Asianet Suvarna News Asianet Suvarna News

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಸೋಮಾರಿತನ ಎಂಬುದು ಕೆಲವರು ರೂಢಿಸಿಕೊಂಡರೆ ಮತ್ತೆ ಕೆಲವರಿಗೆ ಗ್ರಹಗತಿಗಳಿಂದ ಉಂಟಾಗುತ್ತದೆ. ಕೆಲವು ರಾಶಿಯವರು ಏನಾದರೂ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡುವಷ್ಟೂ ಚಟುವಟಿಕೆಯಿಂದಿರದೇ, ಅಷ್ಟರಮಟ್ಟಿಗೆ ಸೋಮಾರಿಗಳಾಗಿರುತ್ತಾರೆ. ಇದಕ್ಕೂ ರಾಶಿ ಚಕ್ರ ಕಾರಣವಾಗಿರುತ್ತದೆ. ಈ ಐದು ರಾಶಿಯವರು ಬಹಳ ಸೋಮಾರಿಗಳಾಗಿದ್ದು, ಯಾವ ಯಾವ ರಾಶಿಯವರು ಎಂಬುದರ ಬಗ್ಗೆ ಗಮನಹರಿಸೋಣ.

These five Zodiac sign people are very lazy
Author
Bangalore, First Published Jul 27, 2020, 5:54 PM IST | Last Updated Jul 27, 2020, 5:54 PM IST

ಮನುಷ್ಯ ಎಂದ ಮೇಲೆ ಆತ ಎಷ್ಟೇ ಚಟುವಟಿಕೆಯಿಂದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಆಲಸಿತನವೂ ಮನೆ ಮಾಡಿರುತ್ತದೆ. ಇದನ್ನು ಯಾರು ಎಷ್ಟೇ ಅಲ್ಲಗಳೆದರೂ ಸತ್ಯವಾದ ಮಾತು. ಕಚೇರಿಯಲ್ಲಿ ತುಂಬಾ ಹಾರ್ಡ್‌ವರ್ಕ್ ಮಾಡುವವರೂ ಮನೆಯಲ್ಲಿ ಒಂದು ಕಡ್ಡಿಯನ್ನೂ ಅತ್ತಿಂದಿತ್ತ ಇಡದವರು ಸಿಗುತ್ತಾರೆ. ಇನ್ನು ಹೇಳಿದ್ದಷ್ಟನ್ನೇ ಮಾಡಿ ಸುಮ್ಮನಾಗುವವರೂ ಇರುತ್ತಾರೆ. 

ಕೆಲವರು ಆಲಿಸಗಳಾಗಿದ್ದರೂ ಅದನ್ನು ಹೇಗೋ ನಿವಾರಣೆ ಮಾಡಿಕೊಂಡು ಅದರಿಂದ ದೂರವಿದ್ದು, ಕೆಲಸದಲ್ಲಿ ನಿರತರಾಗಿರುತ್ತಾರೆ. ಇನ್ನು ಕೆಲವರಿಗೆ ನೀವು ಎಷ್ಟೇ ಹೇಳಿ, ತಿರುಗಿಯೂ ನೋಡುವುದಿಲ್ಲ. ಇವರು ಮಹಾನ್ ಆಲಿಸಿಗಳಾಗಿರುತ್ತಾರೆ. ಸೋಮಾರಿತನ ಎಂಬುದು ಇವರನ್ನು ನೋಡಿಯೇ ಹುಟ್ಟಿದೆ ಎಂದು ಭಾವಿಸಬಹುದು. ಅಷ್ಟರಮಟ್ಟಿಗೆ ಅವರು ನಡೆದುಕೊಳ್ಳುತ್ತಾರೆ.

ಇದನ್ನು ಓದಿ: ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..? 

ಈ ಆಲಸಿ ಸ್ವಭಾವ ಅವರಿಗೆ ಬರಲು ರಾಶಿ ಚಕ್ರವೂ ಕಾರಣ ಎಂದು ಹೇಳಲಾಗುತ್ತದೆ. ಅದರಲ್ಲೂ ಈ 5 ರಾಶಿಯವರಿಗಂತೂ ತುಂಬಾ ಆಲಿಸಿತನ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಂತ ಈ ರಾಶಿಯಲ್ಲಿ ಹುಟ್ಟಿದವರೆಲ್ಲರೂ ಆಲಿಸಿಗಳು ಎಂದು ಹೇಳಲಾಗದು. ಅಲ್ಲೂ ಸಹ ಗ್ರಹಗತಿಗಳು ಬದಲಾವಣೆಯಾದರೆ ಆಲಸಿತನ ದೂರವಾಗಿ ಚಟುವಟಿಕೆಯಿಂದಿರುತ್ತಾರೆಂದು ಹೇಳಲಾಗಿದೆ. ಆ ಮಹಾನ್ ಆಲಿಸಿತನ ಹೊಂದಿರುವ 5 ರಾಶಿಗಳು ಯಾವುದು ಎಂಬುದ ನೋಡೋಣ ಬನ್ನಿ…

ಕರ್ಕಾಟಕ ರಾಶಿ
ಸೋಮಾರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಈ ಕರ್ಕಾಟಕ ರಾಶಿಗೇ ಒಲಿಯುತ್ತದೆ. ಈ ರಾಶಿ ಜಾತಕದವರು ತುಂಬಾ ಆಲಸಿಗಳಾಗಿದ್ದು, ಸದಾ ಹಾಸಿಗೆಯಲ್ಲೇ ವಿರಮಿಸಲು ಇಷ್ಟಪಡುತ್ತಾರೆ. ಹಾಸಿಗೆ ಬಿಟ್ಟು ಏಳುವುದೆಂದರೆ ತುಂಬಾ ಕಷ್ಟಕರ ಸಂಗತಿ. ನಿದ್ರೆಯೊಂದಿದ್ದರೆ ಜಗತ್ತಿನಲ್ಲಿ ಎಲ್ಲವೂ ಸಿಕ್ಕಿದಂತೆ ಎಂದು ಭಾವಿಸುವವರು ಇವರು. ಇವರ ಪೂರ್ತಿ ದಿನವನ್ನು ಯಾವ ಕೆಲಸ ಕಾರ್ಯಗಳನ್ನೂ ಮಾಡದೇ, ಕೇವಲ ಮನೆಯಲ್ಲಿ ಸೋಫಾ ಮುಂದೆಯೋ, ಟಿವಿ ಮುಂದೆಯೋ ಕುಳಿತುಕೊಂಡು ಕಾಲಹರಣ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. 

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

ವೃಷಭ ರಾಶಿ
ಈ ರಾಶಿಯವರು ಸಹ ತುಂಬಾ ಆಲಸಿಗಳಾಗಿರುತ್ತಾರೆ. ಎಲ್ಲ ಕೆಲಸಗಳಿಂದ ತಪ್ಪಿಸಿಕೊಳ್ಳುವ ಇವರು, ತಮಗೆ ಲಾಭ ಇರುವ ಕೆಲಸವನ್ನು ಮಾತ್ರ ಮಾಡುತ್ತಾರೆಯೇ ವಿನಃ, ಯಾವುದೇ ಕೆಲಸವನ್ನು ಮೈಮೇಲೆ ಎಳೆದುಕೊಂಡು ಮಾಡುವ ವ್ಯಕ್ತಿತ್ವದವರು ಅಲ್ಲವೇ ಅಲ್ಲ. ಕೆಲವೊಮ್ಮೆ ಇಂತಹ ಕೆಲಸದಿಂದ ಲಾಭ ಆಗುತ್ತದೆ ಎಂದು ಗೊತ್ತಿದ್ದರೂ, ಅದರಲ್ಲಿ ಹೆಚ್ಚಿನ ಕೆಲಸ ಇಲ್ಲದಿದ್ದರೆ, ಲಾಭ ಬಹಳ ಜಾಸ್ತಿ ಇದ್ದರೆ ಮಾತ್ರ, ಆ ಕೆಲಸಕ್ಕೆ ಕೈ ಹಾಕುವವರಾಗಿದ್ದಾರೆ. 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೂ ಆಲಸ್ಯಕ್ಕೂ ಅವಿನಾಭಾವ ಸಂಬಂಧ ಎಂದು ಹೇಳಲಾಗುತ್ತದೆ. ಇವರ ಸೋಮಾರಿತನದಿಂದ ಹಲವಾರು ಕೆಲಸ-ಕಾರ್ಯಗಳು ಅರ್ಧಕ್ಕೇ ನಿಂತಿರುತ್ತದೆ. ಇದರಿಂದ ಇವರು ಪಶ್ಚಾತ್ತಾಪ ಪಡುವ ಸಂದರ್ಭವೂ ಬರುತ್ತದೆ. ಹೀಗಿದ್ದರೂ ಈ ರಾಶಿಯ ಕೆಲವರು ಸೋಮಾರಿತನವನ್ನು ಬಿಡಲಾರರು. ಆದರೆ, ಇವರಲ್ಲಿ ಕೆಲವೇ ಕೆಲವರು ದೃಢ ಸಂಕಲ್ಪ ಮಾಡಿ, ಕೆಲಸ ಕಾರ್ಯಗಳಲ್ಲಿ ನಿರತರಾಗಿ ಯಶಸ್ಸನ್ನು ಪಡೆಯುತ್ತಾರೆ. 

ಮೀನ ರಾಶಿ
ಈ ರಾಶಿಯವರ ಜೀವನ ಒಂದು ಭಾಗವೇ ಸೋಮಾರಿತನವಾಗಿದೆ. ಸೋಮಾರಿತನಕ್ಕೆ ಮತ್ತೊಂದು ಹೆಸರೇ ಮೀನರಾಶಿ ಎಂದು ಹೇಳುವುದುಂಟು. ಇವರು ಎಷ್ಟರಮಟ್ಟಿಗೆ ಆಲಸಿಗಳು ಎಂದರೆ ತುಂಬಾ ಚಿಕ್ಕ ಚಿಕ್ಕ ಕೆಲಸಗಳಿಗೂ ಇನ್ನೊಬ್ಬರ ನೆರವು ಇವರಿಗೆ ಬೇಕಾಗುತ್ತದೆ. ಊಟವೂ ಇವರು ಇದ್ದಲ್ಲಿಗೇ ಬರಬೇಕು ಎಂಬುದು ಇವರ ಮನೋಭಾವ. ಹೀಗಾಗಿ ಊಟವನ್ನೂ ಹಾಸಿಗೆ ಬಳಿಯೇ ತರಿಸಿಕೊಳ್ಳುತ್ತಾರೆ. 

ಇದನ್ನು ಓದಿ: ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ ! 

ಸಿಂಹ ರಾಶಿ
ಈ ರಾಶಿಯವರು ಕಷ್ಟಪಟ್ಟು ದುಡಿಯುವ ಮನೋಭಾವ ಹೊಂದಿದ್ದರೂ ಸಹ, ಕೆಲವೊಮ್ಮೆ ಕೆಲಸದ ಅವಧಿಯಲ್ಲಿ ಯಾವುದಾದರೂ ಆಟದಲ್ಲಿ ನಿರತರಾಗಿರುತ್ತಾರೆ. ಇಲ್ಲವೇ ಹಾಳುಹರಟೆಯಲ್ಲಿ ತೊಡಗಿರುತ್ತಾರೆ. ಇದೇ ಇವರಿಗೆ ಮುಳುವಾಗುತ್ತದೆ. 

Latest Videos
Follow Us:
Download App:
  • android
  • ios