Asianet Suvarna News Asianet Suvarna News

ಕೋಪ ಬಂದ್ರೆ ಇವರಷ್ಟು ಅಪಾಯಕಾರಿ ಬೇರೆ ಇಲ್ಲ, ಈ ರಾಶಿ ಸಿಟ್ಟಿಗೆ ಎಂದಿಗೂ ಬಲಿಯಾಗ್ಬೇಡಿ!

ಕೋಪದಿಂದ ಹಿಗ್ಗಾಮುಗ್ಗಾ ಬೈಯ್ಯುವವರು, ಕೋಪದ ಕೈಗೆ ಬುದ್ಧಿ ನೀಡಿ ಮಾಡಬಾರದ ಅವಘಡಗಳನ್ನು ಮಾಡುವವರು, ಕೋಪದಿಂದ ಹೊಡೆಯುವುದು, ಮೈಮೇಲೆ ಬಂದಂತೆ ವರ್ತಿಸುವ ಜನರನ್ನು ನೋಡಿದ್ದೇವೆ. ಕೋಪ ಬಂದಾಗ ಇವರು ಅಪಾಯಕಾರಿಯಾಗಿಬಿಡುತ್ತಾರೆ.  

 

These zodiac sign people dangerous when they angry
Author
First Published Dec 17, 2023, 4:15 PM IST

ಕೆರಳಿಸಿದರೆ ಟೈಂ ಬಾಂಬ್‌ ನಂತೆ ಸಿಡಿಯುವ ಜನರನ್ನು ನೋಡಿರುತ್ತೇವೆ. ಅವರಿಗೆ ಅಂತಹ ಕೋಪವಾದರೂ ಎಲ್ಲಿಂದ, ಹೇಗೆ ಬರುತ್ತದೆ ಎಂದು ಬೇರೆಯವರು ಅಚ್ಚರಿಪಡಬೇಕು. ಅಂತಹ ಕೋಪಿಷ್ಠರಾಗಿರುತ್ತಾರೆ. ತಾವು ಅಂದುಕೊಂಡಂತೆ ಆಗದಿದ್ದರೆ, ತಮ್ಮವರಿಂದ ವಿಶ್ವಾಸದ್ರೋಹವಾದರೆ, ಮನಸ್ಸಿಗೆ ಸಮೀಪವಾಗಿರುವವರಿಂದ ಏನಾದರೂ ಮುಜುಗರವಾಗುವಂತಹ ತಪ್ಪುಗಳಾದರೆ ಇವರು ಸಿಡಿದೇಳುತ್ತಾರೆ. ಅಕ್ಷರಶಃ ಇವರು ಟೈಂ ಬಾಂಬಿನಂತೆಯೇ ಇರುತ್ತಾರೆ. ಕೆಲವರನ್ನು ನೋಡಿ, ಕೋಪ ಬಂದಾಗ ಏನು ಮಾತನಾಡುತ್ತೇವೆ, ಹೇಗೆ ವರ್ತಿಸುತ್ತೇವೆ ಎನ್ನುವುದರ ಅರಿವಿಲ್ಲದಂತೆ ಮಾಡುತ್ತಾರೆ. ಬಾಯಿಗೆ ಬಂದಂತೆ ಬೈಯ್ಯುತ್ತಾರೆ, ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಯಾರಿಗಾದರೂ ಹೊಡೆಯುತ್ತಾರೆ. ಇಂಥವರಿಂದಲೇ ಕ್ಷಣಮಾತ್ರದಲ್ಲಿ ಜೀವಹಾನಿಯೂ ಸಂಭವಿಸಬಹುದು. ಅಷ್ಟರ ಮಟ್ಟಿಗೆ ಕೋಪದ ಕೈಗೆ ಬುದ್ಧಿ ನೀಡಿಬಿಡುತ್ತಾರೆ. ದುಡುಕುತನಕ್ಕೆ ಮತ್ತೊಂದು ಹೆಸರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರಲ್ಲಿ ಮಾತ್ರ ಇಂತಹ ಕೋಪ ಕಂಡುಬರುತ್ತದೆ. ಬೇರೆಯವರಿಗೆ ಕೋಪ ಬಂದರೂ ಅದನ್ನು ನಿಯಂತ್ರಿಸಿಕೊಳ್ಳುತ್ತಾರೆ ಹಾಗೂ ಅವರು ಬೇರೆಯವರಿಗೆ ಅಪಾಯಕಾರಿಯಾಗಿ ಪರಿಣಮಿಸುವುದಿಲ್ಲ. ಆದರೆ, ಈ ರಾಶಿಗಳ ಜನ ಮಾತ್ರ ಕೋಪ ಬಂದಾಗ ತೀವ್ರ ಅಪಾಯಕಾರಿಯಾಗುತ್ತಾರೆ. ಹಿಂದೆ-ಮುಂದೆ ನೋಡದೇ ವರ್ತಿಸುತ್ತಾರೆ. ಇವರು ಈ ಗುಣವನ್ನು ನಿಯಂತ್ರಿಸಿಕೊಳ್ಳುವುದು ಅಗತ್ಯ.

•    ಮೇಷ (Aries)
ಕೋಪದ ವಿಚಾರದಲ್ಲಿ ರಾಶಿಚಕ್ರದ ಮೊದಲ ರಾಶಿಯಾಗಿರುವ ಮೇಷಕ್ಕೇ ಮೊದಲ ಸ್ಥಾನ. ಮೇಷ ರಾಶಿಯವರು ಮೊದಲೇ ಬೆಂಕಿಯಂತಹ (Fiery) ನಡೆಯುಳ್ಳವರು. ಸಿಡಿದೇಳುವ ಪ್ರವೃತ್ತಿಯವರು. ಇನ್ನು ಕೋಪ (Angry) ಬಂದಾಗ ಮಿತಿಯಿಲ್ಲದಂತೆ ವರ್ತಿಸುತ್ತಾರೆ. ಅಕ್ಷರಶಃ ಮೈಮೇಲೆ ಬಂದಂತೆ ಆಡುತ್ತಾರೆ. ದೈಹಿಕ ದೃಢತೆಯೂ ಇರುವುದರಿಂದ ಇವರು ಸುಲಭವಾಗಿ ಬೇರೆಯವರ ಮೇಲೆ ಆಕ್ರಮಣ (Attack) ಮಾಡುತ್ತಾರೆ.

ಶನಿಯಿಂದ 2025 ರಲ್ಲಿ ಈ ರಾಶಿಗೆ ಮುಟ್ಟಿದೆಲ್ಲ ಚಿನ್ನ, ಲೈಫ್‌ ಜಿಂಗಾಲಾಲ

ಕೋಪ ಬಂದಾಗ ಇವರ ಬುದ್ಧಿ ದುಡುಕುತನದಲ್ಲೇ (Impulse) ಕೇಂದ್ರೀಕೃತವಾಗಿರುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತಮ್ಮದೇ ಧೋರಣೆಯಿಂದ ವರ್ತಿಸುತ್ತಾರೆ. ಕೋಪದಿಂದ ಕ್ರಮೇಣ ಇವರ ಆರೋಗ್ಯವೂ ಹಾಳಾಗಬಹುದು. ಕುದಿಯುವ (Boiling) ಮನಸ್ಸನ್ನು ಶಾಂತಗೊಳಿಸಲು ಹಲವು ರೀತಿಯಲ್ಲಿ ಪ್ರಯತ್ನಿಸುವುದು ಅಗತ್ಯ.

•     ವೃಶ್ಚಿಕ (Scorpio)
ಪ್ಲೂಟೋ ಅಧಿಪತಿಯಾಗಿರುವ ವೃಶ್ಚಿಕ ರಾಶಿಯ ಜನ ಜೀವನದ ಎಲ್ಲ ಹಂತಗಳಲ್ಲೂ ತೀವ್ರತೆಯನ್ನು (Intensity) ಹೊಂದಿರುವಂಥವರು. ಹಾಗೆಯೇ, ಎಲ್ಲ ರೀತಿಯ ಭಾವನೆಗಳೂ ಇವರಲ್ಲಿ ತೀವ್ರವಾಗಿರುತ್ತವೆ. ಕೋಪದ ವಿಚಾರದಲ್ಲೂ ಇವರದ್ದು ತೀವ್ರ ಭಾವ. ಯಾರ ಮೇಲಾದರೂ ಕೋಪ ಬಂದರೆ ದ್ವೇಷ (Grudge) ಸಾಧಿಸುತ್ತಾರೆ, ಪ್ರತೀಕಾರ ತೀರಿಸಲು ಮುಂದಾಗುತ್ತಾರೆ. ಭಾವನಾತ್ಮಕವಾಗಿ (Emotionally) ಆಳವಾದ (Deep) ಗುಣ ಹೊಂದಿರುವ ಇವರು ತಮ್ಮ ಕೋಪವನ್ನು ಮಟ್ಟ ಹಾಕಲು ತಾಳ್ಮೆ ತಂದುಕೊಂಡು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

•    ಸಿಂಹ (Leo)
ಸಿಂಹಕ್ಕೆ ಕೋಪ ಬಂದರೆ ತನ್ನ ಘರ್ಜನೆಯಿಂದಲೇ (Roar) ಇಡೀ ಕಾಡನ್ನು ನಡುಗಿಸಬಲ್ಲದು. ಸಿಂಹ ರಾಶಿಯವರು ಸಹ ಅಂಥದ್ದೇ ಗುಣ ಹೊಂದಿರುತ್ತಾರೆ. ಇವರ ಧೈರ್ಯ, ವರ್ಚಸ್ಸು ಎಲ್ಲರನ್ನೂ ಸೆಳೆಯುವಂಥದ್ದು. ಆದರೆ, ಕೋಪ ಬಂದಾಗ ಅಕ್ಷರಶಃ ಘರ್ಜಿಸುತ್ತಾರೆ. ಸಿಟ್ಟನ್ನು ಅತ್ಯಂತ ನಾಟಕೀಯವಾಗಿ ಪ್ರದರ್ಶಿಸುತ್ತಾರೆ. ಸಿಟ್ಟಿನಿಂದ ಇವರನ್ನು ದೂರ ಮಾಡಲು ಇವರ ಭಾವನೆಗಳನ್ನು (Feelings) ಅರ್ಥ ಮಾಡಿಕೊಂಡು, ಧನಾತ್ಮಕ ಮನಸ್ಥಿತಿಯಿಂದ ಹಗುರವಾಗಿ ಪರಿಸ್ಥಿತಿಯನ್ನು ಮನದಟ್ಟು ಮಾಡಿಸಬೇಕಾಗುತ್ತದೆ.

ನಾಳೆಯಿಂದ ಧನುರ್ಮಾಸ ,ತಪ್ಪಾಗಿಯೂ ಈ ಕೆಲಸವನ್ನು ಮಾಡಬೇಡಿ

•    ಮಕರ (Capricorn)
ಮಕರ ರಾಶಿಯವರ ಸಿಟ್ಟೆಂದರೆ ದೀರ್ಘಕಾಲದಿಂದ ತಟಸ್ಥವಾಗಿದ್ದ ಜ್ವಾಲಾಮುಖಿಯೊಂದು (Volcano) ಏಕಾಏಕಿ ಸ್ಫೋಟಗೊಳ್ಳುವ ಹಾಗೆ. ಮಕರ ರಾಶಿಯವರು ಸಹ ಸಾಮಾನ್ಯವಾಗಿ ತಟಸ್ಥ ಧೋರಣೆಯುಳ್ಳವರು. ಆದರೆ, ಇವರು ಒಂದು ಹಂತದವರೆಗೆ ಕೋಪವನ್ನು ತಡೆದುಕೊಳ್ಳುತ್ತಾರೆ. ಆ ಬಳಿಕ ಸಿಡಿಯುತ್ತಾರೆ. ಒಳಗೊಳಗೇ ಕೋಪಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಗುರುತಿಸಿಕೊಳ್ಳುವುದು ಇವರು ಮಾಡಬೇಕಾದ ಕೆಲಸ. ಕುದಿಯುವ ಹಂತ ತಲುಪುವ ಮುನ್ನವೇ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯತ್ನಿಸಬೇಕು. 

Follow Us:
Download App:
  • android
  • ios