Asianet Suvarna News Asianet Suvarna News

Zodiac Sign: ಈ ರಾಶಿಗಳ ಜನ ಶ್ರದ್ಧಾವಂತ ಆಹಾರ ಪ್ರಿಯರು

ಆಹಾರ ಸೇವನೆ ಕೆಲವರಿಗೆ ಇಷ್ಟವಾದ ಕೆಲಸ. ಅವರನ್ನು ಆಹಾರಪ್ರಿಯರು ಎಂದು ಗುರುತಿಸುತ್ತೇವೆ. ಆದರೆ, ಕೆಲವರಿಗೆ ಈ ವಿಚಾರದಲ್ಲಿ ಇನ್ನಷ್ಟು ಶ್ರದ್ಧೆ ಇರುತ್ತದೆ. ಇವರು ಶ್ರದ್ಧಾಭರಿತ ಆಹಾರಪ್ರೀತಿ ಹೊಂದಿರುತ್ತಾರೆ. ಅವರನ್ನು ಈ ಕೆಲವು ರಾಶಿಗಳಲ್ಲಿ ನೋಡಬಹುದು.
 

These zodiac sign people eat food in minute
Author
First Published Dec 13, 2022, 5:01 PM IST

ಆಹಾರದ ವಿಚಾರದಲ್ಲಿ ಕೆಲವರು ಚೂಸಿ, ಕೆಲವರು ಏನು ಬೇಕಾದರೂ ಖುಷಿಯಿಂದ ತಿಂದುಬಿಡುತ್ತಾರೆ. ಆಹಾರ ಸೇವನೆ ವಿಚಾರದಲ್ಲೂ ಹಾಗೆ. ಕೆಲವರು ನಿಧಾನವಾಗಿ ತಿಂದರೆ, ಮತ್ತಷ್ಟು ಜನ ಗಬಗಬನೆ ತಿಂದು ಮುಗಿಸುತ್ತಾರೆ. ಫಟಾಫಟ್‌ ಆಹಾರ ಸೇವನೆ ಮಾಡುವುದು ಕೆಲ ಜನರ ಅಭ್ಯಾಸ ಎಂದು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ಆದರೆ, ಅದಕ್ಕೂ ನಮ್ಮ ರಾಶಿಚಕ್ರಗಳಿಗೂ ಸಂಬಂಧವಿದೆ. ಗಬಗಬನೆ ಆಹಾರ ಸೇವಿಸುವ ಖಯಾಲಿ ಕೆಲವು ರಾಶಿಗಳಲ್ಲಿ ಮಾತ್ರ ಕಂಡುಬರುತ್ತದೆ. ಇವರು ಆಹಾರಪ್ರಿಯರೂ ಆಗಿರುತ್ತಾರೆ. ಹಾಗೆಯೇ, ತಮ್ಮ ಪ್ಲೇಟ್‌ ನಲ್ಲಿರುವ ಆಹಾರವನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಅಷ್ಟೇನೂ ಆಸಕ್ತಿ ಇರುವುದಿಲ್ಲ. ನೀವು ಶಾಲೆ-ಕಾಲೇಜು ಅಥವಾ ಕಚೇರಿಗಳಲ್ಲಿ ಕೆಲವರನ್ನು ನೋಡಿರುತ್ತೀರಿ. ಕ್ಷಣಾರ್ಧದಲ್ಲಿ ತಮ್ಮ ಬಾಕ್ಸ್‌ ಅಥವಾ ಪ್ಲೇಟ್‌ ನಲ್ಲಿ ಇರುವ ಆಹಾರವನ್ನು ಮುಗಿಸುತ್ತಾರೆ. ಸಹೋದ್ಯೋಗಿಗಳೊಂದಿಗೆ ಆಹಾರ ಸೇವನೆ ಮಾಡಲು ಕುಳಿತರೂ ಸಹ ಅದನ್ನು ಯಾರೊಂದಿಗೂ ಹಂಚಿಕೊಳ್ಳದೆ ಗಬಗಬನೆ ಬೇಗ ತಿಂದುಮುಗಿಸಿ ಬಿಡುವವರಿದ್ದಾರೆ. ಇದು ಅವರಲ್ಲಿರುವ ಶ್ರದ್ಧಾಭರಿತ ಆಹಾರಪ್ರೀತಿಯನ್ನು ತೋರಿಸುತ್ತದೆ. ಇಂತಹ ಆಹಾರಪ್ರೀತಿಯನ್ನು ಕೆಲವು ರಾಶಿಗಳ ಜನರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

•    ವೃಶ್ಚಿಕ (Scorpio)
ಈ ರಾಶಿಯ (Zodiac Sign) ಜನ ಸಾಕಷ್ಟು ಉದಾರ (Generous) ಬುದ್ಧಿ ಹೊಂದಿದ್ದರೂ ಹಣಕಾಸು (Money) ವಿಚಾರದಲ್ಲಿ ಹಾಗೂ ಆಹಾರಕ್ಕೆ (Food) ಸಂಬಂಧಿಸಿದಂತೆ ಅಷ್ಟೇ ಉದಾರತೆ ತೋರುವುದಿಲ್ಲ. ಇವರು ಸ್ನೇಹಿತರಿಗೆ ತಮ್ಮ ಸಮಯ (Time) ನೀಡಬಲ್ಲರು. ಆದರೆ, ತಮ್ಮ ಆಹಾರ ತಮ್ಮದು ಎನ್ನುವ ಧೋರಣೆ ಹೊಂದಿರುತ್ತಾರೆ. ಈ ಗುಣದಿಂದಾಗಿ ಕಚೇರಿಗಳಲ್ಲಿ (Office) ವೃಶ್ಚಿಕ ರಾಶಿಯ ಜನರೊಂದಿಗೆ ಆಹಾರ ಸೇವನೆ ಮಾಡಲು ಕುಳಿತುಕೊಳ್ಳದಿರುವುದು ಒಳ್ಳೆಯದು. ತಾವು ಬಾಕ್ಸ್‌ ನಲ್ಲಿ ತಮಗಾಗಿ ತಂದಿರುವ ಆಹಾರವನ್ನು ಇತರರ ಪರಿವೆಯಿಲ್ಲದೆ ನಿಮಿಷಗಳಲ್ಲಿ ತಿಂದು ಮುಗಿಸುತ್ತಾರೆ. ಜಲತತ್ವದ ಈ ರಾಶಿಯ ಜನರಿಗೆ ತಿನ್ನುವುದಕ್ಕೆ ಅತ್ಯಾಸಕ್ತಿ (Avid Eater) ಇರುತ್ತದೆ. ಹಾಗೂ ಆಹಾರವನ್ನು ಸಾಕಷ್ಟು ಆನಂದಿಸುತ್ತಾರೆ. ಇತರರ ಆಹಾರವನ್ನು ತಿಂದು ಖುಷಿ (Enjoy) ಪಡುತ್ತಾರೆ, ಆದರೆ, ತಮ್ಮ ಆಹಾರ ಹಂಚಿಕೊಳ್ಳಲು ಮುಂದಾಗುವುದಿಲ್ಲ. 

ಐಷಾರಾಮಿ ವಸ್ತುಗಳಿಗೆ ಹುಚ್ಚಾರಾಗೋ ರಾಶಿಗಳಿವು, ಸದಾ ಅದರದ್ದೇ ಧ್ಯಾನ ಇವರಿಗೆ!

•    ವೃಷಭ (Taurus)
ವೃಷಭ ರಾಶಿಯ ಜನ ಪ್ರತಿಯೊಂದು ಆಹಾರವನ್ನೂ ಎಂಜಾಯ್‌ ಮಾಡುತ್ತಾರೆ. ಫ್ರಿಡ್ಜ್‌ ನಲ್ಲಿ ಇರಿಸಿದ ಪ್ರತಿ ಐಟಂ (Item) ಅನ್ನೂ ತಮಗೆ ಆಹಾರದ ಬಯಕೆ ಮೂಡಿದಾಗಲೆಲ್ಲ ತಿನ್ನುತ್ತಾರೆ. ಊಟ (Meal) ಮುಗಿಸಲು ಅವರಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ತಮ್ಮ ಪ್ಲೇಟ್‌ ಖಾಲಿ (Empty) ಮಾಡುತ್ತಾರೆ. ಬಹಳಷ್ಟು ಸಮಯದಲ್ಲಿ ಇತರರ ಆಹಾರ ಸೇವನೆ ಮಾಡಲು ಹೋಗುವುದಿಲ್ಲ. ವೃಷಭ ರಾಶಿಯ ಜನ ಅತ್ಯಂತ ಪ್ರೀತಿಯಿಂದ, ಮನಃಪೂರ್ವಕವಾಗಿ (Heartily) ಆಹಾರ ಸೇವಿಸುತ್ತಾರೆ. ತಮ್ಮ ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು (Share) ಇವರಿಗೆ ಸರಿ ಎನಿಸುವುದಿಲ್ಲ. 

•     ಕುಂಭ (Aquarius)
ಈ ರಾಶಿಯ ಜನ ಎಲ್ಲ ಬಾರಿಯೂ ಆಹಾರಪ್ರಿಯರು ಎನಿಸುವುದಿಲ್ಲ. ಮಿತವ್ಯಯಕ್ಕೆ (Frugal) ಆದ್ಯತೆ ನೀಡುತ್ತಾರೆ. ತಮ್ಮ ಜತೆಗಿರುವವರನ್ನು ಊಟಕ್ಕಾಗಿ (Lunch) ಕಾಯದೆ ತಾವು ಮಾಡಿ ಮುಗಿಸುತ್ತಾರೆ. ಸಂಗಡಿಗರ ಆಹಾರ ಮೆಲ್ಲುವುದು ಇವರಿಗೆ ಇಷ್ಟ. 

ಫ್ರೆಂಡ್ ಕಳೆದುಕೊಂಡಿದ್ದಕ್ಕೆ Gemini ಗೆಳೆಯ ವಿಷಾದಿಸೋದು ಪಕ್ಕಾ!

•    ಮೀನ (Pisces)
ಇಷ್ಟವಾದ (Like) ಆಹಾರ ಸೇವನೆ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಆದರೆ, ಮೀನ ರಾಶಿಯವರು ಇದರಲ್ಲಿ ಒಂದು ಕೈ ಮೇಲೆ. ಇವರು ಭಾವನಾತ್ಮಕವಾಗಿ (Emotional) ಆಹಾರ ಸೇವನೆ ಮಾಡುವವರು. ತಮಗೆ ಸರಿಹೊಂದುವ ಆಹಾರದ ಬಹುದೊಡ್ಡ ಪಟ್ಟಿಯನ್ನೇ ಹೊಂದಿರುತ್ತಾರೆ. ಹೊಸ ತಿನಿಸುಗಳನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ, ಫಾಸ್ಟ್‌ ಫುಡ್‌ (Fast Food) ಗಳ ಬಗ್ಗೆ ಹೆಚ್ಚಿನ ಆಕರ್ಷಣೆ ಹೊಂದಿರುತ್ತಾರೆ.

•    ಮೇಷ (Aries)
ನ್ಯಾಯಯುತ (Fair) ಧೋರಣೆಯ ಮೇಷ ರಾಶಿಯ ಜನ ತಾವು ಎಷ್ಟು ಪಡೆದುಕೊಳ್ಳುತ್ತಾರೋ ಅಷ್ಟೇ ಇತರರಿಗೂ ನೀಡುತ್ತಾರೆ. ತಮಗಾಗಿ ಬಾಕ್ಸ್‌ (Box)ನಲ್ಲಿ ತಂದ ತಿಂಡಿಯನ್ನು ಚುರುಕಾಗಿ (Gobbling) ತಿಂದು ಮುಗಿಸುತ್ತಾರೆ. ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. 

Follow Us:
Download App:
  • android
  • ios