Asianet Suvarna News Asianet Suvarna News

ಈ ರಾಶಿಯಲ್ಲಿ ಜನಿಸಿದವರು ಬರೀ ಜುಗ್ಗರು! ನಿಮ್ಮ ಜೊತೆ ಯಾರಿದ್ದಾರೆ ಇಂಥವರು?

ಒಂದಂತೂ ನಿಜ, ಹಣ ಇಟ್ಟಲ್ಲೇ ಇಟ್ಟಿದ್ದರೆ ಕೊಳೆತು ವಾಸನೆ ಬರಬಹುದೇ ಹೊರತು ಯಾರೂ ಉದ್ಧಾರವಂತೂ ಆಗಲು ಸಾಧ್ಯವಿಲ್ಲ. ಹಾಗಾಗಿ ಹಣವನ್ನು ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡಿ..

These people not ready to spend money
Author
First Published Dec 27, 2022, 12:51 PM IST

 ಜಾತಕದಲ್ಲಿ ಇರುವ ಎರಡನೇ ಮನೆಯನ್ನು ಆಳುವ ಚಿಹ್ನೆ ಮತ್ತು ಅದರೊಳಗೆ ಚಲಿಸುವ ಗ್ರಹಗಳು ಸಂಪತ್ತು ಅಥವಾ ಅದರ ಕೊರತೆಯ ಸೂಚಕಗಳಾಗಿರುವ ಜೊತೆಗೆ ನಮ್ಮ ಉದಾರತೆಯ ಸಾಮರ್ಥ್ಯವನ್ನು ವಿವರಿಸುತ್ತದೆ. ಶುಕ್ರ, ಸುಂದರವಾದ ವಸ್ತುಗಳ ಮತ್ತು ಗಳಿಸುವ ಸಾಮರ್ಥ್ಯ ಸೂಚಿಸುವ ಗ್ರಹ. ಹಾಗಾಗಿ ಶುಕ್ರ ಗ್ರಹದ ಸಂಚಾರದ ಆದರದ ಮೇಲೆ ನೀವು ಎಷ್ಟರ ಮಟ್ಟಿಗೆ ಹಣ ಖರ್ಚು ಮಾಡಲು ಉದಾರತೆ ಹೊಂದಿದ್ದೀರಿ ಅಥವಾ ಹಣ ಹೊರಗೆ ತೆಗೆಯಲು ಹಿಂದೆ ಮುಂದೆ ನೋಡುತ್ತೀರಾ ಎಂಬ ವಿಷಯ ನಿರ್ಧರಿತವಾಗುತ್ತದೆ. ಇಲ್ಲಿ ಕೆಳಗೆ ನೀಡಿರುವ ರಾಶಿ ಚಕ್ರದಡಿಯಲ್ಲಿ ಜನಿಸಿರುವ ಜನರು ಜಗ್ಗತನ ಮಾಡುತ್ತಾರೆ.

ತುಲಾ ರಾಶಿ (Libra)
ತುಲಾ ರಾಶಿಯವರು, ಯಾವಾಗಲೂ ತಮ್ಮ ಕ್ಷುಲ್ಲಕ (Small) ಕಾರಣಗಳಿಗಾಗಿ ಬೇರೊಬ್ಬರು ಹೆಚ್ಚಿನ ಮೌಲ್ಯದ (Value) ಬಿಲ್ ಕಟ್ಟುವಂತೆ ಮಾಡಲು ಪ್ರಯತ್ನಿಸುತ್ತಾರೆ. ಅವರ ದುಬಾರಿ ಅಭಿರುಚಿಯನ್ನು ಪೂರೈಸಲು ಕಠಿಣ ಪರಿಶ್ರಮ ಅಗತ್ಯ ಎಂದು ತಿಳಿದಿದ್ದರೂ ಅದಕ್ಕೆ ಶ್ರಮಿಸಲು ಅವರು ತಾಯಾರಿರುವುದಿಲ್ಲ. ಅವರು ಹೊರಗೆ ಹೊರಡುವಾಗ ಎಲ್ಲೋ ಅಪರೂಪವಾಗಿ ಹಣವನ್ನು ಕೊಂಡೊಯ್ಯುತ್ತಾರೆ ಅಥವಾ ಖರ್ಚು ಮಾಡುತ್ತಾರೆ, ಇಲ್ಲವಾದರೆ ಯಾವಾಗಲೂ ತಮ್ಮ ಮುಖದ ಮೇಲೆ ಗೆರೆಯಿಲ್ಲದೆ ಅಥವಾ ಹೆಗಲ ಮೇಲೆ ಹೊರೆಯಿಲ್ಲದೆ ಆರಾಮವಾಗಿ (Easily) ಬೇರೆಯವರಿಂದ ಖರ್ಚು ಮಾಡಿಸುತ್ತಾರೆ. ಇವರು ಜನರನ್ನು ಮೋಡಿ ಮಾಡಬಲ್ಲ ಉತ್ತಮ ನೋಟ (Look), ನಡತೆಯ ಕಾರಣಗಳನ್ನು ಹೊಂದಿದ್ದಾರೆ. ಅವರೊಂದಿಗೆ ಸಮಯ ಕಳೆಯುವ ಆಸೆ ನಿಮಗಿದ್ದರೆ ಅದಕ್ಕಾಗಿ ನಿಮ್ಮ ಎಲ್ಲಾ ಹಣವನ್ನು ಅವರ ಮೇಲೆ ಖರ್ಚು ಮಾಡುವುದಕ್ಕೆ ಅವರು ಅರ್ಹರು ಎಂಬುದು ಅವರ ಅಭಿಪ್ರಾಯ. ಆದರೆ ಇವರಲ್ಲಿ ಕೆಲವರು, ಹೀಗೆ ಸಿಗುವ ಪ್ರಾಮುಖ್ಯತೆ (Importance) ಮತ್ತು ಅದ್ದೂರಿ, ಬೆಲೆ ಸವಲತ್ತು ಪಡೆದುಕೊಳ್ಳಲು ನಿಜಕ್ಕೂ ಯೋಗ್ಯರಾಗಿರುತ್ತಾರೆ.

ಮಕರ ರಾಶಿ (Capricorn)
ಮಕರ ರಾಶಿಯ ಜನರು ತುಂಬಾ ಕಡಿಮೆ ದುಂದುವೆಚ್ಚ ಮಾಡುವವರು. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವುದು, ಅವಶ್ಯಕತೆ ಇಲ್ಲದೆ ಇರುವ ವಸ್ತುಗಳಿಗೆ ಹಣ ಸುರಿಯುವುದು ಅಂದರೆ ಇವರಿಗೆ ಇಷ್ಟವಾಗೋದಿಲ್ಲ. ಇತರ ಜನರ ಪರಿಭಾಷೆಯಲ್ಲಿ, ಈ ಸಮುದ್ರ ಆಡುಗಳು ನಗದಿನಿಂದ (Cash) ಅಗ್ಗವಾಗಿವೆ ಆದರೆ ಟೀಕೆಗಳನ್ನು ಪಡೆಯುವ ವಿಚಾರದಲ್ಲಿ ದುಬಾರಿಯಾಗಿವೆ. ಮಕರ ರಾಶಿಯ ಜನರು ಉಳಿತಾಯಕ್ಕಾಗಿ ಕಾರ್ಯತಂತ್ರ ರೂಪಿಸುವ ಮೂಲಕ ಭವಿಷ್ಯದ ತಯಾರಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಮೊದಲ ಡೇಟಿಂಗ್ ಪಾವತಿಸಲು ಕೂಡಾ ಅಗತ್ಯತೆ ಮೀರಿದ ಉಡುಗೊರೆಯನ್ನು (Expensive) ಖರೀದಿಸುವುದಿಲ್ಲ. ಅಪಾಯದ ವಿಮುಖತೆ ಮತ್ತು ವೆಚ್ಚ ಪ್ರಜ್ಞೆಯ ಅರಿವನ್ನು (Knowledge) ತಲೆಯಲ್ಲಿಟ್ಟುಕೊಂಡು ಸಾಲಗಳನ್ನು ನೀಡುತ್ತಾರೆ ಆದರೂ ಮುಕ್ತವಾಗಿ ಹೆಚ್ಚಿನ ಸಾಲ ನೀಡುವುದಿಲ್ಲ.

ಇದನ್ನೂ ಓದಿ: Zodiac signs: ಜನರ ನಗುವಲ್ಲಿ ತಮ್ಮ ನೋವು ಮರೆಯುವ ವ್ಯಕ್ತಿತ್ವ ಈ ರಾಶಿಯದ್ದು
ಮೀನಾ ರಾಶಿ (Pisces)

ಮೀನ ರಾಶಿಯವರ ಬಯಕೆಗಳು ಅಗ್ಗವಾಗಿರುವುದಿಲ್ಲ (Cheap), ಬಯಕೆಗಳು ಸಾಕಷ್ಟು ಇರುತ್ತವೆ. ಆದರೆ, ಅದನ್ನು ಪೂರೈಸಿಕೊಳ್ಳಲು ತಮ್ಮ ಜೇಬಿನಿಂದ ಹಣ ಮಾತ್ರ ಬಿಚ್ಚುವುದಿಲ್ಲ. ಅವರು ತಮ್ಮ ಸ್ವಂತ ಖರ್ಚಿನ ಬಗ್ಗೆ ಅಜಾಗರೂಕತೆ ಹೊಂದಿರುತ್ತಾರೆ, ತುಂಬಾ ಬಯಕೆಗಳನ್ನು ಹೊಂದಿರುವ ಮೀನಾ ರಾಶಿಯ ಜನರು ಅದನ್ನು ಪೂರೈಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ತಮ್ಮನ್ನು ತಾವು ಮುಗ್ಧ (Innocent) ಬಲಿಪಶುಗಳಂತೆ ಬಿಂಬಿಸಿಕೊಳ್ಳುವ ಕಾರಣ ಜನರನ್ನು ಹಣದಿಂದ ವಂಚಿಸುವಲ್ಲಿ (Cheat) ಅಂದರೆ ಇವರಿಗಾಗಿ ಜನ ಹಣ ಖರ್ಚಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಒಟ್ಟಿನಲ್ಲಿ ತಮ್ಮ ಅಗತ್ಯತೆ ಈಡೇರಿಸಿಕೊಳ್ಳಲು ಯಾರದೇ ಕೈ ಕಾಲು ಹಿಡಿಯಲು ಬೇಕಾದರೂ ಸಿದ್ಧರಿರುತ್ತಾರೆ.

ಇದನ್ನೂ ಓದಿ: ಇಷ್ಟು ಶುಕ್ರವಾರ Vaibhav Laxmi Vrat ಆಚರಿಸಿದ್ರೆ ಹಣದ ಕೊರತೆ ಇರದು!

Follow Us:
Download App:
  • android
  • ios