Asianet Suvarna News Asianet Suvarna News

ಯಾವುದೇ ಘಟನೆಯಿಂದ ಅತಿ ಸುಲಭವಾಗಿ ದುಃಖಿತರಾಗೋ ರಾಶಿಗಳಿವು!

ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ಕೆಲ ಜನ ಹೆಚ್ಚು ತೀವ್ರವಾಗಿ ಸ್ಪಂದಿಸುತ್ತಾರೆ. ಕೆಲವರು ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಭಾವನಾತ್ಮಕವಾಗಿ ಹೆಚ್ಚು ಸ್ಪಂದಿಸುವ ಜನ ಬಹುಬೇಗ ದುಃಖಿತರಾಗುತ್ತಾರೆ. ಈ ಗುಣ ಸಹ ಕೆಲವು ರಾಶಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
 

These zodiac sign become sad very easily
Author
First Published Aug 26, 2023, 4:39 PM IST | Last Updated Aug 26, 2023, 4:39 PM IST

ಜಗತ್ತಿನಲ್ಲಿ ಪ್ರತಿಯೊಬ್ಬರೂ ವಿಭಿನ್ನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇವಲ 12 ರಾಶಿಚಕ್ರಗಳಲ್ಲಿ ಎಲ್ಲ ಜನಿಸುತ್ತಾರೆ. ಆದರೆ ಪ್ರತಿಯೊಬ್ಬರೂ ಒಬ್ಬರಿಗಿಂತ ಮತ್ತೊಬ್ಬರು ಭಿನ್ನವಾಗಿರುತ್ತಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ನೋವು-ನಲಿವುಗಳಿರುತ್ತವೆ. ಒಂದು ಸನ್ನಿವೇಶಕ್ಕೆ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ರಾಶಿಚಕ್ರಗಳು ನಮ್ಮ ಸ್ವಭಾವ, ಗುಣಧರ್ಮಗಳನ್ನು ರೂಪಿಸುತ್ತವೆ. ರಾಶಿಗಳ ಆಧಾರದ ಮೇಲೆ ಜನರ ಶಕ್ತಿ, ಸಾಮರ್ಥ್ಯ, ಮನೋಧರ್ಮಗಳು ಭಿನ್ನವಾಗಿರುತ್ತವೆ. ಅಂತೆಯೇ, ಕೆಲವರು ಬಹುಬೇಗ ದುಃಖಿತರಾಗುತ್ತಾರೆ. ಕೆಲವರು ಜೀವನದಲ್ಲಿ ಎಂತಹ ಸನ್ನಿವೇಶ ಎದುರಾದರೂ, ಕಷ್ಟಕಾರ್ಪಣ್ಯಗಳನ್ನು ಎದುರಿಸಿದರೂ ಹೆಚ್ಚು ದುಃಖಕ್ಕೆ ಒಳಗಾಗುವುದಿಲ್ಲ. ಯಾವುದಾದರೂ ಸನ್ನಿವೇಶಕ್ಕೆ ಜನ ಸ್ಪಂದಿಸುವ ರೀತಿಯಿಂದ ಅವರು ನೋವು-ನಲಿವುಗಳಿಗೆ ಸಾಕ್ಷಿಯಾಗುತ್ತಾರೆ. ಮುಖ್ಯವಾಗಿ, ಐದು ರಾಶಿಗಳ ಜನ ಹೆಚ್ಚು ಸುಲಭವಾಗಿ ದುಃಖಿತರಾಗುತ್ತಾರೆ.   

•    ಕರ್ಕಾಟಕ (Cancer)
ಜಲತತ್ವದ (Water) ಕರ್ಕಾಟಕ ರಾಶಿಯ ಜನ ಹೆಚ್ಚು ಸಹಾನುಭೂತಿ ಹೊಂದಿರುತ್ತಾರೆ, ಇತರರ ಭಾವನೆಗಳಿಗೆ (Feelings) ಹೆಚ್ಚು ಸೂಕ್ಷ್ಮ (Sensitive) ರಾಗಿರುತ್ತಾರೆ. ಆಳವಾದ ಭಾವನಾತ್ಮಕ ಬಾಂಧವ್ಯ (Deep Emotional Connection) ಹೊಂದಿರುವುದರಿಂದ ಸಾಕಷ್ಟು ಬಾರಿ ನೋವಿಗೆ (Pain) ತುತ್ತಾಗುತ್ತಾರೆ. ತೀವ್ರವಾಗಿ ನೋವುಣ್ಣುತ್ತಾರೆ. ತಮ್ಮ ಆರೈಕೆ ಗುಣದಿಂದ ಎಲ್ಲರನ್ನೂ ಕಾಳಜಿ ಮಾಡುವ ಇವರ ಸೂಕ್ಷ್ಮ ಗುಣ ಹೇಗೆ ಸಂತೋಷವನ್ನು ತರಬಲ್ಲದೋ ಹಾಗೆಯೇ ದೌರ್ಬಲ್ಯವನ್ನೂ ಉಂಟುಮಾಡಬಲ್ಲದು.

ನಿಮ್ಮ ಸಂಗಾತಿಯೂ ಈ ರಾಶಿಗೆ ಸೇರಿದ್ದಾರಾ? ಹಾಗಾದ್ರೆ ಅವರನ್ನು ಆಗಾಗ ಮೆಚ್ಚಿಕೊಳ್ತಾ ಇರಿ

•    ಮೀನ (Pisces)
ಮತ್ತೊಂದು ಜಲತತ್ವದ ರಾಶಿಯಾಗಿರುವ ಮೀನ ರಾಶಿಯ ಜನ ಭಾವನಾತ್ಮಕವಾಗಿ ಭಾರೀ ಸೂಕ್ಷ್ಮರಾಗಿದ್ದು, ಈ ಸೂಕ್ಷ್ಮತೆ ಎರಡು ಅಲುಗಿನ ಕತ್ತಿಯಂತಿರುತ್ತದೆ. ಈ ಗುಣದಿಂದ ಅವರು ಇತರರೊಂದಿಗೆ ಆಳವಾದ ಬಾಂಧವ್ಯ (Relation) ಹೊಂದಬಲ್ಲರು. ಹಾಗೆಯೇ, ಈ ಗುಣದಿಂದ ತಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನೂ (Negative Energy) ಅವರು ಸ್ವೀಕರಿಸಬಲ್ಲರು. ಅಂತರ್ಗತವಾಗಿರುವ ಸಹಾನುಭೂತಿಯ ಕಾರಣದಿಂದಲೇ ಎಷ್ಟೋ ಬಾರಿ ದುಃಖಿತ (Sad) ರಾಗಬಹುದು. 

•    ವೃಶ್ಚಿಕ (Scorpio)
ವೃಶ್ಚಿಕ ರಾಶಿ ಕೂಡ ಜಲತತ್ವವನ್ನಾಧರಿಸಿದೆ. ಆಳವಾದ ಭಾವನೆಗಳಿಂದ (Emotions) ಕೂಡಿರುವ ವೃಶ್ಚಿಕ ರಾಶಿಯ ಜನ ತಮ್ಮ ಅತ್ಯಂತ ತೀವ್ರ ಭಾವನಾತ್ಮಕ ಎಳೆಯಿಂದಲೇ ಆಳವಾದ ನೋವಿಗೂ ತುತ್ತಾಗಬಲ್ಲರು. ಸಂಬಂಧಗಳಲ್ಲಿ ಅಧಿಕೃತತೆ ಮತ್ತು ಹೆಚ್ಚು ಸಂಪರ್ಕ ಬಯಸುವ ಇವರ ಧೋರಣೆಯಿಂದ ಸಾಕಷ್ಟು ಬಾರಿ ಸಮಸ್ಯೆಯಾಗುತ್ತದೆ. ಸಂಬಂಧ ಅಷ್ಟು ಸದೃಢವಾಗಿಲ್ಲದ ಸಮಯದಲ್ಲಿ ಇವರು ತೀವ್ರ ನೋವಿಗೆ ಒಳಗಾಗುತ್ತಾರೆ. ಇವರ ಸೂಕ್ಷ್ಮ ಬುದ್ಧಿಯು ಭಾವನಾತ್ಮಕ ಸತ್ಯಗಳನ್ನು (Truth) ಅರಿಯಲು ಪ್ರೇರೇಪಿಸುತ್ತದೆ. ಇದು ಇವರನ್ನು ದುಃಖಿತರನ್ನಾಗಿ ಮಾಡುತ್ತದೆ.

•    ಕನ್ಯಾ (Virgo)
ಭೂಮಿ ತತ್ವದ ಕನ್ಯಾ ರಾಶಿಯ ಜನ ಬಹುಬೇಗ ದುಃಖಕ್ಕೆ ತುತ್ತಾಗುತ್ತಾರೆ. ಇವರಲ್ಲಿ ಜವಾಬ್ದಾರಿಯುತ (Responsibility) ಭಾವನೆ ಅತ್ಯಂತ ಆಳವಾಗಿರುತ್ತದೆ. ಹಾಗೂ ಇವರು ಸಂದರ್ಭಗಳನ್ನು ಅತ್ಯಂತ ಕಟ್ಟುನಿಟ್ಟಿನಿಂದ ವಿಮರ್ಶೆ (Critique) ಮಾಡುತ್ತಾರೆ. ತಮ್ಮ ಕುರಿತು ಹಾಗೂ ಇತರರ ಕುರಿತಾಗಿಯೂ ವಿಮರ್ಶಾತ್ಮಕ (Analyse) ನಿಲುವು ಹೊಂದಿರುತ್ತಾರೆ. ನಿರಂತರವಾಗಿ ಸ್ವಯಂ ಟೀಕೆ (Criticise) ಮಾಡಿಕೊಳ್ಳುತ್ತಾರೆ. ಈ ಗುಣವೇ ಇವರನ್ನು ನೋವಿಗೆ ದೂಡುತ್ತದೆ. ಅಸಂತೃಪ್ತಿ ಉಂಟುಮಾಡುತ್ತದೆ. ವಿಸ್ತೃತವಾಗಿ ಎಲ್ಲವನ್ನೂ ಅರಿಯಲು ಮುಂದಾಗುವ ಇವರು, ಅತಿಯಾಗಿ ಪರಿಪೂರ್ಣತೆಯನ್ನೂ (Perfection) ಬಯಸುತ್ತಾರೆ. ಪರಿಪೂರ್ಣತೆಯನ್ನು ಎಲ್ಲಡೆ ನಿರೀಕ್ಷೆ ಮಾಡುವುದರಿಂದ ಭಾವನಾತ್ಮಕವಾಗಿ ಒತ್ತಡಕ್ಕೆ ತುತ್ತಾಗುತ್ತಾರೆ.

ಮರಣದ ನಂತರ ಏನಾಗುತ್ತೆ? ಸತ್ತ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಹೇಗೆ?

•    ಮಕರ (Capricorn)
ಭೂಮಿ ತತ್ವದ ಮಕರ ರಾಶಿಯ ಜನ ಅತ್ಯಂತ ಸ್ಟ್ರಾಂಗ್‌ (Strong) ನಿರ್ಧಾರಕ್ಕೆ ಹೆಸರುವಾಸಿ. ಹಾಗೆಯೇ ತಾಳಿಕೊಳ್ಳುವ, ಸ್ಥಿರವಾದ ಗುಣವಿರುತ್ತದೆ. ಆದರೆ ಇವರೂ ಸಹ ಬಹುಬೇಗ ದುಃಖಕ್ಕೆ ಒಳಗಾಗುತ್ತಾರೆ. ಆಂತರಿಕ ಒತ್ತಡ (Inner Stress) ಮತ್ತು ಭಾವನಾತ್ಮಕ ಏರಿಳಿತದಿಂದ ನೋವುಣ್ಣುತ್ತಾರೆ. ತಮ್ಮ ಬಗ್ಗೆ ಅತಿಯಾದ ನಿರೀಕ್ಷೆ ಇರಿಸಿಕೊಳ್ಳುತ್ತಾರೆ. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಮಸ್ಯೆ ಎದುರಿಸುತ್ತಾರೆ. ತಮ್ಮ ಮಹತ್ವಾಕಾಂಕ್ಷೆ (Ambition) ಮತ್ತು ಸೂಕ್ಷ್ನ ಬುದ್ಧಿಗಳ ನಡೆಯುವ ಆಂತರಿಕ ಸಂಘರ್ಷಗಳಿಂದಲೇ ದುಃಖಕ್ಕೆ ತುತ್ತಾಗುತ್ತಾರೆ.

Latest Videos
Follow Us:
Download App:
  • android
  • ios