Asianet Suvarna News Asianet Suvarna News

ಈ ಜನ್ಮರಾಶಿಯಲ್ಲಿ ಜನಿಸಿದವರು ನಿಮ್ಮನ್ನು ಬಿಟ್ಟುಬಿಡಲು ಹೇಸುವುದಿಲ್ಲ!

ಕೆಲವರು ನಿಮ್ಮನ್ನು ನಡುನೀರಿನಲ್ಲಿ ಕೈ ಬಿಟ್ಟು ಹೋಗಿ ಬಿಡಬಲ್ಲರು. ಅಂಥವರ ಸ್ವಭಾವ ನಿಮಗೆ ಮೊದಲೇ ಗೊತ್ತಾಗದು. ಆದರೆ ಕೆಲವು ಜನ್ಮರಾಶಿಯವರು ಸಿಟ್ಟಿಗೆದ್ದರೆ, ವಂಚನೆಗೊಳಗಾದೆ ಎಂಬ ಭಾವನೆ ಬಂದರೆ, ಯಾವ ಕ್ಷಣ ಬೇಕಾದರೂ ನಿಮ್ಮನ್ನು ಬಿಡಬಹುದು ಎಂಬುದು ನಿಮ್ಮ ಅರಿವಿನಲ್ಲಿರಲಿ.

 

These zodiac sign people wont hesitate to leave you
Author
Bengaluru, First Published Nov 6, 2021, 2:37 PM IST
  • Facebook
  • Twitter
  • Whatsapp

ನಿಮ್ಮ ಕೈ ಬಿಟ್ಟು ಯಾರು ಹೋಗುತ್ತಾರೆ ಎಂಬುದು ನಿಮಗೆ ಸುಲಭವಾಗಿ ತಿಳಿಯದು. ಹೆಚ್ಚಿನ ಸಮಯಗಳಲ್ಲಿ ಅದು ನಿಮ್ಮ ಸ್ನೇಹಿತ, ಪಾಲುದಾರ ಅಥವಾ ಕುಟುಂಬದ ಸದಸ್ಯರಾಗಿರಬಹುದು. ಅಂತಹ ಜನರು ತುಂಬಾ ಕಡಿಮೆ ಸಹಿಷ್ಣು ಶಕ್ತಿಯನ್ನು ಹೊಂದಿರುತ್ತಾರೆ; ಅವರು ದ್ರೋಹದ ದೃಷ್ಟಿಯನ್ನು ಸಹಿಸಲಾರರು ಮತ್ತು ಅವರ ಶಬ್ದಕೋಶದಲ್ಲಿ 'ಕ್ಷಮೆ'ಯನ್ನು ಸಹ ಇಟ್ಟುಕೊಳ್ಳುವುದಿಲ್ಲ. ಆದ್ದರಿಂದ, ಒಬ್ಬ ವ್ಯಕ್ತಿಯು ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ವಿಶೇಷವಾಗಿ, ನೀವು ಅವರ ಸಿಟ್ಟಿನ ನೋಟಕ್ಕೆ ತುತ್ತಾದರೆ ಅವರು ನಿಮ್ಮನ್ನು ಕ್ಷಮಿಸುತ್ತಾರೆಯೇ ಅಥವಾ ಅವರು ನಿಮ್ಮ ಕೈ ಬಿಡುತ್ತಾರೆಯೇ? ಇದಕ್ಕೆ ಉತ್ತರವು ಖಗೋಳ ರಾಶಿಚಕ್ರದ ಚಿಹ್ನೆಗಳಲ್ಲಿದೆ, ಇದರ ಮೂಲಕ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಮೌಲ್ಯಮಾಪನ ಮಾಡಬಹುದು. ನಿಮ್ಮನ್ನು ತೊರೆಯುವ ಸಾಧ್ಯತೆಯಿರುವ ಅಗ್ರ ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.

ಕುಂಭ ರಾಶಿ (Aquarius)

ತಮ್ಮ ಪ್ರೀತಿಪಾತ್ರರೇ ಆದರೂ ಸುಲಭವಾಗಿ ಸುಳ್ಳು ಹೇಳುವ ಅಥವಾ ದ್ರೋಹ ಮಾಡುವ ಜನರನ್ನು ಇವರು ಕ್ಷಮಿಸಲು ಸಾಧ್ಯವಿಲ್ಲ. ಇವರ ಪಾಲುದಾರರು ಇವರಿಗೆ ಸುಳ್ಳು ಹೇಳಿದರೆ, ಕುಂಭದವರು ಅಂಥವರನ್ನು ಒಂದೇ ಬಾರಿಗೆ ಥಟ್ಟನೆ ತಿರಸ್ಕರಿಸಿ ಬಿಡಬಹುದು. ಇವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಆದರೆ ಇವರ ಸಂಗಾತಿಯು ಇವರಿಗೆ ಕ್ಷಮೆಯನ್ನು ಕೇಳಿದರೆ, ಇವರು ಅವರನ್ನು ಕ್ಷಮಿಸಿದಂತೆ ವರ್ತಿಸಬಹುದು, ಆದರೆ ಅವರು ಮಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ.

Relationship: ಈ ರಾಶಿಯವರನ್ನು ಮದುವೆಯಾದರೆ ಫಸ್ಟ್ ನೈಟ್ ನೀವೇ ಎಲ್ಲಾ ಹೇಳಿಕೊಡಬೇಕು!

ಸಿಂಹ ರಾಶಿ (Leo)

ಇವರು ತಮ್ಮ ಮೇಲೆ ನಿಷ್ಠೆಯಿರುವವರ ಬಗ್ಗೆ ಸಾಮಾನ್ಯವಾಗಿ ತುಂಬಾ ಕರುಣಾಮಯಿ. ಯಾವಾಗಲೂ ತಮ್ಮ ಆಪ್ತರ ಬೆನ್ನನ್ನು ಕಾಯುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ ಅವರು ತಮ್ಮ ದಯೆಗೆ ಅರ್ಹರಲ್ಲದವರಿಗೆ ನಿಷ್ಠರಾಗಿರುವುದಿಲ್ಲ. ಸಿಂಹ ರಾಶಿಯವರು ನಿಜವಾಗಿಯೂ ಎರಡನೇ ಅವಕಾಶಗಳನ್ನು ನೀಡುವುದನ್ನು ನಂಬುವುದಿಲ್ಲ.

ವೃಶ್ಚಿಕ ರಾಶಿ (Scorpio)

ಯಾರಾದರೂ ತಮ್ಮ ಬಗ್ಗೆ ಕೆಟ್ಟದಾಗಿ ಆಡಿಕೊಂಡರೆ ಇವರು ಸುಮ್ಮನಿರುವುದಿಲ್ಲ. ಒಬ್ಬ ವ್ಯಕ್ತಿಯನ್ನು ತಮ್ಮ ಬೆನ್ನಿನಲ್ಲಿ ಇರಿಯಲು ಅವರು ಎಂದಿಗೂ ಬಿಡುವುದಿಲ್ಲ, ವಿಶೇಷವಾಗಿ ದ್ರೋಹ ಅಥವಾ ನೋಯಿಸಿದರೆ ಇವರು ಎಲ್ಲವನ್ನೂ ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಸಣ್ಣದೊಂದು ತಪ್ಪಿನಿಂದ ಕೂಡ ತುಂಬಾ ಅಸಮಾಧಾನಗೊಳ್ಳುತ್ತಾರೆ. ಇವರು ತುಂಬಾ ನಿಷ್ಠಾವಂತ ಜನರಾಗಿದ್ದರೂ ಸಹ, ಇವರು ದೀರ್ಘಕಾಲದವರೆಗೆ ಯಾರ ಜತೆಗೂ ಸಂಬಂಧವನ್ನು ಹಿಡಿದಿಡಲು ಸಾಧ್ಯವಿಲ್ಲ. ಏಕೆಂದರೆ ಇವರು ಕ್ಷಮೆಯನ್ನು ಆಧರಿಸುವುದಿಲ್ಲ.

ಈ ರಾಶಿಚಕ್ರದವರು ನಿಜವಾದ ಪ್ರೀತಿ ಪಡೆಯೋದು ಕಷ್ಟ: ಸವಾಲು ಸಾವಿರ

ವೃಷಭ ರಾಶಿ (Taurus)

ಇವರು ಹೆಚ್ಚು ನಿಷ್ಠಾವಂತ ಜನರು, ಇವರು ಆತ್ಮೀಯ ವ್ಯಕ್ತಿಯಿಂದ ನೋವು ತಿನ್ನುವುದನ್ನು ಸಹಿಸುವುದಿಲ್ಲ. ಅವರು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಾರೆ, ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ನೋಯಿಸಿದ ವ್ಯಕ್ತಿಯನ್ನು ಕ್ಷಮಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಕ್ಕೆ ಬರುತ್ತಾರೆ. ಆದಾಗ್ಯೂ, ಹೆಚ್ಚಿನ ಸಂದರ್ಭದಲ್ಲಿ ನಕಾರಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾರೆ. ಏಕೆಂದರೆ ವೃಷಭ ರಾಶಿಯವರು ತಮ್ಮ ನಂಬಿಕೆಯನ್ನು ಕಸಿದುಕೊಂಡ ವ್ಯಕ್ತಿಯನ್ನು ಕ್ಷಮಿಸಲು ಸಾಧ್ಯವಾಗುವುದಿಲ್ಲ.

ಮೇಷ ರಾಶಿ (Aries)

ಮೇಷ ರಾಶಿಯವರು ಯಾರಾದರೂ ದ್ರೋಹ ಮಾಡಿದರೆಂದು ಭಾವಿಸಿದರೆ, ಅವರು ತಮಗೆ ಅನ್ಯಾಯ ಮಾಡಿದವರ ಮೇಲೆ ಕೋಪವನ್ನು ಸುರಿಯುತ್ತಾರೆ. ಅವರು ಸುಲಭವಾಗಿ ಒಬ್ಬ ವ್ಯಕ್ತಿಯನ್ನು ಕ್ಷಮಿಸುವುದಿಲ್ಲ ಮತ್ತು ಹೆಚ್ಚಿನ ಸಮಯ, ಅವರ ಜೀವನದೊಂದಿಗೆ ಸಂಬಂಧ ಕಡಿಸುಕೊಳ್ಳುತ್ತಾರೆ. ನಂಬಿಕೆ ಅಥವಾ ಪ್ರಾಮಾಣಿಕತೆಯ ಬಗ್ಗೆ ಕಾಳಜಿ ವಹಿಸದ ಜನರ ಮೇಲೆ ಸಮಯ, ಶಕ್ತಿ ಮತ್ತು ಶ್ರಮವನ್ನು ಕಳೆದುಕೊಳ್ಳುವುದು ಯೋಗ್ಯವಲ್ಲ ಎಂದು ಅವರು ಭಾವಿಸುತ್ತಾರೆ.

 

Follow Us:
Download App:
  • android
  • ios