು. ಇಂಥವರೊಂದಿಗೆ ಮಾತಾಡುವಾಗ ವಾದಕ್ಕೆ ಮಾತು ತಿರುಗದಂತೆ, ಜಗಳದತ್ತ ಮುಖ ಮಾಡದಂತೆ ಎಚ್ಚರ ವಹಿಸುವುದೇ ಉತ್ತಮ ಮಾರ್ಗ. ಇಂಥ ವಾದ ಮಾಡುವ ಸ್ವಭಾವದವರು, ಹೆಚ್ಚು ಜಗಳವಾಡುವವರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ. 

ಸಿಂಹ ರಾಶಿ(Leo)
ಸಿಂಹ ರಾಶಿಯವರು ಉಗ್ರರು, ನಾಟಕೀಯರು ಮತ್ತು ಭಿನ್ನಾಭಿಪ್ರಾಯ ಬಂದಾಗ ನಿಮ್ಮ ದೊಡ್ಡ ಎದುರಾಳಿಗಳಾಗಬಹುದು. ವಿಷಯವನ್ನು ಶಾಂತವಾಗಿ ಪರಿಹರಿಸಬಹುದಾದರೂ, ಸಿಂಹ ರಾಶಿಯವರು ಅದನ್ನು ವೈಭವೀಕರಿಸಲು ಮತ್ತು ತೀವ್ರಗೊಳಿಸಲು ಒಂದು ಮಾರ್ಗವನ್ನು ಹುಡುಕುತ್ತಾರೆ. ವಿಶೇಷವಾಗಿ ನೀವು ಮೃದುಭಾಷಿಯಾಗಿದ್ದು ಅಥವಾ ದುರ್ಬಲವಾಗಿದ್ದರೆ ಅವರು ಮತ್ತಷ್ಟು ಜೋರಾಗಿ ನಿಮ್ಮ ವೀಕ್ನೆಸ್ ಇಟ್ಟುಕೊಂಡು ಮಾತಾಡುತ್ತಾರೆ. ಸಿಂಹ ರಾಶಿಯೊಂದಿಗಿನ ಜಗಳವನ್ನು ಕೊನೆಗೊಳಿಸಲು ಉತ್ತಮ ಮಾರ್ಗವೆಂದರೆ ಕ್ಷಮೆ ಯಾಚಿಸುವುದು ಮತ್ತು ಮುಂದೆ ಇದೇ ರೀತಿಯ ಸಂದರ್ಭಗಳನ್ನು ತಪ್ಪಿಸಲು ಏನು ತಪ್ಪಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡುವುದು.

ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?

ವೃಷಭ ರಾಶಿ(Taurus)
ವೃಷಭ ರಾಶಿಯವರು ಹಠಮಾರಿಗಳು. ಆದರೆ ನೀವು ಅವರೊಂದಿಗೆ ಭಿನ್ನಾಭಿಪ್ರಾಯಕ್ಕೆ ಸಿಲುಕದ ಹೊರತು ಅವರು ಜಗಳವಾಡುವುದಿಲ್ಲ. ಅವರು ತಮ್ಮ ವಾದ ಮಂಡಿಸುತ್ತಾ ಗಂಟೆಗಳವರೆಗೆ ಎಳೆಯಬಹುದು. ಮತ್ತು ತಮ್ಮಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳಲು ಸಹ ಇಷ್ಟಪಡುವುದಿಲ್ಲ. ಏಕೆಂದರೆ ತಾವು ತಪ್ಪಾಗಿ ಗ್ರಹಿಸಲು ಸಾಧ್ಯವಿಲ್ಲ ಎಂದವರು ಅತಿಯಾಗಿ ನಂಬುತ್ತಾರೆ. ಅವರು ತಮ್ಮ ಕಾರ್ಯಗಳನ್ನು ತ್ವರಿತವಾಗಿ ಸಮರ್ಥಿಸಿಕೊಳ್ಳಬಹುದು, ಆದ್ದರಿಂದ ವೃಷಭ ರಾಶಿಯೊಂದಿಗೆ ಮಾತಾಡುವಾಗ ಹೋರಾಟಕ್ಕೆ ಸಿದ್ಧರಾಗಿರಿ.

ವೃಶ್ಚಿಕ ರಾಶಿ(Scorpio)
ನಿಮಗೆ ತಿಳಿಯುವ ಮೊದಲೇ ಅವರು ಮಾತನ್ನು ಬಿಸಿಬಿಸಿಯಾಗಿ ಹೆಚ್ಚಿಸಬಹುದು. ಅವರು ಪ್ರಚೋದನೆಯನ್ನು ಅನುಭವಿಸಬಹುದು ಮತ್ತು ವಾದದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ನೀವು ಅವರೊಂದಿಗೆ ಜಗಳವಾಡುತ್ತಿದ್ದರೆ, ಅವರು ತುಂಬಾ ನೋವುಂಟು ಮಾಡುವ ವಿಷಯವನ್ನು ಹೇಳಿ ನೋಯಿಸುತ್ತಾರೆ. ಸರಿಯಾಗಿ ಏಟು ಕೊಟ್ಟೆ ಎಂದು ಬೀಗುತ್ತಾರೆ. ಅದು ನಿಮ್ಮನ್ನು ಕೆರಳಿಸಿ ಸ್ಫೋಟಿಸಲು ಕಾರಣವಾಗಬಹುದು. ಅದು ನಿಮ್ಮ ಉದ್ದೇಶವಾಗಿಲ್ಲದಿರಬಹುದು, ಆದರೆ ವೃಶ್ಚಿಕ ರಾಶಿಯವರು ನೋಯಿಸುವಥದ್ದನ್ನು ಹೇಳುವ ಅವಕಾಶವನ್ನು ಬಿಡುವುದಿಲ್ಲ.

ಮಿಥುನ ರಾಶಿ (Gemini)
ಅವರು ತುಂಬಾ ಅನಿರೀಕ್ಷಿತ ಸ್ವಭಾವದವರು. ಅವರ ಮನಸ್ಥಿತಿಯು ಯಾವುದೇ ಸಮಯದಲ್ಲಿ ಬದಲಾಗಬಹುದು, ವಿಶೇಷವಾಗಿ ಅವರು ಆತ್ಮಾವಲೋಕನ ಮಾಡುವಾಗ ಅಥವಾ ಶಾಂತ ಮತ್ತು ಭಾವನಾತ್ಮಕ ದಿನವನ್ನು ಹೊಂದಿರುವಾಗ ನೀವು ಅವರನ್ನು ಕೆರಳಿಸಿದರೆ ಅದು ನಿಮ್ಮದೇ ತಪ್ಪು. ಅವರು ಬಹಳ ರಕ್ಷಣಾತ್ಮಕವಾಗಿ ಮಾತನಾಡಿ ವಾದಿಸಿ ಗೆಲ್ಲುತ್ತಾರೆ. ನೀವು ಮಿಥುನ ರಾಶಿಯವರೊಂದಿಗೆ ವಾದದಲ್ಲಿ ತೊಡಗಿದರೆ, ನಿಮ್ಮ ಕಿವಿಗಳು ಬ್ಲಾಸ್ಟ್ ಆಗುತ್ತವೆ, ಏಕೆಂದರೆ ಅವರು ಪಟ್ಟುಬಿಡದೆ ವಾದಿಸುತ್ತಲೇ ಇರುತ್ತಾರೆ.

Weekly Love Horoscope: ಪ್ರೇಮ ಸಂಬಂಧ ಬಲಪಡಿಸಲು ಈ ರಾಶಿ ಮಾಡಬೇಕಾದದ್ದಿಷ್ಟು..

ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರೊಂದಿಗೆ ಮಾತನಾಡುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು. ಅವರು ತುಂಬಾ ಭಾವನಾತ್ಮಕ ಮತ್ತು ಸಂವೇದನಾಶೀಲರು. ಹೀಗಾಗಿ, ಈ ಲಕ್ಷಣವು ಅವರನ್ನು ಸ್ಫೋಟಕವಾಗಿ ವಾದಿಸುವಂತೆ ಮಾಡಬಹುದು. ಒಮ್ಮೊಮ್ಮೆ, ಅವರು ತಿಂಗಳುಗಟ್ಟಲೆ ಹಿಡಿದಿಟ್ಟುಕೊಳ್ಳಬಹುದಾದ ಏನನ್ನಾದರೂ ಹೇಳುವ ಮೂಲಕ ನೀವು ಅವರನ್ನು ನೋಯಿಸಬಹುದು. ಆದ್ದರಿಂದ, ಬಹುಶಃ ತಿಂಗಳುಗಳು ಅಥವಾ ವರ್ಷಗಳ ನಂತರ, ವಿಷಯ ಮುಗಿದಿದ್ದರೂ ಸಮಯ ಬಂದಾಗ ಅವರು ಅದೇ ವಿಷಯ ಎತ್ತಿ ಆಡುತ್ತಾರೆ. ತಮಗೆ ನೋವಾದ ವಿಷಯವನ್ನು ಅವರೆಂದೂ ಮರೆಯುವುದಿಲ್ಲ. ಅವರು ಶಾಂತವಾಗಿರಬಹುದು ಆದರೆ ತುಂಬಾ ಆಕ್ರಮಣಕಾರಿ.
 

Latest Videos
Follow Us:
Download App:
  • android
  • ios