Asianet Suvarna News Asianet Suvarna News

ದೇವಿಯ ಕನಸು ಬೀಳ್ತಾ? ಸದ್ಯದಲ್ಲೇ ಜೀವನದಲ್ಲಿ ಒಳ್ಳೇದಾಗ್ಬಹುದು, ಆದ್ರೂ ಎಚ್ಚರ!

ಕೆಲವರಿಗೆ ಪದೇ ಪದೆ ಯಾವುದೋ ದೇವಿ ದೇವಾಲಯದ ಕನಸು ಬೀಳುತ್ತಿರುತ್ತದೆ. ದೇವಿಯ ಪೂಜಿಸಿದಂತೆ, ಅಲ್ಲಿನ ದೇವಿಯ ಮುಖ ಅಥವಾ ದೇವಿಗೆ ಸಂಬಂಧಿಸಿದ ಹಲವು ಅಂಶಗಳು ಪದೇ ಪದೆ ಕನಸಿನಲ್ಲಿ ಮೂಡಬಹುದು. ಯಾವುದೇ ರೀತಿಯ ಕನಸು ಬಿದ್ದರೂ ಅದು ಶುಭದಾಯಕವೆಂದು ಪರಿಗಣಿಸಲಾಗಿದೆ. ಇಲ್ಲವೇ ಕೆಲವು ಎಚ್ಚರಿಕೆಯೂ ಇರಬಹುದು. 
 

These dreams of Durga mata is resemble of good in future life sum
Author
First Published Oct 20, 2023, 12:01 PM IST

ಶರನ್ನವರಾತ್ರಿ ಉತ್ಸವ ದೇಶದೆಲ್ಲೆಡೆ ರಂಗಿನಿಂದ ಕೂಡಿದೆ. ಎಲ್ಲಿ ಹೋದರೂ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು, ಸಂಜೆ ವಿವಿಧ ರೀತಿಯ ಕಾರ್ಯಕ್ರಮಗಳಿಂದ ಇಡೀ ವಾತಾವರಣಕ್ಕೆ ಮೆರುಗು ಬಂದಿದೆ. ಭಕ್ತಿಭಾವದಿಂದ ಜನರು ತಮ್ಮ ಮನೆಗಳಲ್ಲೂ ನವರಾತ್ರಿಯನ್ನು ಆಚರಿಸುತ್ತಿದ್ದಾರೆ. ನಾಳೆಯಿಂದ ಮೂರು ದಿನಗಳ ಆಚರಣೆ ಆರಂಭವಾಗುತ್ತದೆ. ಕಳೆದ ಆರು ದಿನಗಳಿಂದ ನವರಾತ್ರಿಯ ಪೂಜೆ ಮಾಡದವರು ಸಹ ನಾಳೆಯಿಂದ ಮೂರು ದಿನಗಳ ಕಾಲ ದೇವಿಯ ಆರಾಧನೆ ಮಾಡುತ್ತಾರೆ. ಈ ಸಮಯದಲ್ಲಿ ದುರ್ಗಾ ದೇವಿಯ ಕನಸು ನಿಮಗೆ ಬೀಳುತ್ತಿದೆಯೇ? ಹಾಗಾದರೆ ನಿಮಗೆ ಶುಭ ಸಮಯ ಎದುರಾಗಿದೆ ಎಂದರ್ಥ. ಸ್ವಪ್ನಶಾಸ್ತ್ರದ ಪ್ರಕಾರ, ನಮ್ಮ ಪ್ರತಿಯೊಂದು ಕನಸಿಗೂ ಒಂದಲ್ಲ ಒಂದು ರೀತಿಯ ಅರ್ಥವಿರುತ್ತದೆ. ಹಾಗೆಯೇ, ದೇವಿ ಕನಸಿನಲ್ಲಿ ಬಂದರೂ ಅದಕ್ಕೆ ವಿವಿಧ ಅರ್ಥಗಳಿವೆ. ಕನಸುಗಳು ನಮ್ಮ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ, ಕನಸುಗಳು ಸಂಕೇತವಾಗಿವೆ ಎಂದು ಹೇಳಲಾಗುತ್ತದೆ. ದೇವಿ-ದೇವತೆಗಳ ಕನಸುಗಳು ಸಹ ಕೆಲವೊಮ್ಮೆ ಮೂಡುತ್ತವೆ. ಸ್ವಪ್ನಶಾಸ್ತ್ರದಲ್ಲಿ ಅವುಗಳಿಗೆ ವಿಶೇಷ ಅರ್ಥವಿದೆ. ದುರ್ಗಾ ದೇವಿಯ ಕನಸು ಮೂಡುವುದು ಅತ್ಯಂತ ಮಂಗಲದಾಯಕವಾಗಿದೆ. 

ಕನಸಿನಲ್ಲಿ (Dream) ದೇವಿ (Goddess) ಕಾಣಿಸುತ್ತಿದ್ದಾಳೆಯೇ?
•    ಕನಸಿನಲ್ಲಿ ದುರ್ಗಾ ದೇವಿ (Durga Mata) ಅಥವಾ ಯಾವುದೇ ದೇವಿ ಸ್ವರೂಪಗಳು ಮೂಡಿದರೆ ಅದು ಅತ್ಯಂತ ಶುಭಕರವಾಗಿದೆ. ಮುಖ್ಯವಾಗಿ, ಈ ಕನಸು ನವರಾತ್ರಿಯಲ್ಲಿ (Navaratri) ಕಂಡರಂತೂ ಭಾರೀ ಉತ್ತಮ. ದೇವಿ ನಿಮ್ಮ ಬಗ್ಗೆ ಪ್ರಸನ್ನಳಾಗಿದ್ದಾಳೆ ಹಾಗೂ ಆಕೆಯ ಕೃಪೆಯಿಂದ ಸದ್ಯದಲ್ಲೇ ನಿಮ್ಮ ಭಾಗ್ಯದ (Luck) ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತದೆ.

Navratri 2023: ನವರಾತ್ರಿಯಲ್ಲಿ ಯಾವ ದಿನ ಯಾವ ಆಹಾರದ ನೈವೇದ್ಯ ಮಾಡಿದ್ರೆ ದೇವಿ ಸಂತುಷ್ಟಳಾಗ್ತಾಳೆ ಗೊತ್ತಾ?

•    ಸ್ವಪ್ನಶಾಸ್ತ್ರದ (Sapna Shastra) ಪ್ರಕಾರ, ಕನಸಿನಲ್ಲಿ ಅಮ್ಮನವರು ಕೆಂಪು ವಸ್ತ್ರದಿಂದ (Red Sloth) ಶೋಭಿತಳಾಗಿ ನಸುನಗುತ್ತಿದ್ದರೆ, ನಿಮ್ಮ ಜೀವನ (Life) ಶೀಘ್ರದಲ್ಲೇ ಬದಲಾವಣೆಯಾಗಲಿದೆ ಎಂದರ್ಥ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ (Positive Change) ಬರಲಿದೆ ಎಂದರ್ಥ. ಈ ಬದಲಾವಣೆ ಯಾವುದೇ ಕ್ಷೇತ್ರದಲ್ಲಿ ಆಗಿರಬಹುದು, ಆದರೆ, ಇದರ ಪರಿಣಾಮ ಮಾತ್ರ ಉತ್ತಮವಾಗಿರುತ್ತದೆ.
•    ನವರಾತ್ರಿಯ ದಿನಗಳಲ್ಲಿ ದೇವಿ ದುರ್ಗೆ ಸಿಂಹದ (Lion) ಮೇಲೆ ಕಂಡುಬಂದರೆ ಅಥವಾ ಸಿಂಹ ಓಡುತ್ತಿದ್ದಂತೆ ಕಂಡರೆ ಅದು ಎಚ್ಚರಿಕೆ ನೀಡಿದಂತೆ. ನಿಮ್ಮ ಸದ್ಯದ ಭವಿಷ್ಯದಲ್ಲಿ ಏನೋ ಸಮಸ್ಯೆಗಳು (Problems) ಎದುರಾಗಲಿವೆ ಎನ್ನುವುದನ್ನು ಇದು ಸೂಚಿಸುತ್ತದೆ. ನೀವು ದೊಡ್ಡ ಸಮಸ್ಯೆಯೊಂದರಲ್ಲಿ ಬೀಳಬಹುದು ಎಂದು ತಿಳಿಸುತ್ತದೆ. ಇಂತಹ ಕನಸು ಬಿದ್ದಾಗ ದೇವಿಯ ಆರಾಧನೆ ಮಾಡಿ ಆಕೆಯ ಕೃಪೆಗೆ ಪಾತ್ರರಾಗಲು ಯತ್ನಿಸಿ.
•    ನೀವು ಅವಿವಾಹಿತರಾಗಿದ್ದು, ದೇವಿಯ ಕನಸು ಮೂಡಿದರೆ ಸದ್ಯದಲ್ಲೇ ನಿಮಗೆ ಕಂಕಣಬಲ ಕೂಡಿರಬರಬಹುದು ಎಂದರ್ಥ. ವಿವಾಹಿತರಿಗೆ ಸಂತಾನಭಾಗ್ಯ ಉಂಟಾಗಬಹುದು. ದೇವಿಯ ಕನಸು ಹೊಸ ಉದ್ಯೋಗ (Job) ದೊರೆಯುವ ಸಂಕೇತವೂ ಹೌದು. ಮಾತೆಯ ಕೃಪೆಯಿಂದ ಜೀವನ ಶುಭದಾಯಕವಾಗುತ್ತದೆ.

ನವರಾತ್ರಿಯ ನವರಂಗು, ಒಂದೊಂದು ಬಣ್ಣದಲ್ಲಿದೆ ದೇವಿಯ ಕೃಪಾವೃಷ್ಟಿ

•    ಒಂದೊಮ್ಮೆ ನಿಮಗೆ ಕನಸಿನಲ್ಲಿ ದೇವಿಯ ಮೂರ್ತಿ (Idol) ಕಂಡರೂ ಸಹ ಮಂಗಲದಾಯಕ (Auspicious) ಎನ್ನಲಾಗುತ್ತದೆ. ನಿಮ್ಮ ಜೀವನದ ಎಲ್ಲ ಸಮಸ್ಯೆಗಳೂ ಸದ್ಯದಲ್ಲೇ ದೂರವಾಗಲಿದೆ ಎನ್ನುವ ಸಂಕೇತವನ್ನು ಈ ಕನಸು ನೀಡುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಈ ಕನಸು ನಿಮ್ಮ ಎಲ್ಲ ಮಾನಸಿಕ ಸಮಸ್ಯೆ, ಚಿಂತೆ, ಆತಂಕಗಳನ್ನು ದೂರ ಮಾಡುತ್ತದೆ ಹಾಗೂ ನಿರಾಳತೆ ಮೂಡಿಸುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ.
•    ಕೆಲವರಿಗೆ ಪದೇ ಪದೆ ದೇವಿ ದೇವಸ್ಥಾನದ ಚಿತ್ರಗಳು ಅಥವಾ ದೇವಾಲಯದ ಕುರಿತು, ಅಲ್ಲಿ ಪೂಜೆ ಮಾಡುತ್ತಿರುವಂತೆ ಕನಸುಗಳು ಮೂಡುತ್ತವೆ. ಇದು ಸಹ ಶುಭಕಾರಿಯಾಗಿದೆ. ನಿಮ್ಮ ಯಾವುದೋ ಆಸೆ, ಬಯಕೆ, ಮನೋಕಾಮನೆ ಸದ್ಯದಲ್ಲೇ ಈಡೇರುತ್ತದೆ ಎಂದರ್ಥ. ಅದು ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಂಟಾಗಬಹುದು.  

Follow Us:
Download App:
  • android
  • ios