Asianet Suvarna News Asianet Suvarna News

Chanakya Niti: ಪತಿ- ಪತ್ನಿಯ ಈ ಅಭ್ಯಾಸಗಳು ಜೀವನ ಹಾಳು ಮಾಡುತ್ತವೆ!

ಚಾಣಕ್ಯ ನೀತಿ: ಗಂಡ ಹೆಂಡತಿಯ ಈ ಅಭ್ಯಾಸಗಳು ದಾಂಪತ್ಯ ಜೀವನವನ್ನೇ ಹಾಳು ಮಾಡುತ್ತವೆ ಎನ್ನುತ್ತಾರೆ ಚಾಣಕ್ಯ. ಅದಾವುದೆಂದು ತಿಳಿದು, ನೀವೂ ಈ ತಪ್ಪು ಮಾಡುತ್ತಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. 

These habits of husband and wife destroy married life according to Chanakya skr
Author
Bangalore, First Published Jun 2, 2022, 12:18 PM IST

ವೈವಾಹಿಕ ಜೀವನ(married life) ಸಂತೋಷದಿಂದ ಕೂಡಿದ್ದರೆ ಅದೇ ಒಂದು ದೊಡ್ಡ ಉಡುಗೊರೆ. ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾಗ, ಪರಸ್ಪರ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನೀಡಿಕೊಳ್ಳುತ್ತಿದ್ದಾಗ  ಜೀವನದ ಯಾವ ಕಷ್ಟಗಳೂ ದೊಡ್ಡದೆನಿಸುವುದಿಲ್ಲ. ಆದರೆ, ಕೆಲವೊಮ್ಮೆ ಪತಿ ಇಲ್ಲವೇ ಪತ್ನಿ ತಮಗೆ ತಿಳಿಯದೇ ಮಾಡುವ, ಸಣ್ಣದೆಂದುಕೊಂಡ ತಪ್ಪುಗಳು(mistakes) ವೈವಾಹಿಕ ಜೀವನಕ್ಕೆ ದೊಡ್ಡ ಮಟ್ಟದ ಹಾನಿ ಉಂಟು ಮಾಡುತ್ತವೆ. ಅಂತ ತಪ್ಪು ಅಭ್ಯಾಸಗಳನ್ನು ದೂರವಿಡುವಂತೆ ಆಚಾರ್ಯ ಚಾಣಕ್ಯ(Acharya Chanakya)ರು ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಪತಿ ಪತ್ನಿ ನಡುವೆ ಬಿರುಕು ಮೂಡಿಸುವ ಅಭ್ಯಾಸಗಳು ಯಾವೆಲ್ಲ ನೋಡೋಣ. 

ಗಂಡ ಹೆಂಡತಿ ಈ ತಪ್ಪುಗಳನ್ನು ಮಾಡಬಾರದು!
ಕೋಪ(Anger):
ಕೋಪ ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಹೆಚ್ಚು ಸಮಯ ಎಳೆದಾಡಬಾರದು. ಯಾವುದೋ ವಿಷಯಕ್ಕೆ ಜಗಳವಾಗುವುದು ಬೇರೆ ವಿಷಯ, ಆದರೆ ಕೋಪದಲ್ಲಿ ಒಬ್ಬರನ್ನೊಬ್ಬರು ಅವಮಾನಿಸುವುದು, ನಿಂದಿಸುವುದು ದಾಂಪತ್ಯ ಜೀವನದ ಬುನಾದಿಯನ್ನು ಅಲುಗಾಡಿಸಬಹುದು. ಕೋಪ ಬಂದಾಗ ಮನಸ್ಸಿನ ಸ್ಥಿಮಿತ ತಪ್ಪಿ ಆಡುವ ಮಾತುಗಳು ಸಂಗಾತಿಯ ಮನಸ್ಸಿನ ಮೇಲೆ ಜೀವನ ಪರ್ಯಂತ ಅಚ್ಚಳಿಯದೇ ಉಳಿಯಬಹುದು. ಅದು ಅವರು ತೋರುವ ಪ್ರೀತಿಗೆ, ಮಾಡಿಕೊಳ್ಳುವ ಹೊಂದಾಣಿಕೆಗೆ ದೊಡ್ಡ ಅಡ್ಡಿಯಾಗಿ ಪದೇ ಪದೆ ಬಾಧಿಸಬಹುದು. ಇದರಿಂದ ಜೀವನ ಹದಗೆಡುತ್ತಾ ಹೋಗುತ್ತದೆ. ಗಂಡ ಹೆಂಡತಿ ಕೋಪದಿಂದ ದೂರವಿದ್ದರೆ ಒಳ್ಳೆಯದು. ಒಂದು ವೇಳೆ ಸಣ್ಣ ಪುಟ್ಟ ಕೋಪತಾಪಗಳಿದ್ದರೂ ಆ ಸಂದರ್ಭದಲ್ಲಿ ನಾಲಿಗೆ ನಿಯಂತ್ರಣದಲ್ಲಿರಬೇಕು. ಕೋಪ ಬಂದಾಗ ಮೌನಕ್ಕೆ ಜಾರುವುದು ಉತ್ತಮ. ಇಲ್ಲವೇ ಸಮಾಧಾನದಿಂದ ನಿಮಗೆ ಅವರ ಯಾವ ವರ್ತನೆ ಇಷ್ಟವಾಗುವುದಿಲ್ಲ ಎಂದು ಹೇಳಬಹುದು.

Shani Vakri: 141 ದಿನಗಳ ಕಾಲ ಈ ಮೂರು ರಾಶಿಗಳಿಗೆ ಅದೃಷ್ಟದ ಮಳೆ ಸುರಿಸಲಿದ್ದಾನೆ ಶನಿ

ಸುಳ್ಳು(Lie): ಪತಿ ಮತ್ತು ಹೆಂಡತಿಯ ಸಂಬಂಧವು ನಂಬಿಕೆ ಮತ್ತು ಪ್ರೀತಿಯನ್ನು ಆಧರಿಸಿದೆ. ನಂಬಿಕೆಯೇ ಸಂಬಂಧದ ಬುನಾದಿ. ಆದರೆ, ಈ ಸಂಬಂಧದ ನಡುವೆ ಸುಳ್ಳು ನುಸುಳಿದರೆ, ಬುನಾದಿಯೇ ಅಲುಗಾಡುವುದು. ಅದರಿಂದ ವೈವಾಹಿಕ ಜೀವನವೆಂಬ ಕಟ್ಟಡ ಕುಸಿಯುವುದು.  ಒಬ್ಬರಿಗೊಬ್ಬರು ಸುಳ್ಳು ಹೇಳುವುದು ಅಥವಾ ಮೋಸ ಮಾಡುವುದು ಸಂಬಂಧದಲ್ಲಿ ಎಂದಿಗೂ ಮುಗಿಯದ ಬಿರುಕು ಸೃಷ್ಟಿಸುತ್ತದೆ. ಕೆಲವೊಮ್ಮೆ, ಈ ಕಾರಣದಿಂದಾಗಿ ಸಂಬಂಧವು ಮುರಿಯುವ ಅಂಚಿಗೆ ತಲುಪುತ್ತದೆ. ನೀವು ತಪ್ಪನ್ನೇ ಮಾಡಿರಬಹುದು, ಅದನ್ನು ಮುಚ್ಚಿ ಹಾಕಲು ಸುಳ್ಳು ಹೇಳುವ ಬದಲಿಗೆ, ತಪ್ಪೊಪ್ಪಿಕೊಳ್ಳುವುದು, ಮುಂದೆ ಅಂಥ ತಪ್ಪಾಗದಂತೆ ಜಾಗ್ರತೆ ವಹಿಸುವುದು ಜಾಣತನದ ನಡೆಯಾಗಿದೆ. 

ಇತರರಿಗೆ ವೈಯಕ್ತಿಕ ವಿಷಯಗಳನ್ನು ಹೇಳುವುದು(Telling personal things to others): ಪತಿ-ಪತ್ನಿಯರ ನಡುವಿನ ವಿಷಯಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪತಿ ಪತ್ನಿಯ ಸಂಬಂಧ ಬಹಳ ಅನ್ಯೋನ್ಯವಾದುದು. ಎಲ್ಲಕ್ಕಿಂತ ಆಪ್ತವಾದುದು. ಅಲ್ಲಿ ಯಾವುದೇ ಗುಟ್ಟಿರಬಾರದು. ಹಾಗಂಥ ಇಬ್ಬರ ನಡುವಿನ ವಿಷಯಗಳು ಮೂರನೆಯವರಿಗೆ ಗುಟ್ಟಾಗಿಯೇ ಉಳಿಯಬೇಕು. ಪತಿ-ಪತ್ನಿಯರು ತಮ್ಮ ನಡುವೆ ರಹಸ್ಯವನ್ನು ಇಟ್ಟುಕೊಳ್ಳದೆ ಮತ್ತು ತಮ್ಮ ವಿಷಯಗಳನ್ನು ಮತ್ತೊಬ್ಬರಿಗೆ ಹೇಳುವುದು ಅವಮಾನಕ್ಕೆ ಕಾರಣವಾಗುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ತೊಂದರೆಗಳು ಆರಂಭವಾಗುತ್ತವೆ. ಆದ್ದರಿಂದ ನಿಮ್ಮ ಮಾತುಗಳನ್ನು ಗೌಪ್ಯವಾಗಿಡಿ.

ಬುಧ ಮಾರ್ಗಿ: ಮೂರು ರಾಶಿಗಳಿಗೆ ಲಾಭಕಾರಿ, ಎರಡಕ್ಕೆ ಅಪಾಯಕಾರಿ!

ಅನಾವಶ್ಯಕ ಖರ್ಚು(Unnecessary spending): ತನ್ನ ಮತ್ತು ಕುಟುಂಬದ ಸೌಕರ್ಯಕ್ಕಾಗಿ ಖರ್ಚು ಮಾಡುವುದು ಒಳ್ಳೆಯದು, ಆದರೆ ಅನಗತ್ಯ ವ್ಯರ್ಥ ಖರ್ಚು ಆರ್ಥಿಕ ಸಮಸ್ಯೆಗಳನ್ನು ತರುತ್ತದೆ. ಇದು ಪತಿ-ಪತ್ನಿಯರ ನಡುವೆ ಜಗಳಕ್ಕೂ ಕಾರಣವಾಗುತ್ತದೆ. ಆದುದರಿಂದ ಗಂಡ-ಹೆಂಡತಿ ಇಬ್ಬರೂ ಕಾಳಜಿ ವಹಿಸಿ ಖರ್ಚು ಮಾಡಿದರೆ ಒಳ್ಳೆಯದು. ಸಾಧ್ಯವಾದಷ್ಟು ಉಳಿತಾಯ ಯೋಜನೆಗಳನ್ನು ಹೊಂದುವುದು ಉತ್ತಮ. ಒಬ್ಬರು ದುಡಿಯುವುದು, ಮತ್ತೊಬ್ಬರು ಬೇಕಾಬಿಟ್ಟು ಖರ್ಚು ಮಾಡುವುದು ಸರಿಯಲ್ಲ. ಬದಲಿಗೆ, ದುಡಿಮೆಗೆ ಬೆಲೆ ಕೊಡಬೇಕು. ಅನವಶ್ಯಕ ಖರ್ಚು ಮಾಡಬಾರದು. ಇಬ್ಬರೂ ದುಡಿಯುತ್ತಿದ್ದರೆ ಸಾಧ್ಯವಾದ ಖರ್ಚುಗಳನ್ನೆಲ್ಲ ಹಂಚಿಕೊಳ್ಳಬೇಕು.

ಮಿತಿಗಳನ್ನು ಮುರಿಯುವುದು(Breaking the limits): ಪತಿ-ಪತ್ನಿಯರ ಸಂಬಂಧದಲ್ಲಿ ಮಿತಿ ಇರಬೇಕು. ಅದನ್ನು ಎಂದಿಗೂ ದಾಟಬೇಡಿ. ಉತ್ತಮ ಸಂಬಂಧಕ್ಕಾಗಿ, ಇಬ್ಬರೂ ಯೋಗ್ಯವಾಗಿ ವರ್ತಿಸುವುದು ಅವಶ್ಯಕ. ನಿಮ್ಮ ಸಂಗಾತಿಯೇ ಆಗಿದ್ದರೂ ಅವರಿಗೂ ಕೊಂಚ ಸ್ಪೇಸ್ ಬೇಕು. ಅದನ್ನು ದಾಟಿ ಹೋಗಬೇಡಿ. ಅತಿಯಾಗಿ ಅವರ ಬದುಕಿನಲ್ಲಿ ಮೂಗು ತೂರಿಸುವುದು ಸರಿಯಲ್ಲ. ಅವರು ಎಷ್ಟೊತ್ತಿಗೆ ಏಳಬೇಕು, ಯಾರ ಸ್ನೇಹ ಮಾಡಬೇಕು, ಏನು ಕೆಲಸ ಮಾಡಬೇಕು, ಕುಟುಂಬದಲ್ಲಿ ಯಾರೊಂದಿಗೆ ಹೇಗಿರಬೇಕು ಎಲ್ಲವನ್ನೂ ನಿಯಂತ್ರಿಸಲು ಹೋಗಬೇಡಿ. ಸ್ನೇಹಿತರಂತೆ ಇದ್ದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ.

Follow Us:
Download App:
  • android
  • ios