Asianet Suvarna News Asianet Suvarna News

ಒತ್ತಡದ ಸಮಯದಲ್ಲೂ ಈ ರಾಶಿಗಳ ಜನ ಯದ್ವಾತದ್ವಾ ವರ್ತನೆ ಮಾಡೋಲ್ಲ

ಒತ್ತಡ ನಿಭಾಯಿಸಿ, ಜಾಣ್ಮೆಯಿಂದ ವರ್ತಿಸುವುದು ಸಹ ಒಂದು ಉತ್ತಮ ಕಲೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗದಂತೆ ನೋಡಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವು ರಾಶಿಗಳ ಜನ ಇದರಲ್ಲಿ ತಜ್ಞತೆ ಹೊಂದಿರುತ್ತಾರೆ. ಇವರು ಎಂಥದ್ದೇ ಸನ್ನಿವೇಶದಲ್ಲಿ ಕೂಲಾಗಿ ಇದ್ದುಕೊಂಡು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬಲ್ಲರು.
 

These zodiac sign people think rationally at stressful situation
Author
First Published Jan 17, 2023, 12:37 PM IST

ಇಂದಿನ ಜೀವನದಲ್ಲಿ ಒತ್ತಡ ಸಹಜ. ಯಾರೂ ಸಹ ಒತ್ತಡದಿಂದ ಮುಕ್ತರಾಗಿರುವುದಿಲ್ಲ. ಅನೇಕ ಬಾರಿ, ಈ ಒತ್ತಡವೇ ನಮಗೆ ಹಿನ್ನಡೆ ತಂದುಬಿಡುತ್ತದೆ. ಎಷ್ಟೋ ಬಾರಿ ಒತ್ತಡದ ಕಾರಣದಿಂದಲೇ ವಿವೇಚನೆ ನಮ್ಮಿಂದ ದೂರವಾಗುತ್ತದೆ. ಒತ್ತಡದಿಂದ ಶಾಂತಿಯುತವಾಗಿ ವರ್ತಿಸಲು, ಚಿಂತನೆ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಂತೂ ಯಾವಾಗಲೂ ಒಂದು ರೀತಿಯ ಗಡಿಬಿಡಿಯ, ಅಶಾಂತಿಯ ಮನಸ್ಥಿತಿಯಲ್ಲಿರುತ್ತಾರೆ. ಬಹುಬೇಗ ಕೋಪೋದ್ರಿಕ್ತರಾಗುತ್ತಾರೆ. ನಿರ್ವಹಿಸಬೇಕಾದ ಕೆಲಸಗಳು, ಜವಾಬ್ದಾರಿಗಳ ಮಧ್ಯೆ ಅಡೆತಡೆಗಳು ಎದುರಾದರೆ ಹೈರಾಣಾಗುತ್ತಾರೆ. ಇದರೊಂದಿಗೆ ಖಾಸಗಿ ಸಮಸ್ಯೆಗಳೂ ಸೇರಿಕೊಂಡರೆ ಅಷ್ಟೇ. ಮನಸ್ಥಿತಿ ಇನ್ನಷ್ಟು ಹಾಳಾಗಿ ಹೇಗ್ಹೇಗೋ ವರ್ತನೆ ಮಾಡುತ್ತಾರೆ. ಪರಿಣಾಮವಾಗಿ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟು, ಕೈ ಮೀರಿ ಹೋಗುತ್ತದೆ. ಅಸಹನೆ, ಅಶಾಂತಿಯಿಂದ ಏನು ಬೇಕಿದ್ದರೂ ಸಂಭವಿಸಬಹುದು. ಹೀಗೆಲ್ಲ ಆಗಬಾರದು ಎಂದರೆ ಸದಾಕಾಲ ಶಾಂತಿ, ತಾಳ್ಮೆಯಿಂದ ವರ್ತಿಸುವುದು, ವಿವೇಚನೆಯಿಂದ ನಿರ್ಧಾರಕ್ಕೆ ಬರುವುದು ಅತಿ ಮುಖ್ಯ. ಆದರೆ, ಒತ್ತಡದಲ್ಲೂ ಹೀಗಿರಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಕೆಲವೇ ರಾಶಿಗಳ ಜನ ಇದರಲ್ಲಿ ಪರಿಣಿತರಾಗಿರುತ್ತಾರೆ. ಇವರು ಎಂಥದ್ದೇ ಒತ್ತಡದ ಸನ್ನಿವೇಶದಲ್ಲೂ ಕೂಲ್ ಆಗಿರುತ್ತಾರೆ. ಪ್ರತಿಕ್ರಿಯೆ ನೀಡುವ ಮುನ್ನ ಯೋಚಿಸುತ್ತಾರೆ, ಎಷ್ಟೇ ಕಷ್ಟದ ಸಮಯದಲ್ಲೂ ಭಯಭೀತರಾಗದೆ ಪರಿಸ್ಥಿತಿ ನಿಭಾಯಿಸುತ್ತಾರೆ.

ಒತ್ತಡ ನಿಯಂತ್ರಣ (Stress Control) ಮಾಡಿಕೊಳ್ಳುವುದೂ ಒಂದು ಕಲೆ (Art). ಒತ್ತಡದಿಂದ ಮುಕ್ತರಾಗಿದ್ದರಷ್ಟೇ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ (Capacity) ಆಚೆ ಬರಲು ಸಾಧ್ಯ. ಒತ್ತಡಮಯ ಸನ್ನಿವೇಶದಲ್ಲೂ ಕೂಲಾಗಿ (Cool) ಇದ್ದುಕೊಂಡು, ಪರಿಸ್ಥಿತಿ (Situation) ನಿಭಾಯಿಸುವುದು ಬಹಳಷ್ಟು ಜನರಿಂದ ಸಾಧ್ಯವೇ ಇಲ್ಲ. ಕೆಲವರಂತೂ ಇಂತಹ ಸಂದರ್ಭಗಳಲ್ಲಿ ಬೇಕಾಬಿಟ್ಟಿ ಮಾತನಾಡಿ, ವರ್ತಿಸಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಬಿಡುತ್ತಾರೆ. ವಿವೇಚನೆಯಿಂದ (Rationally) ನಿರ್ಧಾರ ಕೈಗೊಳ್ಳುವಲ್ಲಿ ಇವರು ಸೋಲುತ್ತಾರೆ. ಆದರೆ, ಈ ಕೆಲವು ರಾಶಿಗಳ ಜನ ಇದಕ್ಕೆ ವಿರುದ್ಧ.

Budh Margi 2023: ಜ.18ರಿಂದ 3 ರಾಶಿಗಳಿಗೆ ಶುರುವಾಗಲಿದೆ ಲಾಭದ ದಿನಗಳು..

·        ಕರ್ಕಾಟಕ (Cancer)
ಈ ರಾಶಿಯ ಜನ ಗಟ್ಟಿಯಾದ (Determined) ನಿರ್ಧಾರ ಕೈಗೊಳ್ಳಬಲ್ಲರು. ದೃಢಚಿತ್ತರಾಗಿದ್ದು, ಧೈರ್ಯವನ್ನೂ (Bold) ಹೊಂದಿರುತ್ತಾರೆ. ಒತ್ತಡದ ಸಂದರ್ಭಗಳಲ್ಲಿ ಶಾಂತಚಿತ್ತತೆ (Calm) ಕಾಪಾಡಿಕೊಳ್ಳುತ್ತಾರೆ. ತಾಳ್ಮೆಯಿಂದ (Patience) ವರ್ತಿಸುತ್ತಾರೆ. ಈ ರಾಶಿಗೆ ಸೇರಿದ ಜನ ಪ್ರತಿಯೊಂದು ಸನ್ನಿವೇಶವನ್ನು ಎರಡೂ ಮಗ್ಗುಲಿನಿಂದ ಯೋಚಿಸುತ್ತಾರೆ. ಬಳಿಕವೇ ನಿರ್ಧಾರ ಕೈಗೊಳ್ಳುತ್ತಾರೆ. ಕಷ್ಟದ ಸನ್ನಿವೇಶದಲ್ಲಿ ಹೇಗಾದರೂ ವರ್ತನೆ ಮಾಡುವುದಿಲ್ಲ. ಇವರ ವರ್ತನೆ ಮೇಲೆ ವಿಶ್ವಾಸವಿಡಬಹುದು. ಬೆನ್ನುಹುರಿ ನಡುಗಿಸುವ ಸಂದರ್ಭವನ್ನೂ ನಿಯಂತ್ರಣಕ್ಕೆ ತರಬಲ್ಲರು.

·        ಕನ್ಯಾ (Virgo)
ಕನ್ಯಾ ರಾಶಿಯ ಜನ ಹೆಚ್ಚು ಪ್ರಾಕ್ಟಿಕಲ್ (Practical) ಆಗಿರುತ್ತಾರೆ. ಸನ್ನಿವೇಶವನ್ನು ವಿಮರ್ಶೆ (Analyse) ಮಾಡುತ್ತಾರೆ. ಪ್ರತಿ ಸನ್ನಿವೇಶದಲ್ಲೂ ಉತ್ತಮ ಅಂಶವನ್ನೇ ಕಾಣುವುದು ಇವರ ಹೆಗ್ಗಳಿಕೆ. ಹಾಗೆಯೇ ತಮ್ಮ ಮನಸ್ಸಿಗೆ ತರಬೇತಿ ನೀಡಿರುತ್ತಾರೆ. ಪರಿಪೂರ್ಣತೆ (Perfection) ಬಯಸುತ್ತಾರೆ. ಹೀಗಾಗಿ, ಕ್ಲಿಷ್ಟಕರ (Difficult) ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. ಪರಿಸ್ಥಿತಿ ಹೇಗೆ ಇದ್ದರೂ ತಮ್ಮ ನಿಲುವಿಗೆ ಬದ್ಧರಾಗಿದ್ದು, ನಿಯಂತ್ರಿಸುತ್ತಾರೆ. ತಮ್ಮ ಸಂಬಂಧಗಳ (Relation) ವಿಚಾರದಲ್ಲಿ ಮಾತ್ರ ಇವರು ಹೈಪರ್ ಆಗಿ ವರ್ತಿಸುತ್ತಾರೆ.

·        ತುಲಾ (Libra)
ರಾಶಿ ಚಕ್ರದ ಪೈಕಿ ತುಲಾ ರಾಶಿಯ ಜನ ದಕ್ಷ ನಿಯಂತ್ರಣಕಾರರು (Balance) ಎನಿಸಿಕೊಳ್ಳುತ್ತಾರೆ. ಸಮಸ್ಯೆಯ (Problem) ಎಲ್ಲ ಮಗ್ಗಲುಗಳನ್ನೂ ಆಳವಾಗಿ ವಿಮರ್ಶೆ ಮಾಡಿಕೊಳ್ಳುತ್ತಾರೆ. ತಮ್ಮ ತಂತ್ರದಿಂದ (Tactics) ಎಲ್ಲ ಸನ್ನಿವೇಶವನ್ನೂ ನಿಯಂತ್ರಿಸಲು ಯತ್ನಿಸುತ್ತಾರೆ. ಒತ್ತಡದ ಸಮಯದಲ್ಲಿ ಸಮತೋಲಿತ ನಿಲುವನ್ನು ಹೊಂದುವ ಮೂಲಕ ತಮ್ಮನ್ನು ನಿಯಂತ್ರಿಸಿಕೊಳ್ಳುತ್ತಾರೆ, ಹೀಗಾಗಿ, ಯಾವುದೇ ರೀತಿಯ ಮೂರ್ಖ (Foolish) ನಿರ್ಧಾರ ಕೈಗೊಳ್ಳುವುದಿಲ್ಲ. 

ಬುಧ ಮಾರ್ಗಿಯಿಂದ ಈ 6 ರಾಶಿಗಳಿಗೆ ಹೆಚ್ಚಲಿದೆ ಚಿಂತೆ, ಇರಲಿ ಜಾಗ್ರತೆ

·        ಕುಂಭ (Aquarius)
ಕುಂಭ ರಾಶಿಯ ಜನ ಜೀವನದಿಂದ (Life) ಅನುಭವ ಪಡೆದುಕೊಳ್ಳುತ್ತಾರೆ. ತಮ್ಮ ಮನಸ್ಸನ್ನು ಸದಾಕಾಲ ಕ್ರಿಯಾಶೀಲವಾಗಿ (Active) ಇರಿಸಿಕೊಳ್ಳುತ್ತಾರೆ. ಇವರಲ್ಲಿ ಭಾವನಾತ್ಮಕ ಬುದ್ಧಿವಂತಿಕೆ (Emotional Intelligence) ಉತ್ತಮ ಮಟ್ಟದಲ್ಲಿರುತ್ತದೆ. ಹೀಗಾಗಿ, ಸುಲಭವಾಗಿ ಒತ್ತಡ (Stress), ಕ್ಲಿಷ್ಟಕರ ಸಮಯವನ್ನು ನಿಭಾಯಿಸುತ್ತಾರೆ. ತಮ್ಮ ಜೀವನವನ್ನು ಹಗುರ ಮತ್ತು ಖುಷಿಯನ್ನಾಗಿ ಪರಿಗಣಿಸಿ, ಅನುಭವಿಸುತ್ತಾರೆ. ಒತ್ತಡವಿಲ್ಲದ ರಿಲ್ಯಾಕ್ಸಡ್ (Relaxed) ನಿಲುವಿನಿಂದಾಗಿ ಸಮಸ್ಯೆಗಳಿಂದ ಸುಲಭವಾಗಿ ಹೊರಬರುತ್ತಾರೆ. 

Follow Us:
Download App:
  • android
  • ios