Asianet Suvarna News Asianet Suvarna News

ನಿಮ್ಮ ಸಂಗಾತಿಯೂ ಈ ರಾಶಿಗೆ ಸೇರಿದ್ದಾರಾ? ಹಾಗಾದ್ರೆ ಅವರನ್ನು ಆಗಾಗ ಮೆಚ್ಚಿಕೊಳ್ತಾ ಇರಿ

ಕೆಲ ಜನ “ಮನೆಗಾಗಿ ಎಷ್ಟು ಶ್ರಮಿಸುತ್ತೇನೆ, ಆದರೆ, ಅದನ್ನು ಯಾರೂ ಗುರುತಿಸುವುದಿಲ್ಲʼ ಎಂದು ಅಲವತ್ತುಕೊಳ್ಳುವವರನ್ನು ಕಾಣಬಹುದು. ತಮ್ಮ ಪ್ರಾಮಾಣಿಕ ಕೆಲಸವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಬೇಕು ಎನ್ನುವ ಆಸೆ ಅವರಲ್ಲಿರುತ್ತರೆ. ಇದು ಕೆಲವು ರಾಶಿಗಳ ಜನರಲ್ಲಿ ಹೆಚ್ಚು. ಇವರಿಗೆ ಹೊಗಳಿಸಿಕೊಳ್ಳುವುದೆಂದರೆ ಇಷ್ಟ.
 

Some zodiac sign that expects adoration
Author
First Published Aug 23, 2023, 7:55 PM IST | Last Updated Aug 23, 2023, 7:55 PM IST

ಹೊಗಳಿಸಿಕೊಳ್ಳುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಎಲ್ಲರಿಗೂ ಹೊಗಳಿಕೆ ಅಂದರೆ ಖುಷಿಯಾಗುತ್ತದೆ. ಮಕ್ಕಳಿಗಂತೂ ಪಾಲಕರ ಬಳಿ ಹೊಗಳಿಸಿಕೊಳ್ಳಬೇಕು ಎಂದು ಭಾರೀ ಆಸೆಯೂ ಇರುತ್ತದೆ. ಆದರೆ, ಕೆಲವರ ಈ ಸ್ವಭಾವ ದೊಡ್ಡವರಾದ ಮೇಲೆಯೂ ಮುಂದುವರಿಯುತ್ತದೆ. ಇವರಿಗೆ ಸದಾಕಾಲ ಎಲ್ಲರಿಂದಲೂ ಹೊಗಳಿಸಿಕೊಳ್ಳಬೇಕು ಎನ್ನುವ ಬಯಕೆ ಹೆಚ್ಚು. ಹೊಗಳಿಸಿಕೊಳ್ಳುವುದಕ್ಕಾಗಿಯೇ ಅವರು ಕೆಲವು ಕೆಲಸಗಳನ್ನು ಮಾಡುವುದೂ ಉಂಟು. “ಮಾಡಿದ ಉತ್ತಮ ಕೆಲಸಗಳನ್ನು ಹೇಳಿಕೊಳ್ಳಬಾರದು, ಎಡಗೈನಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದುʼ ಎನ್ನುವ ಮಾತುಗಳೆಲ್ಲ ಇವೆ. ಆದರೆ, ಇವರು ಹಾಗಲ್ಲ. ತಾವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ಎನ್ನುತ್ತಾರೆ. ಇಂತಹ ಜನರನ್ನು ಕೆಲವು ರಾಶಿಗಳಲ್ಲಿ ಪ್ರಮುಖವಾಗಿ ಕಾಣಬಹುದು. ಈ ಗುಣ ಕೆಲವು ರಾಶಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೊಗಳಿಕೆಯಿಂದ ಇವರು ತೃಪ್ತರಾಗುತ್ತಾರೆ. ಬರೀ ಖುಷಿಯಲ್ಲ, ಜೀವನಕ್ಕೆ ಹೊಸ ಉತ್ಸಾಹ ಮೂಡುತ್ತದೆ. ಮುಖ್ಯವಾಗಿ ೫ ರಾಶಿಗಳ ಜನರಲ್ಲಿ ಈ ಗುಣ ಕಾಣಬಹುದು.

•    ಸಿಂಹ (Leo)
ದ್ವಾದಶ ರಾಶಿಚಕ್ರದ (Zodiac Sign) ಪೈಕಿ ಸಿಂಹ ರಾಶಿಯ ಜನರಿಗೆ ಹೊಗಳಿಸಿಕೊಳ್ಳಬೇಕು (Adoration) ಎನ್ನುವ ಆಸೆ (Desire) ಹೆಚ್ಚು. ಆತ್ಮವಿಶ್ವಾಸ, ವರ್ಚಸ್ಸು (Charm) ಹೊಂದಿರುವ ಸಿಂಹ ರಾಶಿಯ ಜನ ಹೊಗಳಿಕೆಯ ವಿಚಾರದಲ್ಲಿ ಕೇಂದ್ರಬಿಂದುವಿನಲ್ಲಿ ನಿಲ್ಲಲು ಇಷ್ಟಪಡುತ್ತಾರೆ. ಎಲ್ಲರ ಗಮನ ತಮ್ಮೆಡೆಗೆ ಇರಬೇಕು ಎನ್ನುವ ಬಯಕೆ ಹೊಂದಿರುತ್ತಾರೆ. ಆಕರ್ಷಕ (Attractive) ವ್ಯಕ್ತಿತ್ವ (Personality) ಹೊಂದಿರುತ್ತಾರೆ. ಇವರಲ್ಲಿನ ವಿಶಿಷ್ಟ ಪ್ರತಿಭೆ, ಸಾಮರ್ಥ್ಯವನ್ನು ಎಲ್ಲರೂ ಗುರುತಿಸಿದರೆ ಭಾರೀ ನೆಮ್ಮದಿ ಕಾಣುತ್ತಾರೆ.

ಗುಟ್ಟಾಗಿ ವಿವಾಹೇತರ ಸಂಬಂಧ; ಜನ್ಮ ಕುಂಡಲಿ ಹೇಳುತ್ತೆ ನಿಮ್ಮ ಸಂಗಾತಿಯ ರಹಸ್ಯ..!

•    ತುಲಾ (Libra)
ಸಮತೋಲನ (Balanced) ಮತ್ತು ಸಾಮರಸ್ಯದ (Harmony) ಜೀವನ ನಡೆಸಲು ಇಷ್ಟಪಡುವ ತುಲಾ ರಾಶಿಯ ಜನ ಜೀವನದ ಎಲ್ಲ ಹಂತಗಳಲ್ಲಿ, ಸಂಬಂಧಗಳಲ್ಲಿ (Relationship) ಹೊಗಳಿಕೆ  ಬಯಸುತ್ತಾರೆ. ಸಮತೋಲನಕ್ಕಾಗಿ ಶ್ರಮಿಸುವ ಗುಣದಿಂದಲೇ ಹೊಗಳಿಕೆಯ ಬಯಕೆ ಹೊಂದುತ್ತಾರೆ. ಇವರ ಪ್ರಯತ್ನಗಳಿಗೆ ಮನ್ನಣೆ ದೊರೆತರೆ ಮಾಡಿದ ಕೆಲಸ ಸಾರ್ಥಕವಾಯಿತು ಎಂದುಕೊಳ್ಳುತ್ತಾರೆ.

•    ಮೀನ (Pisces)
ಸಹಾನುಭೂತಿಯುಳ್ಳ ಕನಸುಗಾರ (Dreamer) ಮೀನ ರಾಶಿಯ ಜನ ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಸೂಕ್ಷ್ಮ ಮನಸ್ಥಿತಿ (Sensitive Mentality) ಹೊಂದಿದ್ದು, ಎಲ್ಲರೂ ಮೆಚ್ಚಿಕೊಂಡಾಗ ಸಂತಸ ಪಡುತ್ತಾರೆ. ಇತರರೊಂದಿಗೆ ಭಾವನಾತ್ಮಕವಾದ ಸಂಪರ್ಕ ಸಾಧಿಸುವ ಗುಣ ಹೊಂದಿರುವ ಮೀನ ರಾಶಿಯ ಜನರನ್ನು ಹೊಗಳಿದರೆ ತಮ್ಮ ಪ್ರಯತ್ನಗಳನ್ನು ಗುರುತಿಸಿದಂತೆ ನೆಮ್ಮದಿ ಪಡುತ್ತಾರೆ.

•    ಮಿಥುನ (Gemini)
ಅವಳಿಗಳು ಜತೆಯಾಗಿ ಇರುವ ಮಿಥುನ ರಾಶಿಯ ಜನರಲ್ಲಿ ಎರಡು ರೀತಿಯ ಮನಸ್ಥಿತಿ ಇರುತ್ತದೆ. ಹೀಗಾಗಿ, ಇವರು ಸದಾಕಾಲ ಮಾನಸಿಕವಾದ ಉತ್ತೇಜನಕ್ಕೆ (Stimulation) ಹಾತೊರೆಯುತ್ತಾರೆ. ಜಗತ್ತಿನ ಬಗ್ಗೆ ಅಪಾರ ಕುತೂಹಲ ಹೊಂದಿರುತ್ತಾರೆ. ಜ್ಞಾನದ ಹಂಬಲಕ್ಕಾಗಿ ತುಡಿತ ಹೊಂದಿರುತ್ತಾರೆ. ಈ ಗುಣವೇ ಇವರಲ್ಲಿ ಹೊಗಳಿಕೆಯ ಹಂಬಲವನ್ನು ಬಿತ್ತುತ್ತದೆ. ಹೊಗಳಿದಾಗ ತಮ್ಮ ಜಿಜ್ಞಾಸೆಯನ್ನು ಗುರುತಿಸಿದ ಭಾವನೆ ಹೊಂದಿರುತ್ತಾರೆ.

ಶನಿಯಿಂದ ಈ ಏಳು ರಾಶಿಯವರ ಸಂಕಷ್ಟ ದೂರ; 2025ರವರೆಗೆ ನಿಮ್ಮ ಬೆಳವಣಿಗೆ ಪ್ರಗತಿ..!

•    ವೃಷಭ (Taurus)
ಸೂಕ್ಷ್ಮಮತಿಯ ಹಾಗೂ ಪ್ರಾಯೋಗಿಕ ಬುದ್ಧಿಯ ವೃಷಭ ರಾಶಿಯ ಜನಕ್ಕೂ ಮೆಚ್ಚುಗೆ ಬೇಕು. ಮನ್ನಣೆ ದೊರೆತಾಗ ಇವರು ಅತ್ಯಂತ ಕಂಫರ್ಟ್‌ (Comfort) ಆಗಿರುವಂತೆ ಫೀಲ್‌ ಆಗುತ್ತಾರೆ. ಸಂಬಂಧದಲ್ಲಿ ಅತ್ಯಂತ ಸ್ಥಿರತೆ ಹೊಂದಿದ್ದು, ಅದಕ್ಕಾಗಿ ಮೆಚ್ಚುಗೆ ಬಯಸುತ್ತಾರೆ. ಇವರನ್ನು ಹೊಗಳಿದರೆ ಸುರಕ್ಷಿತ ಹಾಗೂ ಕಂಫರ್ಟೆಬಲ್‌ ಪರಿಸರ ನಿರ್ಮಾಣಕ್ಕೆ ತಾವು ಮಾಡಿದ ಪ್ರಯತ್ನಕ್ಕೆ ಮನ್ನಣೆ ದೊರೆತ ಖುಷಿ ಅನುಭವಿಸುತ್ತಾರೆ.
ನಿಮ್ಮ ಸಂಗಾತಿಯೂ ಈ ಮೇಲಿನ ರಾಶಿಗಳಿಗೆ ಸೇರಿದ್ದರೆ ಸುಖಾಸುಮ್ಮನೆ ಅಲ್ಲ, ಅವರ ಪ್ರಯತ್ನಗಳಿಗೆ ನಿಜವಾದ ಮೆಚ್ಚುಗೆ ಸೂಸಿ ನೋಡಿ. ಅವರು ಎಷ್ಟು ಹ್ಯಾಪ್ಪಿಯಾಗಿರುತ್ತಾರೆ. ಹೊಗಳಿಕೆ ಬಯಸುವುದು ತಪ್ಪು ಎನ್ನುವಂತೆ ಭಾಸವಾದರೂ ಅದು ಅವರ ಭಾವನಾತ್ಮಕ (Emotional) ಸಂಪರ್ಕಕ್ಕೆ ಅಗತ್ಯವಾಗಿರುತ್ತದೆಯಷ್ಟೆ. ಹೀಗಾಗಿ, ಮನಃಪೂರ್ವಕವಾಗಿ ಇವರನ್ನು ಹೊಗಳಿಬಿಡಿ.  

Latest Videos
Follow Us:
Download App:
  • android
  • ios