Colleagues ಜೊತೆ ಗುಟ್ ಗುಟ್ಟಾಗಿ ಡೇಟಿಂಗ್ ಮಾಡೋ ರಾಶಿಗಳಿವು!
ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧ ಬೆಳೆಸುವುದು, ಡೇಟ್ ಮಾಡುವುದು ಸಾಮಾನ್ಯ. ಆದರೂ ಎಲ್ಲರೂ ಇದರಲ್ಲಿ ಮುಂದಿರುವುದಿಲ್ಲ. ಕೆಲವೇ ರಾಶಿಗಳ ಜನರಲ್ಲಿ ಈ ಪ್ರವೃತ್ತಿಯನ್ನು ಧಾರಾಳವಾಗಿ ಕಾಣಬಹುದು.
ಕಚೇರಿಗಳಲ್ಲಿ ಸಾಕಷ್ಟು ಗಾಸಿಪ್ ಗಳನ್ನು ಕೇಳಿರುತ್ತೇವೆ. “ಅವರೊಂದಿಗೆ ಇವರಿಗೆ ಸಂಬಂಧ ಇದೆ, ಇವರು ಅವರೊಂದಿಗೆ ಡೇಟ್ ಮಾಡ್ತಾರೆ’ ಇಂತಹ ಹಲವು ಗಾಸಿಪ್ ಗಳು ಕಚೇರಿಗಳಲ್ಲಿ ಸರ್ವೇಸಾಮಾನ್ಯ. ಪ್ರೀತಿ-ಪ್ರೇಮ-ರೋಮ್ಯಾನ್ಸ್ ಕಚೇರಿಗಳಲ್ಲೂ ಆಗಿಬಿಡಬಹುದು. ಕೇವಲ ಕಚೇರಿಯಲ್ಲಷ್ಟೇ ಅಲ್ಲ, ಕಚೇರಿಯಿಂದ ಹೊರಗೂ ನಿತ್ಯವೂ ಓಡಾಟ, ಪರಸ್ಪರ ಒಡನಾಟ ಬೆಳೆಬಹುದು. ದಿನನಿತ್ಯವೂ ಅದೇ ಸಹೋದ್ಯೋಗಿಗಳು, ಅದೇ ಸಹ ಜತೆಗಾರರು ಇರುವಾಗ ಒಂದಿಷ್ಟು ಬಾಂಧವ್ಯ ಬೆಳೆಯುವುದು ಅತ್ಯಂತ ಸಹಜ. ಅವರೊಂದಿಗೆ ಸ್ನೇಹ, ಸಲುಗೆಯೂ ಉಂಟಾಗುತ್ತದೆ. ಹಾಗೆಯೇ, ಕೆಲವರ ಜತೆ ವಿಶೇಷವಾದ ಬಾಂಧವ್ಯ ಏರ್ಪಡುವುದು ಸಹ ಕಂಡುಬರುತ್ತದೆ. ಕೆಲವೊಮ್ಮೆ ಅವು ವಿವಾಹೇತರ ಬಾಹ್ಯ ಸಂಬಂಧವೂ ಆಗಿರಬಹುದು. ಹಾಗೆಂದು ಎಲ್ಲರೂ ಕಚೇರಿಯ ಸಹೋದ್ಯೋಗಿಗಳೊಂದಿಗೆ ಡೇಟ್ ಮಾಡುವುದಿಲ್ಲ. ಎಲ್ಲರಿಗೂ ಅಂತಹ ಆಸಕ್ತಿ ಇರುವುದಿಲ್ಲ. ಕೆಲವು ರಾಶಿಗಳ ಜನ ಮಾತ್ರ ಸಹೋದ್ಯೋಗಿಗಳೊಂದಿಗೆ ಡೇಟ್ ಮಾಡುವುದು ಕಂಡುಬರುತ್ತದೆ. ಕಚೇರಿಯ ಒತ್ತಡದಿಂದ ಮುಕ್ತರಾಗಲು ಇವರಿಗೆ ಇದೊಂದು ಮಾರ್ಗ. ನಿರ್ದಿಷ್ಟ ಸಹೋದ್ಯೋಗಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯವೆಂದು ಖುಷಿಖುಷಿಯಾಗಿ ಇದ್ದುಕೊಂಡು ಒತ್ತಡಮುಕ್ತರಾಗಿ ಕೆಲಸ ಮಾಡುವುದು ಇವರಿಗೆ ಇಷ್ಟ. ಕಚೇರಿಗಳಲ್ಲಿ ಡೇಟ್ ಮಾಡುವುದು ಅಪಾಯಕಾರಿ ಅಥವಾ ತಮ್ಮ ಘನತೆಗೆ ಧಕ್ಕೆ ಉಂಟಾಗಬಹುದು ಎನ್ನುವ ಅರಿವಿದ್ದರೂ ತೀರ ನಿಯಂತ್ರಣ ಮಾಡಿಕೊಳ್ಳಲು ಇವರಿಗೆ ಸಾಧ್ಯವಾಗುವುದಿಲ್ಲ.
• ಮೇಷ (Aries)
ಈ ರಾಶಿಯ ಜನ ಹಠಾತ್ (Impulsive) ಪ್ರವೃತ್ತಿಯವರು. ಹೀಗಾಗಿ, ಇನ್ನೊಬ್ಬರ ಬಗ್ಗೆ ಆಕರ್ಷಣೆ (Attraction) ಹುಟ್ಟಿದಾಕ್ಷಣ ಪ್ರೀತಿಗೆ (Love) ಬಿದ್ದುಬಿಡುತ್ತಾರೆ. ಕಾರ್ಯಸ್ಥಳದಲ್ಲೂ (Work Place) ಅವರ ಈ ಧೋರಣೆ ಬದಲಾಗುವುದಿಲ್ಲ. ಎರಡನೇ ಯೋಚನೆ ಮಾಡದೆ ಪ್ರೀತಿ-ಪ್ರೇಮದ ಕನಸು ಕಾಣಲು ತೊಡಗುತ್ತಾರೆ. ಆಫೀಸ್ ಅಫೇರ್ ನಲ್ಲಿ ತೊಡಗುವುದಕ್ಕೆ ಯಾವುದೇ ಮುಜುಗರವೂ ಇವರಲ್ಲಿ ಇರುವುದಿಲ್ಲ. ಅದು ಸೂಕ್ತವೆಂದೇ ಬಗೆಯುತ್ತಾರೆ.
Zodiac sign: ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಆಟವಾಡುವ ಜನರಿವರು!
• ವೃಷಭ (Taurus)
ವೃಷಭ ರಾಶಿಯ ಜನ ಸಿಕ್ಕಾಪಟ್ಟೆ ಪ್ರಾಮಾಣಿಕ (Honest) ಕೆಲಸಗಾರರು. ಈ ಗುಣ ಇವರನ್ನು ಕೆಟ್ಟ ಸಹೋದ್ಯೋಗಿ (Colleague) ಗಳನ್ನಾಗಿ ರೂಪಿಸುತ್ತದೆ. ರೋಮ್ಯಾಂಟಿಕ್ (Romantic) ಗುಣ ಹೊಂದಿರುವ ಇವರು, ಪದೇ ಪದೆ ತಮ್ಮ ಸಹೋದ್ಯೋಗಿಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ಹೆಚ್ಚು. ತಾವು ಅವರೊಂದಿಗೆ ಫ್ಲರ್ಟಿಂಗ್ (Flirting) ಮಾಡುತ್ತಿದ್ದೇವೆ ಎನ್ನುವುದು ಸಹ ಇವರಿಗೆ ಗೊತ್ತಿರುತ್ತದೆ. ಬಹುಬೇಗ ಪ್ರೀತಿಗೆ ಬೀಳುತ್ತಾರೆ, ತಮ್ಮ ಆಫೀಸ್ ಅಫೇರ್ (Office Affair) ನಲ್ಲಿ ಸುಭದ್ರತೆಯ ಭಾವವನ್ನು ಫೀಲ್ ಮಾಡುತ್ತಾರೆ. ವಿಚಾರದಲ್ಲಿ ತಮ್ಮ ನೈತಿಕ (Ethics) ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಂತೆ ಭಾಸವಾಗುತ್ತದೆ.
• ಮಿಥುನ (Gemini)
ಮಿಥುನ ರಾಶಿಯ ಜನ ಅತ್ಯುತ್ತಮ ಸಂವಹನಕಾರರು. ಮಾತನಾಡುವುದು (Talk) ಇವರ ಕಲೆಯೂ ಹೌದು, ಚಟ, ಅಭ್ಯಾಸವೂ ಹೌದು. ಹೀಗಾಗಿ, ಸಾಕಷ್ಟು ಜನರನ್ನು ಗಳಿಸಿಕೊಳ್ಳುತ್ತಾರೆ. ಕಚೇರಿಯಲ್ಲಿ ಯಾರು ಅತಿ ಬುದ್ಧಿವಂತರೆಂದು ಕಂಡುಬರುತ್ತಾರೋ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಕಚೇರಿಯಲ್ಲಿ ಹೆಚ್ಚು ಸಮಯ (Time) ಕಳೆಯುವ ಗುಣ ಹೊಂದಿರುವ ಇವರು, ಸಹೋದ್ಯೋಗಿಗಳಿಗೆ ಡೇಟ್ (Date) ಮಾಡಲು ಸಹ ಸಮಯ ಹೊಂದಿರುತ್ತಾರೆ. ಮಿಥುನ ರಾಶಿಯ ಪುರುಷರು (Male) ತಮ್ಮ ಸುತ್ತಮುತ್ತ ಅತಿ ಕಡಿಮೆ ಪ್ರಮಾಣದಲ್ಲಿ ಮಹಿಳೆಯರಿದ್ದರೂ ಅದನ್ನೇ ತಮ್ಮ ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುತ್ತಾರೆ.
Zodiac Signs: ಆಫೀಸ್ ಅಫೇರ್ಸ್‌ನಿಂದ ಈ ರಾಶಿಯ ಜನ ದೂರವೇ ಇರ್ತಾರೆ
• ಧನು (Sagittarius)
ಸಾಹಸಪ್ರವೃತ್ತಿಯವರಾದ ಧನು ರಾಶಿಯ ಜನಕ್ಕೆ ಇದೂ ಒಂದು ಪ್ರಯೋಗ. ಥ್ರಿಲ್ (Thrill) ನೀಡುವಂತಹ ಅನ್ವೇಷಣೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧ (Relationship) ಬೆಳೆಸುವುದು ಇವರಿಗೆ ಸಹಜ. ಇವರ ಸ್ವತಂತ್ರ (Free) ಪ್ರವೃತ್ತಿಯಿಂದ ಬಾಹ್ಯ ತಿರುಗಾಟ ಹೆಚ್ಚು. ಕಚೇರಿಯಲ್ಲಿ ಸಂಬಂಧ ಹೊಂದುವುದು ಇವರ ಪಾಲಿಗೆ ಸಾಕಷ್ಟು ಸ್ಫೂರ್ತಿದಾಯಕ (Inspire) ಎನಿಸುತ್ತದೆ. ಇದು ಇವರಿಗೆ ಹೊಸತನ್ನು ಯತ್ನಿಸುವ, ಆವಿಷ್ಕಾರಿ ಎನಿಸುವ ಮಾರ್ಗ. ಹೀಗಾಗಿ, ಯಾವತ್ತೂ ಕ್ಯಾಷುವಲ್ (Casual) ಎನಿಸುವ ಉದ್ಯೋಗಸ್ಥಳವನ್ನು ಇಷ್ಟಪಡುತ್ತಾರೆ.