Asianet Suvarna News Asianet Suvarna News

Navratri 2023: ನವರಾತ್ರಿಯಲ್ಲಿ ಯಾವ ದಿನ ಯಾವ ಆಹಾರದ ನೈವೇದ್ಯ ಮಾಡಿದ್ರೆ ದೇವಿ ಸಂತುಷ್ಟಳಾಗ್ತಾಳೆ ಗೊತ್ತಾ?

ನವರಾತ್ರಿಯಲ್ಲಿ ಶಕ್ತಿ ಸ್ವರೂಪಿಣಿಯ 9 ಸ್ವರೂಪಗಳನ್ನು ಪೂಜೆ ಮಾಡಲಾಗುತ್ತದೆ. ಈ ಎಲ್ಲ ದಿನಗಳಂದು ನಿರ್ದಿಷ್ಟ ಆಹಾರ ವಸ್ತುಗಳನ್ನು ದೇವಿಗೆ ನೈವೇದ್ಯ ಮಾಡುವ ಮೂಲಕ ಆಕೆಯ ಕೃಪೆಗೆ ಪಾತ್ರವಾಗಬಹುದು. ಶಾಸ್ತ್ರಗಳ ಪ್ರಕಾರ, ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಿದರೆ ದೇವಿ ಪ್ರಸನ್ನಳಾಗುತ್ತಾಳೆ.  

Offer Devi durga by these foods at Navaratri
Author
First Published Oct 15, 2023, 5:42 PM IST

ನವರಾತ್ರಿ ದೇವಿ ಶಕ್ತಿಯನ್ನು ಉಪಾಸನೆ ಮಾಡುವ ಉತ್ಸವವಾಗಿದೆ. ನವರಾತ್ರಿಯ 9 ದಿನಗಳಲ್ಲಿ ಶಕ್ತಿ ಸ್ವರೂಪಿಣಿಯ 9 ಸ್ವರೂಪಗಳನ್ನು ಆರಾಧಿಸಲಾಗುತ್ತದೆ. ವರ್ಷದಲ್ಲಿ ನಾಲ್ಕು ಬಾರಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಚೈತ್ರ ಮಾಸ, ಆಷಾಢ, ಮಾಘ ಹಾಗೂ ಶಾರದೀಯ ನವರಾತ್ರಿ. ಇವುಗಳಲ್ಲಿ ಚೈತ್ರ ಮಾಸದ ನವರಾತ್ರಿಯನ್ನು ಉತ್ತರ ಭಾರತದಲ್ಲಿ ಆಚರಿಸುವುದು ಹೆಚ್ಚು. ಉಳಿದಂತೆ ಶಾರದೀಯ ನವರಾತ್ರಿಯನ್ನು ಎಲ್ಲೆಡೆ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರತಿ ಮನೆಗಳಲ್ಲೂ ದೇವಿಯ ಪೂಜೆಗೆಂದು ಏನಾದರೊಂದು ಸಿಹಿ ತಿನಿಸುಗಳನ್ನು ನೈವೇದ್ಯಕ್ಕೆ ಇಡಲಾಗುತ್ತದೆ. ಬಹಳಷ್ಟು ಮನೆಗಳಲ್ಲಿ ಕೊನೆಯ ಮೂರು ದಿನಗಳಲ್ಲಾದರೂ ನೈವೇದ್ಯ ಮಾಡದೇ ಇರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳನ್ನು ನೈವೇದ್ಯಕ್ಕೆ ಇಟ್ಟರೆ ದೇವಿ ಪ್ರಸನ್ನಳಾಗುತ್ತಾಳೆ. ಪ್ರತಿದಿನವೂ ಬೇರೆ ಬೇರೆ ಸ್ವರೂಪಗಳಲ್ಲಿ ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಆಯಾ ಸ್ವರೂಪದಲ್ಲಿರುವ ದೇವಿ ಮಾತೆ ಇಷ್ಟಪಡುವ ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳನ್ನು ನೈವೇದ್ಯಕ್ಕಿಡುವುದರಿಂದ ಆಕೆ ಸಂತುಷ್ಟಳಾಗುತ್ತಾಳೆ. 

ಮೊದಲ ದಿನ  (First Day)-ಶೈಲಪುತ್ರೀ
ನವರಾತ್ರಿಯ ಮೊದಲ ದಿನದಂದು ಶೈಲಪುತ್ರೀ ಸ್ವರೂಪದ ಆರಾಧನೆ (Worship) ಮಾಡಲಾಗುತ್ತದೆ. ಶೈಲಪುತ್ರೀ ದೇವಿಯನ್ನು ಆರೋಗ್ಯದ (Health) ದೇವಿ ಎಂದೇ ಪರಿಗಣಿಸಲಾಗುತ್ತದೆ. ಈ ದಿನದಂದು ಶುದ್ಧವಾದ ದೇಸಿ ಹಸುವಿನ ತುಪ್ಪವನ್ನು (Ghee) ನೈವೇದ್ಯ ಮಾಡುವ ಮೂಲಕ ಆಕೆಯ ಕೃಪೆಗೆ ಪಾತ್ರರಾಗಬಹುದು ಮತ್ತು ಆರೋಗ್ಯ ಲಭಿಸುತ್ತದೆ.

Navratri 2023 : ನವರಾತ್ರಿ ಮುಗಿಯುವ ಒಳಗೆ ಈ ವಸ್ತು ದಾನ ಮಾಡಿದ್ರೆ ಧನಲಾಭ!

2ನೇ ದಿನ-ಬ್ರಹ್ಮಚಾರಿಣೀ
ದೀರ್ಘಾಯುಷ್ಯ (Long Life) ಬಯಸುವವರು ಬ್ರಹ್ಮಚಾರಿಣೀ ಮಾತೆಯನ್ನು ಆರಾಧಿಸಬೇಕು. ಹೀಗಾಗಿ, 2ನೇ ದಿನದಂದು ಸಕ್ಕರೆಯನ್ನು (Sugar) ನೈವೇದ್ಯ ಮಾಡಬೇಕು. ಇದರಿಂದ ಅಕಾಲ ಮೃತ್ಯು ಭಯ ದೂರವಾಗುತ್ತದೆ. 

3ನೇ ದಿನ-ಚಂದ್ರಘಂಟಾ
ಚಂದ್ರಘಂಟಾ ದೇವಿಯ ಆಶೀರ್ವಾದ ಪಡೆಯಲು ಹಸುವಿನ ಹಾಲು (Milk) ಮತ್ತು ಹಾಲಿನಿಂದ ಮಾಡಿದ ಯಾವುದೇ ಪದಾರ್ಥಗಳನ್ನು ನೈವೇದ್ಯ ಮಾಡಬೇಕು. ಇದರಿಂದ ವ್ಯಕ್ತಿಯ ಪ್ರತಿಯೊಂದು ದುಃಖ (Pain) ದೂರವಾಗುತ್ತದೆ.

4ನೇ ದಿನ-ಕೂಷ್ಮಾಂಡಾ
ಮಾಲ್ಪುವಾ ಅಥವಾ ಪುವಾ ಎಂದು ಕರೆಯಲ್ಪಡುವ ಈ ಸಿಹಿತಿನಿಸನ್ನು ಸ್ಥಳೀಯವಾಗಿ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಕರಿದ ಈ ಸಿಹಿ ತಿನಿಸನ್ನು ನೈವೇದ್ಯ ಮಾಡಿದರೆ ಬುದ್ಧಿ (Intelligence) ವಿಕಾಸವಾಗುತ್ತದೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.

ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?

5ನೇ ದಿನ-ಸ್ಕಂದಮಾತೆ
ನವರಾತ್ರಿಯ 5ನೇ ದಿನವನ್ನು ಲಲಿತಾ ಪಂಚಮೀ ಎಂದು ಹೇಳಲಾಗುತ್ತದೆ. ಈ ದಿನದಂದು ಸ್ಕಂದಮಾತೆಯ ಆರಾಧನೆ ಮಾಡಲಾಗುತ್ತದೆ. ದೇವಿಯ ಈ ಸ್ವರೂಪವನ್ನು ಬಾಳೆಹಣ್ಣುಗಳನ್ನು (Banana) ಇಟ್ಟು ಪೂಜಿಸಬೇಕು. ಇದರಿಂದ ಜೀವನಪೂರ್ತಿ ಉತ್ತಮ ಆರೋಗ್ಯ ಲಭಿಸುತ್ತದೆ ಎನ್ನಲಾಗಿದೆ.

6ನೇ ದಿನ-ಕಾತ್ಯಾಯಿನೀ
ಕಾತ್ಯಾಯಿನೀ ಮಾತೆಯನ್ನು ಜೇನುತುಪ್ಪದ (Honey) ನೈವೇದ್ಯ ಇರಿಸಿ ಪೂಜೆ ಮಾಡಬೇಕು. ಇದರಿಂದ ಎಲ್ಲರನ್ನೂ ಆಕರ್ಷಿಸುವ ಶಕ್ತಿ, ಸಮಾಜದಲ್ಲಿ ಮಾನ್ಯತೆ ಹೆಚ್ಚುವ ಆಶೀರ್ವಾದ ದೊರೆಯುತ್ತದೆ.

7ನೇ ದಿನ-ಕಾಲರಾತ್ರೀ
ಕಾಲರಾತ್ರೀ ದೇವಿಗೆ ಬೆಲ್ಲ (Jaggery) ಅಥವಾ ಬೆಲ್ಲದಿಂದ ಮಾಡಿದ ತಿನಿಸುಗಳನ್ನು ನೈವೇದ್ಯ ಮಾಡಬೇಕು. ಇದರಿಂದ ಆಕಸ್ಮಿಕ ಸಂಕಷ್ಟಗಳು ಎದುರಾಗುವುದಿಲ್ಲ ಹಾಗೂ ಸಂಕಷ್ಟಗಳಿಂದ ರಕ್ಷಣೆ ದೊರೆಯುತ್ತದೆ.

8ನೇ ದಿನ-ಮಹಾಗೌರೀ
ನವರಾತ್ರಿಯ 8ನೇ ದಿನದಂದು ಮಹಾಗೌರೀಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಕನ್ಯಾ ಪೂಜೆಯನ್ನೂ ಮಾಡಲಾಗುತ್ತದೆ. ಮಹಾಗೌರಿಯ ಪೂಜೆಯ ಸಮಯದಲ್ಲಿ ತೆಂಗಿನಕಾಯಿಯ (Coconut) ನೈವೇದ್ಯ ಮಾಡಬೇಕು. ಇದರಿಂದ ಸಂತಾನಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳು ದೂರವಾಗುತ್ತವೆ.

9ನೇ ದಿನ-ಸಿದ್ಧಿದಾತ್ರೀ
ಸಿದ್ಧಿದಾತ್ರೀ ದೇವಿಯ ಪೂಜೆ ಮಾಡುವಾಗ ಎಳ್ಳಿನ (Sesame) ನೈವೇದ್ಯ ಮಾಡಬೇಕು. ಎಳ್ಳಿನಿಂದ ತಯಾರಿಸಿದ ಪದಾರ್ಥಗಳ ನೈವೇದ್ಯ ಮಾಡಿದರೆ ಆಕಸ್ಮಿಕ ಮರಣ ಇಲ್ಲವಾಗುತ್ತದೆ. ಆಯಸ್ಸು ಹೆಚ್ಚುತ್ತದೆ ಎನ್ನಲಾಗುತ್ತದೆ. 

Follow Us:
Download App:
  • android
  • ios