ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಪ್ರತಿಯೊಬ್ಬರಿಗೂ ತಮ್ಮ ವೈವಾಹಿಕ ಜೀವನದ ಬಗ್ಗೆ ಅವರದ್ದೇ ಆದ ಕನಸುಗಳು ಇರುತ್ತವೆ. ಅದು ಹೆಣ್ಣಾಗಿರಬಹುದು, ಇಲ್ಲವೇ ಗಂಡಾಗಿರಬಹುದು. ತಮ್ಮ ಸಂಗಾತಿಯಾಗುವವರು ಹಾಗಿರಬೇಕು, ಹೀಗಿರಬೇಕೆಂದು ನಿರ್ದಿಷ್ಟವಾಗಿ ಅಂದುಕೊಂಡಿರುತ್ತಾರೆ. ಆದರೆ, ಕೆಲವೊಮ್ಮೆ ಅದೃಷ್ಟ ಕೈಕೊಡಬಹುದು. ಈಗ ವಿಷಯವೇನೆಂದರೆ ಕೆಲವು ರಾಶಿಯ ಹುಡುಗಿಯರು ಬೆಸ್ಟ್ ಹೆಂಡತಿಯರಾಗುತ್ತಾರಂತೆ. ಹೀಗಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಐದು ರಾಶಿಯವರು ತಮ್ಮ ಪತಿಯಂದಿರಿಗೆ ಉತ್ತಮ ಹೆಂಡತಿಯರಾಗಿರುತ್ತಾರೆನ್ನಲಾಗಿದೆ. ಹಾಗಂತ ಉಳಿದ ರಾಶಿಯವರೇನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೆಂದಲ್ಲ. ಈ ರಾಶಿ ಚಕ್ರದವರು ಹುಟ್ಟಿನಿಂದಲೇ ಅಂತಹ ಸ್ವಭಾವವನ್ನು ಪಡೆದುಕೊಂಡು ಬಂದಿರುತ್ತಾರೆಂದು ಹೇಳಲಾಗುತ್ತದೆ. ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಕರ್ಕಾಟಕ ರಾಶಿ
ಈ ರಾಶಿಯವರು ತಮ್ಮ ಪತಿಯನ್ನು ತುಂಬವೇ ಇಷ್ಟಪಡುತ್ತಾರೆ. ಇವರು ಗಂಡನಿಗೆ ಬಹಳ ನಿಷ್ಠೆ ತೋರುತ್ತಾರೆ. ಹೀಗಾಗಿ ಈ ರಾಶಿಯ ಹುಡುಗಿಯು ವಿವಾಹವಾಗಲು ಹೇಳಿಮಾಡಿಸಿದಂತಿರುತ್ತಾಳೆ. ಆಕೆಯದ್ದು ಆಯ್ಕೆ ಹಾಗೂ ಪ್ರೀತಿಯಲ್ಲಿ ಒಂದು ಸ್ಥಿರತೆ ಇರುತ್ತದೆ. ಈ ರಾಶಿಯ ಹೆಣ್ಣುಮಗಳು ತನ್ನ ಸಂಬಂಧವನ್ನು ತೀವ್ರವಾಗಿ ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುವುದಲ್ಲದೆ, ಕುಟುಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾಳೆ. ಜೊತೆಗೆ ಈಕೆ ಒಂದು ಬಾರಿ ಮಾತುಕೊಟ್ಟಳೆಂದರೆ ಅದು ನಡೆಸಿಕೊಡುವುದು ಅಷ್ಟೇ ಸತ್ಯ. ಅಲ್ಲದೆ, ಸತ್ಯವನ್ನೇ ಮಾತನಾಡುವುದು ಇವರ ವ್ಯಕ್ತಿತ್ವ. ಹೀಗಾಗಿ ಅವರು ಸುಳ್ಳನ್ನು ಅಷ್ಟೇ ಪ್ರಮಾಣದಲ್ಲಿ ದ್ವೇಷಿಸುತ್ತಾರೆ. ಆದ್ದರಿಂದ ಇವರನ್ನು ಎರಡು ಮಾತಿಲ್ಲದೆ ನಂಬಬಹುದಾಗಿದೆ. ಕುಟುಂಬದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ. ಇದರಿಂದ ಈ ರಾಶಿಯ ಹೆಣ್ಣು ಮಗಳು ಉತ್ತಮ ಮಡದಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. 

ಮೀನ ರಾಶಿ
ಈ ರಾಶಿಯವರು ತುಂಬಾ ಪ್ರೀತಿ ಮಾಡುವ ವ್ಯಕ್ತಿತ್ವದವರು. ಇವರ ಈ ಗುಣ ಹೆಂಡತಿಯಾಗುವವರಲ್ಲೇ ಬೆಸ್ಟ್ ಎಂದು ಹೇಳಲಾಗುತ್ತದೆ. ಸಂಗಾತಿಯನ್ನು ಖುಷಿಯಾಗಿಡಲು ಇರುವ ಎಲ್ಲ ಅಂಶಗಳನ್ನೂ ಬಳಸಿಕೊಳ್ಳುತ್ತಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಮೂಡಿಯಾಗಿದ್ದರೂ ಸಂಗಾತಿಯನ್ನು ಅಷ್ಟೇ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ. ಜೊತೆಗೆ ತುಂಬಾ ಸೃಜನಾತ್ಮಕತೆ ಇವರಲ್ಲಿದ್ದು, ಬಹಳ ಬುದ್ಧಿವಂತರಾಗಿದ್ದಾರೆ. ಅಲ್ಲದೆ, ಹೃದಯವಂತರು ಹಾಗೂ ಅರ್ಥ ಮಾಡಿಕೊಳ್ಳುವವರಾಗಿದ್ದರಿಂದ ಅತ್ಯುತ್ತಮ ಮಡದಿಯಾಗುವುದರಲ್ಲಿ ಎರಡು ಮಾತಿಲ್ಲ. ಇದನ್ನು ಓದಿ: ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ತುಲಾ ರಾಶಿ
ಈ ರಾಶಿಯವರು ಬಹಳ ಉತ್ಸಾಹವುಳ್ಳವರಾಗಿದ್ದಾರೆ. ಅಷ್ಟೇ ಖುಷಿಯಿಂದ ತಮ್ಮ ಸಂಗಾತಿಯನ್ನು ನೋಡಿಕೊಳ್ಳುತ್ತಾರೆ. ಬಹಳ ಹೊಂದಾಣಿಕೆ ಗುಣ ಇರುವ ಇವರು, ಪತಿಯನ್ನು ಅರ್ಥೈಸಿಕೊಂಡು ಜೀವನ ಸಾಗಿಸುತ್ತಾರೆ. ಇವರ ಚಿಂತನೆ ಕ್ರಿಯಾತ್ಮಕವಾಗಿರುವುದಲ್ಲದೆ, ತಾಳ್ಮೆಯೂ ಸಹ ಅತಿ ಹೆಚ್ಚೇ ಇರುತ್ತದೆ. ಇವರ ಜೊತೆ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಹೆಚ್ಚಿನ ನಂಬಿಕೆ ಇಟ್ಟವರಾಗಿರುತ್ತಾರೆ. ತುಲಾ ರಾಶಿಯವರ ಜೊತೆಗಿನ ಜೀವನ ತುಂಬಾ ರೊಮ್ಯಾಂಟಿಕ್ ಆಗಿಯೂ ಇರುತ್ತದೆ.

ವೃಷಭ ರಾಶಿ 
ಪ್ರೀತಿ, ಮನಸ್ಸುಗಳ ಸೇತುವೆಯಾಗಿ ರಾಶಿಯವರು ಸಂಗಾತಿ ಜೊತೆ ಜೀವನ ಸಾಗಿಸುತ್ತಾರೆ. ಈ ರಾಶಿಯವರು ಪ್ರೀತಿಯ ಸುದೀರ್ಘ ಮಾತುಕತೆ ಹಾಗೂ ಆಳವಾದ ಚರ್ಚೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಬಹಳಷ್ಟು ಸಂದರ್ಭದಲ್ಲಿ ಇವರು ವಾದ ಮಾಡುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡು ಸಂಗಾತಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಸಂಬಂಧದಲ್ಲಿ ಧನಾತ್ಮಕ ಅಂಶವನ್ನು ತುಂಬುವುದಲ್ಲದೆ, ಬಾಂಧವ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇವರು ಪ್ರೀತಿಯ ಆರಾಧಕರಾಗಿರುತ್ತಾರೆ.

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ಕುಂಭ ರಾಶಿ
ಇವರ ತುಂಬಾ ಆಕರ್ಷಕ ವ್ಯಕ್ತಿತ್ವದವರಾಗಿದ್ದು, ಬಹಳ ಶಾಂತ ಸ್ವಭಾವದವರು. ಸಂಗಾತಿಯೊಂದಿಗೆ ಖುಷಿಯಾದ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಇಷ್ಟಪಡುವವರು. ಆದರೆ, ಏಕತಾನತೆಯನ್ನು ಇವರು ಇಷ್ಟಪಡುವವರಲ್ಲ. ಬುದ್ಧಿವಂತರಾಗಿರುವುದಲ್ಲದೆ, ಬಹಳ ಲವಲವಿಕೆ ಇರುವವರಾಗಿರುತ್ತಾರೆ. ಹೀಗಾಗಿ ಸಂತೋಷದ ಮತ್ತು ಯಶಸ್ಸಿನ ಬದುಕಿಗೆ ಈ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದೂ ಹೇಳಲಾಗುತ್ತದೆ.