Zodiac Sign: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

ಪ್ರೀತಿಯ ವಿಚಾರದಲ್ಲಿ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಜೀವನವಿಡೀ ಕೆಲವರು ಏಕ ಸಂಗಾತಿಗೆ ನಿಷ್ಠರಾಗಿದ್ದರೆ, ಕೆಲವರದು ಸ್ವಲ್ಪೇ ದಿನಗಳ ಮಾತು, ಮತ್ತೆ ಬೇರೊಬ್ಬರ ಕಡೆಗೆ ಆಸಕ್ತಿ ಹೊಂದುತ್ತಾರೆ. ಈ ಗುಣ ಅವರ ರಾಶಿಗೆ ಅನುಗುಣವಾಗಿರುತ್ತದೆ. ಈ ಕೆಲವು ರಾಶಿಯ ಜನ ಒಂದು ಸಂಬಂಧದಲ್ಲಿ ಬಹುಬೇಗ ಬೋರೆದ್ದು ಹೋಗುತ್ತಾರೆ.
 

These zodiac sign people quickly get bored in relationship

ಪ್ರೀತಿ-ಪ್ರೇಮದ ವಿಚಾರದಲ್ಲಿ ಒಬ್ಬೊಬ್ಬರದು ಒಂದೊಂದು ನಿಲುವು, ಒಂದೊಂದು ರೀತಿಯ ವರ್ತನೆ. ಕೆಲವರು ಪ್ರೀತಿಪಾತ್ರರಿಗೆ ದೀರ್ಘಕಾಲ ನಿಷ್ಠವಾಗಿರಲು ಬಯಸಿದರೆ, ಕೆಲವರು ಒಟ್ಟೊಟ್ಟಿಗೆ ಹಲವರ ಜತೆ ಡೇಟಿಂಗ್ ಮಾಡುತ್ತಾರೆ. ಹಲವರಿಗೆ ಆಪ್ತ ಸಂಬಂಧದ ಬಗ್ಗೆ ನಂಬಿಕೆಯಾದರೆ, ಕೆಲವರು ಪತಿ-ಪತ್ನಿಯರಾಗಿದ್ದರೂ ಪರಸ್ಪರ ವಿಶ್ವಾಸದಿಂದ ನಡೆದುಕೊಳ್ಳುವುದಿಲ್ಲ. ಕೆಲವರು ಸಂಬಂಧದಲ್ಲಿ ಬಹುಬೇಗ ಬೋರೆದ್ದು ಹೋಗುತ್ತಾರೆ. ಸಂಬಂಧದಿಂದ ಆಚೆಗೆ ನಡೆಯಲು ಬಯಸುತ್ತಾರೆ. ಅದೆಷ್ಟೋ ಜನ ಸಂಬಂಧವನ್ನು ಕೇವಲ ಗೇಮ್ ನಂತೆ ಪರಿಗಣಿಸುತ್ತಾರೆ. ಸಂಗಾತಿಯ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಅವರ ಲೆಕ್ಕದಲ್ಲಿ ಬೇರೊಂದು ಅಫೇರ್ ಗೂ ವೈವಾಹಿಕ ಜೀವನಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಇದು ಅವರವರ ರಾಶಿಗಳಿಗೆ ಸಂಬಂಧಿಸಿದೆ. ಕೆಲವು ರಾಶಿಗಳ ಜನ ಒಂದು ಸಂಬಂಧದಲ್ಲಿ ಬೇಗ ಬೋರಾಗುತ್ತಾರೆ. ಹೊಸ ಸ್ನೇಹಕ್ಕಾಗಿ ಪ್ರಯತ್ನಿಸುತ್ತಾರೆ ಅಥವಾ ಅವರು ಬಹಳ ಹೊಸಬರ ಬಗ್ಗೆ ಆಸಕ್ತರಾಗುತ್ತಾರೆ. ಅಂತಹ ಜನ ಹೆಚ್ಚಾಗಿ ಐದು ರಾಶಿಗಳಲ್ಲಿ ಕಂಡುಬರುತ್ತಾರೆ. ಇವರು ಮೋಸಗಾರರು ಎಂದಲ್ಲ. ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸಿಯೂ ಇವರು ಬೇರೊಬ್ಬರ ಕಡೆ ಆಕರ್ಷಿತರಾಗಬಲ್ಲರು. ಇದು ತಮ್ಮ ವ್ಯಕ್ತಿತ್ವದಲ್ಲಿರುವ ಕೊರತೆ ಎಂದೇನೂ ಅವರಿಗೆ ಅನಿಸುವುದಿಲ್ಲ.

· ಮಿಥುನ (Gemini)
ಮಿಥುನ ರಾಶಿಯ (Zodiac Sign) ಜನ ಸಂಗಾತಿಯ (Partner) ಬಗ್ಗೆ ಬೇಗ ಬೇಸರ (Bore) ಹೊಂದುತ್ತಾರೆ. ದೀರ್ಘಕಾಲ ಒಬ್ಬರಿಗೆ ನಿಷ್ಠರಾಗಿರಲು (Commitment) ಇವರಿಗೆ ಕಷ್ಟವಾಗುತ್ತದೆ. ಇವರು ಕೆಟ್ಟ ಮನಸ್ಥಿತಿಯನ್ನೇನೂ ಹೊಂದಿರುವುದಿಲ್ಲ. ಆದರೆ, ಬಹುಬೇಗ ಆಸಕ್ತಿ (Interest) ಕಳೆದುಕೊಳ್ಳುತ್ತಾರೆ. ಇವರ ಜನ್ಮರಾಶಿಯ ಗುಣವೇ ಹಾಗಿರುತ್ತದೆ. ಮಿಥುನ ರಾಶಿಯ ಸಂಗಾತಿಯ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಕಷ್ಟವಾಗುತ್ತದೆ. ಮಿಥುನ ರಾಶಿಯ ಜನ ಪ್ರೀತಿಯ (Love) ವಿಚಾರದಲ್ಲಿ ಹೆಚ್ಚು ಸಂವೇದನೆ ಹೊಂದಿರುವುದಿಲ್ಲ.

ಅಪ್ಪಿ ತಪ್ಪಿಯೂ ಈ ರಾಶಿಯವರು ಸಾಲ ಕೊಟ್ಟು ಕೋಡಂಗಿ ಆಗ್ಬೇಡಿ

· ತುಲಾ (Libra)
ಕಣ್ಣಿಗೆ ಕಾಣುವ ಸುಂದರವಾಗಿರುವುದೆಲ್ಲವನ್ನೂ ಪ್ರೀತಿಸುವ ತುಲಾ ರಾಶಿಯ ಜನ ಒಂದು ಸಂಬಂಧಕ್ಕೆ ಬದ್ಧತೆ ಹೊಂದಿರುವುದಿಲ್ಲ. ಬಹುಬೇಗ ಇನ್ನೊಬ್ಬರ ಬಗ್ಗೆ ಆಸಕ್ತಿ ಹೊಂದುತ್ತಾರೆ, ಅವರ ಸಂಪರ್ಕ ಸಾಧಿಸಲು ಯತ್ನಿಸುತ್ತಾರೆ. ಬಯಸಿದವರನ್ನು ಹೊಂದದಿದ್ದರೆ ರೆಸ್ಟ್ ಲೆಸ್ (Restless) ಆಗುತ್ತಾರೆ. ಇನ್ನೊಬ್ಬರ ಬಗ್ಗೆ ಪ್ರೀತಿಯಲ್ಲಿ ಬೀಳುತ್ತಾರೆ ಎನ್ನುವುದಕ್ಕಿಂತ ರೋಮ್ಯಾನ್ಸ್ (Romance) ಮಾಡಲು ಇಷ್ಟಪಡುತ್ತಾರೆ.

· ವೃಶ್ಚಿಕ (Scorpio)
ಈ ರಾಶಿಯ ಜನ ತಮ್ಮ ಸಂಗಾತಿ (Partner) ತಮಗೆ ಸೂಕ್ತವಾಗಿಲ್ಲ ಎನಿಸಿದರೆ ಅಥವಾ ಭಾವನಾತ್ಮಕವಾಗಿ (Emotionally) ತಮ್ಮೊಂದಿಗೆ ಜತೆಯಾಗಿಲ್ಲ ಎನ್ನುವ ಭಾವನೆ ಮೂಡಿದರೆ ತೀವ್ರವಾಗಿ ಅಸಂತುಷ್ಟರಾಗುತ್ತಾರೆ. ನಿರಾಸೆ (Disappoint) ಅನುಭವಿಸುತ್ತಾರೆ. ಸಂಗಾತಿ ತಮಗೆ ಅನುಕೂಲವಾಗಿಲ್ಲ ಎನ್ನುವ ಅನಿಸಿಕೆ ಹೊಂದಿರುತ್ತಾರೆ. ಹೀಗಾಗಿ, ಜೀವನವಿಡೀ ಒಂದೇ ಸಂಗಾತಿಗೆ ನಿಷ್ಠರಾಗಿ ಇರುವುದು ಕಡಿಮೆ.

ಈ ರಾಶಿಯ ಜನರು ಕೆಂಪು ತಿಲಕವಿಟ್ಟರೆ ಕಷ್ಟಗಳು ಹೆಚ್ಚುತ್ತವೆ!

· ಧನು (Sagittarius)
ಧನು ರಾಶಿಯ ಜನ ತಮ್ಮ ಸ್ವಾತಂತ್ರ್ಯಕ್ಕೆ (Freedom) ಅಪಾರವಾಗಿ ಬೆಲೆ ನೀಡುತ್ತಾರೆ. ಹೀಗಾಗಿ, ಸಂಬಂಧದಲ್ಲಿ ಬೇಗ ಬೇಸರ ತಾಳುತ್ತಾರೆ. ಸಂಬಂಧದಿಂದ ಎಲ್ಲಾದರೂ ತಮ್ಮ ಸ್ವಾತಂತ್ರ್ಯಕ್ಕೆ ನಿರ್ಬಂಧ (Constrain) ಬರಬಹುದೆಂದು ಹೆದರುತ್ತಾರೆ. ಹೀಗಾಗಿ, ಯಾವುದೇ ಭಾವನಾತ್ಮಕ ಸನ್ನಿವೇಶ ಅನುಭವಿಸಿದರೂ ಅದನ್ನು ಮನದಿಂದ ತೆಗೆದುಹಾಕುತ್ತಾರೆ. ಧನು ರಾಶಿಯ ಜನ ಸಂಬಂಧದಲ್ಲಿ ಬೇಸರ ಹೊಂದಿದರೆ ಅಲ್ಲಿಂದ ತಕ್ಷಣ ಜಾಗ ಖಾಲಿ ಮಾಡುತ್ತಾರೆ.

· ಕುಂಭ (Aquarius)
ಕುಂಭ ರಾಶಿಯ ಜನ ಸಂಬಂಧದಲ್ಲಿ ನೈಜತೆ (Originality) ಹಾಗೂ ಉತ್ಸಾಹ (Exitement) ಬಯಸುತ್ತಾರೆ. ಸಂಬಂಧ ಯಾವಾಗಲೂ ಹೊಸತನದಿಂದ, ಥ್ರಿಲ್ಲಿಂಗ್ ನಿಂದ ಕೂಡಿರಬೇಕು ಎಂದುಕೊಳ್ಳುತ್ತಾರೆ. ಅದು ಸಾಧ್ಯವಾಗದೆ ಇದ್ದಾಗ ಬೇಸರ ಪಡುತ್ತಾರೆ. ಬೇಗ ಆದರೆ, ಸಂಬಂಧದಿಂದ ದೂರವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಬಹಳ ಬೇಗ ನಿರ್ಧಾರ (Decision) ಕೈಗೊಳ್ಳುವುದಿಲ್ಲ. ಒಂದೊಮ್ಮೆ ಅವರು ಸಂಬಂಧದಿಂದ ದೂರ ಹೋದರೆ ಮತ್ತೆ ಎಂದಿಗೂ ವಾಪಸ್ ಬರುವುದಿಲ್ಲ.

Latest Videos
Follow Us:
Download App:
  • android
  • ios